ವರ್ಷವೆಲ್ಲ ಕತ್ತೆ ದುಡಿದಂತೆ ದುಡಿದರೂ ಕೂಡ ವರ್ಷಕ್ಕೆ ಕೋಟಿ ಕೋಟಿ ಗಳಿಸುವುದು ಸಾಧ್ಯವೇ ಇಲ್ಲದ ಮಾತು. ಹಾಗೊಂದು ವೇಳೆ ಕೋಟ್ಯಾಧಿಪತಿಯಾಗಲು ಲಾಟರಿ ಹೊಡಿಬೇಕು ಇಲ್ಲಾ ಭಗವಂತನೇ ಭೂಮಿಗಿಳಿದು ಸಾಲ ನೀಡಬೇಕು. ಪರಿಸ್ಥಿತಿ ಹೀಗಿರುವಾಗ ಒಬ್ಬ ಸಾಮಾನ್ಯ ಭಿಕ್ಷುಕ ಕೋಟಿ ಕೋಟಿ ಸಂಪಾದನೆ ಮಾಡಿದ್ದಾನೆ, ಈತನ ತಿಂಗಳ ಸಂಬಳವೇ 60ರಿಂದ 70 ಸಾವಿರ ಅಂದ್ರೆ ನೀವುನಂಬುತ್ತೀರಾ. ನಂಬಲೇ ಬೇಕು ಹೀಗೊಬ್ಬ ಪಶ್ರೀಮಂತ ಭಿಕ್ಷುಕ ಮುಂಬೈನಲ್ಲಿದ್ದಾನೆ. ಈತನ ಆಸ್ತಿ, ಆದಾಯ, ಬಂಗಲೆಯ ಬಗ್ಗೆ ಕೇಳಿದ್ರೆ ನೀವು ಆಶ್ಚರ್ಯ ಪಡೋದು ಗ್ಯಾರಂಟಿ.

ಈ ಶ್ರೀಮಂತ ಭಿಕ್ಷುಕನ ಹೆಸರು ಭರತ್ ಜೈನ್. ಈತ ಕೋಟಿಗೆ ಒಡೆಯ. ತಿಂಗಳಿಗೆ ಈತನ ಆದಾಯ 60 ರಿಂದ 70 ಸಾವಿರ. ಕೇವಲ ಭಿಕ್ಷಾಟನೆ ಮಾತ್ರವಲ್ಲದೇ 30 ಸಾವಿರ ಬಾಡಿಗೆಯೂ ಪಡೆಯುತ್ತಿದ್ದಾನೆ. ಬಡತನದಲ್ಲಿ ಬೆಳೆದ ಈತ ಶಿಕ್ಷಣ ವಂಚಿತ ಆದರೂ ಸದ್ಯ ತನ್ನ ಹೆಂಡತಿ ಮಕ್ಕಳೊಂದಿಗೆ ಐಶಾರಮಿ ಜೀವನ ನಡೆಸುತ್ತಿದ್ದಾನೆ. ಮುಂಬೈನಲ್ಲಿ ಅತೀ ದೊಡ್ಡ ಬಂಗಲೆ ಹೊಂದಿದ್ದು, ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕೊಡಿಸುತ್ತಿದ್ದಾನೆ.
ಮುಂಬೈನಲ್ಲೇ ಹುಟ್ಟಿ ಬೆಳೆದ ಈತ ಚಿಕ್ಕಂದಿನಿಂದಲೀ ಭಿಕ್ಷಾಟನೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ. ಇದರಿಂದಲೇ ಕೋಟ್ಯಾಂತರ ಸಂಪಾದನೆ ಮಾಡಿರುವ ಈತ 1.2 ಕೋಟಿ ಬೆಲೆಯ ಎರಡು ಬೆಡ್ ರೂಂ ಗಳಿರುವ ಪ್ಲಾಟ್ ಖರೀದಿಸಿದ್ದಾನೆ. ಜೊತೆಗೆ ಥಾಣೆಯಲ್ಲಿರುವ ಈತನ ಸ್ವಂತ ಬಾಡಿಗೆ ಕಟ್ಟಡಗಳಿಂದ ತಿಂಗಳಿಗೆ 30 ಸಾವಿರ ಬಾಡಿಗೆ ಪಡೆಯುತ್ತಿದ್ದಾನೆ.
ಈ ಶ್ರೀಮಂತ ಭಿಕ್ಷುಕ ಭರತ್ ಜೈನ್ ದಿನವೊಂದಕ್ಕೆ ಮುಂಬೈನ ಗಲ್ಲಿಗಲ್ಲಿಗಳಲ್ಲಿ 10 ರಿಂದ 12 ಗಂಟೆಗಳ ಕಾಲ ಭಿಕ್ಷಾಟನೆ ಮಾಡಿ ದಿನಕ್ಕೆ 200 ದಿಂದ 2500ರೂ ಸಂಪಾದನೆ ಮಾಡುತ್ತಾನಂತೆ. ಭಿಕ್ಷಾಟನೆಯಿಂದಲೇ ಆಸ್ತಿ, ಬಂಗಲೆ, ಐಶಾರಾಮಿ ವಾಣಿಜ್ಯ ಸಂಕೀರ್ಣಗಳಿಸಿರುವ ಈತ ಇಂದಿಗೂ ಕೂಡ ಭಿಕ್ಷಾಟನೆ ಮಾಡುತ್ತಿದ್ದಾನೆ. ಇದರೊಂದಿಗೆ ದೇಶದ ಶ್ರೀಮಂತ ಭಿಕ್ಷುಕ ಎಂಬ ಹೆಗ್ಗಳಿಕೆ ಇವನದು!



