ಜೀವನ ಅನ್ನೋದು ಎಲ್ಲರಿಗೂ ಒಂದೇ ರೀತಿ ಇರೋದಿಲ್ಲ. ಕೆಲವರು ಧೈರ್ಯದಿಂದ ಬಂದಿದ್ದೆಲ್ಲವನ್ನು ಎದುರಿಸಿದರೆ, ಇನ್ನು ಕೆಲವರು ಸೋತು ಸುಮ್ಮನಾಗುತ್ತಾರೆ. ಧೈರ್ಯದಿಂದ ಎದುರಿಸಿ ಮುಂದೆ ಬರುವವರಿಗೆ ಮಾತ್ರ ಬದುಕು ಹೊಸತನ್ನು ಕೊಡುವುದು, ಹೊಸ ಜೀವನ ರೂಪಿಸಿಕೊಳ್ಳುವುದಕ್ಕೆ ಅವಕಾಶ ನೀಡುವುದು. ನಮ್ಮಲ್ಲಿ ಅಂಥ ಅನೇಕ ದಿಟ್ಟ ಮಹಿಳೆಯರಿದ್ದಾರೆ. ಎಲ್ಲರ ಜೀವನದ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಜೀವನವನ್ನು ಎದುರಿಸುತ್ತಾ ಬದುಕುತ್ತಿದ್ದಾರೆ. ಅದರಲ್ಲೂ ಕಲಾವಿದರು ಎಂದರೆ ನಮಗೆಲ್ಲ ಹೆಚ್ಚಿನ ಕುತೂಹಲ. ಅವರ ಜೀವನ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಹಂಬಲ. ನಮ್ಮ ಹಾಗೆ ಅವರು ಇರುತ್ತಾರಾ ಎನ್ನುವ ಕುತೂಹಲ ನಮ್ಮಲ್ಲೂ ಇರುತ್ತದೆ.

ಆದರೆ ಸೆಲೆಬ್ರಿಟಿಗಳು ಕೂಡ ನಮ್ಮ ಹಾಗೆ ಸಾಮಾನ್ಯ ಮನುಷ್ಯರೇ ಆಗಿರುತ್ತಾರೆ. ಅವರಿಗೂ ಅವರವರ ಜೀವನದಲ್ಲಿ ಕಷ್ಟಗಳು, ಚಾಲೆಂಜ್ ಗಳು ಬಂದಿರುತ್ತದೆ. ಕೆಲವರು ತಮ್ಮ ಜೀವನದ ಕಷ್ಟಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು ಹೇಳಿಕೊಳ್ಳೋದಿಲ್ಲ. ಯಾರಿಗೂ ತಿಳಿಸದೇ ಧೈರ್ಯವಾಗಿ ಎಳ್ಳಬನ್ನು ಎದುರಿಸಿ ಮುಂದಕ್ಕೆ ಸಾಗುತ್ತಾರೆ. ಆದರೆ ನಮ್ಮ ಜನರು ಕಲಾವಿದರ ಕಷ್ಟಗಳನ್ನ ಅರ್ಥ ಮಾಡಿಕೊಳ್ಳದೇ ಅವರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಮನುಷ್ಯರಾಗಿ ಎಲ್ಲರೂ ಒಂದೇ ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಇಂದು ನಿಮಗೆ ನಟಿ ವಾಣಿಶ್ರೀ ಅವರ ಬಗ್ಗೆ ಇಂಥದ್ದೇ ವಿಚಾರ ಒಂದನ್ನು ತಿಳಿಸುತ್ತೇವೆ.
ವಾಣಿಶ್ರೀ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. 2 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಅವರು ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿ ಕೂಡ ಸಕ್ರಿಯವಾಗಿರುವ ಕಲಾವಿದೆ ಆಗಿದ್ದಾರೆ. ಹಲವಾರು ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಗಳಲ್ಲಿ ನಟಿಸಿದ್ದಾರೆ. ಜನರಿಗೆ ಇವರ ಪರಿಚಯ ಚೆನ್ನಾಗಿಯೇ ಇದೆ. ಇಂಥ ವಾಣಿಶ್ರೀ ಅವರು ತಮ್ಮ ಜೀವನದ ಬಗ್ಗೆ ಅನೇಕ ವಿಚಾರಗಳನ್ನು, ಅವರು ಪಟ್ಟ ಕಷ್ಟಗಳನ್ನು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಹುಡುಗನ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ ಮದುವೆಯಾಗಿ, ಅವರ ಜೀವನದಲ್ಲಿ ಏನೆಲ್ಲಾ ನಡೆದು ಹೋಯಿತು ಅನ್ನೋದನ್ನ ವಾಣಿಶ್ರೀ ಅವರು ತಿಳಿಸಿದ್ದು, ನಟಿಗೆ ಹೀಗೆಲ್ಲಾ ಆಗಬಾರದಿತ್ತು ಎನ್ನಿಸುತ್ತದೆ.

ನಟಿ ವಾಣಿಶ್ರೀ ಅವರಿಗೆ ಬಹಳ ಬೇಡಿಕೆ ಇತ್ತು, ಅವರ ಕೆರಿಯರ್ ನಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಸಹ ಮಾಡಿಕೊಂಡಿರಲಿಲ್ಲ. ಎಲ್ಲಾ ಕಡೆ ಅವರಿಗೆ ಒಳ್ಳೆಯ ಹೆಸರೇ ಇತ್ತು. ವಾಣಿಶ್ರೀ ಅವರ ಒಂದು ಸಂದರ್ಶನ ನೋಡಿ, ಹೆಣ್ಣು ಕೇಳೋಕೆ ಬಂದಿದ್ದರು. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಆದರೆ ವಾಣಿಶ್ರೀ ಅವರ ಮನೆಯವರು ಮೊದಲೇ ಹುಡುಗನ ಬಗ್ಗೆ ಸರಿಯಾಗಿ ವಿಚಾರಿಸಿಕೊಳ್ಳಲಿಲ್ಲ. ಹುಡುಗ ಒಳ್ಳೆಯವನು ಎಂದುಕೊಂಡು ಮದುವೆ ಮಾಡಿಬಿಟ್ಟರು, ಆದರೆ ಅಸಲಿ ವಿಷಯ ಬೇರೆಯೇ ಆಗಿತ್ತು. ಆತನಿಗೆ ಎರಡು ವರ್ಷಗಳ ಹಿಂದೆಯೇ ಬೇರೊಂದು ಮದುವೆ ಆಗಿತ್ತು. ಸುಳ್ಳು ಹೇಳಿ ವಾಣಿಶ್ರೀ ಅವರನ್ನು ಮದುವೆ ಮಾಡಿಕೊಂಡಿದ್ದ. ಈ ವಿಚಾರಗಳು ತಡವಾಗಿ ವಾಣಿಶ್ರೀ ಅವರಿಗೆ ಗೊತ್ತಾಗಿದೆ.
ವಾಣಿಶ್ರೀ ಅವರಿಗೆ ಗೊತ್ತಾಗಿ, ಅವರು ಗರ್ಭಿಣಿ ಆಗಿದ್ದಾಗ ಅವರ ಗಂಡನ ಮೇಲೆ ನಾನ್ ಬೇಲೆಬೆಲ್, ವಾರೆಂಟ್ ಇಷ್ಯು ಆಗಿತ್ತಂತೆ. ಗರ್ಭಿಣಿ ಆಗಿದ್ದಾಗಲು ಬಹಳಷ್ಟು ರೀತಿಯ ಕಷ್ಟಗಳನ್ನು ಅನುಭವಿಸಿದ್ದಾರೆ. ಇನ್ನು ಮಗು ಹುಟ್ಟಿ, ತಮ್ಮ ಮಗು ಕೇವಲ 5 ತಿಂಗಳಾಗಿದ್ದಾಗ, ವಾಣಿಶ್ರೀ ಅವರು ಈ ತೊಂದರೆಗಳನ್ನು ಸಹಿಸಿಕೊಳ್ಳಲು ಆಗದೇ, ಕೇವಲ ಬಟ್ಟೆಗಳನ್ನು ಮಾತ್ರ ಎತ್ತಿಕೊಂಡು ಮನೆಯಿಂದ ಹೊರಗಡೆ ಬಂದಿದ್ದರಂತೆ. ಒಡವೆಗಳು ಅಥವಾ ಇನ್ನೇನನ್ನು ಸಹ ಮುಟ್ಟಲಿಲ್ಲವಂತೆ. ಕೊನೆಗೆ ಗಂಡನಿಂದ ವಿಚ್ಛೇದನ ಪಡೆದರು, ಹೊಸ ಜೀವನವನ್ನ ಶುರು ಮಾಡಿದರು. ಪ್ರೀತಿ ವಿಶ್ವಾಸ ಈ ಪದಗಳ ಅರ್ಥವೇ ಗೊತ್ತಿಲ್ಲದ ವ್ಯಕ್ತಿಯನ್ನು ಮದುವೆಯಾಗಿ ಮೋಸ ಹೋದೆ ಎಂದು ವಾಣಿಶ್ರೀ ಅವರು ನೋವಿನಿಂದ ಹೇಳಿಕೊಂಡಿದ್ದಾರೆ..

ಮದುವೆ ವಿಚಾರದಲ್ಲಿ ಈ ರೀತಿ ಆದ ಕಾರಣ ವಾಣಿಶ್ರೀ ಅವರಿಗೆ ತುಂಬಾ ನೋವಾಗಿದೆ. ಗಂಡನ ಬಗ್ಗೆ ಯಾವ ವಿಚಾರವನ್ನು ಕೂಡ ತಿಳಿಸದೇ ವಾಣಿಶ್ರೀ ಅವರ ಜೊತೆಗೆ ಮದುವೆ ಮಾಡಿಬಿಟ್ಟಿದ್ದಾರೆ. ಹೆಣ್ಣುಮಕ್ಕಳ ಜೀವನದ ಬಗ್ಗೆ ಸರಿಯಾಗಿ ಗಮನ ಕೊಡದೇ ಈ ರೀತಿ ಮಾಡಿದರೆ, ಅವರ ಜೀವನವೇ ಹಾಳಾಗಿ ಬಿಡುತ್ತದೆ. ವಾಣಿಶ್ರೀ ಅವರ ಜೀವನ ಕೂಡ ಅದೇ ರೀತಿ ಆಗಿತ್ತು, ಆದರೆ ಈಗ ಇವರು ಮಗಳ ಜೊತೆಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ವಾಣಿಶ್ರೀ ಅವರ ಮಗಳಿಗೆ ಈಗ 21 ವರ್ಷ ಆಗಿದ್ದು, ಮಗಳು ಬಹಳ ಸ್ವಾತಂತ್ರ್ಯವಾಗಿದ್ದಾಳೆ ಎಂದು ತಿಳಿಸಿರುವ ವಾಣಿಶ್ರೀ ಅವರಿಗೆ ಮಗಳ ಬಗ್ಗೆ ಬಹಳ ಹೆಮ್ಮೆ ಇದೆ. ಇವರ ಮಗಳಿಗೆ ಈಗ 21 ವರ್ಷ ವಯಸ್ಸಾಗಿದ್ದು, ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ..
ಜೊತೆಗೆ ಇವರ ಮಗಳಿಗೆ ರಂಗಭೂಮಿಯಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಈಗ ವಾಣಿಶ್ರೀ ಅವರ ಜೀವನ ಮಗಳ ಜೊತೆಗೆ ಚೆನ್ನಾಗಿ ಸಾಗುತ್ತಿದ್ದು, ಇವರ ಲೈಫ್ ಇದೇ ರೀತಿ ಸಾಗಲಿ ಎಂದು ನಾವು ಕೂಡ ಹಾರೈಸೋಣ. ಇನ್ನು ಕಿರುತೆರೆಯಲ್ಲಿ ಸಹ ಇವರು ಸಕ್ರಿಯವಾಗಿದ್ದು, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ, ಒಳ್ಳೊಳ್ಳೆಯ ಪಾತ್ರಗಳು ಇವರಿಗೆ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ವಾಣಿಶ್ರೀ ಅವರಿಗೆ ಇನ್ನಷ್ಟು ಒಳ್ಳೆಯ ಪಾತ್ರಗಳಲ್ಲಿ ನಟಿಸುವ ಅವಕಾಶ ಇವರಿಗೆ ಸಿಗಲಿ.



