ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋ ಮುಗಿಸಿ ಈಗ ಸಿಸಿಎಲ್ ನಲ್ಲಿ ಬ್ಯುಸಿ ಆಗಿದ್ದಾರೆ. ಸುದೀಪ್ ಅವರು ಈಗ ಸಿನಿಮಾ ಗೆದ್ದಿರುವ ಖುಷಿಯಲ್ಲಿದ್ದಾರೆ ಎನ್ನುವ ವಿಷಯ ಸಹ ಗೊತ್ತೇ ಇದೆ. 2 ವರ್ಷಗಳ ಬಳಿಕ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ತೆರೆಕಂಡು, ಕಿಚ್ಚನ ಮ್ಯಾಕ್ಸಿಮಮ್ ಮಾಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿದೆ. ಥಿಯೇಟರ್ ನಲ್ಲಿ 25 ದಿನಗಳನ್ನು ಸಹ ಪೂರೈಸಿದೆ. ಈ ಎಲ್ಲಾ ಸಂಭ್ರಮಗಳ ಜೊತೆಗೆ ಸಿಸಿಎಲ್ ತಯಾರಿಯಲ್ಲಿದ್ದಾರೆ ಕಿಚ್ಚ ಸುದೀಪ್. ಇದೇ ತಯಾರಿಯಲ್ಲಿ ಇರುವ ಸುದೀಪ್ ಅವರು ಪ್ರಯಾಣ ಮಾಡುವಾಗ ಗಗನಸಖಿ ಒಬ್ಬರು ಸುದೀಪ್ ಅವರನ್ನು ಭೇಟಿ ಮಾಡಿದ್ದು ಅವರೊಂದಿಗೆ 1 ಗಂಟೆಗಳ ಕಾಲ ಕಳೆದ ಸುಂದರವಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಸುದೀಪ್ ಅವರ ಜೊತೆಗೆ ಸೆಲ್ಫಿ ಸಹ ಶೇರ್ ಮಾಡಿದ್ದಾರೆ..
ಕಿಚ್ಚ ಸುದೀಪ್ ಅವರ ಗುಣವೇ ಹಾಗೆ, ಯಾರೇ ಇವರನ್ನು ಭೇಟಿ ಮಾಡಿದರು ಸಹ, ಸುದೀಪ್ ಅವರನ್ನು ಇಷ್ಟಪಡದೇ ಇರುವುದಕ್ಕೆ ಸಾಧ್ಯವೇ ಇಲ್ಲ. ಅಷ್ಟು ಫ್ರೆಂಡ್ಲಿ ಹಾಗೂ ಒಳ್ಳೆಯ ಗುಣ ಅವರದ್ದು, ಎಲ್ಲರನ್ನು ತಮ್ಮ ಸ್ನೇಹಿತರ ಹಾಗೆ ಟ್ರೀಟ್ ಮಾಡುವ ಸುದೀಪ್ ಅವರ ಫ್ರಂಡ್ಲಿ ನೇಚರ್ ಎಲ್ಲರಿಗೂ ಇಷ್ಟ ಆಗುತ್ತದೆ. ಗಗನಸಖಿ ಅವರಿಗೂ ಇದೇ ರೀತಿ ಆಗಿದೆ. ಸುದೀಪ್ ಅವರು ತಮ್ಮ ಮಗಳು ಸಾನ್ವಿ ಹಾಗೂ ನಟ ಧರ್ಮ ಕೀರ್ತಿ ರಾಜ್ ಅವರ ಜೊತೆಗೆ ಹೈದರಾಬಾದ್ ಇಂದ ಬೆಂಗಳೂರಿಗೆ ವಾಪಸ್ ಬರುತ್ತಿರುವಾಗ ನಡೆದಿರುವ ಘಟನೆ ಇದಾಗಿದೆ. ಸುದೀಪ್ ಅವರು ಸಿಸಿಎಲ್ ನಲ್ಲಿ ಬ್ಯುಸಿ ಇರುವ ಕಾರಣ ಬಹುಶಃ ಅದಕ್ಕೆ ಸಂಬಂಧಿಸಿದ ಕೆಲಸಕ್ಕಾಗಿಯೇ ಹೈದರಾಬಾದ್ ಗೆ ಹೋಗಿ ಬರುತ್ತಿರಬಹುದು ಎನ್ನಲಾಗಿದೆ. ಇದೇ ವೇಳೆ ಗಗನಸಖಿ ಸುದೀಪ್ ಅವರ ಜೊತೆಗೆ ಫೋಟೋ ತೆಗೆದುಕೊಳ್ಳಲು ಕೇಳಿದ್ದಾರೆ.

ಸುದೀಪ್ ಅವರನ್ನು ನೋಡಿ, ಅವರ ಬಳಿ ಆಟೋಗ್ರಾಫ್ ಪಡೆದ ಗಗನಸಖಿ ಮತ್ತೆ ಅವರ ಜೊತೆಗೆ ಒಂದು ಫೋಟೋ ಕೇಳಿದ್ದು, ಸುದೀಪ್ ಅವರು, ಅವರ ಮಗಳು ಸಾನ್ವಿ ಮತ್ತು ಧರ್ಮ ಕೀರ್ತಿರಾಜ್ ಮೂವರ ಜೊತೆಗೂ ಫೋಟೋ ಕ್ಲಿಕ್ಕಿಸಿ, ಅದನ್ನು ಶೇಟ್ ಮಾಡಿದ್ದು, ಒಳ್ಳೆಯ ಬರಹವನ್ನು ಸಹ ಬರೆದುಕೊಂಡಿದ್ದಾರೆ. “ಫೈನಲಿ ಅವರು ನಮ್ಮೊಂದಿಗೆ 1 ಗಂಟೆ 20 ನಿಮಿಷಗಳ ಕಾಲ ಇದ್ದರು. ಅವರ ಜೊತೆಗೆ ಕಳೆದ ಪ್ರತಿ ನಿಮಿಷ ಕೂಡ ನನಗೆ ಗೂಸ್ ಬಂಪ್ಸ್ ಬರುತ್ತಿತ್ತು. ನಾನು ಒಬ್ಬ ಫ್ಯಾನ್ ಆಗಿ ಅವರನ್ನು ಭೇಟಿ ಮಾಡುವುದಕ್ಕೆ ಹೋದೆ, ಆದರೆ ಅವರು ನಮ್ಮ ಪ್ರಯಾಣಿಕರಾಗಿ ಇದಿದ್ದು ನನಗೆ ಬೇರೆ ರೀತಿಯ ವಿಭಿನ್ನ ಅನುಭವ ತಂದುಕೊಟ್ಟಿತು. ಮಚ್ ಲವ್ ಸರ್. ಶ್ರೀ ಸುದೀಪ್ ಸರ್, ಸಾನ್ವಿ ಮೇಡಂ ಹಾಗಿ ಶ್ರೀ ಧರ್ಮ ಸರ್ ಮೂವರ ಜೊತೆಗೆ ಇದು ಸ್ವೀಟ್ ಜರ್ನಿ ಆಗಿತ್ತು. ವಿಮಾನದಲ್ಲಿ ನಿಮ್ಮನ್ನು ಭೇಟಿ ಮಾಡಿ ತುಂಬಾ ಸಂತೋಷ ಆಗಿದೆ..” ಎಂದು ಗಗನಸಖಿ ಬರೆದುಕೊಂಡಿದ್ದಾರೆ.
ಹಾಗೂ ಸುದೀಪ್ ಅವರ ಜೊತೆಗಿನ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ನೋಡಿ ಕಿಚ್ಚನ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಸುದೀಪ್ ಅವರ ವ್ಯಕ್ತಿತ್ವವೇ ಹಾಗೆ ಬಿಡಿ. ಇನ್ನು ಸುದೀಪ್ ಅವರು ಬಿಗ್ ಬಾಸ್ ಶೋ ಮುಗಿಸಿದ್ದು, ಶೋ ಇಂದ ಹೊರಗೆ ಬಂದಿದ್ದಾರೆ. ಇನ್ನುಮುಂದೆ ಸುದೀಪ್ ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಅವರೇ ಹೇಳಿದ್ದಾರೆ. ಆದರೆ ತಂಡ ಮಾತ್ರ ಸುದೀಪ್ ಅವರನ್ನು ಮತ್ತೆ ಕರೆತರುವ ಭರವಸೆ ನೀಡಿದೆ. ಸಿನಿಮಾ, ಸಿಸಿಎಲ್ ಈ ಎರಡರ ನಂತರ ಸುದೀಪ್ ಅವರು ಈಗ ಸಿಸಿಎಲ್ ನಲ್ಲಿ ಬ್ಯುಸಿ ಆಗಿದ್ದಾರೆ. ಕ್ರಿಕೆಟ್ ಸಹ ಸುದೀಪ್ ಅವರ ಪ್ಯಾಶನ್ ಎಂದು ನಮಗೆಲ್ಲಾ ಗೊತ್ತೇ ಇದೆ. 10 ವರ್ಷಗಳಿಂದ ಸಿಸಿಎಲ್ ಆಡಿಕೊಂಡು ಬಂದಿದ್ದಾರೆ ಸುದೀಪ್. ಇದು 11ನೇ ವರ್ಷದ ಆವೃತ್ತಿ ಆಗಿದೆ. ನಮ್ಮ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಸುದೀಪ್ ಅವರೇ ಕ್ಯಾಪ್ಟನ್.

ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ ಸೇರಿದಂತೆ ಸ್ಟಾರ್ ಹೀರೋಗಳು ತಂಡದಲ್ಲಿ ಇದ್ದಾರೆ. ಇದೇ ಫೆಬ್ರವರಿ 8 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಸಿಸಿಎಲ್ 11ನೇ ಆವೃತ್ತಿಯ ಉದ್ಘಾಟನೆ ನಡೆಯಲಿದ್ದು, ಮೊದಲ ಪಂದ್ಯ ಚೆನ್ನೈ ಹಾಗೂ ಬೆಂಗಾಲ್ ತಂಡದ ವಿರುದ್ಧ ನಡೆಯಲಿದೆ. ಅದೇ ದಿನ ಸಂಜೆ 2ನೇ ಪಂದ್ಯ ನಡೆಯಲಿದ್ದು, ಕರ್ನಾಟಕ ಬುಲ್ಡೋಜರ್ಸ್ ಹಾಗೂ ಹೈದರಾಬಾದ್ ತಂಡದ ವಿರುದ್ಧ ನಡೆಯಲಿದೆ. ಬಿಗ್ ಬಾಸ್ ತ್ರಿವಿಕ್ರಂ ಸಹ ಸಿಸಿಎಲ್ ತಂಡದಲ್ಲಿ ಇದ್ದಾರೆ. ಸುದೀಪ್ ಅವರು ಈ ಮ್ಯಾಚ್ ಗಳಲ್ಲಿ ಬ್ಯುಸಿ ಇದ್ದು, ಸಿಸಿಎಲ್ ನಲ್ಲಿ ವರ್ಷ ಕರ್ನಾಟಕ ತಂಡ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ.



