ದೇಶದೆಲ್ಲೆಡೆ ಟೊಮ್ಯಾಟೊ ಹಣ್ಣಿನದ್ದೇ ಕಾರುಬಾರು. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಎಲ್ಲರೂ ಕೂಡ ಟೊಮ್ಯಾಟೊ ಹಣ್ಣಿನ ಬಗ್ಗೆ ಮಾತನಾಡುತ್ತಿದ್ದಾರೆ. 10-20 ರೂಪಾಯಿಗೆ ಸಿಗುತ್ತಿದ್ದ ಈ ತರಕಾರಿ ಏಕಾಏಕಿ ಕೆಜಿಗೆ 130ರ ಗಡಿ ದಾಟಿದೆ. ಇದೇ ವೇಳೆ ಟ್ರೆಂಡಿಂಗ್ ಸೆಲೆಬ್ರಿಟಿ ಉರ್ಫಿ ಜಾವೇದ್ ಟೊಮ್ಯಾಟೊ ಹಣ್ಣನ್ನು ಆಭರಣದಂತೆ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಈ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.

ಹಿಂದಿ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಮುನ್ನೆಲೆಗೆ ಬಂದ ಉರ್ಫಿ ಜಾವೇದ್ ಅಲ್ಲಿಯೂ ಕೂಡ ಚಿತ್ರವಿಚಿತ್ರ ಬಟ್ಟೆಗಳನ್ನು ಧರಸಿ ಸುದ್ದಿಯಾಗಿದ್ದರು. ಅಲ್ಲಿಂದ ಹೊರ ಬಂದ ನಂತರವೂ ಕೂಡ ಅದನ್ನೇ ಮುಂದುವರೆಸಿದ ಉರ್ಫಿ ಅವರ ವಿಚಿತ್ರ ಬಟ್ಟೆಗಳಿಂದಲೇ ಸುದ್ದಿಯಾಗಿದ್ದು ಹೆಚ್ಚು. ಇದೀಗ ಟೊಮ್ಯಾಟೊ ಧರಿಸಿ ಉರ್ಫಿ ಸುದ್ದಿಯಲ್ಲಿದ್ದಾರೆ.
ಟೊಮ್ಯಾಟೊ ಹಣ್ಣಿಗೆ ಮಾರುಕಟ್ಟೆಯಲ್ಲಿ ಬಂಗಾರದಂತ ಬೇಡಿಕೆ ಬಂದಿದೆ. ಟೊಮ್ಯಾಟೊ ಬೆಳೆದವರೆಲ್ಲ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಟೊಮ್ಯಾಟೊಗಳನ್ನು ಆಭರಣದಂತೆ ಧರಿಸಿರುವ ಉರ್ಫಿ ‘ಟೊಮ್ಯಾಟೊ ಈಗಿನ ಬಂಗಾರ’ ಎಂಬ ಕ್ಯಾಷ್ಶನ್ ಕೊಟ್ಟು ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ, ಉರ್ಫಿ ಹೊಸ ಅವತಾರ ಕಂಡು ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸಿನಿಮಾಗಳಲ್ಲಿ ಮಿಂಚಬೇಕು ಎಂಬುದು ಉರ್ಫಿ ಜಾವೇದ್ ಆಸೆಯಾಗಿತ್ತು. ಆದರೆ ಅವರಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ. ನಟನೆಗಿಂತ ಬಟ್ಟೆಯಿಂದಲೇ ಈಕೆ ಫೇಮಸ್ ಮತ್ತ ಟ್ರೋಲ್ ಆಗಿದ್ದು ಹೆಚ್ಚು. ಹಾಗಾಗೀ ಸದ್ಯ ಉರ್ಫಿ ಇದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಪದೇ ಪದೆ ವಿಚಿತ್ರ ರೀತಿಯ ಬಟ್ಟೆಗಳನ್ನು ಧರಿಸಿ ನೆಟ್ಟಿಗರನ್ನು ಸೆಳೆಯುತ್ತಿದ್ದು, ಇದೀಗ ಟೊಮ್ಯಾಟೊ ಮೂಲಕ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.