ಬಟ್ಟೆ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ವೈರಲ್ ಹುಡುಗಿ ಉರ್ಫಿ ಜಾವೇದ್. ಇತ್ತೀಚೆಗಷ್ಟೇ ಅಕ್ವೇರಿಯಂ ಡ್ರೆಸ್ ತೊಟ್ಟಿದ್ದ ಉರ್ಫಿ ಇದೀಗ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಉರ್ಫಿಯ ಹೊಸ ಅವತಾರಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ನೆಟ್ಟೆಡ್ ಡ್ರೆಸ್ ಧರಿಸಿ ಫೋಟೋಶೂಟ್ ನಡೆಸಿರುವ ಉರ್ಫಿ ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟೆಡ್ ಡ್ರೆಸ್ ನಲ್ಲಿ ಮಿರಮಿರ ಮಿಂಚಿರುವ ಉರ್ಫಿಯ ಹಸಿಬಿಸಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದೆ.

https://www.instagram.com/p/CxNCny5ofc0/?utm_source=ig_web_copy_link&igshid=MzRlODBiNWFlZA==
ಉರ್ಫಿ ಜಾವೇದ್ ಸದಾ ಅರೆ ಬರೆ ಬಟ್ಟೆಯಲ್ಲೇ ಎಂಟ್ರಿ ಕೊಡ್ತಾರೆ. ಸದ್ಯ, ಕೆಂಪು ಬಣ್ಣದ ನೆಟ್ ಡ್ರೆಸ್ನಲ್ಲಿ ಮೈ ಕಾಣುವಂತಹ ಡ್ರೆಸ್ನಲ್ಲಿ ಬಂದಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ಬಂದಿರೋ ಮಾಜಿ ಬಿಗ್ ಬಾಸ್ ತಾರೆಯನ್ನ ನೋಡಿ ನೆಟ್ಟಿಗರು, ‘ಇದು ಬಿಕಿನಿಗಿಂತ ಸೆಕ್ಸಿಯಾಗಿದೆ’ ಎಂದಿದ್ದಾರೆ. ಹಸಿಬಿಸಿ ಫೋಟೋಗಳಿಂದಲೇ ಸದಾ ಸುದ್ದಿಯಲ್ಲಿರುವ ಉರ್ಫಿ ಬಟ್ಟೆಯ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಾರೆ. ಆದರೆ ಯಾರಿಗೂ ಕೇರ್ ಮಾಡದ ಉರ್ಫಿ ತಮಗಿಷ್ಟವಾದ ಬಟ್ಟೆಯಲ್ಲೇ ಸದಾ ಕಾಣಿಸಿಕೊಳ್ಳುತ್ತಾರೆ.
ಈ ಹಿಂದೆ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಉರ್ಫಿ, ಬಿಗ್ ಬಾಸ್ ಒಟಿಟಿ ಸೀಸನ್ 1 ರಲ್ಲಿ ಟಾಸ್ಕ್ ಗೆಲ್ಲಲು ಕಸದ ಚೀಲಗಳಿಂದ ಮಾಡಿದ ಉಡುಪನ್ನು ಧರಿಸಿ ಖ್ಯಾತಿ ಗಳಿಸಿದರು. ತಮ್ಮ ಸೃಜನಶೀಲತೆಗೆ ಮೆಚ್ಚುಗೆ ಪಡೆದರು. ಅಂದಿನಿಂದ ಉರ್ಫಿ ಸಾಮಾನ್ಯ ಉಡುಗೆಯನ್ನು ಧರಿಸಲೇ ಇಲ್ಲ. ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ಉರ್ಫಿಗೆ ಲಕ್ಷಾಂತರ ಜನ ಫಾಲೋವರ್ಸ್ ಇದ್ದಾರೆ. ಇದರಿಂದಲೇ ಉರ್ಫಿ ಲಕ್ಷಾಂತರ ಹಣ ಗಳಿಸುತ್ತಿದ್ದಾರೆ. ಸದ್ಯ, ನೆಟ್ಟೆಡ್ ಡ್ರೆಸ್ ನಲ್ಲಿರುವ ಉರ್ಫಿ ಇನ್ಯಾವ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ.