ಸೀರೆ ಅಂದ್ರೆ ಹೆಣ್ಣುಮಕ್ಕಳಿಗೆ ವಿಶೇಷ ಒಲವು. ಹೊರಗಡೆ ಮಾಡರ್ನ್ ಡ್ರೆಸ್ ಗಳು, ಕಂಫರ್ಟಬಲ್ ಇರುವಂಥ ಡಿಸೈನರ್ ಡ್ರೆಸ್ ಗಳನ್ನು ಧರಿಸಿದರು ಸಹ ಸೀರೆ ಅಂದ್ರೆ ಅದಕ್ಕಿರುವ ಕ್ರೇಜ್ ಬೇರೇನೇ . ಸೀರೆಗಳು ಅಂದ್ರೆ ಅದೊಂದು ರೀತಿ ಎಮೋಷನ್ ಇದ್ದ ಹಾಗೆ. ಸೀರೆ ಧರಿಸಿದ್ರೆ ವಿಶೇಷವಾದ ಫೀಲ್ ಆಗುತ್ತದೆ. ಜೊತೆಗೆ ನಮ್ಮ ಸಂಸ್ಕೃತಿ ಎತ್ತಿ ಹಿಡಿಯುತ್ತಿರುವ ಅನುಭವ ಆಗುತ್ತದೆ. ನಮಗೆ ಮಾತ್ರವಲ್ಲ, ಸೀರೆ ಅನ್ನೋದು ನೋಡುಗರಿಗೆ ಸಹ ವಿಶೇಷ ಭಾವ ಮೂಡಿಸುತ್ತದೆ. ಹಾಗಾಗಿ ಹೆಣ್ಣುಮಕ್ಕಳಿಗೆ ಸೀರೆ ಅಂದ್ರೆ ತುಂಬಾ ಇಷ್ಟ. ಕೆಲ ವರ್ಷಗಳ ಹಿಂದೆ ಸೀರೆ ಅಂದ್ರೆ ಕೆಲವರು ದೂರ ಸರಿಯುತ್ತಿದ್ದರು. ಆದರೆ ಈಗ ಮತ್ತೆ ಸೀರೆ ಟ್ರೆಂಡ್ ಹೆಚ್ಚಾಗಿದೆ. ಜನರಿಗೆ ಸೀರೆ ಅಂದ್ರೆ ಹೆಚ್ಚು ಪ್ರೀತಿ ಉಂಟಾಗುತ್ತಿದೆ, ಹೆಚ್ಚು ಹೆಚ್ಚಾಗಿ ಸೀರೆ ಉಡಲು ಬಯಸುತ್ತಿದ್ದಾರೆ.
ಈಗ ಸೆಲೆಬ್ರಿಟಿಗಳು ಕೂಡ ಹೆಚ್ಚಾಗಿ ಸೀರೆಗಳನ್ನು ಉಡುತ್ತಾರೆ. ಅವುಗಳನ್ನು ಪ್ರೊಮೋಟ್ ಕೂಡ ಮಾಡುತ್ತಿದ್ದಾರೆ. ಈಗ ಸೀರೆ ಮಾರಾಟ ಮಾಡುವವರ ಸಂಖ್ಯೆ ಕೂಡ ಜಾಸ್ತಿಯೇ ಆಗಿದೆ. ಇನ್ನು ಸೀರೆಗಳು ಅಂದ್ರೇನೇ ಕ್ರೇಜ್ ಹೆಚ್ಚು, ಅದರಲ್ಲೂ ವಿಶೇಷವಾಗಿ ಮೈಸೂರ್ ಸಿಲ್ಕ್ ಸೀರೆ ಅಂದ್ರೆ ಯಾರಿಗೆ ತಾನೇ ಕ್ರೇಜ್ ಇರೋದಿಲ್ಲ ಹೇಳಿ. ಮೈಸೂರ್ ಸಿಲ್ಕ್ ಅನ್ನೋದು ಒಂದು ಬ್ರ್ಯಾಂಡ್. ಹೆಣ್ಣುಮಕ್ಕಳಿಗೆ ಮೈಸೂರ್ ಸಿಲ್ಕ್ ಸೀರೆ ಉಡಬೇಕು ಎಂದು ಬಹಳ ಆಸೆ ಇರುತ್ತದೆ. ಈ ಸೀರೆ ಖರೀದಿ ಮಾಡಬೇಕು, ಒಳ್ಳೊಳ್ಳೆಯ ಕಲೆಕ್ಷನ್ ಇಟ್ಟುಕೊಳ್ಳಬೇಕು ಎಂದು ಅಂದುಕೊಳ್ಳುತ್ತಾರೆ. ಅದರ ಮೈಸೂರ್ ಸಿಲ್ಕ್ ಸೀರೆ ಬೆಲೆ ಕೂಡ ಅಷ್ಟೇ ದುಬಾರಿ.. ಈ ಸೀರೆಗಳು ಶುರು ಆಗುವುದೇ 25 ಸಾವಿರದಿಂದ ಎಂದು ನಮಗೆಲ್ಲಾ ಗೊತ್ತೇ ಇದೆ..

ಇದೀಗ ನಮ್ಮ ಕಿರುತೆರೆಯಲ್ಲಿ ಖ್ಯಾತಿ ಹೊಂದಿರುವ ನಟಿ ಅನುಪಮಾ ಗೌಡ ಮೈಸೂರ್ ಸಿಲ್ಕ್ ಸೀರೆ ಧರಿಸಿ ಪೋಸ್ ಕೊಟ್ಟಿದ್ದು, ಈ ಸೀರೆಯ ಬೆಲೆ ಕೇಳಿದರೆ ನೀವು ಕೂಡ ಸಂತೋಷದಿಂದ ಕೊಂಡುಕೊಳ್ಳಬಹುದು ಎಂದು ಖುಷಿ ಪಡುತ್ತೀರಿ. ಹೌದು, ಅನುಪಮಾ ಗೌಡ ಅವರು ಪಾಚಿ ಹಸಿರು ಬಣ್ಣದ ಸುಂದರವಾದ ರೇಷ್ಮೆ ಸೀರೆ ಧರಿಸಿದ್ದಾರೆ. ಆ ಸುಂದರವಾದ ಸೀರೆಯಲ್ಲಿ ಫೋಟೋಗಳಿಗೆ ಟ್ರೇಡಿಷನಲ್ ಆಗಿ ಪೋಸ್ ಕೂಡ ನೀಡಿದ್ದಾರೆ. ಅನುಪಮಾ ಗೌಡ ಅವರು ಈ ಸೀರೆ ಧರಿಸಿ, ಫ್ರೀ ಹೇರ್ ಹಾಗೆಯೇ ಬಿಟ್ಟಿದ್ದು, ಕೈಗಳಿಗೆ ಕೇಸರಿ ಬಣ್ಣದ ಗಾಜಿನ ಬಳೆಗಳನ್ನು ಧರಿಸಿರುವುದು ಅವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ರೇಷ್ಮೆ ಸೀರೆಗೆ ಗಾಜಿನ ಬಳೆಗಳು ತುಂಬಾ ಚೆನ್ನಾಗಿ ಒಪ್ಪುತ್ತದೆ, ಕೈಗಳಿಗೆ ಹೊಸ ಮೆರುಗು ತರುತ್ತದೆ.
ಹೌದು, ಇನ್ನು ಕತ್ತಿಗೆ ಸುಂದರವಾದ ಎರಡು ಎಳೆ ಇರುವ ಸರವನ್ನು ಧರಿಸಿದ್ದಾರೆ ಅನುಪಮಾ ಗೌಡ. ಇದು ಸಹ ಅವರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಿದರೆ ತಪ್ಪಲ್ಲ. ಬಹಳ ಸಿಂಪಲ್ ಆಗಿ, ಸುಂದರವಾಗಿ ರೆಡಿ ಆಗಿ, ಎಲ್ಲರ ಗಮನ ಸೆಳೆದಿದ್ದಾರೆ ಅನುಪಮಾ. ಈ ಹಸಿರು ಬಣ್ಣದ ಸುಂದರ್ವಾಆ ಸೀರೆಯನ್ನು ಅನುಪಮಾ ಅವರು ಧರಿಸಿದ್ದು, ತಮ್ಮ ಪ್ರಾಣ ಸ್ನೇಹಿತೆ ನೇಹಾ ಗೌಡ ಅವರ ಮಗಳ ನಾಮಕರಣ ಕಾರ್ಯಕ್ರಮದಲ್ಲಿ. ನೇಹಾ ಗೌಡ ಅವರು ತಮ್ಮ ಮುದ್ದಿನ ಮಗಳಿಗೆ ಶಾರದಾ ಎಂದು ಸುಂದರವಾದ ಹೆಸರನ್ನು ಇಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಅನುಪಮಾ ಅವರು ಹಸಿರು ಬಣ್ಣದ ಸಿಲ್ಕ್ ಸೀರೆ ಧರಿಸಿ ಹೋಗಿದ್ದಾರೆ. ಮಗುವನ್ನು ಮುದ್ದಾಡಿ, ಫೋಟೋಗಳಿಗೆ ಸಹ ಪೋಸ್ ನೀಡಿದ್ದಾರೆ.

ಅನುಪಮಾ ಅವರು ಧರಿಸಿರುವ ಈ ಸೀರೆ ಬಹಳ ಸರಳವಾಗಿ ಜೊತೆಗೆ ಸುಂದರವಾಗಿ ಕೂಡ ಇದೆ. ಸೀರೆಯಲ್ಲಿ ಮಿಂಚುತ್ತಿರುವ ಅನುಪಮಾ ಗೌಡ ಅವರ ಸೌಂದರ್ಯವನ್ನು ಕಾಮೆಂಟ್ಸ್ ಗಳ ಮೂಲಕ ಅಭಿಮಾನಿಗಳು ಹೊಗಳುತ್ತಿದ್ದಾರೆ. ಈ ಸೀರೆಯನ್ನು ನೋಡಿದರೆ ಇದರ ಬೆಲೆ ಸುಮಾರು 8500 ರೂಪಾಯಿ ಇರಬಹುದು ಎಂದು ಅನ್ನಿಸುತ್ತದೆ. ಆದರೆ ಅದಕ್ಕಿಂತಲೂ ಜಾಸ್ತಿ ಇದ್ದರೂ ಇರಬಹುದು. ಸಿಲ್ಕ್ ಸೀರೆಗಳು ತುಂಬಾ ದುಬಾರಿ ಇಷ್ಟು ಕಡಿಮೆಗೆ ಹೇಗೆ ಎಂದು ಯೋಚನೆ ಬರಬಹುದು. ಇದು ಕ್ರೇಪ್ ಸಿಲ್ಕ್ ಸೀರೆ ಆಗಿದೆ. ಸ್ವಲ್ಪ ಅಗ್ಗದ ಬೆಲೆಯಲ್ಲಿ ಈ ಸೀರೆಗಳು ಸಿಗುತ್ತದೆ. ಇದನ್ನು ಸಹ ನೀವು ಖರೀದಿ ಮಾಡಿ, ಧರಿಸಿ, ಗ್ರ್ಯಾಂಡ್ ಲುಕ್ ಪಡೆಯಬಹುದು. ನೀವು ಅಷ್ಟೇ ಸುಂದರವಾಗಿ ಕೂಡ ಕಾಣಿಸುತ್ತೀರಿ. ಹೆಣ್ಣುಮಕ್ಕಳಿಗೆ ಕ್ರೇಪ್ ಸಿಲ್ಕ್ ಸೀರೆ ಹೇಳಿ ಮಾಡಿಸಿದ ಹಾಗಿರುತ್ತದೆ.
ಇನ್ನು ಅನುಪಮಾ ಗೌಡ ಅವರ ಬಗ್ಗೆ ಹೇಳುವುದಾದರೆ, ಇವರು ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಮತ್ತು ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಅನುಪಮಾ ಗೌಡ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಅಕ್ಕ ಧಾರಾವಾಹಿ. ನಂತರ ಬಿಗ್ ಬಾಸ್ ನಲ್ಲಿ ಸಹ ಸ್ಪರ್ಧಿಯಾಗಿ ಬಂದು, ಒಳ್ಳೆಯ ಹೆಸರು ಮಾಡಿದರು ಅನುಪಮಾ ಗೌಡ. ಫಿನಾಲೆ ವರೆಗು ತಲುಪಿದ್ದರು. ನಂತರ ಇನ್ಯಾವುದೇ ಧಾರಾವಾಹಿಯಲ್ಲಿ ಅಭಿನಯಿಸಿಲ್ಲ ಆದರೆ ಅನುಪಮಾ ಗೌಡ ಅವರು ಸಿನಿಮಾದಲ್ಲಿ ಸಹ ಅಭಿನಯಿಸಿ ಈಗ ಅವರಿಗೆ ರಾಜ್ಯ ಪ್ರಶಸ್ತಿ ಸಹ ಸಿಕ್ಕಿದೆ. ಅನುಪಮಾ ಗೌಡ ಅವರಿಗೆ ಈ ವರ್ಷ ಬಹಳ ಸ್ಪೆಷಲ್ ಆಗಿದೆ. ಇನ್ನು ನಿರೂಪಣೆಯಲ್ಲಿ ಸಹ ಹೆಸರು ಮಾಡುತ್ತಿದ್ದಾರೆ.

ಅನುಪಮಾ ಗೌಡ ಅವರು ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಇದಕ್ಕಿಂತ ಮೊದಲು ನನ್ನಮ್ಮ ಸೂಪರ್ ಸ್ಟಾರ್ಸ್ ಮತ್ತು ರಾಜಾ ರಾಣಿ ಶೋ ಸಹ ನಿರೂಪಣೆ ಮಾಡುತ್ತಿದ್ದರು ಅನುಪಮಾ. ಲೈವ್ಲಿ ಆಗಿ ಇವರು ನಿರೂಪಣೆ ಮಾಡುವ ಶೈಲಿ, ಇವರ ಕಾಮಿಡಿ ಟೈಮಿಂಗ್ ಇದೆಲ್ಲವೂ ಸಹ ಜನರಿಗೆ ತುಂಬಾ ಇಷ್ಟ ಆಗಿದೆ. ಮುಂದಿನ ದಿನಗಳಲ್ಲಿ ಇನ್ನು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ, ಹೆಸರು ಮಾಡಬೇಕು ಎಂದು ಅನುಪಮಾ ಗೌಡ ಅವರಿಗೆ ಆಸೆ ಇದೆ. ದೊಡ್ಡ ಮಟ್ಟದಲ್ಲಿ ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಅನ್ನೋ ಕನಸಿನಲ್ಲಿ ಮುಂದಿನ ಹೆಜ್ಜೆಗಳನ್ನು ಇಡುತ್ತಿದ್ದಾರೆ ಅನುಪಮಾ ಗೌಡ.



