ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನೆ ಶುರು ಮಾಡಿದವರು ನಟಿ ರಶ್ಮಿಕಾ ಮಂದಣ್ಣ. ಇಂದು ಇವರು ಟಾಲಿವುಡ್, ಬಾಲಿವುಡ್ ಎಂದು ಪ್ಯಾನ್ ಇಂಡಿಯಾ ನಟಿಯಾಗಿ ಹೆಸರು ಮಾಡುತ್ತಿದ್ದಾರೆ. ನಾಳೆ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ2 ಸಿನಿಮಾ ತೆರೆ ಕಾಣುತ್ತಿದೆ. ಈ ಸಿನಿಮಾ ನೋಡೋದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನು ರಶ್ಮಿಕಾ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಕೂಡ ಇದೆ. ರಶ್ಮಿಕಾ ಅವರು ನಾಯಕಿಯಾಗಿ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ಇವರಿಗೆ ಇರುವ ಬೇಡಿಕೆ ಅಂತೂ ಕಡಿಮೆ ಇಲ್ಲ. ಸಕ್ಸಸ್ ನಲ್ಲಿ ಎಂಜಾಯ್ ಮಾಡುತ್ತಿದ್ದ ರಶ್ಮಿಕಾ ಮಂದಣ್ಣ ಇದೀಗ ರಿಲೇಶನ್ಷಿಪ್ ವಿಚಾರಕ್ಕೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ವಿದೇಶಕ್ಕೆ ಹಾರಿದ್ದಾರೆ, ಇವರಿಬ್ಬರ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.
ನಟಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಈ ಪಾತ್ರ ಅವರಿಗೆ ಕರ್ನಾಟಕ ಕ್ರಶ್ ಎಂದು ಹೆಸರನ್ನು ಕೂಡ ತಂದುಕೊಟ್ಟಿತು. ಕಿರಿಕ್ ಪಾರ್ಟಿ ನಂತರ ರಶ್ಮಿಕಾ ಎಂಟ್ರಿ ಕೊಟ್ಟಿದ್ದು ತೆಲುಗಿಗೆ. ಚಲೋ ಸಿನಿಮಾ ಮೂಲಕ ತೆಲುಗಿನಲ್ಲಿ ಪ್ರಯಾಣ ಶುರು ಮಾಡಿದ ರಶ್ಮಿಕಾ ಅವರಿಗೆ ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಸಿಕ್ಕಿತ್ತು. ಚಲೋ ನಂತರ ಗೀತಾ ಗೋವಿಂದಮ್ ನಲ್ಲಿ ಅಭಿನಯಿಸಿದರು. ಆ ಸಿನಿಮಾ ಸಹ ಸೂಪರ್ ಹಿಟ್ ಆಯಿತು. ಬಳಿಕ ರಶ್ಮಿಕಾ ಅವರು ತೆಲುಗು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸಿದರು. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ನಟ ದರ್ಶನ್ ಇವರೊಡನೆ ನಟಿಸಿದರು. ನಂತರ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಹಾಗೆಯೇ ಬಾಲಿವುಡ್ ಗೆ ಕೂಡ ಎಂಟ್ರಿ ಕೊಟ್ಟರು.

ಕಳೆದ ವರ್ಷ ತೆರೆಕಂಡ ಅನಿಮಲ್ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಹೀಗೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಶ್ಮಿಕಾ ಅವರು ಹೆಸರು ಮಾಡಿದ್ದಾರೆ ಜೊತೆಗೆ ಜನಪ್ರಿಯತೆಯನ್ನು ಕೂಡ ಗಳಿಸಿಕೊಂಡಿದ್ದಾರೆ. ಇನ್ನು ಇವರ ಪುಷ್ಪ2 ಮೇಲೆ ಭಾರಿ ನಿರೀಕ್ಷೆ ಇದೆ, ರಶ್ಮಿಕಾ ಅವರನ್ನು ಶ್ರೀವಲ್ಲಿ ಯಾಗಿ ಮತ್ತೆ ನೋಡುವುದಕ್ಕೆ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ವೇಳೆ ರಶ್ಮಿಕಾ ಅವರು ಪರ್ಸನಲ್ ವಿಚಾರದಿಂದ ಹೆಚ್ಚು ಸುದ್ದಿ ಸಹ ಆಗುತ್ತಾರೆ. ವಿಜಯ್ ದೇವರಕೊಂಡ ಅವರೊಡನೆ ರಿಲೇಶನ್ಷಿಪ್ ನಲ್ಲಿರುವ ವಿಚಾರ ಗೊತ್ತೇ ಇದೆ. ಇತ್ತೀಚೆಗೆ ಪುಷ್ಪ2 ಸಿನಿಮಾದ ಪ್ರೀರಿಲೀಸ್ ಈವೆಂಟ್ ನಲ್ಲಿ ರಶ್ಮಿಕಾ ಅವರು ತಾವು ರಿಲೇಶನ್ಷಿಪ್ ನಲ್ಲಿ ಇರುವ ವಿಷಯವನ್ನು ಒಪ್ಪಿಕೊಂಡರು.
ಹಾಗೆಯೇ ವಿಜಯ್ ದೇವರಕೊಂಡ ಅವರು ಸಹ ತಾವು ರಿಲೇಶನ್ಷಿಪ್ ನಲ್ಲಿರುವ ವಿಷಯವನ್ನು ಒಪ್ಪಿದರು, ಅಷ್ಟೇ ಅಲ್ಲದೇ ರೀಸೆಂಟ್ ಆಗಿ ವಿಜಯ್ ರಶ್ಮಿಕಾ ಲಂಚ್ ಡೇಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಫೋಟೋ ಸಹ ವೈರಲ್ ಆಗಿತ್ತು. ಈ ಮೂಲಕ ಇವರು ವಿಜಯ್ ದೇವಡಕೊಂಡ ಅವರೊಡನೆ ಪ್ರೀತಿಯಲ್ಲಿ ಇರುವುದು ಕನ್ಫರ್ಮ್ ಆಗಿದ್ದು, ಮದುವೆ ಯಾವಾಗ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಹಲವು ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಇದೆ. ಹಾಗಾಗಿ ಇವರಿಬ್ಬರು ಲವ್ ಮಾಡುತ್ತಿದ್ದಾರೆ, ಮದುವೆ ಆಗೇ ಆಗುತ್ತಾರೆ ಎನ್ನುವ ಗಾಸಿಪ್ ಗಳು ಕೇಳಿಬಂದರು ಸಹ, ರಶ್ಮಿಕಾ ಅವರು ಇನ್ನು ಪೂರ್ತಿ ಸ್ಪಷ್ಟನೆ ಕೊಟ್ಟಿಲ್ಲ. ಪ್ರಸ್ತುತ ರಶ್ಮಿಕಾ ಅವರ ಫೋಕಸ್ ಪೂರ್ತಿಯಾಗಿ ಅವರ ಕೆರಿಯರ್ ಮೇಲೆ ಇದೆ. ಬ್ಯಾಕ್ ಟು ಬ್ಯಾಕ್ ಬಿಗ್ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ..

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ. ಶಾಹಿದ್ ಕಪೂರ್ ಅವರ ಜೊತೆಗೆ ಕಾಕ್ಟೇಲ್ 2 ಸಿನಿಮಾದಲ್ಲಿ ನಟಿಸಲಿದ್ದಾರೆ, ದೀಕ್ಷಿತ್ ಶೆಟ್ಟಿ ಅವರೊಡನೆ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ನಟಿಸಲಿದ್ದಾರೆ, ರೇನ್ ಬೋ ಸಿನಿಮಾಗೆ ನಾಯಕಿ ಆಗಿದ್ದಾರೆ. ಆಯುಶ್ಮಾನ್ ಖುರಾನ ಅವರೊಡನೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಹೀಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ ಅವರು.. ಇತ್ತೀಚೆಗೆ ಇವರು ಸಲ್ಮಾನ್ ಖಾನ್ ಅವರಿಗೆ ನಾಯಕಿಯಾಗಿ ಸಿಕಂದರ್ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ತೆರೆಕಂಡು ಮಕಾಡೆ ಮಲಗಿತು. ಸಿನಿಮಾ ಮೇಲೆ ಇಟ್ಟಿದ್ದ ನಿರೀಕ್ಷೆ ಎಲ್ಲವೂ ಸುಳ್ಳಾಯ್ತು. ರಶ್ಮಿಕಾ ಅಭಿನಯದ ಮುಂದಿನ ಸಿನಿಮಾ ತೆರೆ ಕಾಣುವುದಕ್ಕೆ ಸಿದ್ಧವಾಗಿದೆ. ಇನ್ನು ಧನುಷ್ ಹಾಗೂ ನಾಗಾರ್ಜುನ ಅವರೊಡನೆ ಕುಬೇರ ಸಿನಿಮಾದಲ್ಲಿ ನಟಿಸಿದ್ದಾರೆ..

ಈ ಸಿನಿಮಾ ಬಗ್ಗೆ ಈಗಾಗಲೇ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು, ಇಂದು ಸಿನಿಮಾ ಬಿಡುಗಡೆ ಆಗಿದೆ. ಇಷ್ಟು ದಿವಸಗಳ ಕಾಲ ರಶ್ಮಿಕಾ ಮಂದಣ್ಣ ಅವರು ಕುಬೇರ ಸಿನಿಮಾ ಪ್ರೊಮೋಷನ್ ಗಳಲ್ಲಿ ಬ್ಯುಸಿ ಆಗಿದ್ದರು. ಬೇರೆ ಬೇರೆ ಊರುಗಳಲ್ಲಿ ಕುಬೇರ ಸಿನಿಮಾ ಪ್ರೊಮೋಷನ್ ನಡೆಯಿತು. ಅದೆಲ್ಲವನ್ನು ಮುಗಿಸಿಕೊಂಡು ಈಗ ರಶ್ಮಿಕಾ ಅವರು ವಿಜಯ್ ದೇವರಕೊಂಡ ಜೊತೆಗೆ ಹೊರದೇಶಕ್ಕೆ ಹಾರಿದ್ದಾರೆ. ಇಬ್ಬರೂ ಜೊತೆ ಇದ್ದಾಗ ರಿಲೇಶನ್ಷಿಪ್ ಬಗ್ಗೆ ಕೇಳಿದರೆ ಏನು ಇಲ್ಲ ಏನು ಇಲ್ಲ ಎಂದೇ ಹೇಳುತ್ತಾರೆ. ಆದರೆ ಈಗ ಜೊತೆ ಜೊತೆಯಾಗಿ ಹೊರದೇಶಕ್ಕೆ ಹಾರಿದ್ದಾರೆ. ಇಬ್ಬರೂ ಒಂದೇ ಕಾರ್ ನಲ್ಲಿ ಏರ್ಪೋರ್ಟ್ ಗೆ ಬಂದು ಇಳಿದಿದ್ದಾರೆ. ಹಾಲಿಡೇ ಗಾಗಿ ಹೊರಟಿದ್ದಾರೆ. ಈ ಫೋಟೋಗಳೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನೆಟ್ಟಿಗರು ಇವರ ಬಗ್ಗೆ ಮಾತನಾಡಿದ್ದು, ಹೀಗೆ ಎಲ್ಲರಿಗೂ ತಮ್ಮ ನಡುವೆ ಏನೂ ಇಲ್ಲ ಎಂದು ಹೇಳಿಕೊಂಡು ಜೊತೆಯಾಗಿ ಓಡಾಡೋದಕ್ಕಿಂತ ಇಬ್ಬರು ಮದುವೆಯಾಗಿ ಬೇಗ ಗುಡ್ ನ್ಯೂಸ್ ಕೊಟ್ಟರೆ ಒಳ್ಳೆಯದು ಅಲ್ವಾ ಎಂದು ಹೇಳುತ್ತಿದ್ದಾರೆ. ಸಿನಿಮಾ ಬಿಡುಗಡೆಗಿಂತ ಮೊದಲೇ ರಶ್ಮಿಕಾ ಹೊರದೇಶಕ್ಕೆ ಹಾರಿದ್ದು, ಕುಬೇರ ಸಿನಿಮಾದ ರಿವ್ಯೂ ಹೇಗೆ ಬರುತ್ತದೆ ಎಂದು ಕಾದು ನೋಡಬೇಕಿದೆ.



