ಭಾರತ ಸಂಸತ್ ಮೇಲೆ ದಾಳಿ ಮಾಡಿದ್ದ ಭಯೋತ್ಪಾದಕ ಹಫೀಜ್ ಮಸೂದ್ ಅಜರ್ನ ಇಡೀ ಕುಟುಂಬ ಸರ್ವನಾಶವಾಗಿದೆ.. ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ನಲ್ಲಿ ಭಯೋತ್ಪಾದಕ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಹಫೀಜ್ ಮಸೂದ್ ಅಜರ್ ಕುಟುಂಬದ 14 ಮಂದಿ ಸಾವನ್ನಪ್ಪಿದ್ದಾರೆ.. ಭಾರತೀಯ ಸೇನೆ ಮಂಗಳವಾರ ರಾತ್ರಿ ಪಾಕಿಸ್ತಾನದ 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿತ್ತು.. ಅದರಲ್ಲಿ ಬಹಾವಲ್ಪುರ್ ಕೂಡಾ ಒಂದಾಗಿತ್ತು.. ಇಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಫೀಜ್ ಮಸೂದ್ ಅಜರ್ನ ಸಹೋದರ, ಬಾವ ಹಾಗೂ ಕುಟುಂಬದ ಇತರ ಸದಸ್ಯರು ಸೇರಿ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಈ ವಿಚಾರವನ್ನು ಸ್ವತಃ ಹಫೀಜ್ ಮಸೂದ್ ಅಜರ್ನೇ ಹೇಳಿದ್ದಾನೆ.. ನನ್ನ ಇಡೀ ಕುಟುಂಬ ಬಲಿಯಾಗಿದೆ.. ನಾನು ಈಗ ಒಬ್ಬಂಟಿಯಾಗಿದ್ದೇನೆ.. ನಾನೂ ಸತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹಫೀಜ್ ಮಸೂದ್ ಅಜರ್ ಅಳಲು ತೋಡಿಕೊಂಡಿದ್ದಾನೆ.. ಈ ಬಗ್ಗೆ ಹಫೀಜ್ ಮಸೂದ್ ಅಜರ್ ಪಾಕಿಸ್ತಾನದ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ತನ್ನ ಇಡೀ ಕುಟುಂಬ ಸರ್ವನಾಶ ಆಗಿರುವುದನ್ನು ಖಚಿತಪಡಿಸಿದ್ದಾನೆ..
ಯಾರು ಈ ಮಸೂದ್ ಅಜರ್..?, ಏನು ಈತನ ಹಿನ್ನೆಲೆ..?
ಹಫೀಜ್ ಮಸೂದ್ ಅಜರ್.. ಈತ ಪಾಕಿಸ್ತಾನ ಭಯೋತ್ಪಾದಕ.. ಜೈಶ್-ಎ-ಮೊಹಮ್ಮದ್ ಸಂಘಟನೆ ಕಟ್ಟಿಕೊಂಡು ಉಗ್ರ ಚಟುವಟಿಕೆ ನಡೆಸುತ್ತಿದ್ದಾನೆ.. ಈತನ ಇಡೀ ಕುಟುಂಬ ಕೂಡಾ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿತ್ತು.. ಪಾಕಿಸ್ತಾನದ ಬಹಾವಲ್ಪುರ್ನಲ್ಲೇ ಈತ ಉಗ್ರ ಸಂಘಟನೆಯ ಕಚೇರಿ ಮಾಡಿಕೊಂಡಿದ್ದ.. ಇಲ್ಲಿಯೇ ಮನೆಯೂ ಕೂಡಾ ಇತ್ತು.. ಹಫೀಜ್ ಮಸೂದ್ ಅಜರ್ ಸಹೋದರರಾದ ಅಬ್ದುಲ್ ರೌಫ್, ತಲ್ಹಾ ಅಲ್-ಸೈಫ್ ಕೂಡಾ ಉಗ್ರ ಚಟುವಟಿಕೆ ನಡೆಸುತ್ತಿದ್ದರು.. ಈ ಹಿಂದೆ ಕೂಡಾ ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲೂ ಹಫೀಜ್ ಮಸೂದ್ ಅಜರ್ ಕುಟುಂಬದ ಹಲವು ಸದಸ್ಯರು ಸಾವನ್ನಪ್ಪಿದ್ದಾರೆ.. ಇದೀಗ ಇಡೀ ಕುಟುಂಬ ಸರ್ವನಾಶವಾಗಿ ಮಸೂದ್ ಅಜರ್ ಏಕಾಂಗಿಯಾಗಿ ಉಳಿದುಕೊಂಡಿದ್ದಾನೆ..

ಹಫೀಜ್ ಮಸೂದ್ ಅಜರ್ ನೇತೃತ್ವದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹಲವು ವಿಧ್ವಂಸಕ ಕೃತ್ಯಗಳನ್ನು ನಡೆಸಿದೆ.. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ 2000ನೇ ಇಸ್ವಿಯಲ್ಲಿ ಭಾರತದ ಸೇನಾ ಪ್ರಧಾನ ಕಚೇರಿಯ ಮೇಲೆ ಆತ್ಮಾಹುತಿ ದಾಳಿ ನಡೆಸಲಾಗಿತ್ತು.. ಇನ್ನು 2001ರಲ್ಲಿ ಜಮ್ಮು-ಕಾಶ್ಮೀರದ ವಿಧಾನಸಭೆಯ ಮೇಲೆಯೇ ದಾಳಿ ಮಾಡಿದ್ದರು.. ಅದೇ ವರ್ಷದ ಡಿಸೆಂಬರ್ನಲ್ಲಿ ಭಾರತದ ಸಂಸತ್ತಿನ ಮೇಲೂ ಬಾಂಬ್ ದಾಳಿ ನಡೆಸಲಾಗಿತ್ತು.. ಇನ್ನು 2016ರಲ್ಲಿ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ, ಅದೇ ವರ್ಷದ ಸೆಪ್ಟೆಂಬರ್ನಲ್ಲಿ ಉರಿ ದಾಳಿ, 2019ರಲ್ಲಿ ಪುಲ್ವಾಮಾ ಆತ್ಮಾಹುತಿ ದಾಳಿಗಳಲ್ಲೂ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೇ ಭಾಗಿಯಾಗಿತ್ತು.. ಹೀಗಾಗಿ ಹಫೀಜ್ ಮಸೂದ್ ಅಜರ್ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದಾನೆ.. ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಪಾಕಿಸ್ತಾನವನ್ನು ಹಲವು ಬಾರಿ ಒತ್ತಡ ಹೇರಿತ್ತು.. ಆದ್ರೆ ಪಾಕಿಸ್ತಾನ ಅದಕ್ಕೆ ಒಪ್ಪಿಲ್ಲ..
1995ರಲ್ಲಿ ಆರು ವಿದೇಶಿ ಪ್ರವಾಸಿಗರ ಅಪಹರಣ!
ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಫೀಜ್ ಮಸೂದ್ ಅಜರ್ನನ್ನು ಭಾರತ ಬಂಧಿಸಿತ್ತು.. ಹೀಗಾಗಿ ಆತನನ್ನು ಬಿಡಿಸಿಕೊಂಡು ಹೋಗಲು ಆತನ ಸಹಚರರು ಹಲವು ಪ್ರಯತ್ನಗಳನ್ನು ಮಾಡಿದ್ದರು.. ಅದರಂತೆ 1995 ರಲ್ಲಿ ಕಾಶ್ಮೀರದಲ್ಲಿ ಆರು ವಿದೇಶಿ ಪ್ರವಾಸಿಗರನ್ನು ಅಪಹರಣ ಮಾಡಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳಲಾಗಿತ್ತು.. ಆಗಲೇ ಹಫೀಜ್ ಮಸೂದ್ ಅಜರ್ ಇಡೀ ಪ್ರಪಂಚಕ್ಕೆ ಪರಿಚಯವಾಗಿದ್ದ.. ಬಂಧಿತನಾಗಿದ್ದ ಮಸೂದ್ ಅಜರ್ ಬಿಡುಗಡೆ ಮಾಡಿದರೆ ಮಾತ್ರ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಉಗ್ರರು ಹೇಳಿದ್ದರು.. ಆದ್ರೆ ಇದಕ್ಕೆ ಭಾರತ ಒಪ್ಪಿರಲಿಲ್ಲ.. ಆಗ ಉಗ್ರರು ಆರು ವಿದೇಶಿಗರಲ್ಲಿ ಐವರನ್ನು ಕೊಂದಿದ್ದರು.. ಮತ್ತೊಬ್ಬ ತಪ್ಪಿಸಿಕೊಂಡು ಬಚಾವಾಗಿದ್ದ.
ಕಂದಹಾರ್ ವಿಮಾನ ಹೈಜಾಕ್!, ಮಸೂದ್ ಅಜರ್ ರಿಲೀಸ್!
ಅನಂತರ 1999ರ ಡಿಸೆಂಬರ್ 24 ರಂದು ಕಠ್ಮಂಡುವಿನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಉಗ್ರರು ಹೈಜಾಕ್ ಮಾಡಿದ್ದರು.. ಈ ವಿಮಾನದಲ್ಲಿ 155 ಮಂದಿ ಪ್ರಯಾಣಿಕರಿದ್ದರು.. ಈ ವಿಮಾನ ಹೈಜಾಕ್ ಮಾಡಿ ಅದನ್ನು ಕಂದಹಾರ್ನಲ್ಲಿ ಲ್ಯಾಂಡ್ ಮಾಡಲಾಗಿತ್ತು.. ಅಲ್ಲಿನ ವಿಮಾನ ನಿಲ್ದಾಣವನ್ನು ಉಗ್ರರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು.. ಆ ಕಂದಹಾರ್ ಆಗ ತಾಲಿಬಾನ್ ಆಳ್ವಿಕೆಯಲ್ಲಿತ್ತು.. ವಿಮಾನದಲ್ಲಿದ್ದವರನ್ನು ಬಿಡುಗಡೆ ಮಾಡಬೇಕು ಎಂದರೆ ಉಗ್ರ ಹಫೀಜ್ ಮಸೂದ್ ಅಜರ್, ಉಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಜರ್ಗರ್ ರನ್ನು ಬಿಡುಗಡೆ ಮಾಡುವಂತೆ ಉಗ್ರರು ಬೇಡಿಕೆ ಇಟ್ಟಿದ್ದರು.. ಭಾರತ ಸರ್ಕಾರ ವಿಧಿ ಇಲ್ಲದೆ ಮೂವರು ಉಗ್ರರನ್ನು ಬಿಡುಗಡೆ ಮಾಡಿತ್ತು.. ಅಂದು ಪಾಕ್ ಸೇರಿದ್ದ ಉಗ್ರ ಮಸೂದ್ ಅಜರ್ ಭಾರತದ ಮೇಲಿನ ದಾಳಿಯನ್ನು ಮುಂದುವರೆಸಿದ್ದ.
ಪುಲ್ವಾಮಾ ದಾಳಿಯ ನಂತರ 2019ರ ಮೇ 1ರಂದು ವಿಶ್ವಸಂಸ್ಥೆಯು ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು.. 2002ರಲ್ಲಿ ಆಗಿನ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಜೈಶ್-ಎ-ಮೊಹಮ್ಮದ್ ಸಂಘಟನೆಯನ್ನು ಪಾಕಿಸ್ತಾನದಲ್ಲಿ ನಿಷೇಧ ಮಾಡಿದ್ದರು.. ಆದರೂ ಈ ಸಂಘಟನೆಯ ಕಾರ್ಯ ಚಟುವಟಿಕೆ ನಿಂತಿಲ್ಲ.. ಬೇರೆ ಬೇರೆ ಹೆಸರುಗಳನ್ನು ಸಂಘಟನೆ ಮಾಡಿಕೊಂಡು ಉಗ್ರ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ..



