ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇಂದಿಗೆ ಮೂರು ವಾರಗಳು ಕಳೆದಿದ್ದು ಮೊದಲ ಫಿನಾಲೆಯಲ್ಲಿ ಮೂವರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಲ್ಲಿ ಒಬ್ಬರಾದ ಮ್ಯೂಟ್ಯಂಟ್ ರಘು ಬೆಳ್ಳಂಬೆಳಗ್ಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸಿ ಮೈಕ್ ಹಿಡಿದು ಎಲ್ಲಾ ಸ್ಪರ್ಧಿಗಳನ್ನು ಎಬ್ಬಿಸಿ ಇದು ಬಿಗ್ ಬಾಸ್ ಮನೆ ಎಂದು ಎಲ್ಲರನ್ನೂ ಗಾರ್ಡನ್ ಏರಿಯಕ್ಕೆ ಕರೆತಂದು ನೀರನ್ನು ಸುರಿಯುವ ಮೂಲಕ ಎಲ್ಲಾ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ. ಪ್ರತಿಭಟಿಸಿದ ಜಾನ್ವಿ ಮತ್ತು ಅಶ್ವಿನಿ ಗೌಡ ಅವರನ್ನು ತಮ್ಮ ಧ್ವನಿಯಿಂದ ತಣ್ಣಗಾಗಿಸಿದ್ದಾರೆ. ಆಗುತ್ತಿದ್ದಂತೆಯೇ ಇಬ್ಬರು ಸ್ಪರ್ಧಿಗಳನ್ನು ಎದುರು ಹಾಕಿ ಕೊಂಡಿದ್ದಾರೆ.

ಇನ್ನು ಸಂಜೆಯ ವೇಳೆಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿ ಸೂರಜ್ ಸಿಂಗ್ ಸ್ವಲ್ಪ ವಿಶೇಷ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. Heart ಸಿಂಬಲ್ ಹಿಡಿದು ಸ್ವಿಮ್ಮಿಂಗ್ ಪೂಲ್ ನಲ್ಲಿ ರೋಮ್ಯಾಂಟಿಕ್ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಒದ್ದೆ ಬಟ್ಟೆ ತೆಗೆದು ಸಿಕ್ಸ್ ಪ್ಯಾಕ್ ತೋರಿಸುವ ಮೂಲಕ ಹುಡುಗಿಯರಿಗೆ ಹಾರ್ಟ್ ಬ್ರೇಕ್ ಆಗುವಂತೆ ಮಾಡಿದ್ದಾರೆ.
ಸ್ವಿಮ್ಮಿಂಗ್ ಪೂಲ್ ಇಂದ ಎದ್ದು ಬರುತ್ತಿದ್ದಂತೆಯೇ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿ , ಈ ಬಿಗ್ ಬಾಸ್ ಮನೆಯಲ್ಲಿ ಸುಂದರವಾದ ಮಹಿಳಾ ಸ್ಪರ್ಧೆ ಯಾರು? ಮತ್ತು ಯಾರಿಗೆ ಗುಲಾಬಿ ಹೂವನ್ನು ನೀಡುತ್ತೀರಾ ಎಂದು ಕೇಳಿದರು. ನೇರವಾಗಿ ಬಂದು ರಾಶಿಕ ಶೆಟ್ಟಿಗೆ ಕೊಟ್ಟು ನೀವು ಕ್ಯೂಟ್ ಆಗಿದ್ದೀರಾ ಎಂದು ಹೇಳಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಇನ್ನು ಮುಂದೆ ಲವ್ ಸ್ಟೋರಿ ಶುರುವಾಗುವ ಸಾಧ್ಯತೆಗಳು ಹೆಚ್ಚಾಗಿವೆ.



