ಬಾಲಿವುಡ್ ನ ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಕಳ್ಳತನ ಮಾಡಲು ಬಂದ ಕಳ್ಳರು, ನಟನ ಮೇಲೆ ಹಲ್ಲೆ ನಡೆಸಿದ್ದು, ಸೈಫ್ ಅಲಿ ಖಾನ್ ಅವರು ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ಅಲಿ ಖಾನ್ ಅವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಅವರ ಆರೋಗ್ಯದ ಬಗ್ಗೆ ಇನ್ನೂ ಪೂರ್ತಿಯಾದ ಮಾಹಿತಿ ಸಿಕ್ಕಿಲ್ಲ. ಆದರೆ ವೈದ್ಯರು ತಿಳಿಸಿರುವ ಮಾಹಿತಿ ನೋಡಿದರೆ, ಸೈಫ್ ಅಲಿ ಖಾನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಬಹಳಷ್ಟು ಸೆಕ್ಯೂರಿಟಿ ಇದ್ದರೂ ಸಹ ಈ ರೀತಿಯ ಘಟನೆ ನಡೆದಿರುವುದು ಕಲಾವಿದರು ಭಯ ಹುಟ್ಟಿಸದೆ ಇರದು.

ಬಾಲಿವುಡ್ ನ ಸ್ಟಾರ್ ಹೀರೋ ಅಥವಾ ಯಾವುದೇ ಸೆಲೆಬ್ರಿಟಿ ಎಂದರು ಸಹ ಅವರಿಗೆ ಒಳ್ಳೇ ಹೆಸರು, ಅಂತಸ್ತು ಎಲ್ಲವೂ ಇರುತ್ತದೆ. ಮನೆಗೆ ಸೆಕ್ಯೂರಿಟಿ ಕೂಡ ಇರುತ್ತದೆ. ಅದೆಲ್ಲವೂ ಇದ್ದರೂ ಕೂಡ ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಈ ರೀತಿಯ ಘಟನೆ ನಡೆದಿರುವುದು ದುರದೃಷ್ಟಕರ. ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಕಳ್ಳತನ ಮಾಡಲು, ಕೆಲವು ಕಳ್ಳರು ಬಂದಿದ್ದು, ಮಧ್ಯರಾತ್ರಿ 2:30ರ ವೇಳೆ ಮನೆಯಲ್ಲಿ ಸಿಬ್ಬಂದಿಗಳ ಜೊತೆಗೆ ಕಳ್ಳರ ಸದ್ದು ಆಗುತ್ತಿದ್ದನ್ನು ಕೇಳಿಸಿಕೊಂಡ ಸೈಫ್ ಅಲಿ ಖಾನ್ ಅವರು, ಏನಾಗಿದೆ ಎಂದು ನೋಡುವುದಕ್ಕೆ ಬಂದಾಗ, ಕಳ್ಳರನ್ನು ನೋಡಿ ವಿಚಾರಿಸಲು ಹೋಗಿದ್ದಾರೆ.
ನಟನನ್ನು ನೋಡಿ, ಅವರು ವಿಚಾರಿಸಲು ಬಂದ ತಕ್ಷಣವೇ ಕಳ್ಳರು ಎರಡು ಚಾಕುಗಳಿಂದ ಸೈಫ್ ಅಲಿ ಖಾನ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ನಿನ್ನೆ ಮಧ್ಯರಾತ್ರಿ 3;30ರ ವೇಳೆಗೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಮಾಹಿತಿ ಸಿಕ್ಕಿದ್ದು, ವೈದ್ಯರು ಇಂದು ಬೆಳಗ್ಗೆ ಸೈಫ್ ಅಲಿ ಖಾನ್ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದು, ಪದೇ ಪದೇ ಸುಮಾರು 6 ಬಾರಿ ಸೈಫ್ ಅಲಿ ಖಾನ್ ಅವರನ್ನು ಇರಿಯಲಾಗಿಫ್ ಎಂದು ಹೇಳಿದ್ದು, ಬೆನ್ನು ಮೂಳೆ ಸೇರಿದಂತೆ ದೇಹದ ಆರು ಕಡೆಗಳಲ್ಲಿ ಇರಿ*ತವಾಗಿದೆ. ಸಧ್ಯಕ್ಕೆ ಅವರಿಗೆ ಚಿಕಿತ್ಸೆ ಕೊಡುತ್ತಿದ್ದು, ಜೊತೆಗೆ ಸರ್ಜರಿ ನಡೆಸಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಸೈಫ್ ಅಲಿ ಖಾನ್ ಅವರಿಗೆ ಆಗಿರುವ ಈ ಘಟನೆ ಭಾರತ ಚಿತ್ರೋದ್ಯಮಕ್ಕೆ ದೊಡ್ಡ ಶಾಕ್ ಎಂದು ಹೇಳಿದರು ತಪ್ಪಲ್ಲ. ಮನೆಯಲ್ಲಿ ಆಧುನಿಕ ಸೆಕ್ಯೂರಿಟಿ ಸಿಸ್ಟಮ್ ಇದ್ದರು ಸಹ ಕಳ್ಳರು ಬರುವುದು, ಈ ರೀತಿ ಮಾಡುವುದು ಇದೆಲ್ಲವೂ ದೊಡ್ಡ ಶಾಕ್. ಭಯ ಹುಟ್ಟಿಸುವಂಥ ವಿಷಯ ಸಹ ಹೌದು. ಹಲವು ಕಲಾವಿದರು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸೈಫ್ ಅಲಿ ಖಾನ್ ಅವರು ಬೇಗ ಹುಷಾರಾಗಿ ಬರಲಿ ಎಂದು ವಿಶ್ ಮಾಡಿದ್ದಾರೆ. ಕರೀನಾ ಕಪೂರ್ ಅವರು ಸೇರಿದಂತೆ ಕುಟುಂಬದವರು ಸೈಫ್ ಅಲಿ ಖಾನ್ ಅವರನ್ನು ಹುಷಾರಾಗಿ ನೋಡಿಕೊಳ್ಳುತ್ತಿದ್ದಾರೆ. ನಟ ಸಧ್ಯಕ್ಕೆ ಆಸ್ಪತ್ರೆಯಲ್ಲೇ ಇದ್ದಾರೆ.
ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಲ್ಲಿ ಇರುವ ಈ ವೇಳೆ, ಅವರ ಮಗಳು ಸಾರಾ ಅಲಿ ಖಾನ್, ಮಗ ಹಾಗೂ ಅವರ ಸಹೋದರಿ ಸೇರಿದಂತೆ ಕುಟುಂಬದ ಎಲ್ಲರೂ ಸಹ ಆಸ್ಪತ್ರೆಗೆ ಬಂದು ಸೈಫ್ ಅಲಿ ಖಾನ್ ಅವರನ್ನು ನೋಡಿಕೊಂಡು ಹೋಗಿದ್ದಾರೆ. ಕುಟುಂಬದ ಕೆಲವು ಸದಸ್ಯರು ಆಸ್ಪತ್ರೆಯಲ್ಲೇ ಇದ್ದಾರೆ. ಚಿತ್ರರಂಗದ ಕೆಲವು ಕಲಾವಿದರು ಸಹ ಇವರನ್ನು ನೋಡಿ ಯೋಗ ಕ್ಷೇಮ ವಿಚಾರಿಸುವುದಕ್ಕೆ ಬಂದಿದ್ದು, ನಟ ಜ್ಯುನಿಯರ್ ಎನ್ಟಿಆರ್, ಪೂಜಾ ಹೆಗ್ಡೆ ಸೇರಿದಂತೆ ಹಲವು ಕಲಾವಿದರು ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ತನಿಖೆ ಆಗಬೇಕು, ಸೇಫ್ಟಿ ಇರಬೇಕು ಎಂದು ಆಗ್ರಹಿಸಿದ್ದಾರೆ.