ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 715ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಲಕ್ಷ್ಮೀ ಧಾರಾವಾಹಿ ಹೊಸ ತಿರುವು ಪಡೆಯುತ್ತಿದ್ದು, ಕಾಲೇಜಿನಲ್ಲಿ ತನಗೆ ಗೆಳತಿಯರು ಅವಮಾನ ಮಾಡಿದ ವಿಚಾರವನ್ನು ತನ್ವಿ, ಅಮ್ಮನ ಬಳಿ ಹೇಳಿಕೊಂಡು ಅಳುತ್ತಾಳೆ. ಮಗಳು ಹಿಂದೊಮ್ಮೆ ಕೋರ್ಸ್ಗೆ ಸೇರಿಕೊಳ್ಳುತ್ತೇನೆ ಎಂದಾಗ ನನ್ನಿಂದ ಫೀಸ್ ಕಟ್ಟಲು ಆಗಲಿಲ್ಲ, ಅವಳ ಹುಟ್ಟುಹಬ್ಬವನ್ನಾದರೂ ಆಚರಿಸೋಣ. ಅವಳು ಆಸೆ ಪಟ್ಟಂತೆ ಅವಳ ಗೆಳತಿಯರನ್ನು ಮನೆಗೆ ಕರೆದು ಪಾರ್ಟಿ ಕೊಡೋಣ ಎಂದು ಭಾಗ್ಯಾ ನಿರ್ಧರಿಸುತ್ತಾಳೆ.
ಮಗಳ ಹುಟ್ಟುಹಬ್ಬ ಆಚರಿಸುವಷ್ಟು ದುಡ್ಡು ಭಾಗ್ಯಾ ಬಳಿ ಇರುವುದಿಲ್ಲ. ಭಾಗ್ಯಲಕ್ಷ್ಮೀ ಧಾರಾವಾಹಿ ಹೊಸ ತಿರುವಿನಲ್ಲಿ, ಮಗಳ ಆಸೆ ನೆರವೇರಿಸಲೇಬೇಕೆಂದು ಭಾಗ್ಯಾ ಕೆಲಸ ಹುಡುಕಲು ಹೊರಡುತ್ತಾಳೆ. ಭಾಗ್ಯಾಳನ್ನು ಸುಂದ್ರಿ ಹಾಗೂ ಪೂಜಾ ಹಿಂಬಾಲಿಸುತ್ತಾರೆ. ಭಾಗ್ಯಾ ಕೆಲಸ ಕೇಳಲು ಒಂದು ದೊಡ್ಡ ಹೋಟೆಲ್ ಬಳಿ ಹೋಗುತ್ತಾಳೆ. ಹೋಟೆಲ್ ಓನರ್ ಅವಳನ್ನು ನೋಡಿ, ನಿನ್ನನ್ನು ಎಲ್ಲೋ ನೋಡಿದ ನೆನಪು ಎನ್ನುತ್ತಾನೆ. ಭಾಗ್ಯಾ ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ. ಈಗ ನೆನಪಾಯ್ತು, ನೀವೇ ತಾನೇ ಸಿಟಿ ಆಫ್ ಲೈಟ್ಸ್ ಹೋಟೆಲ್ನಲ್ಲಿ ವಿಐಪಿಗೆ ಅಡುಗೆ ಮಾಡಿ ಅವರಿಗೆ ಆರೋಗ್ಯ ಸಮಸ್ಯೆ ಆಗುವಂತೆ ಮಾಡಿದ್ದು ಎಂದು ಕೇಳುತ್ತಾನೆ. ಭಾಗ್ಯಲಕ್ಷ್ಮೀ ಧಾರಾವಾಹಿ ಹೊಸ ತಿರುವಿನಂತೆ, ಸರ್ ಅದೊಂದು ಕೆಟ್ಟ ಸಮಯ, ನಾನು ಏನೂ ತಪ್ಪು ಮಾಡಿಲ್ಲ, ಚೆನ್ನಾಗಿ ಅಡುಗೆ ಮಾಡುತ್ತೇನೆ. ನನಗೆ ಕೆಲಸದ ಅವಶ್ಯಕತೆ ಬಹಳ ಇದೆ ದಯವಿಟ್ಟು ನನಗೆ ಕೆಲಸ ಕೊಡಿ ಎಂದು ಭಾಗ್ಯಾ ಮನವಿ ಮಾಡುತ್ತಾಳೆ.
ತಾನು ಮನೆಯಿಂದ ಮಾಡಿಕೊಂಡು ಬಂದ ತಿಂಡಿ ಬಾಕ್ಸನ್ನು ಆತನ ಮುಂದೆ ಹಿಡಿದು, ಇದರ ರುಚಿ ನೋಡಿ, ಚೆನ್ನಾಗಿಲ್ಲವೆಂದರೆ ನನಗೆ ಕೆಲಸ ಬೇಡ ಎಂದು ಕೇಳುತ್ತಾಳೆ. ಸಿಟಿ ಆಫ್ ಲೈಟ್ಸ್ ಹೋಟೆಲ್ ಮುಚ್ಚಿದರೂ ಸಮಸ್ಯೆ ಇಲ್ಲ. ಆದರೆ ನನ್ನ ಹೋಟೆಲ್ ಮುಚ್ಚಿದರೆ ನನಗೆ ತಿನ್ನಲೂ ಇರುವುದಿಲ್ಲ, ನೀನು ತಪ್ಪು ಮಾಡಿಲ್ಲವೆಂದರೆ ಅವರು ನಿನ್ನನ್ನು ಏಕೆ ಕೆಲಸದಿಂದ ತೆಗೆಯುತ್ತಿದ್ದರು? ನಾನು ತಪ್ಪು ಮಾಡಿದ್ದೇನೆ ಎಂದು ಮೀಡಿಯಾ ಮುಂದೆ ಹೇಳಿ, ಈಗ ಏನೂ ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದೀಯ, ಇಲ್ಲಿಂದ ಹೋಗು, ನಿನಗೆ ಕೆಲಸ ಕೊಡಲು ಸಾಧ್ಯವಿಲ್ಲ, ಇಲ್ಲದಿದ್ದರೆ ಸೆಕ್ಯೂರಿಟಿಯನ್ನು ಕರೆಯುತ್ತೇನೆ ಎಂದು ಹೋಟೆಲ್ ಓನರ್ ಭಾಗ್ಯಾಗೆ ಅವಮಾನಿಸುತ್ತಾನೆ.
ಭಾಗ್ಯಾ ಮತ್ತೊಂದು ಹೋಟೆಲ್ಗೆ ಹೋಗುತ್ತಾಳೆ. ಅಲ್ಲಿ ಕೂಡಾ ಅವಳಿಗೆ ಅವಮಾನವಾಗುತ್ತದೆ. ನೀನು ಹೆಣ್ಣು ಎಂಬ ಕಾರಣದಿಂದ ಇಷ್ಟು ಗೌರವ ಕೊಟ್ಟು ಮಾತನಾಡುತ್ತಿದ್ದೇನೆ, ಇಲ್ಲಿಂದ ಹೋಗಮ್ಮ ಎಂದು ಗದರುತ್ತಾನೆ. ಭಾಗ್ಯಾ ಕಣ್ಣೀರು ಹಾಕುತ್ತಾ ಹೊರ ಬರುತ್ತಾಳೆ. ಅವಳನ್ನು ಹಿಂಬಾಲಿಸುತ್ತಿದ್ದ ಪೂಜಾ, ಸುಂದ್ರಿ ಆ ಕನ್ನಿಕಾ ನೀನು ಎಲ್ಲಿ ಹೋದರೂ ಕೆಲಸ ಸಿಗದಂತೆ ಮಾಡಿದ್ದಾಳೆ. ನಿನ್ನ ಪ್ರಯತ್ನ ಫಲ ನೀಡುವುದಿಲ್ಲ. ನಿನಗೆ ಅವಮಾನವಾಗುತ್ತಿರುವುದನ್ನು ನಮಗೆ ನೋಡಲಾಗುತ್ತಿಲ್ಲ. ದಯವಿಟ್ಟು ಮನೆಗೆ ಬಾ ಎಂದು ಕರೆಯುತ್ತಾರೆ. ಆದರೆ ಭಾಗ್ಯಾ ಹಠ ಬಿಡುವುದಿಲ್ಲ. ದಯವಿಟ್ಟು ನನ್ನ ದಾರಿಗೆ ಅಡ್ಡಿ ಬರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಾಳೆ. ದಾರಿಯಲ್ಲಿ ತನ್ನ ಕಣ್ಣಿಗೆ ಬಿದ್ದ ರೆಸಾರ್ಟ್ ಒಳಗೆ ಹೋಗುತ್ತಾಳೆ. ಅಲ್ಲಿ ನಾಲ್ವರು ಬಣ್ಣ ಬಳಿದುಕೊಂಡು, ಬಣ್ಣದ ವೇಷ ತೊಟ್ಟು ಅಲ್ಲಿಗೆ ಬರುವವರನ್ನು ಮನರಂಜಿಸುವುದನ್ನು ಭಾಗ್ಯಾ ನೋಡುತ್ತಾಳೆ.
ಇತ್ತ ಕಾಲೇಜಿನಲ್ಲಿ ತನ್ವಿ, ಅಮ್ಮ ಮಾಡಿಕೊಟ್ಟ ಜಾಮೂನನ್ನು ಎಲ್ಲರಿಗೂ ಕೊಡುವುದೋ ಬೇಡವೋ, ಅವರೆಲ್ಲಾ ದೊಡ್ಡ ಬೇಕರಿಯಿಂದ ಒಳ್ಳೆ ಸ್ವೀಟ್ಸ್ ತಂದುಕೊಟ್ಟಿದ್ದರು, ನಾನು ಇದನ್ನು ಕೊಟ್ಟರೆ ಮತ್ತೆ ಅವರೆಲ್ಲಾ ಅವಮಾನ ಮಾಡಬಹುದು ಎಂದು ಯೋಚಿಸುತ್ತಾ ನಿಲ್ಲುತ್ತಾಳೆ. ಅಷ್ಟರಲ್ಲಿ ಅವಳ ಕ್ಲಾಸ್ಮೆಟ್ ಒಬ್ಬಳು ಬಂದು ಮನೆಯಿಂದ ಏನೋ ತಂದಿದ್ದೀಯ ಅನ್ನಿಸುತ್ತೆ, ಭಾಗ್ಯಾ ಆಂಟಿ ಮಾಡಿದ್ದು ರುಚಿಯಾಗಿರುತ್ತೆ ಕೊಡು ಎಂದು ಕೇಳುತ್ತಾಳೆ. ಅಷ್ಟರಲ್ಲಿ ಮತ್ತೊಬ್ಬ ಗೆಳತಿ ಓಡಿ ಬಂದುತನ್ವಿಗೆ ಹುಟ್ಟುಹಬ್ಬದ ಶುಭ ಕೋರುತ್ತಾಳೆ. ನೀನು ಜಾಮೂನು ಹಿಡಿದು ನಿಂತಿದ್ದೀಯ, ಅಲ್ಲಿ ನಿನ್ನ ಹುಟ್ಟುಹಬ್ಬಕ್ಕೆ ಯಾರೋ, ಇಡೀ ಕಾಲೇಜಿಗೆ ಸಿಹಿ ಹಂಚುತ್ತಿದ್ದಾರೆ ಎನ್ನುತ್ತಾಳೆ. ಅದನ್ನು ಕೇಳಿ ತನ್ವಿಗೆ ಆಶ್ಚರ್ಯವಾಗುತ್ತದೆ. ಈ ಘಟನೆಯೊಂದಿಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಹೊಸ ತಿರುವು ಪಡೆಯುತ್ತಿದೆ, ತನ್ವಿ ಮತ್ತು ಭಾಗ್ಯಾಳ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗುತ್ತಿದೆ.
ಅಷ್ಟರಲ್ಲಿ ತಾಂಡವ್ ಕಾರು ಕಾಲೇಜ್ ಒಳಗೆ ಬರುವುದನ್ನು ತನ್ವಿ ನೋಡುತ್ತಾಳೆ. ತಾಂಡವ್ ಕಾರಿನಿಂದ ಇಳಿದು ಬೊಕ್ಕೆ ತೋರಿಸಿ ತನ್ವಿಗೆ ಬರ್ತ್ಡೇ ವಿಶ್ ಮಾಡುತ್ತಾನೆ. ತನ್ವಿ ಓಡಿಬಂದು ಅಪ್ಪನನ್ನು ಅಪ್ಪಿಕೊಳ್ಳುತ್ತಾಳೆ. ಅಷ್ಟರಲ್ಲಿ ಶ್ರೇಷ್ಠಾ ಕೂಡಾ ಕಾರಿನಿಂದ ಇಳಿದು ತನ್ವಿಗೆ ವಿಶ್ ಮಾಡುತ್ತಾಳೆ. ಅವಳನ್ನು ನೋಡುತ್ತಿದ್ದಂತೆ ತನ್ವಿ ಕೋಪಗೊಳ್ಳುತ್ತಾಳೆ. ನಿನ್ನ ಬರ್ತ್ಡೇಯನ್ನು ಇದೇ ರೀತಿ ಸೆಲಬ್ರೇಟ್ ಮಾಡಬೇಕೆಂದು ಪ್ಲ್ಯಾನ್ ಮಾಡಿದ್ದು ಶ್ರೇಷ್ಠಾ ಎನ್ನುತ್ತಾನೆ. ಅದು ತನ್ವಿಗೆ ಇಷ್ಟವಿಲ್ಲದಿದ್ದರೂ ತಂದೆ, ಚಾಕೊಲೇಟ್ ನೀಡಿದ್ದಕ್ಕೆ ಖುಷಿಯಾಗಿ ಥ್ಯಾಂಕ್ಸ್ ಹೇಳುತ್ತಾಳೆ. ನಂತರ ಕಾರಿನಲ್ಲೇ ಡೆಕೋರೇಷನ್ ಮಾಡಿದ ಬಲೂನ್, ಗಿಫ್ಟ್, ಕೇಕ್ ನೋಡಿ ಖುಷಿಯಾಗುತ್ತಾಳೆ. ತಾಂಡವ್-ಶ್ರೇಷ್ಠಾ ತಂದ ಕೇಕ್ ಕಟ್ ಮಾಡುತ್ತಾಳೆ. ತನ್ವಿ ಕ್ಲಾಸ್ಮೆಟ್ಸ್ ಈ ಅದ್ದೂರಿ ಬರ್ತ್ಡೇ ಸೆಲಬ್ರೇಷನ್ ನೋಡಿ ಆಶ್ಚರ್ಯಗೊಳ್ಳುತ್ತಾರೆ.
ಶ್ರೇಷ್ಠಾ ಪ್ಲ್ಯಾನ್ನಂತೆ ತನ್ವಿ, ಅಮ್ಮನ ಕಷ್ಟವನ್ನೂ ಮರೆತು ತಂದೆ ತಾಂಡವ್ ಜೊತೆ ಹೋಗುತ್ತಾಳಾ? ಭಾಗ್ಯಾಗೆ ಕೆಲಸ ಸಿಗುವುದಾ? ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.



