ಟಾಲಿವುಡ್ ನ ಸ್ಟಾರ್ ಜೋಡಿ ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನದ ಬಗ್ಗೆ ಚರ್ಚೆಗಳು ನಡೆಯುವುದು ಈಗಲೂ ಕಡಿಮೆ ಆಗಿಯೇ ಇಲ್ಲ. ಇವರಿಬ್ಬರು ವಿಚ್ಛೇದನ ಘೋಷಣೆ ಮಾಡಿ, 3 ವರ್ಷ ಕಳೆದಿದೆ. ಈಗಾಗಲೇ ಇಬ್ಬರೂ ಮೂವ್ ಆನ್ ಆಗಿದ್ದಾರೆ. ಆದರೆ ಇವರಿಬ್ಬರು ದೂರ ಆಗಿರೋದನ್ನ ಅಭಿಮಾನಿಗಳು ಸಹಿಸೋದಕ್ಕೆ ಆಗ್ತಿಲ್ಲ, ಇವರಿಬ್ಬರು ದೂರ ಆಗಿರೋದಕ್ಕೆ ಕಾರಣ ಇದೇ ಇರಬಹುದು ಎಂದು ಊಹೆ ಮಾಡಲಾಗುತ್ತಿದೆ. ನಾಗಚೈತನ್ಯ ಅವರಿಗೆ ಇರುವ ಆ ಒಂದು ಅಭ್ಯಾಸದ ಕಾರಣಕ್ಕೆ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಆ ಅಭ್ಯಾಸ ಏನು?
ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಕೂಡ ಐದಾರು ವರ್ಷಗಳ ಕಾಲ ಪ್ರೀತಿಸಿ ಮದುವೆ ಆದವರು. ಸಮಂತಾ ಮೊದಲ ಸಾರಿ ನಾಯಕಿಯಾಗಿ ಅಭಿನಯಿಸಿದ ಮೊದಲ ಸಿನಿಮಾ ಯೇ ಮಾಯ ಚೇಸಾವೆ, ಈ ಸಿನಿಮಾದಲ್ಲಿ ನಾಯಕ ಆಗಿ ಅಭಿನಯಿಸಿದ್ದು ನಾಗಚೈತನ್ಯ ಅವರೇ. ಈ ಸಿನಿಮಾ ಮೂಲಕ ಇಬ್ಬರ ಪರಿಚಯ ಶುರುವಾಯಿತು. ಇಬ್ಬರು ಜೊತೆಯಾಗಿ ಅಭಿನಯಿಸಿ, ಜೊತೆಯಾಗಿ ಕೆಲಸ ಮಾಡಿ ಇಬ್ಬರ ನಡುವೆ ಪ್ರೀತಿ ಶುರುವಾಯಿತು. ಐದಾರು ವರ್ಷಗಳ ಕಾಲ ಇವರಿಬ್ಬರ ಲವ್ ಸ್ಟೋರಿ ನಡೆಯಿತು, ಬಳಿಕ ಇಬ್ಬರ ಮದುವೆ ನಡೆಯಿತು.

ಇವರಿಬ್ಬರ ಪ್ರೀತಿ ವಿಷಯವನ್ನು ಎರಡು ಕುಟುಂಬದವರು ಕೂಡ ಒಪ್ಪಿ, ಅದ್ಧೂರಿಯಾಗಿ ಇಬ್ಬರ ಮದುವೆ ನಡೆಯಿತು. ಹಿಂದೂ ಸಂಪ್ರದಾಯದ ಪ್ರಕಾರ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಎರಡು ತರದಲ್ಲಿ ಇವರಿಬ್ಬರ ಮದುವೆ ನಡೆಯಿತು. ಈ ಜೋಡಿ ಮದುವೆಯಾದ ನಂತರ ಇಬ್ಬರು ಚೆನ್ನಾಗಿಯೇ ಇದ್ದರು, ಆದರೆ ಮದುವೆಯಾಗಿ 4ನೇ ವರ್ಷ ತುಂಬುವುದರ ಮೊದಲೇ ಇಬ್ಬರು ಕೂಡ ತಾವಿಬ್ಬರು ವಿಚ್ಛೇದನ ಪಡೆದು ದೂರ ಆಗಿರುವುದರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದರು. ಇದರಿಂದ ಅವರಿಬ್ಬರ ಅಭಿಮಾನಿಗಳಿಗೆ ಬಹಳ ಬೇಸರ ಆಗಿತ್ತು. ಅಷ್ಟು ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಈ ಥರದ ನಿರ್ಧಾರ ತೆಗೆದುಕೊಂಡಿದ್ದು ಹಲವರಿಗೆ ಶಾಕ್ ನೀಡಿತ್ತು.
2021ರಲ್ಲಿ ಇವರಿಬ್ಬರು ಸಹ ವಿಚ್ಛೇದನ ಘೋಷಿಸಿದರು, ಈಗಾಗಲೇ ಇವರಿಬ್ಬರು ವಿಚ್ಛೇದನ ಘೋಷಿಸಿ 3 ವರ್ಷ ಕಳೆದರೂ ಸಹ ಇಂದಿಗೂ ಚರ್ಚೆ ಆಗುತ್ತದೆ. ನಾಗಚೈತನ್ಯ ಅವರಿಗೆ ಇರುವ ಆ ಒಂದು ಅಭ್ಯಾಸದಿಂದ ಇಬ್ಬರು ವಿಚ್ಛೇದನ ಪಡೆದಿರಬಹುದು ಎಂದು ಹೇಳಲಾಗುತ್ತಿದೆ. ಅದೇನು ಎಂದರೆ ನಾಗಚೈತನ್ಯ ಅವರು ತುಂಬಾ ಸೈಲೆಂಟ್ ಮಾತಾಡೋದು ತುಂಬಾ ಕಡಿಮೆ. ಇನ್ನು ಕುಡಿದಾಗ ಮಾತ್ರ ತುಂಬಾ ಜೋರಾಗಿ ಮಾತಾಡುತ್ತಾರಂತೆ. ಈ ಒಂದು ಅಭ್ಯಾಸ ಸಮಂತಾ ಅವರಿಗೆ ಇಷ್ಟ ಆಗಿಲ್ಲವಂತೆ. ಈ ಅಭ್ಯಾಸವನ್ನ ಬದಲಾಯಿಸಿಕೊಳ್ಳಬೇಕು ಎಂದು ಹೇಳಿದ್ದರೂ ಬದಲಾಯಿಸಿಕೊಳ್ಳಲಿಲ್ಲವಂತೆ, ಈ ಕಾರಣಕ್ಕೆ ಸಮಂತಾ ಅವರು ವಿಚ್ಛೇದನ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಆದರೆ ಇದು ನಿಜವೋ ಅಥವಾ ಸುಳ್ಳೋ ಎಂದು ಗೊತ್ತಿಲ್ಲ. ನಾಗಚೈತನ್ಯ ಅವರಂತೂ ಇದರಿಂದ ಮೂವ್ ಆನ್ ಆಗಿದ್ದಾರೆ. ತಾವು ಮತ್ತೆ ಪ್ರೀತಿ ಮಾಡುತ್ತಿರುವ ನಟಿ ಶೋಭಿತಾ ಧೂಳಿಪಾಲ ಅವರೊಡನೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಶೀಘ್ರದಲ್ಲೇ ಅವರ ಜೊತೆಗೆ ಮದುವೆ ಆಗುತ್ತಾರೆ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ ಸಮಂತಾ ಅವರು ಮತ್ತೆ ಮದುವೆ ಆಗುವ ಬಗ್ಗೆ ಯೋಚನೆ ಮಾಡಿಲ್ಲ, ತಮ್ಮ ಕೆರಿಯರ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇವರು ಅಭಿನಯಿಸಿರುವ ಸಿಟಾಡೆಲ್ ವೆಬ್ ಸೀರೀಸ್ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.



