ಮನೆಯಲ್ಲಿರುವ ಬೆಕ್ಕು, ನಾಯಿ, ಹಸು ಮುಂತಾದ ಸಾಕುಪ್ರಾಣಿಗಳನ್ನು ಮುದ್ದಿನಿಂದ ಅಪ್ಪಿಕೊಳ್ಳುವುದು ಮುತ್ತು ಕೊಡುವುದು ಮಾಡುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ ಅಥವ ಮಾಡಿರುತ್ತೀರಿ. ಆದರೆ ಕಾಡು ಪ್ರಾಣಿಗಳಿಗೆ ಚುಂಬಿಸುವುದು ಅದರಲ್ಲೂ ಕ್ರೂರ ಮೃಗ ಹುಲಿಗೆ ನೇರಾನೇರ ಚುಂಬಿಸುವುದನ್ನು ನೋಡಿದ್ದೀರಾ?.ಸದ್ಯ, ಅಂತಹದ್ದೊಂದು ಅಪರೂಪದ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ. ಹುಷಾರ್ ಈ ವಿಡಿಯೋ ನೋಡಲು ಎರಡು ಗುಂಡಿಗೆ ಬೇಕು!

https://www.instagram.com/p/Cwxe4w9Kxgy/?utm_source=ig_web_copy_link&igshid=MzRlODBiNWFlZA==
ಹುಲಿಯನ್ನು ಅಂಗಾತ ಮಲಗಿಸಿ ವ್ಯಕ್ತಿಯೊಬ್ಬ ಹುಲಿಯ ಮೇಲೆ ಮಲಗಿ ಬಳಿಕ ಹುಲಿಯ ಮುಖವನ್ನು ಹಿಡಿದು ದೀರ್ಘವಾಹಿ ಚುಂಬಿಸಿದ್ದಾನೆ. ಹುಲಿ ಆತ ಚುಂಬಿಸುವುದನ್ನು ನೋಡುತ್ತ ಸುಮ್ಮನೆ ಮಲಗಿದೆ. ಚುಂಬಿಸಿದ ನಂತರ ಆ ವ್ಯಕ್ತಿ ಹುಲಿಯ ಕೆನ್ನೆ ಸವರಿ ಮುದ್ದು ಮಾಡಿದ್ದಾನೆ. ಅತ್ಯಂತ ಕ್ರೂರ ಪ್ರಾಣಿ ಎನಿಸಿಕೊಂಡಿರುವ ಹುಲಿ ಮಗುವಿನಂತೆ ಸುಮ್ಮನೆ ಮಲಗಿಕೊಂಡಿದೆ. ಸದ್ಯ, ಈ ದೈತ್ಯ ಹುಲಿ ಹಾಗೂ ವ್ಯಕ್ತಿಯ ಕಿಸ್ಸಿಂಗ್ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಿನ್ನವಿಭಿನ್ನ ಕಮೆಂಟ್ ಹಾಕುತ್ತಿದ್ದಾರೆ.
ವಿಡಿಯೋ ನೋಡಿರುವ ವ್ಯಕ್ತಿಯೊಬ್ಬ, ‘ನನಗೂ ಹೀಗೊಂದು ಅವಕಾಶ ಸಿಗಬಾರದೆ? ಎಂದು ಕೇಳಿದ್ದಾರೆ? ಯಾಕೆ ಬದುಕುವ ಆಸೆ ಇಲ್ಲವೆ? ಎಂದಿದ್ಧಾರೆ ಇನ್ನೊಬ್ಬರು. ನಿಜಕ್ಕೂ ಈ ಹುಲಿ ತುಂಬಾ ಸುಂದರವಾಗಿದೆ, ಅಂದರೆ ಅವನು ಅದನ್ನುಅಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ಮನುಷ್ಯ ಹೀಗೇಕೆ ವರ್ತಿಸುತ್ತಿದ್ದಾನೆ? ಅವನು ಹೀಗೆ ಮಾಡುವುದರಿಂದ ಹುಲಿಗೆ ತೊಂದರೆಯಾಗುವುದಿಲ್ಲವೆ? ಎಂದಿದ್ದಾರೆ ಒಬ್ಬರು. ನಾನು ನಾಯಿ ಬೆಕ್ಕು ಮುಂತಾದ ಪ್ರಾಣಿಗಳನ್ನು ಸಾಕಿಕೊಂಡಿದ್ದೇನೆ ಆದರೆ ನನ್ನ ಹೆಂಡತಿಯನ್ನು ಬಿಟ್ಟು ಯಾವ ಪ್ರಾಣಿಗೂ ಚುಂಬಿಸಿಲ್ಲ ಎಂದಿದ್ದಾರೆ ಮಗದೊಬ್ಬರು.ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದೆ.