ಬಿಗ್ ಬಾಸ್ ಮನೆಯೊಳಗೆ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಾ ಇಲ್ಲಿಯವರೆಗೂ ಬಂದಿದ್ದಾರೆ. ಇವರು ಟಫ್ ಕಾಂಪಿಟೇಟರ್ ಆಗಿದ್ದು, ಫಿನಾಲೆ ತಲುಪುವ ಎಲ್ಲಾ ಅರ್ಹತೆ ಇವರಲ್ಲಿದೆ. ನೇರ ನುಡಿಯಿಂದ ಮಾತನಾಡುವ ಮೋಕ್ಷಿತಾ ಅವರಿಗೆ ಒಳ್ಳೆಯ ಅಭಿಮಾನಿ ಬಳಗ ಹಾಗೂ ಜನರ ಸಪೋರ್ಟ್ ಸಹ ಹೊರಗಡೆ ಇದೆ. ಈ ವೇಳೆ ಮೋಕ್ಷಿತಾ ಅವರ ಬಗ್ಗೆ ಕೇಳಿಬಂದ ಕೆಲವು ಸುದ್ದಿಗಳು ಭಾರಿ ವೈರಲ್ ಆಗಿದೆ. ಆದರೆ ಇಷ್ಟು ದಿವಸಗಳ ಕಾಲ ಇಲ್ಲದ ಸುದ್ದಿ ಇದ್ದಕ್ಕಿದ್ದಂತೆ ವೈರಲ್ ಆಗಿದ್ದು ಯಾಕೆ ಎನ್ನುವ ಪ್ರಶ್ನೆ ಸಹ ಜನರಲ್ಲಿ ಶುರುವಾಗಿದ್ದು, ಅದಕ್ಕೆ ಉತ್ತರವನ್ನು ಮೋಕ್ಷಿತಾ ಅವರ ಫ್ಯಾನ್ಸ್ ಕಂಡು ಹಿಡಿದಿದ್ದಾರೆ.

ಹೌದು, ಬಿಗ್ ಬಾಸ್ ಮನೆಯೊಳಗೆ ಇರುವ ಮೋಕ್ಷಿತಾ ಅವರು ಮೊದಲಿಗೆ ತಮ್ಮದೇ ಆದ ಕಂಫರ್ಟ್ ಜೋನ್ ಹೊಂದಿದ್ದರು, ಗೌತಮಿ ಹಾಗೂ ಮಂಜು ಅವರ ಜೊತೆಗೆ ಫ್ರೆಂಡ್ಶಿಪ್ ಇತ್ತು. ಅವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದರು, ಈ ಗುಂಪುಗಾರಿಕೆ ಇಂದಲೇ ಮೋಕ್ಷಿತಾ ಒಂದಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಇರುವುದಕ್ಕೆ ಸಾಧ್ಯವಾಯಿತು ಎನ್ನುವ ಅಭಿಪ್ರಾಯ ಇತ್ತು. ಆದರೆ ಈ ಮೂವರ ನಡುವೆ ಭಿನ್ನಾಭಿಪ್ರಾಯ ಶುರುವಾಗಿ, ಮೋಕ್ಷಿತಾ ಅವರಿಗೆ ಇದ್ಯಾವುದು ಒಳ್ಳೆಯದಲ್ಲ ಎಂದು ಅರಿವಾದ ನಂತರ ಮೋಕ್ಷಿತಾ ಅವರು ಅವರೆಲ್ಲರಿಂದ ದೂರ ಉಳಿದರು. ತಾವು ಒಬ್ಬರೇ ಆಡುವುದಾಗಿ ನಿರ್ಧಾರ ಮಾಡಿದರು.
ಹಾಗೆಯೇ ಈ ನಿರ್ಧಾರದ ನಂತರ ಮೋಕ್ಷಿತಾ ಅವರು ತ್ರಿವಿಕ್ರಂ ಅವರಿಗೂ ಸಹ ಚೆನ್ನಾಗಿ ಉತ್ತರ ಕೊಟ್ಟು ಬೆವರಿಳಿಸಿದರು. ಇದೆಲ್ಲವೂ ಆದ ಕೆಲ ದಿನಗಳ ನಂತರ ಮೋಕ್ಷಿತಾ ಅವರ ಬಗ್ಗೆ ವದಂತಿಗಳು ಶುರುವಾದವು. ಅವರ ಮೊದಲ ಐಶ್ವರ್ಯ ಪೈ, 2014ರಲ್ಲಿ ಐಶ್ವರ್ಯ ಹಾಗೂ ಅವರ ಬಾಯ್ ಫ್ರೆಂಡ್ ನಾಗಭೂಷಣ್ ಇಬ್ಬರು ಐಶ್ವರ್ಯ ಟ್ಯೂಷನ್ ಹೇಳಿಕೊಡುತ್ತಿದ್ದ ಹುಡುಗಿಯನ್ನು ಹಣಕ್ಕಾಗಿ ಕಿ*ಡ್ನ್ಯಾಪ್ ಮಾಡಿದ್ದರು ಎನ್ನುವ ಸುದ್ದಿ, ವೈರಲ್ ಆಗಿ, ಅದಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಗಳು ಸಹ ವೈರಲ್ ಆದವು. ಆದರೆ ಈ ವಿಷಯ ಮುಂದಕ್ಕೆ ಏನಾಗಿದೆ ಎನ್ನುವ ವಿಚಾರ ಯಾರಿಗೂ ಗೊತ್ತಿಲ್ಲ. ಈ ಕೇಸ್ ಪೂರ್ತಿಯಾಗಿ ಕ್ಲೋಸ್ ಆಗಿ, ಬಹಳ ಸಮಯ ಆಗಿ ಹೋಗಿದೆ.

ಈ ಕೇಸ್ ನಲ್ಲಿ ಮೋಕ್ಷಿತಾ ಅವರ ತಪ್ಪು ಏನು ಇಲ್ಲ ಎಂದು ತಿಳಿದುಬಂದಿದ್ದು ಅವರು ನಿರಪರಾಧಿ ಎಂದು ಕೂಡ ಪ್ರೂವ್ ಆಗಿದೆ. ಆ ಘಟನೆ ಆದ ನಂತರ ಮೋಕ್ಷಿತಾ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ. ನಟನೆಯ ಕ್ಷೇತ್ರಕ್ಕೆ ಬಂದು, ಒಳ್ಳೆಯ ಪ್ರಾಜೆಕ್ಟ್ ನಲ್ಲಿ ನಟಿಸಿ, ಒಳ್ಳೇ ಹೆಸರನ್ನು ಸಹ ಪಡೆದುಕೊಂಡಿದ್ದಾರೆ. ಪಾರು ಧಾರಾವಾಹಿ ಇವರಿಗೆ ಎಷ್ಟು ಒಳ್ಳೆಯ ಹೆಸರನ್ನು ತಂದುಕೊಟ್ಟಿತು ಎನ್ನುವ ವಿಷಯ ಗೊತ್ತೇ ಇದೆ. ಇನ್ನು ಬಿಗ್ ಬಾಸ್ ಇಂದ ಸಹ ಮೋಕ್ಷಿತಾ ಅವರಿಗೆ ಒಳ್ಳೆಯ ಹೆಸರು ಮತ್ತು ಜನಪ್ರಿಯತೆ, ಜನರ ಪ್ರೀತಿ ಎಲ್ಲವೂ ಸಹ ಗೊತ್ತೇ ಇದೆ. ಈ ವೇಳೆ ಇಂಥ ಸುದ್ದಿಗಳು ವೈರಲ್ ಆಗುವುದಕ್ಕೆ ಇರುವುದು ಒಂದೇ ಕಾರಣ.
ಆ ಕಾರಣ ಏನು ಎಂದರೆ, ಮೋಕ್ಷಿತಾ ಅವರು ಬಿಗ್ ಬಾಸ್ ಗೆಲ್ಲಬಹುದು ಎನ್ನುವ ಭಯದಲ್ಲಿ ಕೆಲವರು ಮೋಕ್ಷಿತಾ ಅವರನ್ನು ಕುಗ್ಗಿಸಲು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ, ಮೋಕ್ಷಿತಾ ಅವರು ಗೆಲ್ಲಬಾರದು ಎನ್ನುವ ಉದ್ದೇಶ ಅವರದ್ದು ಎಂದು ಮೋಕ್ಷಿತಾ ಅವರ ಫ್ಯಾನ್ಸ್ ಕಂಡು ಹಿಡಿದಿದ್ದಾರೆ. ಬೇಕು ಎಂದೇ ಈ ರೀತಿ ಮಾಡಲಾಗುತ್ತಿದೆ. ಆದರೆ ಬಿಗ್ ಬಾಸ್ ಮನೆಯ ಒಳಗೆ ಇರುವ ಮೋಕ್ಷಿತಾ ಅವರಿಗೆ ಈ ವಿಷಯ ಗೊತ್ತೇ ಇಲ್ಲ, ಏನಾಗಿದೆ ಎನ್ನುವುದರ ಅರಿವು ಸಹ ಅವರಿಗೆ ಇಲ್ಲ. ಶೋ ಮುಗಿಸಿಕೊಂಡು ಹೊರಗಡೆ ಬಂದ ನಂತರ ನಿಜಕ್ಕೂ ನಡೆದಿರುವುದು ಏನು ಎನ್ನುವ ವಿಷಯ ಗೊತ್ತಾಗಿ ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.