ನಟ ದರ್ಶನ್ ಅವರು ಕೋರ್ಟ್ ಕೇಸ್ ವಿಚಾರಣೆಗೆ ಮೊನ್ನೆಯಷ್ಟೇ ಬಂದಿದ್ದರು. ಇನ್ನು ಇದೇ ಕೇಸ್ ನಲ್ಲಿ ಬಂಧಿತರಾಗಿದ್ದ ಪವಿತ್ರಾ ಗೌಡ ಸಹ ವಿಚಾರಣೆಗೆ ಹಾಜರಾಗಿದ್ದರು. ಇಷ್ಟು ಬಾರಿ ಬರುತ್ತಿದ್ದ ಎಲ್ಲವೂ ಸಾಮಾನ್ಯವಾಗಿ ನಡೆದು ಹೋಗಲಿಲ್ಲ, ಬದಲಾಗಿ ಈ ಬಾರಿ ದರ್ಶನ್ ಹಾಗೂ ಪವಿತ್ರಾ ಅವರ ನಡುವೆ ಎಲ್ಲವೂ ನಿಂತು ಹೋಗಿಲ್ಲ, ಇಬ್ಬರು ಚೆನ್ನಾಗಿಯೇ ಇದ್ದಾರೆ ಎನ್ನುವ ವಿಚಾರ ಹೈಲೈಟ್ ಆಗಿದೆ. ಇದಕ್ಕೆ ತಕ್ಕ ಹಾಗೆಯೇ ಘಟಣೆಗಳು ಸಹ ನಡೆದಿದೆ. ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಡಿಬಾಸ್ ಇದನ್ನೆಲ್ಲ ಬಿಟ್ಟು ಮನೆಯವರ ಜೊತೆ ಚೆನ್ನಾಗಿದ್ದಾರೆ ಅಂದುಕೊಂಡರೆ ಮತ್ತೆ ಶುರು ಹಚ್ಚಿಕೊಂಡಿದ್ದಾರಾ ಎಂದು ಅಭಿಮಾನಿಗಳು ಸಹ ಮಾತನಾಡಿ ಕೊಳ್ಳುವುದಕ್ಕೂ ಶುರು ಮಾಡಿದ್ದಾರೆ. ಅಷ್ಟಕ್ಕೂ ಕೋರ್ಟ್ ಆವರಣದಲ್ಲಿ ಆಗಿರುವುದಾದರು ಏನು? ಫುಲ್ ಡೀಟೇಲ್ಸ್ ಇಲ್ಲಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಆಪ್ತೆ ಪವಿತ್ರಾ ಗೌಡ ಸಿಕ್ಕಿ ಹಾಕಿಕೊಂಡಿದ್ದರು. ಒಂದಷ್ಟು ತಿಂಗಳುಗಳ ಕಾಲ ಜೈ*ಲಿನಲ್ಲಿ ಕೂಡ ಇದ್ದು ಬಂದರು ಎಂದು ನಮಗೆಲ್ಲ ಗೊತ್ತೇ ಇದೆ. ಇನ್ನು ಕೂಡ ಈ ಕೇಸ್ ಪೂರ್ತಿಯಾಗಿ ಮುಗಿದಿಲ್ಲ, ಕೇಸ್ ಗೆ ಇತಿಶ್ರೀ ಹಾಡಿಲ್ಲ. ಹಾಗಾಗಿ ವಿಚಾರಣೆ ಇದ್ದಾಗ ಇಬ್ಬರೂ ಕೋರ್ಟ್ ಗೆ ಬರಬೇಕಾಗುತ್ತದೆ. ಅದೇ ರೀತಿ ಈ ಬಾರಿಯ ವಿಚಾರಣೆಗೆ ದರ್ಶನ್ ಅವರು ಮತ್ತು ಪವಿತ್ರಾ ಗೌಡ ಇಬ್ಬರು ಕೂಡ ಬಂದಿದ್ದರು. ಮೊದಲೆಲ್ಲಾ ಇಬ್ಬರು ಒಬ್ಬರ ಮುಖವನ್ನು ಮತ್ತೊಬ್ಬರು ನೋಡುವುದು ಅಪರೂಪ ಎನ್ನುವಂತಿತ್ತು. ಇಬ್ಬರೂ ಮಾತನಾಡಿಕೊಳ್ಳುತ್ತಾ ಇದ್ದಿದ್ದು ಕೂಡ ಬಹಳ ಕಡಿಮೆ. ಆದರೆ ಮೊನ್ನೇ ಕೋರ್ಟ್ ನಲ್ಲಿ ನಡೆದಿರುವುದೇ ಬೇರೆ. ಇಬ್ಬರು ಆತ್ಮೀಯರಾಗಿ ಇದ್ದಿದ್ದು, ಕೋರ್ಟ್ ಎದುರು, ಜನರ ಎದುರು ಮತ್ತು ಕ್ಯಾಮೆರಾದ ಎದುರು ಕೂಡ ಕಂಡುಬಂದಿದೆ .

ಬಲ್ಲ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಅನುಸಾರ, ಕೋರ್ಟ್ ನಲ್ಲಿ ವಿಚಾರಣೆ ವೇಳೆ ದರ್ಶನ್ ಹಾಗೂ ಪವಿತ್ರಾ ಇಬ್ಬರು ಸಹ ಜೊತೆ ಜೊತೆಯಾಗಿ ಪಕ್ಕ ಪಕ್ಕದಲ್ಲೇ ನಿಂತಿದ್ದರು. ಆ ವೇಳೆ ಕೆಲ ಸಮಯ ಇಬ್ಬರು ಮಾತನಾಡಿಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಜೊತೆಗೆ ಲಿಫ್ಟ್ ನಲ್ಲಿ ಹೋಗುವಾಗ ಸಹ ದರ್ಶನ್ ಹಾಗೂ ಪವಿತ್ರಾ ಗೌಡ ಜೊತೆಯಾಗಿ ಹೋಗಿದ್ದು, ಲಿಫ್ಟ್ ನ ಒಳಗೆ ತಮ್ಮ ಕಷ್ಟ ಸುಖಗಳನ್ನು ದರ್ಶನ್ ಅವರ ಜೊತೆಗೆ ಹೇಳಿಕೊಂಡು ಪವಿತ್ರಾ ಗೌಡ ಅವರು ಕಣ್ಣೀರು ಹಾಕಿದ್ದಾರಂತೆ. ಆಗ ಡಿಬಾಸ್ ಅವರು ಪವಿತ್ರಾ ಗೌಡ ಅವರಿಗೆ ಸಮಾಧಾನ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಪವಿತ್ರ ಗೌಡ ಅವರು ಬಹಳ ಹೊತ್ತು ಚೆನ್ನಾಗಿಯೇ ದರ್ಶನ್ ಅವರೊಡನೆ ಮಾತನಾಡಿದ್ದಾರಂತೆ. ವಿಜಯಲಕ್ಷ್ಮಿ ಅವರು ದರ್ಶನ್ ಅವರ ಸುತ್ತ ಸ್ಟ್ರಾಂಗ್ ಆದ ಬೇಲಿಯನ್ನೇ ಹಾಕಿದ್ದರೂ, ಹಾಗಿದ್ದರೂ ಅದನ್ನೆಲ್ಲ ಮೀರಿ ಪವಿತ್ರಾ ಗೌಡ ಈ ರೀತಿ ಇರುವುದು ಜನರಿಗೆ ಶಾಕ್ ಅನ್ನಿಸಿದೆ, ಚರ್ಚೆಗಳು ನಡೆಯುತ್ತಿವೆ.
ಇದಷ್ಟೇ ಅಲ್ಲದೇ, ಆ ಘಟನೆ ಎಲ್ಲವೂ ನಡೆದ ಮೇಲೆ ದರ್ಶನ್ ಅವರು ಫೋನ್ ನಂಬರ್ ಬದಲಾಯಿಸಿದ್ದಾರೆ, ಮೊನ್ನೆ ಕೋರ್ಟ್ ನಲ್ಲಿ ಪವಿತ್ರಾ ಗೌಡ ಅವರು ದರ್ಶನ್ ಅವರ ಹೊಸ ಫೋನ್ ನಂಬರ್ ಅನ್ನು ಕೇಳಿದ್ದು, ಅದನ್ನು ದರ್ಶನ್ ಅವರು ಕೊಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ವಿಜಯಲಕ್ಷ್ಮಿ ಅವರು ಎಷ್ಟೆಲ್ಲ ಪ್ರಯತ್ನಪಟ್ಟರೂ ಈ ಒಂದು ವಿಚಾರದಲ್ಲಿ ಎಲ್ಲವನ್ನು ಸರಿ ಮಾಡುವುದಕ್ಕೆ ಆಗುತ್ತಿಲ್ಲವಲ್ಲ ಎಂದು ನೆಟ್ಟಿಗರು ಚಿಂತಿಸುವುದಕ್ಕೆ ಶುರು ಮಾಡಿದ್ದಾರೆ. ಆದರೆ ಕೆಲವರು ಹೇಳುವ ಮಾತಿನ ಅನುಸಾರ, ಇದೆಲ್ಲವೂ ಪ್ರಚಾರಕ್ಕಾಗಿ ಆಗುತ್ತಿರುವುದು ಅಷ್ಟೇ. ಜನರು ಮಾತನಾಡಿಕೊಳ್ಳಲಿ ಎಂದೇ ಹೀಗೆಲ್ಲಾ ಮಾಡಿರುತ್ತಾರೆ. ಅಂಥದ್ದೇನು ಇರುವುದಿಲ್ಲ ಎನ್ನುವ ಅಭಿಪ್ರಾಯ ಸಹ ಕೇಳಿ ಬರುತ್ತಿದೆ. ಇದರಲ್ಲಿ ಎಷ್ಟು ನಿಜ, ಎಷ್ಟು ಸುಳ್ಳು ಎನ್ನುವುದು ಮಾತ್ರ ಗೊತ್ತಿಲ್ಲ. ಅಭಿಮಾನಿಗಳಿಗೆ ಅಂತೂ, ಡಿಬಾಸ್ ತಮ್ಮ ಫ್ಯಾಮಿಲಿ ಜೊತೆಗಿರಲಿ ಎನ್ನುವುದೇ ಆಸೆ.

ದರ್ಶನ್ ಅವರು ಆ ಒಂದು ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾಗ ಅವರ ಜೊತೆಗೆ ನಿಂತಿದ್ದು ವಿಜಯಲಕ್ಷ್ಮಿ ಅವರು. ಏನೇ ನಡೆದರು, ಎಷ್ಟೇ ಕಷ್ಟ ಬಂದರೂ ಗಂಡನನ್ನು ಬಿಟ್ಟುಕೊಡದೇ, ಹೋರಾಡಿ ದರ್ಶನ್ ಅವರನ್ನು ಹೊರಗಡೆ ಕರೆದುಕೊಂಡು ಬಂದರು. ಅಂಥ ಹೆಂಡತಿ ಪಡೆಯುವುದಕ್ಕೆ ದರ್ಶನ್ ಅವರು ಪುಣ್ಯ ಮಾಡಿದ್ರು ಅನ್ನೋದು ಬಹಳಷ್ಟು ಜನರ ಅಭಿಪ್ರಾಯ ಕೂಡ ಆಗಿತ್ತು. ಮನೆಯಲ್ಲಿ ದರ್ಶನ್ ಅವರ ತಾಯಿ ಮೀನಾ ಅವರು ಸಹ, ವಿಜಯಲಕ್ಷ್ಮಿ ಅವರಂಥ ಸೊಸೆ ಸಿಗೋದಕ್ಕೆ ಪುಣ್ಯ ಮಾಡಿದ್ದೆ ಎಂದು ಹೇಳಿದರಂತೆ. ದಿನಕರ್ ಅವರು ಸಹ ಅತ್ತಿಗೆಯನ್ನು ಬಹಳ ಪ್ರೀತಿಯಿಂದ ಹೊಗಳುತ್ತಿದ್ದರು. ಅಂಥ ವ್ಯಕ್ತಿ ವಿಜಯಲಕ್ಷ್ಮಿ ಅವರು. ಇನ್ನು ದರ್ಶನ್ ಅವರು ಹೊರಗಡೆ ಬಂದ ನಂತರ ಅವರ ಪೂರ್ತಿ ಜವಾಬ್ದಾರಿಯನ್ನು ವಿಜಯಲಕ್ಷ್ಮಿ ಅವರೆ ತೆಗೆದುಕೊಂಡಿದ್ದಾರೆ. ಮೊದಲಿದ್ದ ಎಲ್ಲರನ್ನು ಕೆಲಸದಿಂದ ಹೊರ ಹಾಕಿದ್ದಾರೆ. ಹೊಸಬರನ್ನು, ಒಳ್ಳೆಯವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ.

ದರ್ಶನ್ ಅವರನ್ನು ಭೇಟಿ ಮಾಡಬೇಕು ಎಂದರೆ ಮೊದಲು ದಿನಕರ್ ಅವರನ್ನು ಅಥವಾ ವಿಜಯಲಕ್ಷ್ಮಿ ಅವರನ್ನು ಭೇಟಿ ಮಾಡಿ, ಅವರ ಅನುಮತಿ ಪಡೆದು ನಂತರವಷ್ಟೇ ದರ್ಶನ್ ಅವರನ್ನು ಭೇಟಿ ಮಾಡುವುದಕ್ಕೆ ಸಾಧ್ಯ ಎನ್ನುವ ಮಾತು ಸಹ ಕೇಳಿಬಂದಿತ್ತು. ಅಷ್ಟು ಕಟ್ಟಿನಿಟ್ಟಿನಿಂದ ದರ್ಶನ್ ಅವರನ್ನು ವಿಜಯಲಕ್ಷ್ಮಿ ಅವರು ನೋಡಿಕೊಳ್ಳುತ್ತಿದ್ದಾರೆ. ಹಾಗೆಯೇ ಕುಟುಂಬದ ಜೊತೆಗೆ ದರ್ಶನ್ ಅವರು ಹೆಚ್ಚು ಸಮಯ ಕಳೆಯುತ್ತಿದ್ದು, ಕಷ್ಟಗಳೆಲ್ಲವು ಕಳೆದು ಹೋಗಲಿ ಎಂದು, ಶಕ್ತಿದೇವತೆಗಳ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾರೆ. ಇದೆಲ್ಲವೂ ನಮಗೆ ಗೊತ್ತಿರುವ ವಿಷಯ. ಸಾಕಷ್ಟು ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ ಡಿಬಾಸ್. ಇನ್ನು ಪವಿತ್ರಾ ಗೌಡ ಸಹ ಇದೇ ರೀತಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಒಂದು ರೀತಿ ಕೋ ಇನ್ಸಿಡೆನ್ಸ್ ಎಂದು ಹೇಳಬಹುದು. ಮಗಳ ಜೊತೆಗೆ ಇವರು ಕೂಡ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಇನ್ನು ದರ್ಶನ್ ಅವರು ಕೋರ್ಟ್, ಕೇಸ್ ಇದೆಲ್ಲದರ ಜೊತೆಗೆ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ಸಹ ಪಾಲ್ಗೊಳ್ಳುತ್ತಿದ್ದಾರೆ. ದರ್ಶನ್ ಅವರು, ಈ ಸಿನಿಮಾವನ್ನು ಯಾವಾಗ ಮುಗಿಸುತ್ತಾರೆ? ಸಿನಿಮಾ ಬಿಡುಗಡೆ ಆಗೋದು ಯಾವಾಗ ಎಂದು ಫ್ಯಾನ್ಸ್ ಸಹ ಕಾದು ಕುಳಿತಿದ್ದಾರೆ. ಇನ್ನು ಪವಿತ್ರಾ ಗೌಡ ವಿಚಾರದಲ್ಲಿ ನಟ ದರ್ಶನ್ ಅವರು ಮುಂದೇನು ಮಾಡುತ್ತಾರೆ? ಮತ್ತೆ ಎಲ್ಲವು ಮೊದಲಿನ ಹಾಗೆಯೇ ಆಗುತ್ತ? ಪವಿತ್ರಾ ಗೌಡ ಜೊತೆಗೆ ದರ್ಶನ್ ಅವರು ಆತ್ಮೀಯರಾಗಿ ಇರುತ್ತಾರಾ ಎಂದು ಕಾದು ನೋಡಬೇಕಿದೆ.



