ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಜನಪ್ರಿಯ ನಟಿ ವೈಷ್ಣವಿ ಗೌಡ ಪ್ರಸ್ತುತ ಸೀತಾರಾಮ ಧಾರಾವಾಹಿಯಲ್ಲಿ ನಾಯಕಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಕಿರುತೆರೆ ವೀಕ್ಷಕರ ನೆಚ್ಚಿನ ಪಾತ್ರ ಆಗಿದೆ ಎಂದು ಹೇಳಿದರೆ ತಪ್ಪಲ್ಲ. ಅಗ್ನಿಸಾಕ್ಷಿ ನಂತರ ಬಿಗ್ ಬ್ರೇಕ್ ಪಡೆದು ವೈಷ್ಣವಿ ಅವರು ಕಿರುತೆರೆಗೆ ಕಂಬ್ಯಾಕ್ ಮಾಡಿರುವುದು ಸೀತಾರಾಮ ಧಾರಾವಾಹಿಯ ಮೂಲಕ. ಧಾರಾವಾಹಿಯ ಕಥೆ ಆರಂಭದಲ್ಲಿ ಅದ್ಭುತವಾಗಿ ಮೂಡಿಬಂದಿತಾದರೂ, ಇತ್ತೀಚೆಗೆ ಹಳ್ಳ ಹಿಡಿಯುತ್ತಿದೆ ಎನ್ನುವುದು ಜನರ ಅಭಿಪ್ರಾಯ. ಇದೆಲ್ಲವು ಒಂದು ಕಡೆಯಾದರೆ, ಮತ್ತೊಂದು ಕಡೆ ವೈಷ್ಣವಿ ಅವರ ಮದುವೆಯ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ವೈಷ್ಣವಿ ಅವರು ತಾಳಿ ಧರಿಸಿ, ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿರುವ ಫೋಟೋ ವೈರಲ್ ಆಗಿದ್ದು, ವೈಷ್ಣವಿ ಯಾರಿಗೂ ಹೇಳದೇ ಮದುವೆ ಮಾಡಿಕೊಂಡು ಬಿಟ್ರ ಎನ್ನುವ ಪ್ರಶ್ನೆ ಈಗ ಶುರುವಾಗಿದೆ.
ಹೌದು, ನಟಿ ವೈಷ್ಣವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ತಮ್ಮ ಪರ್ಸನಲ್ ಲೈಫ್ ಬಗ್ಗೆ, ಶೂಟಿಂಗ್ ಬಗ್ಗೆ, ನಟನೆಯ ಬಗ್ಗೆ ಹಾಗೂ ಇನ್ನಿತರ ಹಲವು ವಿಚಾರಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ, ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಳ್ಳುತ್ತಾರೆ..ಹಾಗೆಯೇ ಹಲವು ಬ್ರಾಂಡ್ ಪ್ರೊಮೋಷನ್ ಗಳನ್ನು ಸಹ ಮಾಡುತ್ತಾರೆ. ಇತ್ತೀಚೆಗೆ ಇವರು ರಮ್ಮಿ ಬ್ರ್ಯಾಂಡ್ ಪ್ರೊಮೋಟ್ ಮಾಡಿ, ನೆಗಟಿವ್ ಆಗಿ ಕೂಡ ಸುದ್ದಿ ಆಗಿದ್ದರು. ಇದೆಲ್ಲವೂ ಏನೇ ಆದರೂ ಅಭಿಮಾನಿಗಳು ಮಾತ್ರ ವೈಷ್ಮವಿ ಅವರನ್ನು ಬಿಟ್ಟುಕೊಡುವುದಿಲ್ಲ. ಅವರನ್ನು ಸಪೋರ್ಟ್ ಮಾಡುತ್ತಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವೈಷ್ಣವಿ ಅವರು ಕೆಲವು ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ.
ಅದು ಮಹಾಕುಂಭಮೇಳದಲ್ಲಿ ವೈಷ್ಣವಿ ಅವರು ಪುಣ್ಯಸ್ನಾನ ಮಾಡಿರುವ ಫೋಟೋಸ್ ಆಗಿದೆ. ಸಾಂಪ್ರದಾಯಿಕವಾಗಿ ಸೀರೆಯನ್ನು ಉಟ್ಟು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿರುವ ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ ಈ ವರ್ಷ ತಮ್ಮ ಹುಟ್ಟುಹಬ್ಬ ವನ್ನು ಮಹಾಕುಂಭಮೇಳದಲ್ಲೇ ವಿಶೇಷವಾಗಿ ಆಚರಣೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಒಂದು ವಿಷಯ ಗಮನಿಸಿದ್ದಾರೆ. ಅದು ವೈಷ್ಣವಿ ಅವರ ಕತ್ತಲ್ಲಿರುವ ತಾಳಿ ಬಗ್ಗೆ.. ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ವೈಷ್ಣವಿ ಅವರ ಮದುವೆ ನಡೆದು ಹೋಗಿದ್ಯಾ ಅನ್ನೋದು ನೆಟ್ಟಿಗರಲ್ಲಿ ಬಂದಿರುವ ಪ್ರಶ್ನೆ. ಅದಕ್ಕೆ ವೈಷ್ಣವಿ ಅವರ ಫ್ಯಾನ್ಸ್ ಗಳೇ ಉತ್ತರವನ್ನು ಕೂಡ ಕೊಟ್ಟಿದ್ದಾರೆ. ಅದರ ಪ್ರಕಾರ ವೈಷ್ಣವಿ ಅವರಿಗೆ ಮದುವೆಯಾಗಿಲ್ಲ.
ನಟಿ ವೈಷ್ಣವಿ ಅವರು ಪ್ರಸ್ತುತ ಜೀಕನ್ನಡ ವಾಹಿನಿಯ ಸೀತಾರಾಮ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರದ್ದು ಅದರಲ್ಲಿ ಗೃಹಿಣಿ ಪಾತ್ರ. ಮಗುವನ್ನೇ ಪ್ರಪಂಚ ಎಂದುಕೊಂಡಿದ್ದ ಸೀತಾಳ ಲೈಫ್ ಗೆ ರಾಮ ಎಂಟ್ರಿ ಕೊಟ್ಟ ನಂತರ ಅವರಿಬ್ಬರ ಬದುಕು ಹೇಗೆ ಬದಲಾಯಿತು ಅನ್ನೋದು ಕಥೆ..ಪ್ರಸ್ತುತ ಸಿಹಿಯನ್ನು ಮುಗಿಸಿರುವ ಧಾರಾವಾಹಿ ಜನರಿಗೆ ಇಷ್ಟ ಆಗುತ್ತಿಲ್ಲ. ನಮಗೆ ಸಿಹಿನೆ ಬೇಕು ಎಂದು ಜನರು ಹೇಳುತ್ತಿದ್ದಾರೆ. ಇನ್ನು ಈ ಧಾರವಾಹಿಯ ಮೂಲಕ ವೈಷ್ಣವಿ ಅವರಿಗೆ ಒಳ್ಳೆಯ ಪಾತ್ರ ಮತ್ತು ಯಶಸ್ಸು ಎರಡು ಕೂಡ ಸಿಕ್ಕಿದೆ. ಜೀಕನ್ನಡ ವಾಹಿನಿ ಇಂದು ಬೆಳಗ್ಗೆ ಒಂದು ವಿಡಿಯೋ ಶೇರ್ ಮಾಡಿದ್ದು, ಅದರಲ್ಲಿ ಸೀತಾ, ಸಿಹಿ ಮತ್ತು ರಾಮನನ್ನು ಮಹಾಕುಂಭಮೇಳದಲ್ಲಿ ನೋಡಬಹುದು. ಕಿರುತೆರೆಯ ಇತಿಹಾಸದಲ್ಲೇ ಇದು ಹೊಚ್ಚ ಹೊಸ ಪ್ರಯತ್ನ ಎಂದು ಜೀಕನ್ನಡ ವಾಹಿನಿ ತಿಳಿಸಿದೆ.

ಧಾರಾವಾಹಿ ತಂಡದ ಜೊತೆಗೆ ವೈಷ್ಣವಿ ಅವರು ಮಹಾಕುಂಭಮೇಳಕ್ಕೆ ಭೇಟಿ ನೀಡಿದ್ದು, ಈ ಕಾರಣಕ್ಕಾಗಿಯೇ ಅವರ ಕತ್ತಲ್ಲಿ ತಾಳಿ ಇದೆ, ವೈಷ್ಣವಿ ಅವರು ಮದುವೆಯಾಗಿಲ್ಲ ಎಂದು ಅವರ ಫ್ಯಾನ್ಸ್ ವಾದ ಮಾಡುತ್ತಿದ್ದಾರೆ. ಇನ್ನು ಕೆಲವರು ಲಕ್ಷಣವಾಗಿ ಸೀರೆ ಉತ್ತಕೊಂಡು ಹೋಗಿದ್ದೀರಾ ಎಂದು ಪ್ರಶಂಸೆ ನೀಡಿದ್ದಾರೆ. ಸೆಲೆಬ್ರಿಟಿಗಳು ಏನೇ ಮಾಡಿದರೂ, ಅವರ ವಿಚಾರದಲ್ಲಿ ಏನೇ ಕಂಡರು ಅದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗೋದು ಅಂತೂ ಖಂಡಿತ. ಇತ್ತೀಚೆಗೆ ರಮ್ಮಿ ಪ್ರೊಮೋಟ್ ಮಾಡಿ, ಜನರ ಕೆಂಗಣ್ಣಿಗೆ ಗುರಿಯಾಗಿದ್ದ ವೈಷ್ಣವಿ, ಇದೀಗ ಒಂದು ಸೀರೆಯ ಫೋಟೋ ಇಂದ ಎಲ್ಲ ಮನಗೆದ್ದಿದ್ದಾರೆ. ಇಲ್ಲಿ ಎಲ್ಲವೂ ನಡೆಯುತ್ತದೆ ಎನ್ನುವುದಕ್ಕೆ ಇವರ ಪೋಸ್ಟ್ ಮತ್ತೊಂದು ಸಾಕ್ಷಿ ಎಂದರೆ ಖಂಡಿತ ತಪ್ಪಲ್ಲ.