ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಳ್ಳಿಯಲ್ಲಿರುವ ಕೋಡಿ ಮಠದಲ್ಲಿ ಮಾತನಾಡಿದ ಅವರು,ಶನಿವಾರ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು,ಕಾರ್ತಿಕ ಮಾರ್ಗಶಿರ ಮಧ್ಯ ಭಾಗದಿಂದ ಜನವರಿ 23ರ ವರೆಗೂ ಕಂಠಕ ಎದುರಾಗಲಿದೆ. ಕಾರ್ತಿಕದಿಂದ ಜನವರಿವರೆಗೂ ಮೂರು ತಿಂಗಳ ಕಾಲ ಕಂಟಕ ಎದುರಾಗಲಿದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ರಾಜ ಬೀದಿಯ ವಿವರಣೆ ನೀಡಲಿಲ್ಲ. ಜಾಗತಿಕವಾಗಿ ಬಾಂಬ್ ಗಳು , ಭೂಕಂಪ, ಯದ್ಧ ಭೀತಿ ಇದೆ. ಇದು ಕೇವಲ ಜಗತ್ತಿಗೆ ಸಂಬಂಧಿಸಿದ್ದಲ್ಲ, ದೇಶಿಯಾಗಿ ಕೆಲವೊಂದು ಕಂಟಕಗಳಿವೆ ಎಂದು ಹೇಳಿದ್ದಾರೆ.ರಾಜಭೀತಿ, ಭೂ ಕಂಟಕ, ಪ್ರದೇಶ, ಪ್ರಾಕೃತಿಕ ಕಂಟಕ, ಬಾಂಬ್, ಯುದ್ಧಭೀತಿ, ಭೂ ಕಂಪನ ಆಗಬಹುದು ಎಂದರು.
ಜನರು ನಿಯಂತ್ರಣ ಕಳೆದುಕೊಂಡು ಹುಚ್ಚರಾಗಬಹುದು, ದಾರಿ ಒಳಗೆ ಬಿದ್ದು ಸಾಯಬಹುದು, ದೇಹ ಶಕ್ತತೆ ಕಳೆದುಕೊಳ್ಳುವಂತ ವಿಚಾರ ಇದೆ… ಜಾಗತಿಕ ದೋಷ, ರಾಷ್ಟ್ರ ದೋಷವೂ ಇದೆ… ಹಾಗಾಗಿ ಎರಡ್ಮೂರು ತಿಂಗಳ ಕಾಲ ದೈವಾರಾಧನೆಯಲ್ಲಿ ಇರುವುದು ಮುಖ್ಯ ಎಂದು ಕೋಡಿಶ್ರೀಗಳು ತಿಳಿಸಿದರು. ಕಾರ್ತಿಕದರೆಗೂ ಮಳೆ ಇರಲಿದೆ ಎಂದರು.



