ಕನ್ನಡದ ಪುಟ್ಟಗೌರಿ ಮದುವೆ, ನಾಗಿಣಿ 2 ಧಾರವಾಹಿಗಳ ಮೂಲಕ ಮನೆ ಮಾತಾಗಿರುವ ನಟಿ ನಮ್ರತಾ ಗೌಡ ತಮ್ಮ ನೂತನ ಮನೆಗೆ ಕಾಲಿಡುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ. ಜೊತೆಗೆ ಗೃಹಪ್ರವೇಶದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗೃಹಪ್ರವೇಶ ಕಾರ್ಯಕ್ರಮಕ್ಕೆ ಕಿರುತೆರೆಯ ಬಿಗ್ ಬಾಸ್ ಕಿಶನ್, ನೇಹಾ ಗೌಡ, ಕವಿತಾ ಗೌಡ, ಅನುಪಮಾ, ಸಿಂಗರ್ ಕಾರ್ತಿಕ್ ಶರ್ಮಾ, ಯಶಸ್ವಿನಿ ಸೇರಿದಂತೆ ಹಲವರು ಆಗಮಿಸಿದ್ದರು.



ಗೃಹಪ್ರವೇಶ ಸಮಾರಂಭದಲ್ಲಿ ನಮ್ರತಾ ಗೌಡ ಮುದ್ದಾಗಿ ಕಾಣಿಸಿಕೊಂಡಿದ್ದು, ಪಿಂಕ್ ಬಣ್ಣದ ಸೀರೆಯುಟ್ಟು ಕಂಗೊಳಿಸಿದ್ದಾರೆ. ಪೋಷಕರ ಜೊತೆ ನಟಿ ಮನೆಯಲ್ಲಿ ಪೂಜೆ ಮಾಡುತ್ತಿರುವ ಫೋಟೋಗಳನ್ನು ಕೂಡ ನಟಿ ಹಂಚಿಕೊಂಡಿದ್ದಾರೆ. ನಮ್ರತ ಅವರ ಕನಸಿನ ಮನೆ ಇದಾಗಿದ್ದು, ಸುಂದರವಾಗಿ ಮನೆ ನಿರ್ಮಿಸಿದ್ದಾರೆ. ಇದರೊಂದಿಗೆ ಸಿರಿಯಲ್ ತಾರೆಗಳಿಗೆ, ಕಲಾವಿದರಿಗೆ ಆಹ್ವಾನ ನೀಡಿ ಸಂಭ್ರಮಿಸಿದ್ದಾರೆ.
ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಮ್ರತಾ, ಟಿವಿ ಸೀರಿಯಲ್ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂಬರುವ ಬಿಗ್ ಬಾಸ್ ಸೀಸನ್ 10ಕ್ಕೆ ನಮ್ರತಾ ಕಾಲಿಡುತ್ತಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ‘ನಾಗಿಣಿ 2’ ಖ್ಯಾತಿಯ ನಮ್ರತ ಬಿಕಿನಿಯಲ್ಲಿ ಫೋಟೋಶೂಟ್ ನಡೆಸಿದ್ದರು, ಈ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿತ್ತು.



