ಆರ್ಸಿಬಿ ಸಂಭ್ರಮಾಚರಣೆ ಈಗಾಗಲೇ ಎಂದೂ ಅಂದುಕೊಳ್ಳದ ಪೆಟ್ಟು ಕೊಟ್ಟಂತಾಗಿದೆ. ಸಂಭ್ರಮ ಮಾಡಲು ಹೋಗಿ ಅಪವಾದ ಹೊತ್ತುಕೊಂಡಂತಾಗಿದೆ ಸರ್ಕಾರ. ೧೧ ಜನರ ದಾರುಣ ಸಾವಿಗೆ ಸರ್ಕಾರವೇ ಹೊಣೆ ಅಂತಿದೆ ವಿಪಕ್ಷ ಹಾಗೂ ರಾಜ್ಯದ ಜನ. ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಸರ್ಕಾರದ ಮಾನ ಮರ್ಯಾದೆ ಹರಾಜು ಆಗಿರೋದಂತೂ ನಿಜ. ಈಗಾಗಲೇ ಇದರ ತೀವ್ರತರವಾದ ಪರಿಣಾಮವನ್ನ ಸರ್ಕಾರ ಅನುಭವಿಸುತ್ತಿದೆ. ಈಗ ಹೈ ಕಮಾಂಡ್ ಕೂಡ ಸರ್ಕಾರದ ವಿರುದ್ಧ ಗರಂ ಆಗಿದೆ.
ಹೌದು, ಆರ್ಸಿಬಿ ಸಂಭ್ರಮಾಚರಣೆ ದುರಂತ ಈಗ ಅನೇಕರ ತಲೆತಂಡವಾಗಿದೆ. ಈಗಾಗಲೇ ಅಧಿಕಾರಿಗಳು, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜುರನ್ನ ಹುದ್ದೆಯಿಂದ ಕೆಳಗಿಳಿಸಿರೋದು ಸೇರಿದಂತೆ ಅನೇಕರ ಹುದ್ದೆ ಈ ಪ್ರಕರಣಕ್ಕೆ ಬಲಿಯಾಗಿದೆ. ಇದರ ಮಧ್ಯೆ ಈ ಪ್ರಕರಣವನ್ನ ತೀವ್ರ ಗಂಭೀರವಾಗಿ ತೆಗೆದುಕೊಂಡಿರೋ ಕಾಂಗ್ರೆಸ್ ಹೈ ಕಮಾಂಡ್ ಸಿಎಂ ಡಿಸಿಎಂ ಗೆ ಬುಲಾವ್ ನೀಡಿದೆ. ಈಗಾಗಲೇ ಡಿಕೆ ಶಿವಕುಮಾರ್ ದೆಹಲಿಯಲ್ಲೇ ಇದ್ದಾರೆ. ನಾಳೆ ಸಿಎಂ ಕೂಡ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.

ರಾಜ್ಯದಲ್ಲಿ ಹಿಂದೆಂದೂ ನಡೆಯದ ರೀತಯ ಘಟನೆ ನಡೆದು ಹೋಗಿದೆ. ಸಂಭ್ರಮ ಮಾಡಲು ಹೋಗಿ ಕೈ ಸುಟ್ಟುಕೊಂಡಿದೆ ಕಾಂಗ್ರೆಸ್. ೧೧ ಜನರ ಸಾವಿಗೆ ಹೊಣೆ ಯಾರು ಅನ್ನೋದು ಸದ್ಯದ ಪ್ರಶ್ನೆ. ಇದರ ಮಧ್ಯೆ ಅಧಿಕಾರಿಗಳ ತಲೆದಂಡ ಕೂಡ ಈಗ ವಿರೋಧಕ್ಕೆ ಕಾರಣವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆ ಸಂಬಂಧ ಸರ್ಕಾರ ಮುಜುಗರ ಅನುಭವಿಸುತ್ತಿದೆ. ಈ ಮಧ್ಯೆ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿರೋ ಕಾಂಗ್ರೆಸ್ ಹೈ ಕಮಾಂಡ್ ಸರ್ಕಾರದ ವಿರುದ್ಧ ಗರಂ ಆಗಿದೆ. ಅಷ್ಟೆ ಅಲ್ಲ ಸಿಎಂ ಡಿಸಿಎಂ ಇಬ್ಬರಿಗೂ ಬುಲಾವ್ ನೀಡಿದೆ. ಅಷ್ಟೆ ಅಲ್ಲ ಘಟನೆ ಸಂಬಂಧ ಇಬ್ಬರಿಗೂ ತಪರಾಕಿ ತೆಗೆದುಕೊಳ್ತಾರೆ ಎನ್ನಲಾಗುತ್ತಿದೆ.
ಸದ್ಯ ಬಾರೀ ಮುಜುಗರ ಜೊತೆಗೆ ವಿರೋಧಕ್ಕೆ ಒಳಗಾಗಿರೋ ಕಾಂಗ್ರೆಸ್ ಸರ್ಕಾರ ಈಗ ಅದು ಡ್ಯಾಮೇಜ್ ಕಂಟ್ರೋಲ್ ಗೂ ಮುಂದಾಗ್ತಾ ಇದೆ. ಅದು ಕೂಡ ಪ್ರಯೋಜನ ಆಗ್ತಾ ಇಲ್ಲ. ಈ ಮಧ್ಯೆ ಹೈ ಕಮಾಂಡ್ ಬುಲಾವ್ ನಂತೆ ನಾಳೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ. ಹೈ ಕಮಾಂಡ್ ಇದನ್ನ ಗಂಭೀರವಾಗಿ ತೆಗೆದುಕೊಂಡಿದ್ದು ಮಾಹಿತಿ ನೀಡುವಂತೆ ಹೇಳಿದೆಯಂತೆ. ಘಟನೆಯಲ್ಲಿ ಸರ್ಕಾರದ ವೈಫಲ್ಯ ಬಗ್ಗೆ ಹೈ ಗರಂ ಆಗಿದ್ದು, ಸಂಪೂರ್ಣ ವರದಿ ಕೇಳಿದ್ದಾರೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ. ಹೀಗಾಗಿ ದೆಹಲಿ ಹೋಗಿ ರಿಪೋರ್ಟ್ ನೀಡಲು ಮುಂದಾಗಿದ್ದಾರೆ ಸಿಎಂ. ಈ ಮಧ್ಯೆ ಡಿ.ಕೆ ಶಿವಕುಮಾರ್ ಯಡವಟ್ಟು ಬಗ್ಗೆಯೂ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ಡಿಕೆ ಶಿವಕುಮಾರ್ ಗೂ ಕೂಡ ಹೈ ಕಮಾಂಡ್ ಬುಲಾವ್ ನೀಡಿದೆ. ಈಗಾಗಲೇ ದೆಹಲಿಯಲ್ಲೇ ಇದ್ದಾರೆ ಡಿಕೆಶಿ. ದೆಹಲಿಯಲ್ಲಿ ವೇಸ್ಟ್ ಮ್ಯಾನೇಜ್ಮೆಂಟ್ ಪರಿಶೀಲನೆಗೆಂದು ತೆರಳಿದ್ದಾರೆ ಡಿಸಿಎಂ. ನಿನ್ನೆಯೇ ದೆಹಲಿಗೆ ತೆರಳಿದ್ದು, ನಾಳೆ ಹೈ ಕಮಾಂಡ್ ಭೇಟಿ ಮಾಡಲಿದ್ದಾರೆ ಡಿಸಿಎಂ. RCB ಸಂಭ್ರಮ ಸಮಾರಂಭ ಸಾವಿನ ಮನೆಯಾಗಿದ್ದು ಹೇಗೆ..? ಯಾಕೆ..? ಎಂಬದರ ಕುರಿತಂತೆ ಮಾಗಿತಿ ನೀಡಲಿದ್ದಾರೆ. ಇತ್ತ ದೆಹಲಿಗೆ ತೆರಳಿದ್ದ ಡಿಕೆಶಿ ಹೈ ಕಮಾಂಡ್ ಬುಲಾವ್ ಗೂ ಮೊದಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ್, ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ ಭೇಟಿ ಮಾಡಲು ತೀರ್ಮಾನ ಮಾಡಿದ್ದರು. ಈಗ ಹೈ ಕಮಾಂಡ್ ಬುಲಾವ್ ನೀಡಿದೆ. ಇದೇ ವೇಳೆ ತಮ್ಮ ಮೇಲಿನ ಆರೋಪದ ಬಗ್ಗೆಯೂ ಸ್ಪಷ್ಟನೆ ನೀಡೋ ಸಾಧ್ಯತೆ ಇದೆ.
ಇನ್ನು ಈಗಾಗಲೇ ವರದಿ ಕೂಡ ಹೈ ಕಮಾಂಡ್ ಕೈ ಸೇರಿದೆ ಎನ್ನಲಾಗಿದೆ. ರಿಪೋರ್ಟ್ ಆಧಾರದ ಮೇಲೆಯೇ ಸಿಎಂ ಹಾಗೂ ಡಿಸಿಎಂರನ್ನ ದೆಹಲಿಗೆ ಕರೆಸಿಕೊಳ್ತಾ ಇದ್ದಾರೆ ರಾಗಾ ಎನ್ನಲಾಗುತ್ತಿದೆ. ಅಂದು ನಡೆದ ಪ್ರತಿಯೊಂದು ವಿಷಯದ ಬಗ್ಗೆ ವರದಿ ಸಲ್ಲಿಸಿದ್ದಾರಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ. ಇನ್ನು ನಗರ ಪೊಲೀಸ್ ಅಯುಕ್ತರ ಸಸ್ಪೆಂಡ್ ಸರ್ಕಾರಕ್ಕೆ ಬಾರೀ ಡ್ಯಾಮೇಜ್ ಆಗಿದೆ. ಕಮಿಷನರ್ ಸಾರ್ವಜನಿಕವಾಗಿ ಒಳ್ಳೆಯ ಇಮೇಜ್ ಇದ್ದ ಆಫೀಸರ್. ಅವರನ್ನ ಇವರು ಸಸ್ಪೆಂಡ್ ಮಾಡಿ ಸರ್ಕಾರಕ್ಕೆ ವಾರೀ ಕೆಟ್ಟ ಹೆಸರಿಗೆ ಕಾರಣವಾಗಿದೆ ಎಂದು ಉಲ್ಲೇಖ ಎಂಬ ಮಾಹಿತಿ ಎಐಸಿಸಿ ನಾಯಕರಿಗೆ ಇದೆ ಎನ್ನಲಾಗಿದೆ.
ಈಗಾಗಲೇ ದಿನದಿಂದ ದಿನಕ್ಕೆ ಕಾಲ್ತುಳಿತದ ಸಾವಿನ ಪ್ರಕರಣ ಹೊಸ ಹೊಅ ಟ್ವಿಸ್ಟ್ ಪಡೆಯೋದರ ಜೊತೆ ಜೊತೆಗೆ ಇನ್ನೂ ಅನೇಕರ ತಲೆ ದಂಡ ಕೂಡ ಆಗುವ ಸಾಧ್ಯತೆಗಳು ಇವೆ. ಈಗಾಗಲೇ ಬಾರೀ ಸಿಟ್ಟಲ್ಲೇ ನಾಯಕರಿಗೆ ಬರಲು ಹೇಳಿರುವ ಹೈ ಕಮಾಂಡ್ ಯಾರ ತಲೆ ದಂಡಕ್ಕೆ ಸೂಚಿಸುತ್ತೋ ಗೊತ್ತಿಲ್ಲ. ಹೀಗಾಗಿ ಹೈ ಕಮಾಂಡ್ ಈ ವಿಚಾರದಲ್ಲಿ ಏನು ಕ್ರಮ ತೆಗೆದುಕೊಳ್ಳುತ್ತೆ ಅಂತ ಕಾದು ನೋಡಬೇಕು.



