ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವವರು ನಟಿ ವೈಷ್ಣವಿ ಗೌಡ. ಇವರ ಅಗ್ನಿಸಾಕ್ಷಿ ಧಾರಾವಾಹಿ ಯಾವ ಮಟ್ಟಕ್ಕೆ ಕ್ರೇಜ್ ಹೊಂದಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಆ ಸಮಯದಲ್ಲಿ ಅಗ್ನಿಸಾಕ್ಷಿಯ ಸನ್ನಿಧಿ ಎಲ್ಲರ ಮನೆ ಮಗಳು, ಎಲ್ಲಾ ಹುಡುಗರ ಕ್ರಶ್ ಎಂದು ಹೇಳಿದರು ತಪ್ಪಲ್ಲ. ಅಷ್ಟರ ಮಟ್ಟಿಗೆ ಜನಪ್ರಿಯತೆ ಹೊಂದಿತ್ತು ಈ ಪಾತ್ರ. ಈಗ ವೈಷ್ಣವಿ ಅವರು ಸೀತಾರಾಮ ಧಾರಾವಾಹಿಯ ಸೀತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪಾತ್ರ ಸಹ ಜನರಿಗೆ ಅಷ್ಟೇ ಇಷ್ಟವಾಗಿದೆ. ಸೀತಾರಾಮನ ಪ್ರೀತಿ, ಸೀತಾ ಸಿಹಿ ಬಾಂಡಿಂಗ್ ಇದೆಲ್ಲವೂ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ.. ಇಷ್ಟು ಒಳ್ಳೆಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ವೈಷ್ಣವಿ ಅವರು ಇದೀಗ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ. ಇದೆಲ್ಲದರ ಜೊತೆಗೆ ಈಗ ಬದುಕಿನಲ್ಲಿ ಹೊಸ ಹೆಜ್ಜೆ ಇಡುವುದಕ್ಕೆ ಸಜ್ಜಾಗಿದ್ದಾರೆ.

ನಟಿ ವೈಷ್ಣವಿ ಅವರ ಜರ್ನಿ ಕೆಲವು ವರ್ಷಗಳದ್ದಷ್ಟೇ ಅಲ್ಲ. ಇವರು. ಬಹಳ ಚಿಕ್ಕವರಿರುವಾಗಲೇ, ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಅದ್ಭುತವಾದ ಡ್ಯಾನ್ಸರ್ ಸಹ ಹೌದು. ಕ್ಲಾಸಿಕಲ್ ಡ್ಯಾನ್ಸ್ ಅನ್ನು ಕಲಿತಿರುವ ಇವರು ಬಹಳ ಟ್ಯಾಲೆಂಟೆಡ್ ಹುಡುಗಿ. ಡ್ಯಾನ್ಸ್ ಶೋ ಬಳಿಕ ವೈಷ್ಣವಿ ಅವರು ಜೀಕನ್ನಡ ವಾಹಿನಿಯಲ್ಲೇ ದೇವಿ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಈ ಧಾರಾವಾಹಿ ಸಹ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ನಂತರ ಸ್ವಲ್ಪ ಗ್ಯಾಪ್ ಪಡೆದು ನಟಿಸಿದ ಧಾರಾವಾಹಿಯೇ ಅಗ್ನಿಸಾಕ್ಷಿ. ಈ ಧಾರಾವಾಹಿಯ ಕ್ರೇಜ್ ಇವತ್ತಿಗೂ ಕಡಿಮೆ ಆಗಿಲ್ಲ. ಜನರು ಅಗ್ನಿಸಾಕ್ಷಿ ಸಿದ್ಧಾರ್ಥ್ ಸನ್ನಿಧಿಯನ್ನ ಇಂದಿಗು ಮರೆತಿಲ್ಲ. ಈಗಲೂ ಈ ಧಾರಾವಾಹಿಯನ್ನು ಮತ್ತೆ ಟೆಲಿಕಾಸ್ಟ್ ಮಾಡಿದರೆ, ಮೊದಲು ಇದ್ದಷ್ಟೇ ಕ್ರೇಜ್ ಇರುತ್ತದೆ..
ಅಷ್ಟು ಕ್ರೇಜ್ ಹೊಂದಿದೆ ಅಗ್ನಿಸಾಕ್ಷಿ ಧಾರವಾಹಿ. ಅಗ್ನಿಸಾಕ್ಷಿ ನಂತರ ಇನ್ಯಾವುದೇ ಧಾರಾವಾಹಿಯನ್ನು ಒಪ್ಪಿಕೊಳ್ಳದೇ ದೊಡ್ಡ ಗ್ಯಾಪ್ ಪಡೆದ ಬಳಿಕ ವೈಷ್ಣವಿ ಅವರು ಕಾಣಿಸಿಕೊಳ್ಳುತ್ತಿರುವುದು ಸೀತಾರಾಮ ಧಾರಾವಾಹಿಯಲ್ಲಿ. ಈ ಧಾರಾವಾಹಿ ಸಹ ಅಗ್ನಿಸಾಕ್ಷಿ ತರಹವೆ ಕ್ರೇಜ್ ಹೊಂದಿದೆ. ಇದರಲ್ಲಿ ಜನರಿಗೆ ಸಿಹಿ ಮತ್ತು ಸೀತಾಳ ತಾಯಿ ಮಗಳ ಬಾಂಧವ್ಯ ಸಹ ತುಂಬಾ ಇಷ್ಟವಾಯಿತು. ಉತ್ತಮವಾಗಿ ಮುನ್ನುಗ್ಗುತ್ತಿದೆ ಸೀತಾರಾಮ ಧಾರಾವಾಹಿ. ಧಾರಾವಾಹಿಯ ಜೊತೆಗೆ ವೈಷ್ಣವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಹ ತುಂಬಾ ಆಕ್ಟಿವ್. ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇವರದ್ದೇ ಆದ ಯೂಟ್ಯೂಬ್ ಚಾನೆಲ್ ಸಹ ಇದೆ, ಈಗಾಗಲೇ ವೈಷ್ಣವಿ ಅವರಿಗೆ ಯೂಟ್ಯೂಬ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಚಂದಾದಾರರು ಇದ್ದಾರೆ. ಯೂಟ್ಯೂಬ್ ನಲ್ಲಿ ಯಶಸ್ವಿ ಮಹಿಳೆ ಆಗಿದ್ದಾರೆ.

ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಹ ತೊಡಗಿಸಿಕೊಂಡಿರುವ ವೈಷ್ಣವಿ ಅವರು, ಇದೀಗ ವೈಯಕ್ತಿಕ ಜೀವನದಲ್ಲಿ ಮುಂದಿನ ಹಂತಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಹೌದು ಮೊನ್ನೆಯಷ್ಟೇ ವೈಷ್ಣವಿ ಅವರ ಎಂಗೇಜ್ಮೆಂಟ್ ನಡೆದಿದೆ. ಫೋಟೋಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ವೈಷ್ಣವಿ ಅವರು ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಎಲ್ಲರ ಸಮ್ಮುಖದಲ್ಲಿ ಅನುಕೂಲ್ ಮಿಶ್ರ ಅವರೊಡನೆ ಎಂಗೇಜ್ ಆಗಿದ್ದು, ಹೆಣ್ಣುಮಕ್ಕಳ ಡ್ರೀಮ್ ಅಂತೆ ಇತ್ತು ಇವರ ಎಂಗೇಜ್ಮೆಂಟ್. ವೈಷ್ಣವಿ ಅವರು ಈ ಎಂಗೇಜ್ಮೆಂಟ್ ಇಂದ ಬಹಳ ಸಂತೋಷವಾಗಿದ್ದಾರೆ. ವೈಷ್ಣವಿ ಅವರ ಮದುವೆ ಯಾವಾಗ, ಯಾರೊಡನೆ ಮದುವೆ ಆಗುತ್ತಾರೆ ಎಂದು ಅವರ ಫ್ಯಾನ್ಸ್ ಕಾಯುತ್ತಿದ್ದರು. ಆ ಎಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಅದ್ಧೂರಿಯಾಗಿ ನಡೆದಿದೆ ಎಂಗೇಜ್ಮೆಂಟ್ ಕಾರ್ಯಕ್ರಮ.
ವೈಷ್ಣವಿ ಅವರ ಮದುವೆಗೆ ಸಂಬಂಧಿಸಿದ ಹಾಗೆ ಒಂದು ವಿಶೇಷವಾದ ವಿಚಾರ ಇದೆ. ಅದು ಏನು ಎಂದರೆ, ವೈಷ್ಣವಿ ಅವರಿಗೆ ಈ ಮೊದಲು ಬರೋಬ್ಬರಿ 300 ಪ್ರೊಪೋಸಲ್ ಗಳು ಬಂದಿದ್ದವಂತೆ. ವೈಷ್ಣವಿ ಅವರೊಡನೆ ಮದುವೆ ಆಗುವುದಕ್ಕೆ ಬಹಳಷ್ಟು ಹುಡುಗರು ರೆಡಿ ಇದ್ದರು. ಆದರೆ ವೈಷ್ಣವಿ ಅವರು ಅದೆಲ್ಲವನ್ನು ರಿಜೆಕ್ಟ್ ಮಾಡಿ ಅನುಕೂಲ್ ಮಿಶ್ರ ಅವರೊಡನೆ ಮದುವೆ ಆಗುತ್ತಿದ್ದಾರೆ. ವೈಷ್ಣವಿ ಅವರ ಎಂಗೇಜ್ಮೆಂಟ್ ಗೆ ಸ್ಯಾಂಡಲ್ ವುಡ್ ನಟಿ ಅಮೂಲ್ಯ ಅವರು ಸಹ ಬಂದಿದ್ದರು. ಇವರಿಬ್ಬರು ಬಹಳ ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಅಮೂಲ್ಯ ಅವರು ಮಕ್ಕಳ ಜೊತೆಗೆ ಬೆಸ್ಟ್ ಫ್ರೆಂಡ್ ಎಂಗೇಜ್ಮೆಂಟ್ ಗೆ ಬಂದಿದ್ದರು. ಇಷ್ಟು ವರ್ಷವಾದರೂ ಇವರ ಫ್ರೆಂಡ್ಶಿಪ್ ಇವತ್ತಿಗೂ ಅಷ್ಟೇ ಚೆನ್ನಾಗಿರುವುದನ್ನು ನೋಡಿದರೆ ಬಹಳ ಸಂತೋಷ ಆಗುತ್ತದೆ.
ಇನ್ನು ವೈಷ್ಣವಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಸಹ ಎಂಗೇಜ್ಮೆಂಟ್ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದು, ವೈಷ್ಣವಿ ಅವರ ತಾಯಿ ಮಗಳ ಎಂಗೇಜ್ಮೆಂಟ್ ಬಗ್ಗೆ ಮಾತನಾಡಿದ್ದು, ಇದು ಎಂಗೇಜ್ಮೆಂಟ್, ನಾವೆಲ್ಲರು ಒಪ್ಪಿ ಎಂಗೇಜ್ಮೆಂಟ್ ನಡೀತಾ ಇದೆ. ಇದೆಲ್ಲ ಹೇಗಾಯ್ತು ಅನ್ನೋ ಪೂರ್ತಿ ಮಾಹಿತಿ ನಾನೇ ಕೊಡ್ತೀನಿ.. ಸುಳ್ಳು ವಿಚಾರಗಳನ್ನ ಎಲ್ಲೂ ಹಾಕಬೇಡಿ ಎಂದು ವೈಷ್ಣವಿ ಅವರ ತಾಯಿ ಹೇಳಿದ್ದಾರೆ, ಈ ಮಾತುಗಳನ್ನ ಬಹಳ ತಮಾಷೆಯಾಗಿ ಹೇಳಿದ್ದಾರೆ. ಇನ್ನು ವೈಷ್ಣವಿ ಅವರು ಮದುವೆ ಆಗುತ್ತಿರುವ ಹುಡುಗನಿಗೆ ಕನ್ನಡ ಬರೋದಿಲ್ಲ, ವೈಷ್ಣವಿ ಅವರಿಗಾಗಿ ಕನ್ನಡ ಕಲಿಯುತ್ತಿದ್ದಾರೆ. ವೈಷ್ಣವಿ ಅವರಿಗೆ ಈ ಮದುವೆ ಬಹಳ ಸಂತೋಷ ನೀಡಿದೆ, ಅವರ ಕನಸುಗಳು ನನಸಾಗಿದೆ.
ವೈಷ್ಣವಿ ಅವರ ಮದುವೆ ಬಗ್ಗೆ ಸಾಕಷ್ಟು ವಿಷಯಗಳು ಚರ್ಚೆ ಆಗುತ್ತಲೇ ಇತ್ತು. ಅವರನ್ನು ಮದುವೆ ಆಗುತ್ತಾರೆ, ಇವರನ್ನು ಮದುವೆ ಆಗುತ್ತಾರೆ ಎನ್ನುವ ವಿಷಯ ವೈರಲ್ ಆಗುತ್ತಲೇ ಇತ್ತು. ಆದರೆ ಆ ಎಲ್ಲಾ ಸುದ್ದಿಗಳನ್ನು ಮೀರಿ ಈಗ ವೈಷ್ಣವಿ ಅವರ ಎಂಗೇಜ್ಮೆಂಟ್ ಕೊನೆಗೂ ನಡೆದಿದೆ. ವೈಷ್ಣವಿ ಅವರ ಫ್ಯಾನ್ಸ್ ಸಹ ಫುಲ್ ಖುಷಿಯಾಗಿದ್ದು, ಒಳ್ಳೆಯ ಹುಡುಗ ಸಿಕ್ಕಿದ್ದಾರೆ, ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಎಲ್ಲರೂ ವೈಷ್ಣವಿ ಅವರಿಗೆ ವಿಶ್ ಮಾಡುತ್ತಿದ್ದಾರೆ..