ಚಿತ್ರರಂಗದಲ್ಲಿ ಒಗ್ಗಟ್ಟು ಎನ್ನುವುದು ಇದ್ದರೂ, ನಟ ನಟಿಯರ ವಿಚಾರದಲ್ಲಿ, ಸಂಭಾವನೆ ಬಗ್ಗೆ ತಾರತಮ್ಯ ನಡೆಯುವುದು ಗೊತ್ತೇ ಇದೆ. ನಟರಿಗೆ ಹೆಚ್ಚು ಸಂಭಾವನೆ ಸಿಗುತ್ತದೆ, ಆದರೆ ನಟಿಯರಿಗೆ ಅಷ್ಟರ ಮಟ್ಟಿಗೆ ಸಂಭಾವನೆ ಇಲ್ಲ ಎಂದು ಹಲವು ಬಾರಿ ನಟಿಯರು ಬಹಿರಂಗವಾಗಿ ಹೇಳಿಕೆ ನೀಡಿರುವುದನ್ನು ಕೇಳಿದ್ದೇವೆ. ಖ್ಯಾತ ನಟಿ ತಾಪ್ಸಿ ಪನ್ನು ಅವರು ಈ ಬಗ್ಗೆ ನೀಡಿದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಒಂದು ರೀತಿ ನಿಜವೆ, ನಾಯಕರು ಕಷ್ಟಪಡುವ ರೀತಿಯಲ್ಲೇ ನಾಯಕಿಯರು ಕಷ್ಟಪಡುತ್ತಾರೆ. ಹೈ ಹೀಲ್ಸ್ ಹಾಕಿ ನಡೆಯುವುದು, ಹಿಮ ಬೀಳುವ ಸ್ಥಳದಲ್ಲಿ ಸ್ಲೀವ್ ಲೆಸ್ ಬಟ್ಟೆ ಹಾಕಿ ಕೆಲವೊಮ್ಮೆ ಪಾದರಕ್ಷೆ ಇಲ್ಲದೇ ಡ್ಯಾನ್ಸ್ ಮಾಡುವುದು ಸುಲಭ ಅಂತೂ ಅಲ್ಲ. ಇಷ್ಟೆಲ್ಲಾ ಕಷ್ಟಪಟ್ಟರೂ ನಟಿಯರಿಗೆ ಸಿಗುವ ಸಂಭಾವನೆ ಕಡಿಮೆ, ಅವರಿಗೆ ಸಿಗುವ ಬೇಡಿಕೆ ಕೂಡ ಬಹಳ ಕಡಿಮೆಯೇ ಆಗಿರುತ್ತದೆ..
ಬಾಲಿವುಡ್ ನಲ್ಲಿ ಒಂದು ಮಟ್ಟಕ್ಕೆ ನಟಿಯರು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಆದರೆ ಸೌತ್ ನಲ್ಲಿ ಕಡಿಮೆಯೇ ಆಗಿತ್ತು. ಆದರೆ ಇತ್ತೀಚೆಗೆ ಈಗಿನ ನಟಿಯರು ಹೆಚ್ಚು ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ನಟಿ ನಯನತಾರ, ರಶ್ಮಿಕಾ ಮಂದಣ್ಣ, ಸಾಯಿಪಲ್ಲವಿ, ಸಮಂತಾ ಇವರೆಲ್ಲರೂ ಸಂಭಾವನೆ ವಿಷಯದಲ್ಲಿ ಹೊಸ ಕ್ರಾಂತಿ ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಲ್ಲ. ಇತ್ತೀಚೆಗೆ ಒಂದು ತೆಲುಗು ಸಿನಿಮಾಗಾಗಿ ನಯನತಾರ ಅವರು 18 ಕೋಟಿ ಸಂಭಾವನೆ ಕೇಳಿದರಂತೆ, ಈ ವಿಚಾರ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ, ನಮ್ಮ ಸೌತ್ ನಟಿಯರ ಪೈಕಿ ಅತಿಹೆಚ್ಚು ಸಂಭಾವನೆ ಪಡೆಯುವವರು ಯಾರು, ಯಾವ ಸ್ಟಾರ್ ನಟಿ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ವಿಷಯ ವೈರಲ್ ಆಗಿದ್ದು, ಅದರ ಬಗ್ಗೆ ಇಂದು ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ..

ನಯನತಾರ : ದಕ್ಷಿಣ ಭಾರತ ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದು ಗುರುತಿಸಿಕೊಂಡಿರುವವರು ಇವರು. ಪ್ರಸ್ತುತ ನಟಿ ನಯನತಾರ ಅವರು ಒಂದು ಸಿನಿಮಾಗೆ 10 ರಿಂದ 12 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಚಿರಂಜೀವಿ ಅವರ ಸಿನಿಮಾಗೆ 18 ಕೋಟಿ ಸಂಭಾವನೆ ಕೇಳಿದ್ದರು.

ರಶ್ಮಿಕಾ ಮಂದಣ್ಣ : ಸೌತ್ ಇಂಡಿಯಾದ ನಟಿಯರ ಪೈಕಿ ಅತಿಹೆಚ್ಚು ಸಂಭಾವನೆ ಪಡೆಯುವವರು ನಟಿ ರಶ್ಮಿಕಾ ಮಂದಣ್ಣ. ಅನಿಮಲ್ ಸಿನಿಮಾ ಹಿಟ್ ಆದ ಬಳಿಕ ಇವರ ಸಂಭಾವನೆ ಜಾಸ್ತಿಯಾಗಿದೆ. ಸಲ್ಮಾನ್ ಖಾನ್ ಅವರೊಡನೆ ನಟಿಸಿದ ಸಿಕಂದರ್ ಸಿನಿಮಾ ಸೋತಿದೆ, ಹಾಗಿದ್ದರೂ ಇವರ ಬೇಡಿಕೆ ಕಡಿಮೆ ಆಗಿಲ್ಲ. ಇನ್ನು ಪುಷ್ಪ2 ಸಿನಿಮಾಗಾಗಿ ರಶ್ಮಿಕಾ ಮಂದಣ್ಣ 13 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದ್ದು, ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ಆಗಿದ್ದಾರೆ.

ತ್ರಿಷಾ : ಇವರು 2 ದಶಕದಿಂದ ಸೌತ್ ಇಂಡಿಯಾದಲ್ಲಿ ಸಕ್ರಿಯವಾಗಿರುವ ಎವರ್ ಗ್ರೀನ್ ನಟಿ, ಇವತ್ತಿಗೂ ಸಹ ಇವರಿಗೆ ಇರುವ ಬೇಡಿಕೆ ಕಡಿಮೆ ಆಗಿಯೇ ಇಲ್ಲ. ತ್ರಿಷಾ ಅವರು ಒಂದು ಸಿನಿಮಾಗೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ವಿಜಯ್, ಸೂರ್ಯ, ಅಜಿತ್ ಹೀಗೆ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಯಶಸ್ವಿ ನಟಿ ಆಗಿದ್ದಾರೆ.

ಸಮಂತಾ : ನಟಿ ಸಮಂತಾ ಅವರಿ ಅನಾರೋಗ್ಯ ಉಂಟಾದ ನಂತರ ನಟನೆ ಸ್ವಲ್ಪ ಕಡಿಮೆ ಮಾಡಿದ್ದಾರೆ. ಈಗ ನಿರ್ಮಾಪಕಿ ಸಹ ಆಗಿದ್ದಾರೆ. ಸಮಂತಾ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆಯೇ ಆಗಿಲ್ಲ. ಇವರು ಈಗ ಒಂದು ಸಿನಿಮಾಗೆ 3 ರಿಂದ 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದ್ದು, ಸ್ಟಾರ್ ಗಳಲ್ಲಿ ಇವರು ಸಹ ಒಬ್ಬರು.
ಅನುಷ್ಕಾ ಶೆಟ್ಟಿ : ಕರ್ನಾಟಕದ ಬೆಡಗಿ ಅನುಷ್ಕಾ ಶೆಟ್ಟಿ ಅವರು ಬಾಹುಬಲಿ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅನುಷ್ಕಾ ಅವರು ಈಗ ಘಾಟಿ ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಬರಲಿದ್ದಾರೆ. ಅನುಷ್ಕಾ ಶೆಟ್ಟಿ ಅವರು ಒಂದು ಸಿನಿಮಾಗೆ 6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಜಾನ್ವಿ ಕಪೂರ್ : ಭಾರತೀಯ ಚಿತ್ರರಂಗದ ಸ್ಟಾರ್ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ಅವರಿಗೆ ಬಾಲಿವುಡ್ ನಲ್ಲಿ ಅಂದುಕೊಂಡಂತೆ ಯಶಸ್ಸು ಸಿಗುತ್ತಿಲ್ಲ. ಸೌತ್ ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿರುವ ಇವರು, ಈಗಾಗಲೇ ಜ್ಯೂನಿಯರ್ ಎನ್.ಟಿ.ಆರ್ ಜೊತೆಗೆ ನಟಿಸಿದ್ದು, ರಾಮ್ ಚರಣ್ ಅವರ ಮುಂದಿನ ಸಿನಿಮಾಗೆ ಹೀರೊಯಿನ್ ಆಗಿದ್ದಾರೆ. ಜಾನ್ವಿ ಅವರು ಒಂದು ಸಿನಿಮಾಗೆ 6 ಕೋಟಿ ಸಂಭಾವನೆ ಪಡೆಯುತ್ತಾರೆ.

ಸಾಯಿ ಪಲ್ಲವಿ : ಪ್ರಸ್ತುತ ಹೆಚ್ಚು ಬೇಡಿಕೆ ಇರುವ ನಟಿಯರಲ್ಲಿ ಇವರು ಸಹ ಒಬ್ಬರು. ರಾಮಾಯಣ 2 ಪಾರ್ಟ್ ಸಿನಿಮಾಗಾಗಿ ಇವರು 18 ರಿಂದ 20 ಕೋಟಿ ಸಂಭಾವನೆ ಪಡೆದಿದ್ದು, ಸಾಮಾನ್ಯವಾಗಿ ಒಂದು ಸಿನಿಮಾಗೆ 5 ಕೋಟಿ ವರೆಗು ಸಂಭಾವನೆ ಪಡೆಯುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸಾಯಿಪಲ್ಲವಿ ಬ್ಯುಸಿ ಆಗಿದ್ದಾರೆ.
ತಮನ್ನಾ ಭಾಟಿಯ : ಸೌತ್ ಹಾಗು ಬಾಲಿವುಡ್ ಎಲ್ಲಾ ಕಡೆ ಬ್ಯುಸಿ ಇರುವವರು ತಮನ್ನಾ. ಸಿನಿಮಾ ಮತ್ತು ಸ್ಪೆಶಲ್ ಸಾಂಗ್ಸ್ ಎಲ್ಲದರಲ್ಲೂ ಕಾಣಿಸಿಕೊಳ್ಳುತ್ತಿದ್ದು, ಒಂದು ಹಾಡಿಗೆ 1 ಕೋಟಿ ಸಂಭಾವನೆ ಪಡೆಯುತ್ತಾರೆ. ಇನ್ನು ಒಂದು ಸಿನಿಮಾಗೆ 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ಮಾಹಿತಿ ಸಿಕ್ಕಿದೆ.

ರಾಕುಲ್ ಪ್ರೀತ್ ಸಿಂಗ್ : ಉತ್ತರ ಭಾರತದವರಾದರು ದಕ್ಷಿಣದಲ್ಲಿ ಸಹ ಗುರುತಿಸಿಕೊಂಡಿರುವ ರಾಕುಲ್ ಅವರು ರಾಮಾಯಣ ಸಿನಿಮಾದಲ್ಲಿ ಶೂರ್ಪನಕಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಇವರು ಒಂದು ಸಿನಿಮಾಗೆ 2 ಕೋಟಿ ರೂಪಾಯಿ ವರೆಗು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.
ಪೂಜಾ ಹೆಗ್ಡೆ : ಇವರು ಕೂಡ ತುಳುನಾಡಿನ ಬೆಡಗಿ. ಬಾಲಿವುಡ್ ಮತ್ತು ದಕ್ಷಿಣ ಎರಡು ಕಡೆ ಬ್ಯುಸಿ ಇರುವ ನಟಿ. ಇತ್ತೀಚೆಗೆ ಸೂರ್ಯ ಅವರ ಜೊತೆಗೆ ರೆಟ್ರೋ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇವರು ಒಂದು ಸಿನಿಮಾಗೆ 2 ಕೋಟಿ ವರೆಗು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದ್ದು, ಕೆಲವೊಮ್ಮೆ 5 ಕೋಟಿ ವರೆಗು ಸಂಭಾವನೆ ಪಡೆಯುತ್ತಾರೆ.



