ಡಾ. ರಾಜ್ ಕುಮಾರ್ ಅವರು ಮತ್ತು ಅವರ ಸಿನಿಮಾಗಳು ಎಷ್ಟು ಅದ್ಭುತವಾಗಿ ಇರುತ್ತಿದ್ದವು ಎಂದು ನಮಗೆಲ್ಲಾ ಗೊತ್ತೇ ಇದೆ. ಅಣ್ಣಾವ್ರ ಬಹುತೇಕ ಎಲ್ಲಾ ಸಿನಿಮಾಗಳು ಸಹ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಬದುಕಿನ ಪಾಠಗಳನ್ನು ಸಹ ಕಲಿಸುತ್ತಿದ್ದವು. ಅಣ್ಣಾವ್ರು ಅವರ ವೃತ್ತಿ ಬದುಕಿನಲ್ಲಿ 200 ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲಾ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಹಾಗೆಯೇ, ಅವರ ಸಿನಿಮಾಗಳು ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ದೇವರ ಸಿನಿಮಾಗಳು ಎಲ್ಲದರಲ್ಲೂ ನಟಿಸಿದ್ದಾರೆ. ಎಲ್ಲಾ ಥರದ ಪಾತ್ರಗಳನ್ನು ನಿರ್ವಹಿಸಬಲ್ಲ ಕಲಾವಿದ ಎಂದು ಹೆಸರು ಪಡೆದವರು ಡಾ. ರಾಜ್ ಕುಮಾರ್. ಅವರ ಬಗ್ಗೆ ಹೇಳಲು ಅವರ ಸಿನಿಮಾ ಕಥೆಗಳನ್ನು ತಿಳಿಸುತ್ತಾ ಹೋದರೆ, ಅನೇಕ ವಿಚಾರಗಳು ನಮಗೆ ಸಿಗುತ್ತದೆ. ಈ ತೆರಮರೆಯ ಕಥೆಗಳನ್ನು ಹೇಳುತ್ತಾ ಹೋದರೆ, ಅಣ್ಣಾವ್ರ ಬಗ್ಗೆ ನಮಗೆ ಗೌರವ ಹೆಚ್ಚಾಗುತ್ತದೆ. ಇಂದು ನಿಮಗೆ ಹಾಲುಜೇನು ಸಿನಿಮಾ ಬಗ್ಗೆ ಹೇಳಲಿದ್ದೇವೆ..

ಕನ್ನಡ ಚಿತ್ರರಂಗದ ಎವರ್ ಗ್ರೀನ್ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಹಾಲುಜೇನು ಕೂಡ ಒಂದು. ದಕ್ಷಿಣ ಭಾರತ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಸಿಂಗೀತಂ ಶ್ರೀನಿವಾಸ್ ರಾವ್ ಅವರು ನಿರ್ದೇಶನ ಮಾಡಿದ್ದ ಸಿನಿಮಾ ಇದು. ಅಣ್ಣಾವ್ರು ಮತ್ತು ಮಾಧವಿ ಅವರ ಜೋಡಿಯ ಸೂಪರ್ ಹಿಟ್ ಸಿನಿಮಾ. ಮೊದಲಿಗೆ ಈ ಸಿನಿಮಾ ತಯಾರಾದಾಗ ಸಿನಿಮಾ ನೋಡಿದ ಕೆಲವರು ಹಾಲುಜೇನು ಹೆಚ್ಚು ದಿವಸ ಓಡೋದಿಲ್ಲ, ಈ ಸಿನಿಮಾದಲ್ಲಿ ಅಣ್ಣಾವ್ರು ಯಾವಾಗಲೂ ಸುಳ್ಳು ಹೇಳಿಕೊಂಡು ಓಡಾಡ್ತಾ ಇರ್ತಾರೆ, ದೊಡ್ಡ ದೊಡ್ಡ ಫೈಟ್ ಸೀನ್ ಗಳು ಇಲ್ಲ, ಆಹಾ ಅನ್ನಿಸುವಂಥ ಅದ್ಭುತ ಎನ್ನಿಸುವಂಥ ಹಾಡುಗಳು ಇಲ್ಲ. ಈ ಕಾರಣಗಳಿಗೆ ಸಿನಿಮಾ ಹೋಗೋದಿಲ್ಲ ಎಂದು ಹಲವರ ಅಭಿಪ್ರಾಯ ಆಗಿತ್ತು. ಆದರೆ ಹಾಲುಜೇನು ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡು, ಹಲವು ದಾಖಲೆಗಳನ್ನು ಸೃಷ್ಟಿಸಿತ್ತು. ಇದರ ಬಗ್ಗೆ ಪೂರ್ತಿ ಡೀಟೇಲ್ಸ್ ಅನ್ನು ನಿಮಗೆ ತಿಳಿಸಿಕೊಡಲಿದ್ದೇವೆ..
ಹಾಲುಜೇನು ಸಿನಿಮಾವನ್ನು ಮೊದಲಿಗೆ ಅನಂತ್ ನಾಗ್ ಅವರು ಮಾಡಬೇಕಿತ್ತು. ಸಿಂಗೀತಂ ಶ್ರೀನಿವಾಸ್ ರಾವ್ ಅವರು ಮೊದಲಿಗೆ ಬೇರೆ ನಿರ್ಮಾಪಕರ ಜೊತೆಗೆ ಹಾಲು ಜೇನು ಸಿನಿಮಾ ಮಾಡಬೇಕಿತ್ತು, ಅನಂತ್ ನಾಗ್ ಅವರು ನಾಯಕನಾಗಿ ಆಕ್ಟ್ ಮಾಡಬೇಕಿತ್ತು, ಆ ನಿರ್ಮಾಪಕರು ಬೀದರ್ ಗೆ ಸೇರಿದವರು. ನಂತರ ಯಾವುದೋ ಒಂದು ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ಅವರಿಗೆ ಹಾಲು ಜೇನು ಸಿನಿಮಾದ ಕಥೆಯನ್ನು ಹೇಳಿದಾಗ, ಅವರಿಗೆ ತುಂಬಾ ಇಷ್ಟವಾಗಿ, ಅವರ ತಮ್ಮ ವರದಪ್ಪ ಅವರಿಗೆ ಕಥೆ ಹೇಳಲು ಹೇಳಿದರಂತೆ, ಸಿಂಗೀತಂ ಅವರು ವರದಪ್ಪ ಅವರಿಗೆ ಕಥೆ ಹೇಳಿದಾಗ, ಅವರಿಗೂ ಕಥೆ ತುಂಬಾ ಇಷ್ಟವಾಗಿ, ಬಳಿಕ ಪಾರ್ವತಮ್ಮ ಅವರಿಗೂ ಈ ಕಥೆ ತುಂಬಾ ಇಷ್ಟ ಆಯ್ತಂತೆ. ಈ ಕಥೆಯನ್ನ ತಮ್ಮ ಬ್ಯಾನರ್ ಇಂದಲೇ ಸಿನಿಮಾ ಮಾಡಬೇಕು ಎಂದು ಪಾರ್ವತಮ್ಮ ಅವರು ನಿರ್ಧಾರ ಮಾಡಿದರು.

ಆಗಿನ ಕಾಲದಲ್ಲೇ ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ಹಾಲುಜೇನು ಸಿನಿಮಾದ ಕಥೆಯನ್ನು ಖರೀದಿ ಮಾಡಿದ್ದರು ಪಾರ್ವತಮ್ಮ ಅವರು. ಅವರ ಬ್ಯಾನರ್ ನಲ್ಲೇ ಸಿನಿಮಾ ನಿರ್ಮಾಣ ಆಯಿತು. ಈ ಸಿನಿಮಾದ ಮತ್ತೊಂದು ವಿಶೇಷತೆ ಏನು ಎಂದರೆ, ಮಾಧವಿ ಅವರಿಗೆ ದಕ್ಷಿಣ ಭಾರತ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟಿ ಸರಿತಾ ಅವರು ಡಬ್ ಮಾಡಿದರು. ಸರಿತಾ ಅವರು ಅಣ್ಣಾವ್ರ ಜೊತೆಗೆ ಹಿಂದಿನ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಹಾಲುಜೇನು ಸಿನಿಮಾದಲ್ಲಿ ಡಬ್ ಮಾಡಿದರು, ಅಣ್ಣಾವ್ರ ಮುಂದಿನ ಸಿನಿಮಾ ಚಲಿಸುವ ಮೋಡಗಳು ನಲ್ಲಿ ಮತ್ತೆ ನಾಯಕಿಯಾಗಿ ನಟಿಸಿದರು. ಹೀಗೆ ಹಾಲುಜೇನು ಸಿನಿಮಾ ಕುರಿತಾಗಿ ಸಾಕಷ್ಟು ವಿಚಾರಗಳು ಇದೆ. ಇದೊಂದು ಟ್ರಾಜಿಕ್ ಎಂಡ್ ಇರುವ ವಿಶೇಷವಾದ ಸಿನಿಮಾ. ಅಣ್ಣಾವ್ರ ಪಾತ್ರ ರಂಗಸ್ವಾಮಿ ಕ್ಯಾನ್ಸರ್ ಬಂದ ಹೆಂಡತಿಯನ್ನು ಉಳಿಸಿಕೊಳ್ಳಲು ಪರದಾಡುವ ಪಾತ್ರ.
ಸಮಯಕ್ಕೆ ತಕ್ಕ ಹಾಗೆ ಸುಳ್ಳು ಹೇಳುತ್ತಾ, ಹೇಗೋ ಮಾಡಿ ಹಣ ಹೊಂದಿಸಿಕೊಂಡು ಹೆಂಡತಿಗೆ ಟ್ರೀಟ್ಮೆಂಟ್ ಕೊಡಿಸುವ ಪಾತ್ರ. ಎರಡನೇ ನಾಯಕಿಯಾಗಿ ಈ ಸಿನಿಮಾದಲ್ಲಿ ರೂಪಾ ದೇವಿ ಅವರು ನಟಿಸಿದ್ದರು. ಈ ಸಿನಿಮಾ ತಯಾರಾಗಿ ಬಿಡುಗಡೆ ಆಗೋ ವೇಳೆ ಈ ಪರಿ ಯಶಸ್ಸು ಗಳಿಸುತ್ತದೆ ಎಂದು ನಿರೀಕ್ಷೆ ಇರಲಿಲ್ಲವಂತೆ. ಅಣ್ಣಾವ್ರ ಸಿನಿಮಾ ಎಂದರೆ ಅದರಲ್ಲಿ ಇರಬೇಕಾದ ಫೈಟ್ಸ್ ಇಲ್ಲ, ಆಕ್ಷನ್ ಸೀನ್ ಇಲ್ಲ, ಒಳ್ಳೆಯ ಹಾಡುಗಳು ಇಲ್ಲ ಎನ್ನುವ ಅಭಿಪ್ರಾಯ ಇತ್ತಂತೆ. ಆದರೆ ಸಿನಿಮಾ ಬಿಡುಗಡೆಯಾದ ಮೇಲೆ ಜನರಿಗೆ ತುಂಬಾ ಇಷ್ಟವಾಗಿತ್ತು. ಅದರಲ್ಲೂ ಮಹಿಳೆಯರಿಗೆ ಈ ಸಿನಿಮಾ ತುಂಬಾ ಇಷ್ಟವಾಗಿತ್ತು. ಪದೇ ಪದೇ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದರಂತೆ. ಅಣ್ಣಾವ್ರು ಅವರ ಹೆಂಡತಿಯನ್ನ ಉಳಿಸಿಕೊಳ್ಳಲು ಸಿನಿಮಾದಲ್ಲಿ ಎಷ್ಟು ಕಷ್ಟ ಪಡ್ತಾರೆ, ಏನೇನೆಲ್ಲಾ ಮಾಡ್ತಾರೆ ನಮ್ಮನೆಯಲ್ಲಿ ಗಂಡುಮಕ್ಳಳು ಏನೂ ಮಾಡೋದಿಲ್ಲ ಎನ್ನುತ್ತಿದ್ದರಂತೆ.

ಸಿನಿಮಾ ತಯಾರಕರು ಅಥವಾ ಕೆಲವರು ಸಿನಿಮಾ ನೋಡಿ ಅದು ಚೆನ್ನಾಗಿಲ್ಲ, ಯಶಸ್ವಿ ಆಗೋದಿಲ್ಲ ಎಂದು ಅಭಿಪ್ರಾಯ ಸೂಚಿಸಬಹುದು , ಆದರೆ ಜನರ ಪ್ರತಿಕ್ರಿಯೆ ಬೇರೆ ರೀತಿ ಇರುತ್ತದೆ, ಜನರು ಒಪ್ಪಿಕೊಂಡರೆ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎನ್ನುವುದಕ್ಕೆ ಈ ಸಿನಿಮಾ ಸಾಕ್ಷಿ. ಹಾಲುಜೇನು ಸಿನಿಮಾದಲ್ಲಿ ಸಮಯ ಸಂದರ್ಭಕ್ಕೆ ತಕ್ಕ ಹಾಗೆ ಅಣ್ಣಾವ್ರು ಸುಳ್ಳು ಹೇಳಿಕೊಂಡು ಓಡಾಡಿದರು ಸಹ ಅದು ಜನರಿಗೆ ಬಹಳ ಕನೆಕ್ಟ್ ಆಗಿತ್ತು. ಕ್ಲೈಮ್ಯಾಕ್ಸ್ ದೃಶ್ಯದ ವೇಳೆಗೆ ಥಿಯೇಟರ್ ನಲ್ಲಿ ಮಹಿಳೆಯರು ಕಣ್ಣೀರು ಹಾಕಿದ್ದರು. ಹೀಗೆ ಜನರಿಗೆ ಕನೆಕ್ಟ್ ಆಗುವಂಥ ವಿಚಾರ ಸಿನಿಮಾದಲ್ಲಿ ಇದ್ದರೆ ಜನರಿಗೆ ಖಂಡಿತ ಇಷ್ಟವಾಗುತ್ತದೆ. ಇನ್ನು ಹಾಲುಜೇನು ಸಿನಿಮಾ ಬರೋಬ್ಬರಿ 35 ವಾರಗಳ ಯಶಸ್ವಿ ಪ್ರದರ್ಶನ ಕಂಡಿತು. ರಾಜ್ಯದ ಹಲವೆಡೆ ಶತದಿನೋತ್ಸವ ಆಚರಿಸಿತು. ಇನ್ನು ಅನೇಕ ದಾಖಲೆಗಳನ್ನು ಮಾಡಿತು.



