ಸೌತ್ ಇಂಡಿಯಾದ ಸ್ಟಾರ್ ಹೀರೋಯಿನ್ ಗಳಲ್ಲಿ ಅನುಷ್ಕಾ ಶೆಟ್ಟಿ ಸಹ ಒಬ್ಬರು. ಕರ್ನಾಟಕದ ಹುಡುಗಿ, ತುಳುನಾಡಿನ ಬೆಡಗಿ ಅನುಷ್ಕಾ ಶೆಟ್ಟಿ ಅವರು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲೇ ಆದರೂ ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಹೊರಭಾಷೆಯ ಸಿನಿಮಗಳು. ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಇವರಿಗೆ ಭಾರಿ ಬೇಡಿಕೆ ಇದೆ. ಅನುಷ್ಕಾ ಅವರು ಈಗ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದ್ದರೂ ಸಹ, ಈ ವರ್ಷ ಅನುಷ್ಕಾ ಅಭಿನಯದ ಸಿನಿಮಾ ಬಿಡುಗಡೆ ಆಗುವುದಕ್ಕೆ ಸಿದ್ಧವಾಗುತ್ತದೆ. ಎರಡು ವರ್ಷಗಳ ಬಳಿಕ ಅನುಷ್ಕಾ ಅವರನ್ನು ಮತ್ತೆ ತೆರೆಮೇಲೆ ನೋಡುವುದಕ್ಕೆ ಅವರ ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನು ಇದೀಗ ಅನುಷ್ಕಾ ಶೆಟ್ಟಿ ಅವರ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಕ್ರಿಕೆಟಿಗನ ಜೊತೆಗೆ ಅನುಷ್ಕಾ ಶೆಟ್ಟಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ನಟಿ ಅನುಷ್ಕಾ ಶೆಟ್ಟಿ ಅವರು ಬಹಳ ಬೇಗ ಕೆರಿಯರ್ ಶುರು ಮಾಡಿದರು. ಇವರು ನಟನೆಗೆ ಅವಕಾಶ ಪಡೆಯುವುದಕ್ಕೆ ಕನ್ನಡದಲ್ಲೇ ಮೊದಲು ಟ್ರೈ ಮಾಡಿದರು. ಆದರೆ ಕನ್ನಡದಲ್ಲಿ ಅವಕಾಶ ಸಿಗದೇ, ತೆಲುಗು ಭಾಷೆಯಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತು. ತೆಲುಗಿನಲ್ಲಿ ಹಾಗೂ ತಮಿಳು ಭಾಷೆಯಲ್ಲಿ ಅಭಿನಯಿಸುವುದಕ್ಕೆ ಶುರು ಮಾಡಿದರು. ಶುರುವಿನಲ್ಲಿ ಇವರು ಕೆಲವು ಬೋಲ್ಡ್ ಪಾತ್ರಗಳಲ್ಲಿ ನಟಿಸಿದರು, ನಂತರದ ವರ್ಷಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಸಹ ನಟಿಸುವುದಕ್ಕೆ ಶುರು ಮಾಡಿದರು. ಅರುಂಧತಿ ಇವರಿಗೆ ಬಹಳ ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿತು. ನಂತರ ಭಾಗಮತಿ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದರು.

ಇನ್ನು ಬಾಹುಬಲಿ ಸಿನಿಮಾ ಇವರಿಗೆ ಇನ್ನೆಷ್ಟು ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು ಎಂದು ಎಲ್ಲರಿಗೂ ಗೊತ್ತೇ ಇದೆ. ಅನುಷ್ಕಾ ಶೆಟ್ಟಿ ಅವರು ಬಾಹುಬಲಿ ಸಿನಿಮಾ ಯಶಸ್ಸಿನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡರು. ದೇವಸೇನ ಪಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು. ಎಲ್ಲೆಡೆ ಅನುಷ್ಕಾ ಶೆಟ್ಟಿ ಅವರಿಗೆ ಅಭಿಮಾನಿ ಬಳಗ ಸಹ ಶುರುವಾಯಿತು. ನಂತರ ಇವರು ನಟಿಸಿದ್ದು ಕೆಲವೇ ಸಿನಿಮಾಗಳಲ್ಲಿ ಆದರೂ ಫ್ಯಾನ್ಸ್ ಗೆ ಬಹಳ ಸಂತೋಷವಿದೆ. ಈ ವರ್ಷ ಇವರ ಘಾಟಿ ಸಿನಿಮಾ ಬಿಡುಗಡೆ ಆಗಲಿದೆ. ಇದು ಪಕ್ಕಾ ರಗಡ್ ಸಿನಿಮಾ ಆಗಿದ್ದು, ಮಾಸ್ ಅವತಾರದಲ್ಲಿ ಅನುಷ್ಕಾ ಶೆಟ್ಟಿ ಅವರನ್ನು ನೋಡುವುದಕ್ಕೆ ಕಾಯುತ್ತಿದ್ದಾರೆ.
ಇನ್ನು ಅನುಷ್ಕಾ ಶೆಟ್ಟಿ ಅವರ ವೈಯಕ್ತಿಕ ಜೀವನದ ವಿಷಯ ಸಹ ಸದಾ ಚರ್ಚೆ ಆಗುತ್ತಲೇ ಇರುತ್ತದೆ. ಅದರಲ್ಲೂ ಅವರ ಮದುವೆ ಬಗ್ಗೆ ಮತ್ತು ಲವ್ ಲೈಫ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತದೆ. ಅನುಷ್ಕಾ ಅವರು ನಟ ಪ್ರಭಾಸ್ ಅವರೊಡನೆ ಬಹಳ ಕ್ಲೋಸ್ ಆಗಿದ್ದಾರೆ, ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವಿಷಯ ಒಂದು ಸಿಕ್ಕಾಪಟ್ಟೆ ವೈರಲ್ ಆಯಿತು. ಇಬ್ಬರು ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು, ಬಹಳ ಅನ್ಯೋನ್ಯವಾಗಿ ಕೂಡ ಇದ್ದರೂ ಹಾಗಾಗಿ ಈ ಜೋಡಿ ಪ್ರೀತಿ ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎನ್ನುವ ವಿಚಾರ ಸಖತ್ ವೈರಲ್ ಆಗಿತ್ತು. ಅಭಿಮಾನಿಗಳು ಇವರಿಬ್ಬರ ಮದುವೆ ಆಗೋದು ಗ್ಯಾರೆಂಟಿ ಎಂದೇ ಅಂದುಕೊಂಡಿದ್ದರು. ಇತ್ತೀಚಿನ ದಿನಗಳ ವರೆಗೆ ಕೂಡ ಈ ವಿಷಯ ಸಿಕ್ಕಾಪಟ್ಟೆ ಚರ್ಚೆ ಆಗಿತ್ತು.

ಆದರೆ ಅಭಿಮಾನಿಗಳು ಅಂದುಕೊಂಡಂತೆ ಯಾವುದು ಕೂಡ ನಡೆಯಲಿಲ್ಲ. ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಅವರು ಇಬ್ಬರು ಕೂಡ ತಮ್ಮ ನಡುವೆ ರಿಲೇಶನ್ಷಿಪ್ ಇಲ್ಲ, ತಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂದು ಸ್ಪಷ್ಟನೆ ನೀಡಿದರು. ಆದರೆ ಅಭಿಮಾನಿಗಳು ಮಾತ್ರ ಇವತ್ತಿಗೂ ಕೂಡ ಈ ಜೋಡಿ ಮದುವೆ ಆಗಲಿ ಎಂದೇ ಕಾಯುತ್ತಿದ್ದಾರೆ. ಪ್ರಭಾಸ್ ಅನುಷ್ಕಾ ಶೆಟ್ಟಿ ಜೋಡಿಗೆ ಅಷ್ಟು ದೊಡ್ಡ ಫ್ಯಾನ್ ಬೇಸ್ ಇದೆ. ಇನ್ನು ಪ್ರಭಾಸ್ ಅವರಿಗು ಸಹ ಅದೇ ರೀತಿ, ಅಭಿಮಾನಿಗಳು ಅನುಷ್ಕಾ ಶೆಟ್ಟಿ ಅವರನ್ನೇ ಮದುವೆಯಾಗಿ ಎಂದು ಹೇಳುತ್ತಿದ್ದರು. ಇನ್ನು ಕೂಡ ಇವರಿಬ್ಬರು ಈ ವಿಚಾರದ ಬಗ್ಗೆ ಗ್ರೀನ್ ಸಿಗ್ನಲ್ ಅಂತೂ ಕೊಟ್ಟಿಲ್ಲ. ಆದರೆ ಅನುಷ್ಕಾ ಶೆಟ್ಟಿ ಅವರ ಬಗ್ಗೆ ಮತ್ತೊಂದು ವಿಚಾರಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೊಸ ವರ ಹೊಸ ವಿಚಾರ ಇದೇ ಆಗಿದೆ.

ಇನ್ನು ಒಂದೆರಡು ವರ್ಷಗಳ ಹಿಂದೆಯೇ ಅನುಷ್ಕಾ ಶೆಟ್ಟಿ ಅವರ ಬಗ್ಗೆ ಮತ್ತೊಂದು ವಿಚಾರ ವೈರಲ್ ಆಯಿತು. ತೆಲುಗಿನ ಖ್ಯಾತ ನಿರ್ದೇಶಕರೊಬ್ಬರ ಮಗನ ಜೊತೆಗೆ ಅನುಷ್ಕಾ ಶೆಟ್ಟಿ ಅವರ ಮದುವೆ ಆಗಲಿದೆ ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಯಿತು. ಆದರೆ ಅದರ ಬಗ್ಗೆ ಸಹ ಯಾವುದೇ ಸುದ್ದಿ ಬರಲಿಲ್ಲ. ನಂತರ ಈಗ ಮತ್ತೊಮ್ಮೆ ಅನುಷ್ಕಾ ಶೆಟ್ಟಿ ಅವರ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಈ ಬಾರಿ ಕ್ರಿಕೆಟರ್ ಒಬ್ಬರ ಜೊತೆಗೆ ಅನುಷ್ಕಾ ಅವರ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಇನ್ನೂ ಕೂಡ ಯಾವುದೇ ರೀತಿಯ ಸ್ಪಷ್ಟನೆಗಳು ಸಿಕ್ಕಿಲ್ಲ. ಅನುಷ್ಕಾ ಶೆಟ್ಟಿ ಅವರ ಕುಟುಂಬದ ಕಡೆಯಿಂದ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಖುದ್ದಾಗಿ ಅನುಷ್ಕಾ ಶೆಟ್ಟಿ ಅವರು ಸಹ ಈ ಬಗ್ಗೆ ಏನನ್ನೂ ಹೇಳಿಲ್ಲ..
ಆದರೆ ಅನುಷ್ಕಾ ಅವರು ಮದುವೆಗೆ ಒಪ್ಪಿದ್ದಾರೆ, ಶೀಘ್ರದಲ್ಲ ಮದುವೆ ಆಗುತ್ತಾರೆ ಎನ್ನುವ ವಿಷಯ ಮಾತ್ರ ವೈರಲ್ ಆಗಿದೆ. ಅನುಷ್ಕಾ ಅವರು ಈ ಬಗ್ಗೆ ಸ್ಪಷ್ಟನೆ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ. ಈ ವರ್ಷ ಸಿನಿಮಾ ಬಿಡುಗಡೆ ಆಗಲಿರುವ ಕಾರಣ, ಸಿನಿಮಾ ಪ್ರೊಮೋಷನ್ ವೇಳೆ ಮದುವೆ ವಿಚಾರಗಳ ಬಗ್ಗೆ ಏನಾದರೂ ಸ್ಪಷ್ಟನೆಗಳು ಸಿಗುತ್ತಾ ಎಂದು ಕಾದು ನೋಡಬೇಕಿದೆ. ಇನ್ನು ಅಭಿಮಾನಿಗಳಿಗೆ ಅನುಷ್ಕಾ ಅವರನ್ನು ಹೆಚ್ಚಾಗಿ ತೆರೆಮೇಲೆ ನೋಡಬೇಕು ಎನ್ನುವುದೇ ಆಸೆ ಆಗಿದೆ. ಮುಂದಿನ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾರಾ ಎಂದು ಕಾದು ನೋಡಬೇಕಿದೆ.



