ನಿವೇದಿತಾ ಗೌಡ ಮದುವೆಯಾಗಿ, ವಿಚ್ಛೇದನ ಪಡೆದ ನಂತರ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇವರ ಪೋಸ್ಟ್ ಮಾಡುತ್ತಿರುವ ಕಾಂಟೆಂಟ್ ಗಳು ಸಹ ಅದೇ ರೀತಿ ಇದೆ ಎಂದರೆ ತಪ್ಪಲ್ಲ. ಇದೀಗ ನಿವೇದಿತಾ ಗೌಡ ಅವರು ತಮ್ಮ ಫ್ರೆಂಡ್ ಜೊತೆಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರು ಈ ವಿಡಿಯೋ ನೋಡಿ ನಿವೇದಿತಾ ಗೌಡ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂಥದ್ದು ಏನಿದೆ? ನಿವೇದಿತಾ ಗೌಡ ಅವರು ಈ ರೀತಿ ಟ್ರೋಲ್ ಆಗುತ್ತಿರೋದು ಯಾಕೆ? ಪೂರ್ತಿ ಡೀಟೇಲ್ಸ್ ತಿಳಿಸಿಕೊಡುತ್ತೇವೆ ನೋಡಿ..
ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಇವರು ಆಗಾಗ ರೀಲ್ಸ್ ಶೇರ್ ಮಾಡುತ್ತಾರೆ, ಫೋಟೋಶೂಟ್ ಮಾಡಿಸಿ ಅವುಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ. ನಿವೇದಿತಾ ಗೌಡ ಅವರ ಮಾಡರ್ನ್ ಲುಕ್ ಗೆ ಸಿಕ್ಕಾಪಟ್ಟೆ ಟ್ರೋಲ್ ಅಗೋದಂತೂ ನಿಜ. ಜನರು ಬಾಯಿಗೆ ಬಂದ ಹಾಗೆ ಪ್ರಶ್ನೆ ಮಾಡುತ್ತಿರುತ್ತಾರೆ, ಇರಕ್ಕೆ ವಿಚ್ಛೇದನ ತಗೊಂಡಿದ್ದಾ ನೀವು ಕೂಡ ಪ್ರಶ್ನೆ ಮಾಡುತ್ತಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿವೇದಿತಾ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಒಂದಲ್ಲಾ ಒಂದು ರೀಲ್ಸ್ ಶೇರ್ ಮಾಡುತ್ತಲೇ ಇರುತ್ತಾರೆ.
ಇತ್ತೀಚೆಗೆ ಇವರು ತಮ್ಮ ಫ್ರೆಂಡ್ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ ರೀಲ್ಸ್ ಶೇರ್ ಮಾಡಿದ್ದು, ಮೊನ್ನೆಯಷ್ಟೇ ಇಬ್ಬರೂ ಬೆಡ್ ರೂಮ್ ನಲ್ಲಿ ನಿಂತು ಡ್ಯಾನ್ಸ್ ಮಾಡಿದ್ದರು, ಇದೀಗ ಬಾತ್ ರೂಮ್ ನಲ್ಲಿ ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಗುತ್ತಿರುವ ಆಡಿಯೋ ಗಳಿಗೆ ಫ್ರೆಂಡ್ ಜೊತೆಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ ನಿವೇದಿತಾ ಗೌಡ. ಇದೀಗ ಈ ವಿಡಿಯೋ ವೈರಲ್ ಆಗಿದೆ, ಆದರೆ ವೈರಲ್ ಆಗಿರೋದು ಪಾಸಿಟಿವ್ ಆಗಿ ಅಲ್ಲ, ಬದಲಾಗಿ ನೆಗಟಿವ್ ಆಗಿ ವೈರಲ್ ಆಗಿದೆ. ನೆಟ್ಟಿಗರು ನಿವೇದಿತಾ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಬೇರೆ ರೀತಿಯಲ್ಲೇ ಮಾತನಾಡುತ್ತಿದ್ದಾರೆ.
ಹೇಳೋಕೆ,ಕೇಳೋಕೆ ಯಾರು ಇಲ್ಲ, ಅದಕ್ಕೆ ಈ ರೀತಿ ಆಡ್ತಿರೋದು ಎನ್ನುತ್ತಿದ್ದಾರೆ ನೆಟ್ಟಿಗರು, ಇನ್ನಷ್ಟು ಜನರು ಈ ರೀತಿ ಕಂಡ ಕಂಡವರ ಜೊತೆಗೆ ಅದರಲ್ಲೂ ಹುಡುಗಿಯ ಜೊತೆಗೆ ಈ ರೀತಿ ಆಡೋದಕ್ಕೆ ಚಂದನ್ ಶೆಟ್ಟಿ ಅಂಥ ಒಳ್ಳೆ ಹುಡುಗನಿಗೆ ಮೋಸ ಮಾಡಿ, ಅವನ ಜೀವನವನ್ನೇ ಹಾಳು ಮಾಡಿದ್ರಾ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ನಿವೇದಿತಾ ಗೌಡ ವಿಚ್ಛೇದನ ಪಡೆದ ನಂತರ ಏನೇ ಮಾಡಿದ್ರು, ಅದು ಸಿಕ್ಕಾಪಟ್ಟೆ ವೈರ್ ಆಗುತ್ತಿದೆ. ಹಾಗೆಯೇ ಜನರಿಂದ ಸಿಕ್ಕಾಪಟ್ಟೆ ಬೈಗುಲಗಳು ಕೇಳಿಬರುತ್ತಿದೆ. ಇನ್ನಷ್ಟು ಜನರು ಇವರೆಲ್ಲಾ ಸೋಶಿಯಲ್ ಮೀಡಿಯಾ ಇಂದ ದೂರ ಉಳಿದು ಬಿಡೋದೇ ಒಳ್ಳೆಯದು ಎನ್ನುತ್ತಿದ್ದಾರೆ.

ಏನೇ ಆದ್ರೂ ನಿವೇದಿತಾ ಗೌಡ ಸುದ್ದಿಯಲ್ಲಿ ಯಾವಾಗಲೂ ಇರುತ್ತಾರೆ ಅನ್ನೋದಂತೂ ನಿಜ. ಇತ್ತೀಚೆಗೆ ನಿವೇದಿತಾ ಗೌಡ ಆಲ್ಬಮ್ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡು ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಿ, ಸುಮಾರು 1 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಹಾಗೆಯೇ ಸಿನಿಮಾದಲ್ಲಿ ನಟಿಸುವ ಪ್ಲಾನ್ ಸಹ ಹೊಂದಿದ್ದಾರೆ ನಿವೇದಿತಾ ಗೌಡ. ಒಳ್ಳೆಯ ಅವಕಾಶಗಳು ಸಿಕ್ಕರೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಇನ್ನು ಕಿರುತೆರೆಗೆ ಯಾವಾಗ ಬರುತ್ತಾರೆ ಎಂದು ಕಾದು ನೋಡಬೇಕಿದೆ.



