ಸಿನಿಮಾ ಕಲಾವಿದೆಯರು ಎಷ್ಟೇ ಹುಷಾರಾಗಿ ಇದ್ದರೂ ಸಹ, ಅವರ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಕೆಲವೊಮ್ಮೆ ಅವರ ಜೀವನವೇ ಬದಲಾಗಿ ಬಿಡಬಹುದು. ಬದುಕು ಕಾರಳತೆಗೆ ಹೋಗಬಹುದು. ದುರಂತ ಅಂತ್ಯವನ್ನು ಕಾಣಬಹುದು. ಇಂಥ ಹಲವು ಬದುಕುಗಳ ಬಗ್ಗೆ ಹಲವು ಕಥೆಗಳನ್ನು ನಾವು ಕೇಳಿದ್ದೇವೆ. ಘಟನೆಗಳನ್ನು ನೋಡಿದ್ದೇವೆ, ಖ್ಯಾತ ನಟಿಯರ ಬದುಕೇ ಇದರಿಂದ ತೊಂದರೆಗೆ ಸಿಲುಕಿಕೊಂಡಿದೆ. ಅಂಥ ಘಟನೆಗಳು ಸಹ ನಡೆದಿದೆ. ಇಂದು ಇದೇ ರೀತಿ ಅಂತ್ಯಗೊಂಡ ಒಬ್ಬ ದಕ್ಷಿಣ ಭಾರತದ ಖ್ಯಾತ ನಟಿಯ ಬಗ್ಗೆ ತಿಳಿಸಲಿದ್ದೇವೆ. ಆ ನಟಿ, ಕನ್ನಡದಲ್ಲಿ ಸಹ ನಟಿಸಿ ಹೆಸರು ವಾಸಿ ಆಗಿದ್ದವರು. ಇವರ ಬಗ್ಗೆ, ಇವರು ಜೀವನದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಇಂದು ಪೂರ್ತಿಯಾಗಿ ತಿಳಿಸುತ್ತೇವೆ..
ಇಂದು ನಾವು ನಿಮಗೆ ತಿಳಿಸುತ್ತಿರುವುದು ಖ್ಯಾತ ನಟಿ ಶ್ರೀವಿದ್ಯಾ ಅವರ ಬಗ್ಗೆ. ಇವರ ಹೆಸರು ಹೇಳಿದರೆ ನಿಮಗೆ ಗೊತ್ತಾಗದೇ ಇರಬಹುದು. ಇವರು ತಮಿಳು ಚಿತ್ರರಂಗದ ನಟಿ ಆದರೆ ಕನ್ನಡದಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ವಿಷ್ಣುವರ್ಧನ್ ಅವರೊಡನೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಅವರ ಬಹುನಿರೀಕ್ಷಿತ ಸುಪ್ರಭಾತ ಸಿನಿಮಾದಲ್ಲಿ ಅವರ ಅಕ್ಕನ ಪಾತ್ರದಲ್ಲಿ ನಟಿಸಿದವರೇ ಶ್ರೀವಿದ್ಯಾ ಅವರು. ವಿಷ್ಣುದಾದ ಅವರ ಪಾತ್ರಕ್ಕೆ ಸದಾ ಸಪೋರ್ಟಿವ್ ಆಗಿದ್ದು, ತಮ್ಮನನ್ನು ಬಹಳ ಪ್ರೀತಿಸುವ ಪಾತ್ರವಿದು. ಸಿನಿಮಾದಲ್ಲಿ ಇವರ ಮಗು ಜೊತೆ ವಿಷ್ಣುದಾದ ಅವರ ದೃಶ್ಯಗಳು ಬಹಳ ಚೆನ್ನಾಗಿವೆ. ಇನ್ನು ವಿಷ್ಣುದಾದ ಅವರು ಅಕ್ಕ ಎಂದು ಬಹಳ ಪ್ರೀತಿಯಿಂದ ಮಾತನಾಡಿಸುವ ದೃಶ್ಯಗಳು ಕಣ್ಣೆದುರು ಬರುತ್ತದೆ. ಇವರೇ ಖ್ಯಾತ ನಟಿ ಶ್ರೀವಿದ್ಯಾ ಅವರು.

ನಟಿ ಶ್ರೀವಿದ್ಯಾ ಅವರು 70 ಹಾಗೂ 80ರ ದಶಕದಲ್ಲಿ ನಾಯಕಿಯಾಗಿ ಮಿಂಚಿದ ನಟಿ. ಇವರು ಬಹಳ ಚಿಕ್ಕ ವಯಸ್ಸಿಗೆ ಅಂದರೆ 13ನೇ ವರ್ಷಕ್ಕೆ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಶ್ರೀವಿದ್ಯಾ ಅವರು ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಹೀಗೆ ಎಲ್ಲಾ ಭಾಷೆಗಳಲ್ಲಿ ಸಹ ನಟಿಸಿ, ಒಳ್ಳೆಯ ಹೆಸರು ಪಡೆದಿದ್ದಾರೆ. ಅದ್ಭುತ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಶ್ರೀವಿದ್ಯಾ ಅವರ ಬದುಕು ದುರಂತ ಅಂತ್ಯ ಕಂಡಿತು ಅನ್ನೋದು ಬೇಸರದ ವಿಷಯ. 2006ರಲ್ಲಿ ಕ್ಯಾನ್ಸರ್ ರೋಗಕ್ಕೆ ಶ್ರೀವಿದ್ಯಾ ಅವರು ಬಲಿಯಾದರು. ಇಡೀ ಜೀವನದಲ್ಲಿ ಒಂದಲ್ಲ ಒಂದು ರೀತಿ ಕಷ್ಟಪಟ್ಟು ಅವುಗಳನ್ನು ಎದುರಿಸಿ, ಇದ್ದಷ್ಟು ದಿವಸ ಯಾರಿಗೂ ತೊಂದರೆಯಾಗದ ಹಾಗೆ ಬದುಕಿದ ನಟಿ ಇವರು. ಶ್ರೀವಿದ್ಯಾ ಅವರ ಬಗ್ಗೆ ಮದುವೆ ಹಾಗೂ ಕೆರಿಯರ್ ಬಗ್ಗೆ ಹೇಳುವುದಾದರೆ..

ಇವರು ತಮಿಳಿನಲ್ಲಿ ಕೆ. ಬಾಲಚಂದರ್ ಅವರ ರಾಗಂಗಳ್ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾದ ಅಭಿನಯಕ್ಕೆ ಒಳ್ಳೆಯ ಹೆಸರನ್ನು ಸಹ ಪಡೆದರು. ಸೂಪರ್ ಹಿಟ್ ನಟಿ ಎಂದು ಗುರುತಿಸಿಕೊಂಡರು. ಶ್ರೀವಿದ್ಯಾ ಅವರಿಗೆ ಆ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು ಕಮಲ್ ಹಾಸನ್ ಅವರು. ಆ ಸಿನಿಮಾದಲ್ಲೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು, ಇಬ್ಬರೂ ಮದುವೆ ಆಗಬೇಕು ಎಂದು ಕೂಡ ಅಂದುಕೊಂಡಿದ್ದರು. ಆದರೆ ಶ್ರೀವಿದ್ಯಾ ಅವರ ತಾಯಿ ಇವರಿಬ್ಬರ ಮದುವೆಗೆ ಒಪ್ಪಲಿಲ್ಲವಂತೆ. ಯಾಕೆಂದರೆ ಆಗ ಕಮಲ್ ಹಾಸನ್ ಅವರಿಗೆ ಕೇವಲ 19 ವರ್ಷ. ಶ್ರೀವಿದ್ಯಾ ಅವರ ತಾಯಿ ಒಪ್ಪದ ಕಾರಣ ಈ ಜೋಡಿ ದೂರವಾದರು. ಇನ್ನು ಕಮಲ್ ಹಾಸನ್ ಅವರು ಶ್ರೀವಿದ್ಯಾ ಅವರಿಂದ ದೂರವಾದ ನಂತರ, ವಾಣಿ ಗಣಪತಿ ಅವರನ್ನು ಪ್ರೀತಿಸಿ ಮದುವೆಯಾದರು.
ಇನ್ನು ಶ್ರೀವಿದ್ಯಾ ಅವರು ಒಂದಷ್ಟು ಸಮಯ ಒಂಟಿಯಾಗಿಯೇ ಇದ್ದರು, ಬಳಿಕ ಮಲಯಾಳಂ ನ ಖ್ಯಾತ ನಿರ್ದೇಶಕ ಭರತನ್ ಅವರನ್ನು ಪ್ರೀತಿಸುವುದಕ್ಕೆ ಶುರು ಮಾಡಿದರು. ಇವರಿಬ್ಬರ ಪ್ರೀತಿ ಶುರುವಿನಲ್ಲಿ ಚೆನ್ನಾಗಿದ್ದರೂ, ಭರತನ್ ಅವರು ಸಹ ಇವರಿಗೆ ಮೋಸ ಮಾಡಿದರು, ನಟಿ ಕೆ.ಪಿ.ಎ.ಸಿ ಲಲಿತಾ ಅವರೊಡನೆ ಮದುವೆಯಾದರು. ಭರತನ್ ಅವರಿಂದ ದೂರವಾಗಿ ಇನ್ನಷ್ಟು ಸಮಯ ಒಂಟಿಯಾಗಿಯೇ ಕಳೆದರು ಶ್ರೀವಿದ್ಯಾ ಅವರು. ಕೆಲ ವರ್ಷಗಳ ನಂತರ ಅಸಿಸ್ಟೆಂಟ್ ಡೈರೆಕ್ಟರ್ ಜಾರ್ಜ್ ಥಾಮಸ್ ಅವರನ್ನು ಪ್ರೀತಿಸುವುದಕ್ಕೆ ಶುರು ಮಾಡಿದರು. ಆದರೆ ಇಬ್ಬರ ಧರ್ಮ ಬೇರೆಯಾಗಿದ್ದ ಕಾರಣ ಶ್ರೀವಿದ್ಯಾ ಅವರ ಮನೆಯಲ್ಲಿ ಇವರಿಬ್ಬರ ಪ್ರೀತಿಯನ್ನು ಒಪ್ಪಲಿಲ್ಲ. ಆದರೆ ಶ್ರೀವಿದ್ಯಾ ಅವರು ಮನೆಯವರನ್ನು ಧಿಕ್ಕರಿಸಿ, ಜಾರ್ಜ್ ಥಾಮಸ್ ಅವರೊಡನೆ ಮದುವೆಯಾಗುವ ನಿರ್ಧಾರ ಮಾಡಿದರು.

ಮನೆಬಿಟ್ಟು ಬಂದರು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಜಾರ್ಜ್ ಥಾಮಸ್ ಅವರೊಡನೆ ಮದುವೆಯಾದರು. ಆದರೆ ಈ ಮದುವೆ ಹೆಚ್ಚು ದಿವಸ ಉಳಿಯಲಿಲ್ಲ. 2 ವರ್ಷಕ್ಕೆ ವಿಚ್ಛೇದನ ಪಡೆಯಬೇಕಾಯಿತು. ಜಾರ್ಜ್ ಥಾಮಸ್ ಅವರು ತಮ್ಮನ್ನು ಮದುವೆಯಾಗಿದ್ದು, ಹಣಕ್ಕಾಗಿ ಆಸ್ತಿಗಾಗಿ, ತಮ್ಮ ಬಳಿ ಇರುವ ಎಲ್ಲವನ್ನು ಕಿತ್ತುಕೊಳ್ಳಬೇಕು ಎನ್ನುವ ಕಾರಣಕ್ಕೆ ಮದುವೆಯಾದರು ಎಂದು ಕಾರಣ ತಿಳಿಸಿ, ಜಾರ್ಜ್ ಥಾಮಸ್ ಅವರಿಂದ ವಿಚ್ಛೇದನ ಪಡೆದರು. ಬಳಿಕ ಶ್ರೀವಿದ್ಯಾ ಅವರು ಒಂಟಿಯಾಗಿಯೇ ಉಳಿದರು, ಚೆನ್ನೈನಲ್ಲಿ ಇರಲು ಸಾಧ್ಯವಾಗದೇ, ತಿರುವನಂತಪುರಂ ಗೆ ಶಿಫ್ಟ್ ಆದರು. ಅಲ್ಲಿ ಇದ್ದಾಗಲೇ, ಇವರಿಗೆ ಕ್ಯಾನ್ಸರ್ ಆಗಿದೆ ಎನ್ನುವ ವಿಷಯ ಗೊತ್ತಾಯಿತು. ಒಂದಷ್ಟು ವರ್ಷಗಳ ಕಾಲ ಕ್ಯಾನ್ಸರ್ ಜೊತೆಗೆ ಸೆಣಸಾಡಿದೆರು.
ಬಳಿಕ 2006ರಲ್ಲಿ, ಕ್ಯಾನ್ಸರ್ ಇಂದಲೇ ಮೃತಪಟ್ಟರು. ಇದ್ದಷ್ಟು ಸಮಯ ಇವರಿಗೆ ಯಾರ ಪ್ರೀತಿ ಕೂಡ ಸಿಗಲಿಲ್ಲ. ಪ್ರೀತಿಸಿದವರೆಲ್ಲ ಮೋಸ ಮಾಡಿದರು, ದೂರ ಮಾಡಿದರು. ಕ್ಯಾನ್ಸರ್ ಎನ್ನುವ ರೋಗ ಕೂಡ ಇವರಿಗೆ ಅಂಟಿಕೊಂಡಿತು. ಕೊನೆಗೆ ಇಹಲೋಕ ತ್ಯಜಿಸಿದರು. ಇಂಥ ನಟಿಯ ಬದುಕು ಈ ರೀತಿ ಆಗಿದ್ದು ನಿಜಕ್ಕೂ ಬಹಳ ಬೇಸರದ ವಿಷಯ ಆಗಿದೆ. ನಟಿಯಾಗಿ, ಒಬ್ಬ ವ್ಯಕ್ತಿಯಾಗಿ ಎಲ್ಲರಿಂದ ಮೆಚ್ಚುಗೆ, ಪ್ರಶಂಸೆ ಪಡೆದಿದ್ದ ಶ್ರೀವಿದ್ಯಾ ಅವರು ವೈಯಕ್ತಿಕ ಜೀವನದಲ್ಲಿ ಹೀಗೆ ಎಲ್ಲರಿಂದಲೂ ದೂರವಾಗಿ, ಒಂಟಿಯಾಗಿ ನರಳಿದರು. ಕಲಾವಿದರ ಬದುಕು ನಾವು ಅಂದುಕೊಂಡ ಹಾಗೆ ಸುಲಭ ಅಂತೂ ಅಲ್ಲ.



