ಕಲರ್ಸ್ ಕನ್ನಡದಲ್ಲಿ ಹಲವು ಧಾರವಾಹಿಗಳು ಪ್ರಸಾರವಾಗುತ್ತಿದೆ. ಅವುಗಳಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರವಾಹಿ ಹೆಚ್ಚು ಜನ ಮನ್ನಣೆ ಗಳಿಸಿದೆ. ಧಾರಾವಾಹಿಯ ಪ್ರಸಿದ್ಧಿಗೆ ಇಲ್ಲಿನ ಪ್ರಮುಖನಟಿ ಭೂಮಿಕಾ ರಮೇಶ್ ಮುಖ್ಯ ಕಾರಣ. ಅಕ್ಕಮ್ಮನ ಮುದ್ದಿನ ಲಡ್ಡು ಆಗಿ, ದೊಡ್ಡಮ್ಮನಿಗೆ ಬೇಡದ ಮಗಳಾಗಿ, ಅತ್ತೆಯ ಕೈಗೊಂಬೆಯಾಗಿ ಯಾರಿಗೂ ನೋವುಂಟು ಮಾಡದ ಮಹಾಲಕ್ಷ್ಮಿ ಪಾತ್ರ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಅಷ್ಟಕ್ಕೂ ಈ ಭೂಮಿಕಾ ರಮೇಶ್ ಯಾರು? ಅವರ ಹಿನ್ನಲರ ಬಗ್ಗೆ ನಿಮಗೆ ಪ್ರಶ್ನೆಗಳಿರಬಹುದು. ಉತ್ತರ ಇಲ್ಲಿದೆ ನೋಡಿ.

ಮೊದಲು ಭೂಮಿಕಾ ರಮೇಶ್ ಪಿಯುಸಿ ಓದುತ್ತಿದ್ದಾಗ ದೊರೆಸಾನಿ ಧಾರವಾಹಿಗೆ ಆಡಿಷನ್ ಕೊಟ್ಟಿದ್ದರು. ಆದರೆ ಅಲ್ಲಿ ರಿಜೆಕ್ಟ್ ಆದರು. ಭೂಮಿಕಾ ರಮೇಶ್ ನಟಿ ಮಾತ್ರವಲ್ಲ ಒಳ್ಳೆ ಡ್ಯಾನ್ಸರ್ ಕೂಡಾ. ಭೂಮಿಕಾ ಶಾಸ್ತ್ರೀಯ ನೃತ್ಯ ಕಲಾವಿದೆ. 4ನೇ ತರಗತಿಯಲ್ಲಿರುವಾಗಲೇ ಭೂಮಿಕಾ ರಮೇಶ್ ತೆಲುಗು ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿ ನೋಡುಗರ ಗಮನ ಸೆಳೆದಿದ್ದರು.
ತೆಲುಗು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿದ್ದ ಭೂಮಿಕಾ ಪ್ರಭುದೇವ ತಂದೆ ಮೂಗೂರು ಸುಂದರಂ ಮೆಚ್ಚುಗೆ ಗಳಿಸಿದ್ದರು. ನೀವು ಪ್ರೋತ್ಸಾಹ ನೀಡಿದರೆ ನಿಮ್ಮ ಮಗಳು ದೊಡ್ಡ ಕಲಾವಿದೆ ಆಗುತ್ತಾಳೆ ಎಂದು ಆಗಲೇ ಮೂಗೂರು ಸುಂದರಂ ಭವಿಷ್ಯ ನುಡಿದಿದ್ದರು. ಅವರ ಮಾತಿನಂತೆ ಭೂಮಿಕಾ ಸದ್ಯ ಲಕ್ಷ್ಮೀ ಬಾರಮ್ಮ ಧಾರವಾಹಿಯಿಂದ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಸಿನಿಮಾಗಳಲ್ಲೂ ಅವಕಾಶಗಳು ಇವರನ್ನು ಅರಸಿ ಬರುತ್ತಿವೆ.