ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಹಂತ ತಲುಪಿದೆ. ಈ ಶೋ ಮುಗಿಯಲು ಉಳಿದಿರುವುದು ಇನ್ನು 2 ವಾರಗಳು ಮಾತ್ರ. ಬಿಗ್ ಬಾಸ್ ಶೋ ನಲ್ಲಿ ಈ ವಾರ ಟಿಕೆಟ್ ಟು ಫಿನಾಲೆ ಟಾಸ್ಕ್ ಇತ್ತು. ಪ್ರಸ್ತುತ ಇರುವ 9 ಸ್ಪರ್ಧಿಗಳ ಪೈಕಿ ಒಬ್ಬರಿಗೆ ಡೈರೆಕ್ಟ್ ಫಿನಾಲೆ ಟಿಕೆಟ್ ಸಿಗುತ್ತದೆ ಎನ್ನಲಾಗಿತ್ತು, ಎಲ್ಲಾ ಸ್ಪರ್ಧಿಗಳು ಇದಕ್ಕಾಗಿ ಉತ್ತಮವಾಗಿ ಪರ್ಫಾರ್ಮ್ ಮಾಡುವ ಪ್ರಯತ್ನ ಮಾಡಿದರು. ಈ ವಾರ ಫಿನಾಲೆ ಟಿಕೆಟ್ ಸಿಕ್ಕಿರುವುದು ಹನುಮಂತ ಅವರಿಗೆ. ಆದರೆ ಉಗ್ರಂ ಮಂಜು ಅವರ ವಿಚಾರದಲ್ಲಿ ವೀಕ್ಷಕರಿಗೆ ಹಾಗೂ ಸ್ವತಃ ಉಗ್ರಂ ಮಂಜು ಅವರಿಗೆ ಬೇಸರ ಆಗಿದೆ. ಟಿಕೆಟ್ ಟು ಫಿನಾಲೆ ಗೆಲ್ಲಬೇಕು ಎಂದುಕೊಂಡಿದ್ದವರು, ಕಳಪೆ ಪಡೆದು ಜೈ*ಲು ಸೇರಿದ್ದಾರೆ.
ಬಿಗ್ ಬಾಸ್ ಜರ್ನಿ ಶುರುವಾದಾಗಿನಿಂದ ಮಂಜು ಹಾಗೂ ಗೌತಮಿ ಇಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿದ್ದರು. ಇವರ ಜೊತೆಗೆ ಮೋಕ್ಷಿತಾ ಸಹ ಇದ್ದರು, ಆದರೆ ಮೋಕ್ಷಿತಾ ಯಾಕೋ ಇದೆಲ್ಲವೂ ಸರಿ ಹೋಗುತ್ತಿಲ್ಲ ಎಂದು ಭಾವಿಸಿ, ಇವರಿಬ್ಬರಿಂದ ದೂರವೇ ಉಳಿದು, ತಾವು ಒಬ್ಬಂಟಿಯಾಗಿ ಆಡುವುದಕ್ಕೆ ಶುರು ಮಾಡಿದರು. ಆದರೆ ಮಂಜು ಹಾಗೂ ಗೌತಮಿ ಮಾತ್ರ ಜೊತೆಯಾಗಿದ್ದರು, ಈ ಫ್ರೆಂಡ್ಶಿಪ್ ಇಂದ ಮಂಜು ಅವರಿಗೆ ಸಹಾಯ ಆಗಿದ್ದಕ್ಕಿಂತ ಅವರು ಕೆಳಗೆ ಹೋಗಿದ್ದೆ ಹೆಚ್ಚು. ಸುದೀಪ್ ಅವರು ಸಹ ನಿಮಗೋಸ್ಕರ ನೀವು ಆಡಿ ಎಂದು ಎಷ್ಟು ಸಾರಿ ಎಚ್ಚರಿಸುವ ಪ್ರಯತ್ನ ಮಾಡಿದರು ಸಹ ಮಂಜು ಅವರಿಗೆ ಅದು ಅರ್ಥವಾಗಲಿಲ್ಲ ಗೌತಮಿ ಅವರ ಜೊತೆಯಲ್ಲೇ ಇದ್ದರು.

ಆದರೆ ಫ್ಯಾಮಿಲಿ ರೌಂಡ್ ನಲ್ಲಿ ಇವರಿಬ್ಬರ ಕುಟುಂಬ ಸಹ, ದೂರ ಇರಬೇಕು ಎಂದು ಹೇಳಿತು. ಮಂಜು ಅವರ ತಂಗಿ ಈಗ ನಿನ್ನ ಬಳಿ ಹೆಚ್ಚು ಸಮಯ ಇಲ್ಲ, ನಿನ್ನ ಆಟವನ್ನ ನೀನು ಆಡಬೇಕು ಬೇರೆಯವರ ವಿಚಾರ ಬಿಡು, ಆ ಫ್ರೆಂಡ್ಶಿಪ್ ಇಂದ ನೀನು ಹೊರಗಡೆ ಬರಬೇಕು, ನಿನ್ನ ಪ್ರತಿಭೆಯನ್ನ ನೀನು ತೋರಿಸಿಕೊಂಡೇ ಇಲ್ಲ ಎಂದು ಹೇಳಿ ಗೌತಮಿ ಅವರಿಂದ ದೂರ ಇರಬೇಕು ಎಂದು ಮಂಜು ಅವರಿಂದ ಪ್ರಾಮಿಸ್ ಸಹ ತೆಗೆದುಕೊಂಡರು. ಗೌತಮಿ ಅವರ ಪತಿ ಕೂಡ ಹೇಳಿದ್ದು ಇದೇ ಮಾತು. ನಿನ್ನ ಆಟವನ್ನು ನೀನು ಆಡು, ಬೇರೆಯವರ ವಿಷಯವನ್ನು ಬಿಟ್ಟುಬಿಡು ಎಂದು ಹೇಳಿ, ಗೌತಮಿ ಅವರು ಮುಂದೆ ಹೇಗೆ ಆಡಬೇಕು ಎಂದು ಸಲಹೆ ನೀಡಿದರು.

ಮನೆಯವರು ಹೇಳಿದ ಇವರಿಬ್ಬರು ಫ್ರೆಂಡ್ಶಿಪ್ ಅನ್ನು ಬಿಟ್ಟರು ಸಹ, ಟಾಸ್ಕ್ ಗಾಗಿ ಮತ್ತೆ ಜೊತೆಯಾಗಿದ್ದರು. ಟಿಕೆಟ್ ಟು ಫಿನಾಲೆ ಟಾಸ್ಕ್ ನಲ್ಲಿ ಇಬ್ಬರು ಒಂದೇ ತಂಡದಲ್ಲಿ ಇದ್ದರು, ಈ ವಾರ ನೀಡಿದ ನೀರಿನ ಟಾಸ್ಕ್ ನಲ್ಲಿ ಗೌತಮಿ ಅವರು ನಾನು ಒಳಗೆ ಹೋಗುತ್ತೇನೆ, ನೀವು ಹೊರಗಡೆ ಇದ್ದು ನೀರನ್ನು ಹೊರ ತೆಗೆಯಿರಿ ಎಂದು ಹೇಳಿದರೂ ಮಂಜು ಅವರು ಕೇಳಲಿಲ್ಲ, ನಾನೇ ಒಳಗಡೆ ಹೋಗುತ್ತೇನೆ ಎಂದರು ಗೌತಮಿ ಅವರು ಮತ್ತೆ ಬೇಡ ಎಂದರೂ ಕೇಳದೆ, ನಾನು ಸಾಯೋದಿಲ್ಲ ಬದುಕುತ್ತೇನೆ ಎಂದು ಹೇಳಿ, ಒಳಗಡೆ ಹೋದ ಮಂಜು, ಹೆಚ್ಚು ಹೊತ್ತು ನೀರಿನಲ್ಲಿ ಇರಲು ಆಗದೇ ಹೊರಬಂದರು. ಇದರಿಂದ ಟಾಸ್ಕ್ ಸೋತರು.
ಟಾಸ್ಕ್ ಸೋತು ಟಿಕೆಟ್ ಟು ಫಿನಾಲೆ ಟಾಸ್ಕ್ ಇಂದ ಹೊರಗಡೆ ಇರುವ ಹಾಗೆ ಆಗಿದ್ದು, ಗೌತಮಿ ಅವರಿಗೆ ತುಂಬಾ ಬೇಸರ ಆಗಿದೆ. ಬಾತ್ ರೂಮ್ ಗೆ ಹೋಗಿ ಕಣ್ಣೀರು ಹಾಕಿದ ಗೌತಮಿ, ಕರ್ಮ ರಿಟರ್ನ್ಸ್ ಅಂತ ಇದಕ್ಕೆ ಹೇಳೋದು ಎಂದರು. ಹಾಗೆಯೇ ಈ ವಾರ ಕಳಪೆ ಸಹ ಮಂಜು, ಮನೆಯ ಎಲ್ಲಾ ಸದಸ್ಯರ ಬಾಯಲ್ಲಿ ಕಳಪೆ ಪ್ರದರ್ಶನ ಎಂದು ಒಮ್ಮತವಾಗಿ ಬಂದ ಹೆಸರು ಮಂಜು. ಗೌತಮಿ ಸಹ ತಮ್ಮ ಫ್ರೆಂಡ್ ಹೆಸರನ್ನೇ ತೆಗೆದುಕೊಂಡರು. ಒಟ್ಟಿನಲ್ಲಿ ಮಂಜಣ್ಣ ಫ್ರೆಂಡ್ಶಿಪ್ ಎಂದು ನಂಬಿ ಹೋಗಿ, ತಮ್ಮ ಸ್ಥಾನವನ್ನ ಕೆಳಗೆ ಇಳಿಸಿಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ, ಇವರು ಫಿನಾಲೆ ತಲುಪುತ್ತಾರ ಅನ್ನೋದೇ ಡೌಟ್ ಎಂದು ಹೇಳಬಹುದು.



