ನಟಿ ಸೌಂದರ್ಯ ಅವರು ಹೆಸರಿಗೆ ತಕ್ಕ ಹಾಗೆ ಅತ್ಯಂತ ರೂಪವತಿ, ಸುಂದರವಾದ ನಟಿ. ಅವರನ್ನು ಇಂದಿಗೂ ಕೂಡ ಕನ್ನಡ ಸಿನಿಮಾ ಪ್ರೇಮಿಗಳು ಮರೆಯುವ ಹಾಗಿಲ್ಲ. ಸೌಂದರ್ಯ ಅವರು ವಿಧಿವಶರಾಗಿ 21 ವರ್ಷವಾಗುತ್ತಿದೆ. ಆದರೆ ಇವತ್ತಿಗೂ ಕೂಡ ಅಭಿಮಾನಿಗಳು ಇವರ ಬಗ್ಗೆ ಮಾತನಾಡುವುದನ್ನು ಬಿಟ್ಟಿಲ್ಲ, ಇವರ ನೆನಪು ಮಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ. ನಟಿ ಸೌಂದರ್ಯ ಅವರು ನಮ್ಮನ್ನಗಲಿದ್ದರು ಸಹ ಅವರ ಬಗ್ಗೆ ಅನೇಕ ವಿಚಾರಗಳು ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಅವರು ಇದ್ದಾಗ ಹೇಗಿದ್ದರೂ ಎನ್ನುವ ಚರ್ಚೆ ಅಂತೂ ನಡೆಯುತ್ತಲೇ ಇರುತ್ತದೆ. ಇದೀಗ ಯೂಟ್ಯೂಬ್ ನ ಒಂದು ವಿಡಿಯೋದಲ್ಲಿ ಸೌಂದರ್ಯ ಅವರು ತೀರಿಹೋಗುವುದಕ್ಕಿಂತ ಮೊದಲು ಹೆಚ್ಚಾಗಿ ಕೇಳುತ್ತಿದ್ದ ಹಾಡು ಯಾವುದು ಎಂದು ತಿಳಿದುಬಂದಿದೆ..

ನಟಿ ಸೌಂದರ್ಯ ಅವರು ಹುಟ್ಟಿ ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ಅಪ್ಪಟ ಕನ್ನಡದ ಹುಡುಗಿ ಆಗಿದ್ದ ಸೌಂದರ್ಯ ಅವರು ಕನ್ನಡಕ್ಕಿಂತ ಹೆಚ್ಚು ಮಿಂಚಿದ್ದು ತೆಲುಗು ಮತ್ತು ತಮಿಳು ಭಾಷೆಯಲ್ಲಿ. ತೆಲುಗಿನಲ್ಲಿ ಇವರು ಸ್ಟಾರ್ ಹೀರೋಯಿನ್ ಆಗಿ ಮೆರೆದವರು ಎಂದು ಹೇಳಿದರೂ ತಪ್ಪಲ್ಲ. ಸೌಂದರ್ಯ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಸುಮಾರು 100 ಸಿನಿಮಾಗಳಲ್ಲಿ ನಟಿಸಿದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾದಲ್ಲಿ ಕೂಡ ನಟಿಸಿದ ಹೆಗ್ಗಳಿಕೆ ಇವರಿಗೆ ಸೇರುತ್ತದೆ. ನಟಿ ಸೌಂದರ್ಯ ಅವರ ಸಾ*ವು ಬಹಳ ನೋವು ತರುವಂಥ ವಿಚಾರ. ಕೇವಲ 28 ವಯಸ್ಸಿಗೆ ಸೌಂದರ್ಯ ಅವರು ಇಹಲೋಕ ತ್ಯಜಿಸಿದರು. ಸೌಂದರ್ಯ ಅವರು ಮತ್ತು ಅವರ ಅಣ್ಣ ಅಮರನಾಥ್ ಇಬ್ಬರು ಸಹ ಒಂದೇ ಸಾರಿ ಪ್ರಾಣ ಬಿಟ್ಟರು. ಈ ಘಟನೆಯನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ.
2004ರ ಏಪ್ರಿಲ್ 17ರಂದು ರಾಜಕೀಯ ವಿಚಾರಕ್ಕೆ, ಪ್ರಚಾರಕ್ಕಾಗಿ ಕರೀಂ ನಗರಕ್ಕೆ ಅಣ್ಣನ ಜೊತೆಗೆ ಸೌಂದರ್ಯ ಅವರು ತೆರಳಬೇಕಿತ್ತು. ಹೆಲಿಕಾಪ್ಟರ್ ನಲ್ಲಿ ಇಬ್ಬರು ಹೊರಟ ಕೆಲವೇ ಸಮಯಕ್ಕೆ ಕ್ರಾಶ್ ಆಗಿ, ಸೌಂದರ್ಯ ಅವರು ಮತ್ತು ಅವರ ಅಣ್ಣ ಅಮರನಾಥ್ ಇಬ್ಬರು ಸಹ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ನೋಡಲು ಅಷ್ಟು ಸೌಂದರ್ಯವತಿ ಆಗಿದ್ದ ಸೌಂದರ್ಯ ಅವರಿಗೆ ಆ ರೀತಿಯ ಅಂತ್ಯ ಆಗುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಸೌಂದರ್ಯ ಅವರಿಗೆ ಈ ರೀತಿ ಆಗಿ, ಅವರು ಎಲ್ಲರನ್ನು ಬಿಟ್ಟು ಹೋಗಿ 21 ವರ್ಷ ಕಳೆದಿವೆ. ಆ ದಿನ ನಿನ್ನೆಯೇ ಆಗಿತ್ತು. ನಿನ್ನೆ ಸಾಕಷ್ಟು ಅಭಿಮಾನಿಗಳು ಮತ್ತು ನೆಟ್ಟಿಗರು ಸೌಂದರ್ಯ ಅವರ ನೆನಪು ಮಾಡಿಕೊಂಡರು. ಇಂದು ಅವರ ಬಗ್ಗೆ ಮತ್ತೊಂದು ವಿಚಾರ ಕೇಳಿಬಂದಿದೆ.

ಯೂಟ್ಯೂಬ್ ನಲ್ಲಿ ನಟ ಹಾಗೂ ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಅಪರೂಪದ ಕಲಾವಿದರ ಸಂದರ್ಶನ ಮಾಡಲಾಗುತ್ತದೆ. ಜೊತೆಗೆ ಕನ್ನಡ ಚಿತ್ರರಂಗಕ್ಕೆ ಸೇರಿದ ಅನೇಕ ವಿಚಾರಗಳನ್ನು, ಸ್ವಾರಸ್ಯಕರ ಮಾಹಿತಿಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ. ಸಿನಿಮಾ ಸರಸ್ವತಿ ಹೆಸರಿನಲ್ಲಿ ಮತ್ತೊಂದು ಹೊಸ ಸೀರೀಸ್ ಶುರು ಮಾಡಿರುವ ಇವರು, ಪ್ರತಿದಿನ ಮಧ್ಯಾಹ್ನ 12:30ಕ್ಕೆ ಚಂದನವನದ ವಿಶೇಷ ವಿಚಾರಗಳನ್ನು, ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಇಂದು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಸೌಂದರ್ಯ ಅವರ ಬಗ್ಗೆ ಮಾತನಾಡಿದ್ದಾರೆ. ಇವರ ಜರ್ನಿ ಶುರುವಾಗಿದ್ದು ಕೂಡ ಸೌಂದರ್ಯ ಅವರ ಸಿನಿಮಾ ಮೂಲಕ. ಸೌಂದರ್ಯ ಅವರ ದೋಣಿ ಸಾಗಲಿ ಸಿನಿಮಾದಲ್ಲಿ ರಘುರಾಮ್ ಅವರು ಮೊದಲು ನಟಿಸಿದ್ದು.
ರಘುರಾಮ್ ಅವರು ಮತ್ತು ಸೌಂದರ್ಯ ಅವರು ಒಂದೇ ಸ್ಕೂಲ್ ನಲ್ಲಿ ಓದಿದ್ದು, ಒಂದೇ ಏರಿಯಾದವರು ಕೂಡ ಹಾಗಾಗಿ ಸೌಂದರ್ಯ ಅವರ ಜೊತೆಗೆ ರಘುರಾಮ್ ಅವರಿಗೆ ಒಳ್ಳೆಯ ಸ್ನೇಹ ಇತ್ತು. ಸೌಂದರ್ಯ ಅವರು ಬಹಳ ಚೆನ್ನಾಗಿ ಮಾತನಾಡುತ್ತಿದ್ದರು. ಕೆಲ ವರ್ಷಗಳ ನಂತರ ರಘುರಾಮ್ ಅವರು ಈಟಿವಿ ವಾಹಿನಿಗೆ ಕೆಲಸ ಮಾಡುತ್ತಿದ್ದಾಗ, ತಾರೆಗಳ ತೋಟ ಎನ್ನುವ ಕಾರ್ಯಕ್ರಮ ನಡೆಯುತ್ತಿತ್ತು, ಬೆಂಗಳೂರು ಪ್ಯಾಲೇಸ್ ನಲ್ಲಿ ಆಪ್ತಮಿತ್ರ ಸಿನಿಮಾ ಶೂಟಿಂಗ್ ನಡೆಯುತ್ತಿದ್ದಾಗ, ಅಲ್ಲಿಗೆ ಹೋಗಿ ವಿಡಿಯೋ ಕವರೇಜ್ ಮಾಡಬೇಕು ಎಂದು ಹೇಳಿದಾಗ, ರಘುರಾಮ್ ಅವರು ಹೋಗಿ ಎಲ್ಲರನ್ನು ಮಾತನಾಡಿಸಿ, ವಿಡಿಯೋ ಬೈಟ್ ಕೇಳಿದರಂತೆ. ಮೊದಲು ಸೌಂದರ್ಯ ಅವರನ್ನು ಕೇಳಿದಾಗ, ಎಲ್ಲರ ವಿಡಿಯೋ ಬೈಟ್ ತಗೊಂಡು ಬಾ ಎಂದು ಹೇಳಿದರಂತೆ.

ನಂತರ ಕೇಳಿದಾಗ, 5 ನಿಮಿಷ ಎಂದು ಹೇಳಿದರಂತೆ. ನಂತರ ರಘುರಾಮ್ ಅವರು ಮೇಡಂ ಬೇಗ ವಿಡಿಯೋ ಬೈಟ್ ಕೊಡಿ ಎಂದು ಹೇಳಿದರಂತೆ. ಆಗ ಸೌಂದರ್ಯ ಅವರು ಹೇ, ಬಾ ಇಲ್ಲಿ ಎಂದು ರಘುರಾಮ್ ಅವರನ್ನು ಕರೆದು, ಐಪಾಡ್ ನಲ್ಲಿ ಅವರು ಪದೇ ಪದೇ ಕೇಳುತ್ತಿದ್ದ ಒಂದು ಹಾಡನ್ನು ರಘುರಾಮ್ ಅವರನ್ನು ಕೇಳಿಸಿದರಂತೆ. ಅದು ಶಾರುಖ್ ಖಾನ್ ಅವರ ಕಲ್ ಹೋ ನಾ ಹೋ ಸಿನಿಮಾದ ಹರ್ ಘಡಿ ಬದಲ್ ರಹೀ ಹೈ ರೂಪ್ ಜಿಂದಗಿ ಹಾಡು, ಆ ಹಾಡಿನಲ್ಲಿ ನಾಳೆ ಇದೆಯೋ ಇಲ್ಲವೋ ಎನ್ನುವ ಅರ್ಥವಿದೆ. ಹಾಡನ್ನು ಕೇಳಿದ ರಘುರಾಮ್ ಅವರು ಹಾಡು ತುಂಬಾ ಚೆನ್ನಾಗಿದೆ ಮೇಡಂ ಎಂದರಂತೆ, ಚೆನ್ನಾಗಿರೋದಲ್ಲ ರಘು ಎಷ್ಟು ಅರ್ಥ ಇದೆ ಕೇಳು ಎಂದು ಹೇಳಿದರಂತೆ.
ಈ ಘಟನೆ ಆದ ಕೆಲವೇ ದಿನಗಳಲ್ಲಿ, ತಿಂಗಳುಗಳಲ್ಲಿ ಕಾಲವಾದರು. ಅವರು ಕೇಳುತ್ತಿದ್ದ ಹಾಡಿನ ಅರ್ಥ ಆ ರೀತಿ ಇತ್ತು. ಇದೆಲ್ಲವನ್ನು ನೋಡಿದರೆ, ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಒಂದೊಂದು ಅರ್ಥವಿದೆ. ಸೌಂದರ್ಯ ಅವರು ಆ ಹಾಡು ಕೇಳುತ್ತಿದ್ದು, ಕೆಲ ಸಮಯದಲ್ಲಿ ಆ ರೀತಿ ಆಗಿದ್ದು ನಿಜಕ್ಕೂ ಬೇಸರ ಆಗುತ್ತದೆ. ಸೌಂದರ್ಯ ಅವರು ನಮ್ಮನ್ನು ದೈಹಿಕವಾಗಿ ಬಿಟ್ಟು ಹೋಗಿದ್ದರೂ, ಅವರ ನೆನಪುಗಳು ಸದಾ ನಮ್ಮ ಜೊತೆಗೆ ಇರುತ್ತದೆ..