ಟಿಕ್ ಟಾಕ್, ರೀಲ್ಸ್ ನಂತರ ಬಿಗ್ ಬಾಸ್ ಮೂಲಕ ಮುನ್ನೆಲೆಗೆ ಬಂದ ಕಿರಿಕ್ ಹುಡುಗಿ ಸೋನು ಶ್ರೀನಿವಾಸ್ ಗೌಡ ಸದ್ಯ, ದಿನಕ್ಕೊಂದು ಹಸಿಬಿಸಿ ಫೋಟೋ ಹಂಚಿಕೊಂಡು ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚುತ್ತಿದ್ದಾರೆ. ವೆಕೇಷನ್ ಗಾಗಿ ಮಾಲ್ಡೀವ್ಸ್ಗೆ ಹಾರಿರುವ ಸೋನು ಇತ್ತೀಚೆಗೆ ಬಿಕಿನಿ ಫೋಟೋ ಹಂಚಿಕೊಂಡಿದ್ದರು, ಇದೀಗ ಸೋನು ಬೆಡ್ ರೂಂ ಫೋಟೋಗಳು ಕಾಡ್ಗಿಚ್ಚಿನಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡುತ್ತಿರುವ ಸೋನು ಗೌಡ, ಬಿಕಿನಿ ಫೋಟೋ ಹಂಚಿಕೊಂಡು ಪಡ್ಡೆಹುಡುಗರ ನಿದ್ದೆಕೆಡಿಸಿದ್ದರು. ಸೋನು ಹಾಟ್ ಅವತಾರಕ್ಕೆ ಹುಡುಗರು ಫಿದಾ ಆಗಿದ್ದರು.ಇದೀಗ, ಬೆಡ್ರೂಮ್ ಫೋಟೋ ಹಂಚಿಕೊಂಡಿದ್ದಾರೆ. ಹಳದಿ ಬಣ್ಣದ ಮಾಡ್ರನ್ ಡ್ರೆಸ್ನಲ್ಲಿರುವ ವಿವಿಧ ಭಂಗಿಗಳ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಈ ಫೋಟೋಗಳು ಕೂಡ ಸದ್ಯ ಸಖತ್ ವೈರಲ್ ಆಗುತ್ತಿವೆ.
ಸೋನು ಈ ಹಿಂದೆ ಶೇರ್ ಮಾಡಿರುವ ಬಿಕಿನಿ ವಿಡಿಯೋ 19 ಮಿಲಿಯನ್ಗೂ ಅಧಿಕ ಅಂದರೆ 1 ಕೋಟಿ 90 ಲಕ್ಷ ವಿವ್ ಕಂಡಿದೆ. 10 ಲಕ್ಷ ಇನ್ಸ್ಟಾಗಾಂ ಫಾಲೋವರ್ಸ್ ಪಡೆದಿರುವ ಸೋನು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಸೋನು ಟ್ರೋಲಿಗರ ಕಾಟದಿಂದ ಬೇಸತ್ತು ಗಳಗಳನೆ ಅತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಇದೀಗ ಟ್ರೋಲಿಗರಿಗೆ ಡೊಂಟ್ ಕೇರ್ ಎನ್ನುತ್ತಿರುವ ಸೋನು ದಿನಕ್ಕೊಂದು ಹಾಟ್ ಫೋಟೋಸ್ ಹಂಚಿಕೊಳ್ಳುತ್ತಿದ್ದಾರೆ.



