ಮಂಗನಿಂದ ಮನುಷ್ಯನೋ ಅಥವಾ ಮನುಷ್ಯನಿಂದ ಮಂಗನೋ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ ಆದರೆ ಮನುಷ್ಯರಿಗೂ ಕೋತಿಗಳಿಗೂ ಸಾಕಷ್ಟು ಹೋಲಿಕೆಯೂ ಇದೆ. ಹಾಗಾಗಿಯೇ ಹಲವು ಸಂದರ್ಭಗಳಲ್ಲಿ ಮನುಷ್ಯನ ವರ್ತನೆ ಕೋತಿಗಳ ಜೊತೆಗೆ ಹೋಲುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಪಿಚೇಷ್ಟೆಯ ವಿಡಿಯೋಗಳನ್ನು ಅನೇಕ ಜನರು ವೀಕ್ಷಿಸುತ್ತರೆ. ಒಂದು ಕ್ಷಣವೂ ಸುಮ್ಮನೆ ಕೂರದ ಮಂಗಗಳ ತಮಾಷೆಯ ಚೇಷ್ಟೆಗಳನ್ನು ನೋಡಿದರೆ ಕೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ.ಇದೀಗ ಅಂತಹದ್ದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಕೇವಲ ಮನುಷ್ಯ ಮಾತ್ರವಲ್ಲ ಪ್ರಾಣಿಗಳ ಕಾಮಿಡಿ ವಿಡಿಯೋ ಕೂಡ ವೈರಲ್ ಆಗುತ್ತವೆ. ಸಾಮಾನ್ಯವಾಗಿಬಲ ‘ಮಂಗನ ಕೈಗೆ ಮಾಣಿಕ್ಯ’ ಕೊಟ್ಟ ಹಾಗೆ ಆಗಿದೆ ಎಂದು ಮನೆಯಲ್ಲಿ ದೊಡ್ಡವರು ಹೇಳುವ ಮಾತನ್ನು ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಇರುತ್ತೇವೆ. ಆದರೆ ನಿಜವಾದ ಮಂಗಗಳ ಕೈಗೆ ಸ್ಮಾರ್ಟ್ಫೋನ್ ಕೊಟ್ಟಾಗ ಹೇಗಿರುತ್ತೆ?. ಈ ಪ್ರಶ್ನೆಗೆ ಉತ್ತರ ಈ ವಿಡಿಯೋದಲ್ಲಿದೆ.
ವ್ಯಕ್ತಿಯೊಬ್ಬ ತನ್ನ ಕ್ಯಾಮೆರಾದಲ್ಲಿ ಕೋತಿಗಳನ್ನು ಸೆರೆಹಿಡಿಯುತ್ತಿದ್ದಾರೆ. ಮೊಬೈಲ್ನಲ್ಲಿ ವಿಡಿಯೋ ಮಾಡಿ ಬಳಿಕ ಅದೇ ವಿಡಿಯೋವನ್ನು ಮಂಗಗಳಿಗೆ ತೋರಿಸುತ್ತಾರೆ. ಮೂರು ಮಂಗಗಳು ವಿಡಿಯೋ ನೋಡುವುದನ್ನು ಕಾಣಬಹುದು. ಅವುಗಳಲ್ಲಿ ಒಂದು ಮಂಗ ವಿಡಿಯೋ ಕಂಡು ಏನೋ ಅಚ್ಚರಿಕಂಡಂತೆ ಆಶ್ಚರ್ಯಚಕಿತವಾಗುತ್ತದೆ. ಫೋನ್ ಹಿಡಿದಿದ್ದ ವ್ಯಕ್ತಿ ಫೋನ್ ಅನ್ನು ಸ್ವಲ್ಪ ತಿರುಗಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇನ್ನೊಂದು ಮಂಗ ಸ್ಮಾರ್ಟ್ಫೋನ್ ಅನ್ನು ಕಸಿದು ವಿಡಿಯೋಗೆ ಚುಂಬಿಸಲು ಯತ್ನಿಸುತ್ತದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.



