ರಿಯಲ್ ಸ್ಟಾರ್ ಉಪೇಂದ್ರ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರೆ. ಇವರು ನಿರ್ದೇಶನ ಮಾಡುವ ಸಿನಿಮಾಗಳು ಎಂದರೆ ಅಭಿಮಾನಿಗಳು ಆ ಸಿನಿಮಾ ನೋಡುವುದಕ್ಕಾಗಿ ಕಾದು ಕುಳಿತಿರುತ್ತಾರೆ. ಇತ್ತೀಚೆಗೆ ತೆರೆಕಂಡ ಯುಐ ಸಿನಿಮಾಗೆ ಯಾವ ಮಟ್ಟಕ್ಕೆ ಕ್ರೇಜ್ ಇತ್ತು ನಮಗೆಲ್ಲಾ ಗೊತ್ತೇ ಇದೆ. ಇನ್ನು ಉಪೇಂದ್ರ ಅವರು ಮಾಸ್ಟರ್ ಮೈಂಡ್ ಎಂದೇ ಹೆಸರುವಾಸಿ ಆಗಿದ್ದಾರೆ. ಭಾರತ ಚಿತ್ರರಂಗದ ಹಲವು ನಿರ್ದೇಶಕರು ಉಪೇಂದ್ರ ಅವರ ಸಿನಿಮಾ ಇಂದ ಸ್ಪೂರ್ತಿ ಪಡೆಯುತ್ತಾರೆ ಎಂದು ಹಲವಾರು ನಿರ್ದೇಶಕರು ಹೇಳಿರೋದಿದೆ. ಇನ್ನು ಉಪೇಂದ್ರ ಅವರು ತಮ್ಮ ವ್ಯಕ್ತಿತ್ವದ ಕಾರಣಕ್ಕೆ ಸಹ ಎಲ್ಲರಿಗೂ ಇಷ್ಟ ಆಗುತ್ತಾರೆ..

ಉಪೇಂದ್ರ ಅವರು ರಿಯಲ್ ಸ್ಟಾರ್ ಆಗಿ, ನಿರ್ದೇಶಕರಾಗಿ ಅಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರೂ ಸಹ, ಬಹಳ ಸಿಂಪಲ್ ಆದ ವ್ಯಕ್ತಿತ್ವ ಹೊಂದಿರುವವರು. ಇವರ ಇಂಟರ್ವ್ಯೂ ಗಳನ್ನು ನೋಡಿದರೆ, ಉಪೇಂದ್ರ ಅವರ ವ್ಯಕ್ತಿತ್ವ ಎಷ್ಟು ಶ್ರೇಷ್ಠವಾದದ್ದು ಎಂದು ಗೊತ್ತಾಗುತ್ತದೆ. ಇವರ ಚಿಂತನೆಯ ಶಕ್ತಿ ಅಷ್ಟು ಅದ್ಭುತವಾದದ್ದು, ಹಲವು ವಿಚಾರಗಳ ಬಗ್ಗೆ ಉಪೇಂದ್ರ ಅವರು ಹೇಳುವ ಮಾತುಗಳನ್ನು ಫಾಲೋ ಮಾಡಿ, ಜೀವನದಲ್ಲಿ ಉದ್ಧಾರ ಆಗಿರುವವರು ಕೂಡ ಬಹಳಷ್ಟು ಜನರು ಇದ್ದಾರೆ. ಇಂಥ ಒಳ್ಳೆಯ ಕಲಾವಿದನಿಗೆ, ಮಾಸ್ಟರ್ ಮೈಂಡ್ ಗೆ ಕಿರುತೆರೆಯಲ್ಲಿ ಖ್ಯಾತಿ ಹೊಂದಿರುವ ನಟಿ ಹರಿಣಿ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ, ಅದಕ್ಕೆ ಕಾರಣ ಏನು? ಇವರು ಮಾಡಿದ್ದೇನು? ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಅವರು ಕೆಲ ವರ್ಷಗಳ ಬಳಿಕ ಸಿನಿಮಾದಲ್ಲಿ ಆಕ್ಟಿವ್ ಆಗಿದ್ದಾರೆ, ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ನಮಗೆಲ್ಲ ಗೊತ್ತೇ ಇದೆ. ಪ್ರಿಯಾಂಕ ಅವರ ಹೊಸ ಸಿನಿಮಾ ಕಮರೋಟ್ಟು2, ಇದೊಂದು ಹಾರರ್ ಸಿನಿಮಾ ಆಗಿದ್ದು, ವಿಶೇಷವಾದ ಪಾತ್ರದಲ್ಲಿ ಪ್ರಿಯಾಂಕ ಅವರು ನಟಿಸುತ್ತಿದ್ದಾರೆ. ಇನ್ನು ಪ್ರಿಯಾಂಕ ಅವರು ಈ ಸಿನಿಮಾದ ಪ್ರೊಮೋಷನ್ ಗಾಗಿ ಕಲರ್ಸ್ ಕನ್ನಡ ವಾಹಿನಿಯ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಬಂದಿದ್ದರು, ಇವರ ಜೊತೆಗೆ ಸಿನಿಮಾದಲ್ಲಿ ನಟಿಸಿರುವ ಹರಿಣಿ ಅವರು, ನೀನಾಸಂ ಅಶ್ವತ್ಥ್ ಅವರು ಹಾಗೂ ಇನ್ನಿತರಾತು ಸಹ ಬಂದಿದ್ದರು. ಕಾರ್ಯಕ್ರಮದಲ್ಲಿ ಸೃಜನ್ ಅವರು ಹಲವು ಪ್ರಶ್ನೆಗಳನ್ನು ಸಹ ಕೇಳಿದರು.
ಆ ವೇಳೆ ಹರಿಣಿ ಅವರು ಉಪೇಂದ್ರ ಅವರಿಗೆ ಬಹಿರಂಗವಾಗಿ ಕ್ಷಮೆ ಕೇಳಿದರು. ಅದೊಂದು ಹಳೆಯ ಘಟನೆ ಆಗಿದ್ದು, ಪ್ರಿಯಾಂಕ ಅವರು ಸಹ ಆಶ್ಚರ್ಯ ಪಟ್ಟು, ಅದು ನೀವಾ ಎಂದು ಕೇಳಿದರು. ಅಷ್ಟಕ್ಕೂ ಆಗಿರುವುದು ಏನು ಎಂದರೆ, ಹರಿಣಿ ಅವರು ಕೆಲ ವರ್ಷಗಳ ಹಿಂದೆ ಕಾರ್ ಡ್ರೈವಿಂಗ್ ಕಲಿಯುವಾಗ, ಸದಾಶಿವನಗರದಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದರು, ಅದು ಉಪೇಂದ್ರ ಅವರ ಮನೆಯ ಹತ್ತಿರದ ರೋಡ್ ನಲ್ಲೇ ಹರಿಣಿ ಅವರು ಕಾರ್ ಡ್ರೈವಿಂಗ್ ಕಲಿಯುತ್ತಿದ್ದರು, ಡ್ರೈವ್ ಮಾಡುತ್ತಿದ್ದ ವೇಳೆ, ಬ್ಯಾಲೆನ್ಸ್ ತಪ್ಪಿ ಉಪೇಂದ್ರ ಅವರ ಮನೆಯ ಮುಂದಿದ್ದ ಗಿಡಗಳ ಪಾಟ್ ಗಳ ಮೇಲೆ ಕಾರ್ ಹತ್ತಿಸಿ, ಕೆಲವು ಪಾಟ್ ಗಳು ಒಡೆದು ಹೋಯಿತಂತೆ. ಆಗ ಉಪೇಂದ್ರ ಅವರ ಮಗ ಹೊರಗಡೆ ನಿಂತಿದ್ದರಂತೆ, ತಕ್ಷಣ ಉಪೇಂದ್ರ ಅವರು ಕೂಡ ಹೊರಗಡೆ ಬಂದರಂತೆ..

ಹರಿಣಿ ಅವರನ್ನು ನೋಡಿದ ಉಪೇಂದ್ರ ಅವರು ಅಯ್ಯೋ ನೀವೇನ್ರಿ, ಡ್ರೈವಿಂಗ್ ಕಲಿಯೋಕೆ, ಗ್ರೌಂಡ್ ಗೆ ಹೋಗಿ ಕಲಿಯಬೇಕು, ಈ ಥರ ರೋಡ್ ಅಲ್ಲಿ ಕಲಿಯೋದ ಎಂದು ಹೇಳಿದರಂತೆ, ಆಗ ಹರಿಣಿ ಅವರು ಕ್ಷಮೆ ಕೇಳಿ, ಪಾಟ್ ಎಲ್ಲವನ್ನು ಸರಿಪಡಿಸಿಕೊಡುತ್ತೇನೆ ಎಂದು ಹೇಳಿದ್ದಕ್ಕೆ, ಉಪೇಂದ್ರ ಅವರು ಅದೆಲ್ಲ ಪರವಾಗಿಲ್ಲ, ನಾನು ಸರಿ ಮಾಡಿಕೊಳ್ತೀನಿ, ನೀವು ಹುಷಾರಾಗಿ ಹೋಗಿ ಎಂದು ಹೇಳಿ, ರೋಡ್ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹರಿಣಿ ಅವರ ಕಾರ್ ಅನ್ನು ಉಪೇಂದ್ರ ಅವರು ಮತ್ತು ಅವರ ಮಗ ಇಬ್ಬರೂ ಸೇರಿ, ಕಾರನ್ನು ತಳ್ಳಿ ಹೊರತೆಗೆದು, ಹುಷಾರಾಗಿ ಹರಿಣಿ ಅವರನ್ನು ಕಳಿಸಿಕೊಟ್ಟರಂತೆ. ಅಂದಿನ ಘಟನೆ ಬಗ್ಗೆ ಮಾತನಾಡಿ, ಹರಿಣಿ ಅವರು ಉಪೇಂದ್ರ ಅವರಿಗೆ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಈ ಘಟನೆ ಬಗ್ಗೆ ಕೇಳಿದ ಪ್ರಿಯಾಂಕ ಅವರು, ಅಯ್ಯೋ ಅದು ನೀವಾ ಎಂದು ಹೇಳಿ, ಅದು ಪರವಾಗಿಲ್ಲ ನಿಮಗೆ ಲೈಸೆನ್ಸ್ ಸಿಕ್ತಾ ಎಂದು ತಮಾಷೆ ಮಾಡಿದ್ದಾರೆ. ಹರಿಣಿ ಅವರು ತಮಗೆ ಲೈಸೆನ್ಸ್ ಸಿಕ್ಕಿತು ಎಂದು ಹೇಳಿದ್ದಾರೆ. ಇದು ಒಂದು ತಮಾಷೆಯ ಘಟನೆ ಎಂದು ಅನ್ನಿಸಿದರೂ ಸಹ, ಉಪೇಂದ್ರ ಅವರು ಎಷ್ಟು ಒಳ್ಳೆಯವರು ಎಂದು ಸಹ ಗೊತ್ತಾಗುತ್ತದೆ. ಹರಿಣಿ ಅವರ ಜೊತೆಗೆ ಮಾತನಾಡಿದ ರೀತಿ ಅವರ ಸ್ವಭಾವ ಹೇಗೆ ಎಂದು ತೋರಿಸುತ್ತದೆ. ಇನ್ನು ಪ್ರಿಯಾಂಕ ಅವರು ಸಹ ಅಷ್ಟೇ ಒಳ್ಳೆಯವರು ಎಂದು ಗೊತ್ತಾಗುತ್ತದೆ. ಇನ್ನು ಉಪೇಂದ್ರ ಅವರು ನಟಿಸಿ ನಿರ್ದೇಶನ ಮಾಡಿದ ಯುಐ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಗೊತ್ತೇ ಇದೆ.. ಇವರ ಮುಂದಿನ ಸಿನಿಮಾ ಬಗ್ಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಶಿವಣ್ಣ ಅವರು ಮತ್ತು ಉಪೇಂದ್ರ ಅವರು 45 ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ.

ಈ ಸಿನಿಮಾ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಆಗಬಹುದು ಎಂದು ಮಾಹಿತಿ ಸಿಕ್ಕಿದ್ದು, ಸಿನಿಮಾದ ಟೀಸರ್ ಎಲ್ಲರಿಗೂ ಬಹಳ ಇಷ್ಟವಾಗಿದೆ. ಹೈದರಾಬಾದ್, ಚೆನ್ನೈ, ಮುಂಬೈ ಎಲ್ಲಾ ಕಡೆ ಸಿನಿಮಾದ ಪ್ರೊಮೋಷನ್ ಜೋರಾಗಿ ನಡೆಯಿತು, ಎಲ್ಲಾ ಊರಿನ ಸಿನಿಮಾ ಪ್ರಿಯರು 45 ಟೀಸರ್ ನೋಡಿ ಫಿದಾ ಆಗಿದ್ದರು, ಇನ್ನು ಈ ಸಿನಿಮಾ ಬಿಟ್ಟು ಬುದ್ಧಿವಂತ2 ಸಿನಿಮಾದಲ್ಲಿ ಸಹ ಉಪೇಂದ್ರ ಅವರು ನಟಿಸಿದ್ದು, ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ, ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು ಆದರೆ ಈಗ ಸ್ವಲ್ಪ ತಡವಾಗಿ ಬಿಡುಗಡೆ ಆಗಲಿದೆ. ಇನ್ನು ಉಪೇಂದ್ರ ಅವರು ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಹ ಜನರಲ್ಲಿ ಶುರುವಾಗಿದೆ.



