ನಾವೆಲ್ಲಾ ಚಿಕ್ಕವರಿದ್ದಾಗ ಅಮ್ಮ ನಮ್ಮನ್ನು ಕಂಕುಳಲ್ಲಿ ಇಟ್ಟುಕೊಂಡು ಹೊರಗಡೆ ಸುತ್ತಾಡಿಸುವುದು, ತುತ್ತು ಮಾಡಿ ತಿನ್ನಿಸುವುದನ್ನು ಮಾಡಿರುತ್ತಾರೆ. ಎಲ್ಲಾದರೂ ಹೋಗಬೇಕಾದರೆ ನಮ್ಮನ್ನು ಬಗಲಲ್ಲಿಟ್ಟುಕೊಂಡು ಹೊತ್ತು ನಡೆದರೇನೇ ಖುಷಿ. ಮಗುವಾಗಿದ್ದಾಗ ಕಾಲ ಮೇಲೆ ನಿಲ್ಲಲು ಕಲಿಸುವ ತಂದೆ-ತಾಯಿ, ದೊಡ್ಡವರಾದಂತೆ ನಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವ ತನಕ ಅಂದರೆ ನೆಲೆ ನಿಲ್ಲುವ ತನಕ ಜೊತೆಗಿರುತ್ತಾರೆ. ಹೀಗೆ ಬಾಲ್ಯದಲ್ಲಿ ಎಲ್ಲ ಸುಖ-ದುಃಖದಲ್ಲೂ ಭಾಗಿಯಾಗುವ ಅವರನ್ನು ವಯಸ್ಸಾದ ಕಾಲದಲ್ಲಿ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಅವರ ಋಣವನ್ನು ತೀರಿಸಲು ಎಲ್ಲರಿಗೂ ಸಾಧ್ಯವಾಗದಿದ್ದರೂ ಪ್ರತಿಯೊಬ್ಬ ವೃದ್ಧ ಪೋಷಕರಿಗೆ ಮಕ್ಕಳ ಬೆಂಬಲ ಬೇಕು. ನಮ್ಮ ಬಾಲ್ಯದಲ್ಲಿ ನಮಗೆ ಅವರ ಅಗತ್ಯವಿದ್ದಂತೆ, ವಯಸ್ಸಾದ ಕಾಲಕ್ಕೆ ಅವರಿಗೆ ನಮ್ಮ ಅಗತ್ಯತೆ ಇರುತ್ತದೆ.
ದೇವಸ್ಥಾನಕ್ಕೆ ಕರೆತಂದ ಪುತ್ರ
ಇಲ್ಲೋರ್ವ ಪುತ್ರ ತನ್ನ ತಾಯಿಯ ಪ್ರೀತಿಯ ಋಣ ತೀರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದನ್ನು ನೋಡಿದವರೆಲ್ಲರೂ “ಅವರಿಂದ ನಾವೆಲ್ಲಾ ಕಲಿಯಬೇಕು, ನಮ್ಮ ತಂದೆ ತಾಯಿಗಳು ಬಾಲ್ಯದಲ್ಲಿ ನಮ್ಮ ಸೇವೆ ಮಾಡಿ ನಮ್ಮನ್ನು ಬೆಳೆಸಿದಂತೆಯೇ, ಅವರ ವೃದ್ಧಾಪ್ಯದಲ್ಲಿ ಅವರ ಸೇವೆ ಮಾಡಿ ಅವರನ್ನು ನೋಡಿಕೊಳ್ಳಬೇಕು ಎನ್ನುತ್ತಿದ್ದಾರೆ”. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಧ್ಯವಯಸ್ಕನೊಬ್ಬ ತನ್ನ ತಾಯಿಯನ್ನು ಮಗುವಿನಂತೆ ದೇವಸ್ಥಾನಕ್ಕೆ ಕರೆತಂದು ದೇವರ ದರ್ಶನ ಮಾಡುತ್ತಿರುವುದು ಕಂಡು ಬರುತ್ತಿದೆ. ಆ ವ್ಯಕ್ತಿಯ ತಾಯಿಗೆ ತುಂಬಾ ವಯಸ್ಸಾಗಿದೆ. ವಯಸ್ಸಾದ ಈ ಹಂತದಲ್ಲಿ ನಡೆದಾಡಲು ಸಾಧ್ಯವಾಗದ ಕಾರಣ ಮಗ ತಾಯಿಯನ್ನು ಬಗಲಲ್ಲಿಟ್ಟುಕೊಂಡು ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದಾನೆ.
बेटे ने अपनी माँ को अपनी गोद में
बच्चे की तरह उठाकर भगवान के दर्शन करवाए pic.twitter.com/KJJjBke9UY
— ज़िन्दगी गुलज़ार है ! (@Gulzar_sahab) November 15, 2024
ವಿಡಿಯೋ ನೋಡಿ ಭಾವುಕರಾದ ಜನ
ಈಗ ಈ ವಿಡಿಯೋ ನೋಡಿದ ಜನರು ಭಾವುಕರಾಗಿದ್ದಾರೆ. ವಿಡಿಯೋ ಕೆಲವರಿಗೆ ತಂದೆ-ತಾಯಿಯ ಸೇವೆ ಮಾಡಲು ಪ್ರೇರೇಪಿಸಿದಂತಾಗಿದೆ. ಈ ಘಟನೆಯು ಒಬ್ಬ ವ್ಯಕ್ತಿಯು ತನ್ನ ತಾಯಿಯ ಬಗ್ಗೆ ಹೊಂದಿರುವ ಆಳವಾದ ಗೌರವ, ಪ್ರೀತಿ ಮತ್ತು ಗೌರವವನ್ನು ಪ್ರತಿಬಿಂಬಿಸುತ್ತದೆ. ಯಾರೇ ಆಗಲಿ ತಮ್ಮ ಜೀವನದಲ್ಲಿ, ವಿಶೇಷವಾಗಿ ವೃದ್ಧಾಪ್ಯದಲ್ಲಿ ತಂದೆ-ತಾಯಿಯ ಸೇವೆ ಮಾಡುವುದರಿಂದ ಸಮಾಜಕ್ಕೂ ಮಾದರಿಯಾಗುತ್ತಾರೆ. ತಾಯಿಯನ್ನು ತನ್ನ ಬಗಲಲ್ಲಿ ಕೂರಿಸಿಕೊಂಡು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವುದು ವ್ಯಕ್ತಿಯು ತನ್ನ ಕರ್ತವ್ಯ ಮತ್ತು ಭಾವನಾತ್ಮಕ ಸಂಬಂಧವನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ತೋರಿಸುತ್ತದೆ. ಅಂತಹ ಭಾವನೆಗಳು ಪ್ರತಿಯೊಬ್ಬರ ಹೃದಯವನ್ನು ಮುಟ್ಟುತ್ತವೆ ಮತ್ತು ನಮ್ಮ ಜೀವನದಲ್ಲಿ ಪೋಷಕರಿಗೆ ಉನ್ನತ ಸ್ಥಾನವಿದೆ ಎಂದು ನಮಗೆ ನೆನಪಿಸುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಈ ಭಾವನಾತ್ಮಕ ವಿಡಿಯೋವನ್ನು ಸಾಮಾಜಿಕ ತಾಣ X ನಲ್ಲಿ @Gulzar_sahab ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ 37 ಸಾವಿರ ಮಂದಿ ವಿಡಿಯೋ ವೀಕ್ಷಿಸಿದ್ದು, 3400 ಮಂದಿ ಲೈಕ್ ಮಾಡಿದ್ದಾರೆ. ಕಾಮೆಂಟ್ ಬಾಕ್ಸ್ನಲ್ಲಿಯೂ ತಾಯಿಯ ಬಗ್ಗೆ ಆಳವಾದ ಗೌರವ, ಪ್ರೀತಿ ಮತ್ತು ಗೌರವದ ಮಾತುಗಳೇ ತುಂಬಿ ಹೋಗಿವೆ.