ಬಿಗ್ ಬಾಸ್ ಕನ್ನಡ ಸೀಸನ್ 10ರ ಮೂಲಕ ಜನರ ಗಮನ ಸೆಳೆದವರು ವರ್ತುರ್ ಸಂತೋಷ್. ಒಬ್ಬ ರೈತನಾಗಿ ಬಿಗ್ ಬಾಸ್ ಮನೆಗೆ ಬಂದ ಇವರು, ಹಳ್ಳಿಕಾರ್ ತಳಿಯ ಬಗ್ಗೆ ಜನರಿಗೆ ತಿಳಿಸಬೇಕು, ಆ ತಳಿಯ ಮಹತ್ವವನ್ನು ಜನರು ಅರ್ಥ ಮಾಡಿಕೊಳ್ಳಬೇಕು, ನಮ್ಮ ಲೋಕಲ್ ತಳಿಯನ್ನು ಉಳಿಸಿಕೊಳ್ಳಬೇಕು ಅನ್ನೋದನ್ನ ಜನರಿಗೆ ತಿಳಿಸಬೇಕು ಅನ್ನೋ ಉದ್ದೇಶದದಿಂದ ಬಿಗ್ ಬಾಸ್ ಮನೆಗೆ ಬಂದರು. ಬಿಗ್ ಬಾಸ್ ಇಂದ ಇವರಿಗೆ ಬಹಳ ಯಶಸ್ಸು, ಜನಪ್ರಿಯತೆ, ಒಳ್ಳೇ ಹೆಸರು ಎಲ್ಲವೂ ಸಿಕ್ಕಿದೆ. ಇದೀಗ ವರ್ತುರ್ ಸಂತೋಷ್ ಅವರು ಮತ್ತೆ ಮದುವೆ ಆಗಲು ರೆಡಿ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..
ಹೌದು, ವರ್ತುರ್ ಸಂತೋಷ್ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಅವರ ವೈಯಕ್ತಿಕ ಜೀವನದ ಬಗ್ಗೆ ಬಹಳ ಚರ್ಚೆ ಆಗಿತ್ತು. ಅವರಿಗೆ ಈಗಾಗಲೇ ಒಂದು ಮದುವೆಯಾಗಿ ಮಗು ಸಹ ಇದೆ. ವರ್ತುರ್ ಸಂತೋಷ್ ಅವರ ದಾಂಪತ್ಯ ಜೀವನ ಚೆನ್ನಾಗಿಲ್ಲ, ಹೊರಗಡೆ ಬಂದಮೇಲೆ ಅದಕ್ಕೆ ಕಾರಣ ಏನು ಎನ್ನುವುದನ್ನು ಸಹ ತಿಳಿಸಿದ್ದರು. ತಾಯಿಯನ್ನು ಬಿಟ್ಟು ತಾವು ಎಲ್ಲಿಗು ಹೋಗುವುದಿಲ್ಲ ಎಂದು ಸಹ ಹೇಳಿದ್ದರು. ಅವರ ಮೊದಲ ಪತ್ನಿಯ ವಿಷಯ ಮತ್ತೆ ಸರಿ ಹೋಗುವುದಿಲ್ಲ ಎನ್ನುವುದು ಸಹ ಸ್ಪಷ್ಟವಾಗಿ ಗೊತ್ತಾಗಿತ್ತು. ಆದರೆ ವರ್ತುರ್ ಸಂತೋಷ್ ಅವರಿಗೆ ಮತ್ತೆ ಮದುವೆಯಾಗಲಿ, ಅವರು ಲೈಫ್ ಅಲ್ಲಿ ಚೆನ್ನಾಗಿರಲಿ ಎನ್ನುವುದು ಹಲವರ ಕೋರಿಕೆ ಆಗಿತ್ತು..

ಇದೀಗ ಆ ಸಮಯ ಬಂದಿದೆ, ಖುದ್ದು ವರ್ತುರ್ ಸಂತೋಷ್ ಅವರೇ ತಮ್ಮ ಲೈಫ್ ಅಲ್ಲಿ ಒಂದು ಹುಡುಗಿ ಇರುವುದಾಗಿ ಇತ್ತೀಚೆಗೆ ಮಾಹಿತಿ ನೀಡಿದ್ದಾರೆ. ಹೌದು, ವರ್ತುರ್ ಸಂತೋಷ್ ಅವರು ಒಬ್ಬರನ್ನು ಪ್ರೀತಿ ಮಾಡುತ್ತಿದ್ದು, ಅದು ಟು ವೇ ಲವ್ ಆಗಿದೆಯಂತೆ. ಇಬ್ಬರು ಪ್ರತಿ ದಿನ ಮಾತಾಡ್ತಾರಂತೆ, ಹಾಗೆಯೇ ಮೀಟ್ ಕೂಡ ಮಾಡ್ತಾರಂತೆ.. ಇದು ವರ್ತುರ್ ಸಂತೋಷ್ ಅವರ ಲೈಫ್ ಅಲ್ಲಿ ಬಂದಿರೋ ಹೊಸ ಹುಡುಗಿ ಬಗ್ಗೆ ಮಾಹಿತಿ. ಈ ಹೊಸ ಹುಡುಗಿ ತನಿಷಾ ಇರಬಹುದಾ ಎನ್ನುವ ಕುತೂಹಲ ಒಂದಷ್ಟು ಜನರಿಗೆ ಇದೆ. ಅದಕ್ಕೆ ಕಾರಣ ಬಿಗ್ ಬಾಸ್ ಮನೆಯ ಒಳಗೆ ಇವರಿಬ್ಬರ ನಡುವೆ ಇದ್ದ ಸಲುಗೆ, ವರ್ತುರ್ ಸಂತೋಷ್ ತನಿಷಾ ಇಬ್ಬರು ಬಹಳ ಕ್ಲೋಸ್ ಆಗಿದ್ದರು.
ಸದಾ ವರ್ತುರ್ ಎಂದುಕೊಂಡು ಅವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದರು ತನಿಶಾ. ವರ್ತುರ್ ಸಂತೋಷ್ ಸಹ ಅದೇ ರೀತಿ ಕ್ರಶ್, ಲವ್ ಇರುವ ಹಾಗೆ ಇದ್ದರು. ತನಿಷಾ ಅವರನ್ನು ಬೆಂಕಿ ಎಂದು ಕರೆಯುತ್ತಿದ್ದರು. ಇದೆಲ್ಲವನ್ನು ನೋಡಿದ್ದ ವೀಕ್ಷಕರು ಇವರಿಬ್ಬರು ಜೋಡಿಯಾದರೆ ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ವರ್ತುರ್ ಸಂತೋಷ್ ಅವರು ನೀಡಿರುವ ಮಾಹಿತಿಯ ಅನುಸಾರ ಅವರು ಪ್ರೀತಿ ಮಾಡುತ್ತಿರುವ ಹುಡುಗಿ ತನಿಷಾ, ಅವರ ಸಂಬಂಧಿಕರ ಪೈಕಿ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದಾರಂತೆ ವರ್ತುರ್ ಸಂತೋಷ್. ತನಿಷಾ ಮತ್ತು ಅವರದ್ದು ಒಳ್ಳೆಯ ಫ್ರೆಂಡ್ಶಿಪ್ ಮಾತ್ರ ಬೇರೇನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ..

ವರ್ತುರ್ ಸಂತೋಷ್ ಅವರು ಮತ್ತೆ ಮದುವೆ ಆಗೋ ಮನಸ್ಸು ಮಾಡಿರುವುದು, ಅವರಿಗೆ ಒಳ್ಳೆ ಹುಡುಗಿ ಸಿಕ್ಕಿರುವುದು ಬಹಳ ಸಂತೋಷದ ವಿಷಯ. ಆದರೆ ಇವರು ತನಿಷಾ ಅವರನ್ನೇ ಮದುವೆ ಆಗಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ಅವರ ಅಭಿಮಾನಿಗಳ ಆಸೆ ಆಗಿದೆ. ಆದರೆ ಇಬ್ಬರು ಅವರವರ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಒಟ್ಟಿನಲ್ಲಿ ಇಬ್ಬರ ಫ್ರೆಂಡ್ಶಿಪ್ ಚೆನ್ನಾಗಿದ್ದು, ಮುಂದೆ ಇಬ್ಬರು ತಮ್ಮ ಲೈಫ್ ನಲ್ಲಿ ಚೆನ್ನಾಗಿರಲಿ ಎಂದು ಹಾರೈಸೋಣ. ವರ್ತುರ್ ಸಂತೋಷ್ ಅವರಿಗೆ ಈಗ ಸಿಕ್ಕಿರುವ ಹುಡುಗಿ ಅವರನ್ನು ಚೆನ್ನಾಗಿ ನೋಡಿಕೊಳ್ಳಲಿ ಎನ್ನುವುದೆ ಅವರ ಅಭಿಮಾನಿಗಳ ಆಸೆ.



