ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ರಾತ್ರೋರಾತ್ರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದೆ.. ಸುಮಾರು 9 ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಲಾಗಿದ್ದು, 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.. ಉಗ್ರರ ವಿರುದ್ಧದ ಭಾರತದ ಈ ಮಿಲಿಟರಿ ಕಾರ್ಯಾಚರಣೆಯಿಂದ ಪಾಕಿಸ್ತಾನ ಬೆಚ್ಚಿಬಿದ್ದಿದೆ.. ಪಾಕಿಸ್ತಾನ ಪ್ರತಿರೋಧ ತೋರದೇ ಸುಮ್ಮನಾದರೆ ಸರಿ, ಅದೇನಾದರೂ ದಾಳಿಗೆ ಮುಂದಾದರೆ ಭಾರತ-ಪಾಕಿಸ್ತಾನದ ನಡುವೆ ಯುದ್ಧ ಆಗೋದು ಗ್ಯಾರೆಂಟಿ.. ಹಾಗಾದ್ರೆ ಯುದ್ಧ ನಡೆದರೆ ಏನಾಗಬಹುದು..?, ಪಾಕಿಸ್ತಾನ ಹಾಗೂ ಭಾರತದ ಬಳಿ ಏನೇನು ಶಸ್ತ್ರಾಸ್ತ್ರಗಳಿವೆ..?, ಯಾವ ದೇಶದ ಸೇನಾ ಶಕ್ತಿ ಎಷ್ಟಿದೆ ಅನ್ನೋದನ್ನು ನೋಡೋಣ..

ಭಾರತದ ಮೂರೂ ಸೇನೆಗಳ ಬಲಾಬಲ ಎಷ್ಟಿದೆ..?
ಭಾರತ ಹಾಗೂ ಪಾಕಿಸ್ತಾನದ ಸೇನಾ ಬಲದ ವಿವರವನ್ನು ‘ಗ್ಲೋಬಲ್ ಫೈರ್ಪವರ್’ ವೆಬ್ಸೈಟ್ ಪ್ರಕಟ ಮಾಡಿದೆ.. ಈ ವರದಿಯ ಪ್ರಕಾರ 2025ರ ಮಿಲಿಟರಿ ಶ್ರೇಯಾಂಕದಲ್ಲಿ ಭಾರತ ಪಾಕಿಸ್ತಾನಕ್ಕಿಂತ ತುಂಬಾನೇ ಮುಂದಿದೆ.. ಭಾರತದ ಮುಂದೆ ಪಾಕಿಸ್ತಾನ ಏನೇನೂ ಅಲ್ಲ ಎಂಬ ಸ್ಥಿತಿಯಲ್ಲಿದೆ.. ಹೀಗಾಗಿಯೇ ಪಾಕಿಸ್ತಾನ ಭಾರತವೆಂದರೆ ಹೆದರಿಕೊಳ್ಳುತ್ತಿದೆ.. ಪಾಕಿಸ್ತಾನದ ರಾಜಕೀಯ ನಾಯಕರು ಉತ್ತರ ಪೌರುಷ ತೋರಿಸುತ್ತಿದ್ದರೂ, ಪಾಕಿಸ್ತಾನ ಮಿಲಿಟರಿ ಪಡೆ ಯುದ್ಧ ಮಾಡೋ ಮನಸ್ಥಿತಿಯಲ್ಲಿ ಇಲ್ಲ.. ಅಂದಹಾಗೆ, ಮಾಹಿತಿ ಪ್ರಕಾರ ಸದ್ಯ ಅಂತಾರಾಷ್ಟ್ರೀಯ ಮಿಲಿಟರಿ ಶಕ್ತಿಯಲ್ಲಿ ಭಾರತ 145 ದೇಶಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.. ಆದ್ರೆ ಪಾಕಿಸ್ತಾನ 12 ಸ್ಥಾನದಲ್ಲಿದೆ.. ಅಂದರೆ ಭಾರತ ಪಾಕಿಸ್ತಾನಕ್ಕಿಂತ ಮೂರು ಪಟ್ಟು ಹೆಚ್ಚು ಶಕ್ತಿಯುತವಾಗಿ ಎಂದರ್ಥ..
ಭಾರತದ ಸೇನಾಶಕ್ತಿ ಎಷ್ಟಿದೆ..?
2.2 ಮಿಲಿಯನ್ ಸೈನಿಕರು
4,201 ಯುದ್ಧ ಟ್ಯಾಂಕ್ಗಳು
150,000 ಶಸ್ತ್ರಸಜ್ಜಿತ ವಾಹನಗಳು
100 ಸ್ವಯಂ ಚಾಲಿತ ಫಿರಂಗಿಗಳು
3,975 ಎಳೆಯುವ ಫಿರಂಗಿಗಳು
264 ಮಲ್ಟಿ-ಬ್ಯಾರೆಲ್ ರಾಕೆಟ್ ಫಿರಂಗಿದಳಗಳು
ಭಾರತೀಯ ವಾಯುಪಡೆಯಲ್ಲಿ 3.10 ಲಕ್ಷ ಸಿಬ್ಬಂದಿ
ಒಟ್ಟು 2,229 ಯುದ್ಧ ವಿಮಾನಗಳು
513 ಯುದ್ಧ ವಿಮಾನಗಳು, 270 ಸಾರಿಗೆ ವಿಮಾನಗಳು, 130 ದಾಳಿ ವಿಮಾನಗಳು,
351 ತರಬೇತಿ ವಿಮಾನಗಳು, 6 ಟ್ಯಾಂಕರ್ ಫ್ಲೀಟ್ ವಿಮಾನಗಳು
ಭಾರತೀಯ ಸೇನೆಯ ಮೂರು ವಿಭಾಗಗಳಲ್ಲಿ 899 ಹೆಲಿಕಾಪ್ಟರ್ಗಳು
80 ದಾಳಿ ಹೆಲಿಕಾಪ್ಟರ್ಗಳು,
ಭಾರತೀಯ ನೌಕಾಪಡೆಯಲ್ಲಿ 1,42,000 ನಾವಿಕರು
ಎರಡು ವಿಮಾನವಾಹಕ ನೌಕೆಗಳು ಸೇರಿ ಒಟ್ಟು 293 ಹಡಗುಗಳು
13 ವಿಧ್ವಂಸಕ ನೌಕೆಗಳು, 14 ಯುದ್ಧನೌಕೆಗಳು, 18 ಜಲಾಂತರ್ಗಾಮಿ ನೌಕೆಗಳು, 18 ಕಾರ್ವೆಟ್ಗಳು
ಮಿಲಿಟರಿ ವ್ಯಾಪ್ತಿಯಲ್ಲಿ 311 ವಿಮಾನ ನಿಲ್ದಾಣಗಳು, 56 ಬಂದರುಗಳು
172 ಪರಮಾಣು ಬಾಂಬ್ಗಳು
ಪಾಕಿಸ್ತಾನ ಸೇನೆ ಬಲಾಬಲ ಎಷ್ಟಿದೆ..?
13 ಲಕ್ಷ ಸೈನಿಕರು
124,000 ನೌಕಾ ಸಿಬ್ಬಂದಿ, 78,000 ವಾಯುಪಡೆ ಸಿಬ್ಬಂದಿ
ಒಟ್ಟು 1,399 ಯುದ್ಧ ವಿಮಾನಗಳು
328 ಯುದ್ಧ ವಿಮಾನಗಳು, 90 ದಾಳಿ ವಿಮಾನಗಳು, 64 ಸಾರಿಗೆ ವಿಮಾನಗಳು
565 ತರಬೇತುದಾರರು, 4 ಟ್ಯಾಂಕರ್ ಫ್ಲೀಟ್ಗಳು, 373 ಹೆಲಿಕಾಪ್ಟರ್ಗಳು, 57 ದಾಳಿ ಹೆಲಿಕಾಪ್ಟರ್ಗಳು
2,627 ಟ್ಯಾಂಕ್ಗಳು, 662 ಸ್ವಯಂ ಚಾಲಿತ ಫಿರಂಗಿಗಳು, 2,629 ಟೋವ್ಡ್ ಫಿರಂಗಿಗಳು, 600 ಮಲ್ಟಿಬ್ಯಾರೆಲ್ ಫಿರಂಗಿಗಳು
ಪಾಕಿಸ್ತಾನ ನೌಕಾಪಡೆಯಲ್ಲಿ ಒಟ್ಟು 121 ಯುದ್ಧನೌಕೆಗಳು
9 ಯುದ್ಧನೌಕೆಗಳು, 9 ಕಾರ್ವೆಟ್ಗಳು, 8 ಜಲಾಂತರ್ಗಾಮಿ ನೌಕೆಗಳು ಮತ್ತು 69 ಗಸ್ತು ಹಡಗುಗಳು
ಪಾಕ್ ಸೇನಾ ವ್ಯಾಪ್ತಿಯಲ್ಲಿ ಮೂರೇ ಮೂರು ಬಂದರುಗಳು
116 ವಿಮಾನ ನಿಲ್ದಾಣಗಳು ಮತ್ತು 60 ವ್ಯಾಪಾರಿ ನೌಕಾಪಡೆಗಳು
170 ಪರಮಾಣು ಬಾಂಬ್ಗಳು

ಎರಡೂ ದೇಶಗಳು ಬಳಿ ಎಷ್ಟೆಷ್ಟು ಡ್ರೋನ್ಗಳಿವೆ..?
4 ವರ್ಷಗಳಲ್ಲಿ ಭಾರತ ಡ್ರೋನ್ಗಳ ಸಂಖ್ಯೆಯನ್ನು 5,000ಕ್ಕೆ ಹೆಚ್ಚಿಸಲಿದೆ
ಪಾಕ್ ಕಡಿಮೆ ಡ್ರೋನ್ಗಳನ್ನು ಹೊಂದಿದ್ದರೂ ಭಾರೀ ಸಾಮರ್ಥ್ಯಗಳನ್ನು ಹೊಂದಿರುವ 10 ರಿಂದ 11 ರೀತಿಯ ಡ್ರೋನ್ಗಳಿವೆ
ಭಾರತ ಕೂಡಾ ಕಳೆದ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 3.5 ಬಿಲಿಯನ್ ಡಾಲರ್ ಮೌಲ್ಯದ ಪ್ರಿಡೇಟರ್ ಡ್ರೋನ್ಗಳ ಖದೀಸುತ್ತಿದೆ
ಪ್ರಿಡೇಟರ್ ಡ್ರೋನ್ಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ಡ್ರೋನ್ಗಳೆಂದು ಪರಿಗಣಿಸಲಾಗಿದೆ
ಭಾರತ 500 ಮಿಲಿಯನ್ ಮೌಲ್ಯದ ಬಾಂಬ್ಗಳು ಮತ್ತು ಲೇಸರ್-ಗೈಡೆಡ್ ಕ್ಷಿಪಣಿಗಳನ್ನು ಖರೀದಿಸಲಿದೆ
ಪಾಕಿಸ್ತಾನ ಕೂಡಾ ಟರ್ಕಿ ಮತ್ತು ಚೀನಾದಿಂದ ಡ್ರೋನ್ಗಳನ್ನು ಆಮದು ಮಾಡಿಕೊಳ್ಳುತ್ತಿದೆ



