ರಾತ್ರೋರಾತ್ರಿ ಪಾಕಿಸ್ತಾನಕ್ಕೆ ಹಿಂದೂಸ್ತಾನ್ ಶಾಕ್ ನೀಡಿದೆ.. ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ಮತ್ತೊಂದು ದೊಡ್ಡ ಹೊಡೆತ ಕೊಟ್ಟಿದೆ.. ಪಾಕಿಸ್ತಾನಕ್ಕೆ ಪಾಕಿಸ್ತಾನವೇ ಭಾರತದ ದಾಳಿಗೆ ಬೆಚ್ಚಿಬಿದ್ದಿದೆ.. ರಾತ್ರೋರಾತ್ರಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳನ್ನೇ ಗುರಿಯಾಗಿಸಿಕೊಂಡು 9 ನೆಲೆಗಳ ಮೇಲೆ ದಾಳಿ ಮಾಡಲಾಗಿದೆ.. ಆಪರೇಷನ್ ಸಿಂಧೂರ ಹೆಸರಿನ ಈ ಕಾರ್ಯಾಚರಣೆಯಲ್ಲಿ ಬರೋಬ್ಬರಿ ನೂರಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಅಷ್ಟಕ್ಕೂ ಈ ಆಪರೇಷನ್ಗೆ ಸಿಂಧೂರ ಎಂದು ಹೆಸರಿಟ್ಟಿದ್ದೇಕೆ..? ಕಾರ್ಯಾಚರಣೆ ಹೇಗಿತ್ತು..? ಭಾರತ-ಪಾಕ್ ನಡುವೆ ಯುದ್ಧ ಶುರುವಾಗುತ್ತಾ..? ಅನ್ನೋದರ ಸಂಪೂರ್ಣ ಡಿಟೇಲ್ಸ್ ನೋಡೋಣ ಬನ್ನಿ..
ಅಂದು ಏಪ್ರಿಲ್ 22.. ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರು ತಮ್ಮ ಕುಟುಂಬದ ಸದಸ್ಯರೊಂದಿಗೆ ರಜೆಯ ಮಜೆಯಲ್ಲಿದ್ದರು.. ಇದೇ ವೇಳೆ ಪಾಕಿಸ್ತಾನಕ್ಕೆ ಸೇರಿದ ಉಗ್ರರು ಯುಮಕಿಂಕರರಂತೆ ಬಂದಿದ್ದರು.. ಹಿಂದೂ ಗಂಡಸರನ್ನೇ ಗುರಿಯಾಗಿಸಿಕೊಂಡು ಅವರು ದಾಳಿ ಮಾಡಿದ್ದರು.. ಪತ್ನಿ ಮಕ್ಕಳ ಮುಂದೆಯೇ ಹಿಂದೂ ಪುರುಷರನ್ನು ಗುಂಡಿಕ್ಕಿ ಸಾಯಿಸಿದ್ದರು.. ನಮ್ಮನ್ನೂ ಸಾಯಿಸಿ ಎಂದು ಮಹಿಳೆಯರು ಮಕ್ಕಳು ಹೇಳಿದರೆ ಮೋದಿಗೆ ಹೇಳಿ ಎಂದು ಧಿಮಾಕು ತೋರಿಸಿದ್ದರು.. ಅಂದು ಸುಮಾರು 26 ಮಂದಿ ಅಮಾಯಕರು ಉಗ್ರರಿಗೆ ಬಲಿಯಾಗಿದ್ದರು.. ಇದೀಗ ಪಾಕಿಸ್ತಾನದ ಆ ಧಿಮಾಕಿಗೆ ಭಾರತ ತಕ್ಕ ಉತ್ತರ ಕೊಟ್ಟಿದೆ.. ಹಿಂದೂ ಮಹಿಳೆಯರ ಹಣೆಯ ಸಿಂಧೂರ ಅಳಿಸಿದ್ದಕ್ಕೆ ಆಪರೇಷನ್ ಸಿಂಧೂರ ನಡೆಸಿದೆ.. ಮಂಗಳವಾರ ನಡುರಾತ್ರಿ ಪಾಕಿಸ್ತಾನದ ಸುಮಾರು 9 ಉಗ್ರರ ನೆಲೆಗಳ ಮೇಲೆ ಭಾರತದ ಸೇನೆ ರಣಭೀಕರವಾಗಿ ದಾಳಿ ನಡೆಸಿದೆ.. ಕೇವಲ 23 ನಿಮಿಷಗಳಲ್ಲಿ ಎಲ್ಲವನ್ನೂ ಉಡೀಸ್ ಮಾಡಿದೆ.. ಭಾರತೀಯ ಸೇನೆಯ ದಾಳಿಗೆ ಉಗ್ರರು ಮಲಗಿದ್ದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.. ಅವರ ದೇಹಗಳು ಛಿದ್ರ ಛಿದ್ರವಾಗಿವೆ.. ಹೆಣಗಳನ್ನೂ ಗುರಿತಿಸೋದಕ್ಕೂ ಸಾಧ್ಯವಾಗುತ್ತಿಲ್ಲ.. ಆ ಮಟ್ಟಿಗೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಭಾರೀ ಪೆಟ್ಟು ಕೊಟ್ಟಿದೆ..
ಈ ದಾಳಿಗೆ ಭಾರತ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಟ್ಟಿದೆ. ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ 26 ಅಮಾಯಕ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಉಗ್ರರಿಗೆ ಹಾಗೂ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ.. ಒಂದು ಕಡೆ ಸಿಂದೂ ನದಿಯ ನೀರು ಹಂಚಿಕೆ ಒಪ್ಪಂದ ರದ್ದು ಮಾಡಿದ್ದು ಹಾಗೂ ಭಾರತೀಯ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ದಕ್ಕೆ ಪ್ರತೀಕಾರವಾಗಿ ಈ ʻಆಪರೇಷನ್ ಸಿಂಧೂರ್ʼ ಹೆಸರಲ್ಲಿ ದಾಳಿ ಮಾಡಿದ್ದು ಸೂಕ್ತವೆನಿಸುತ್ತದೆ..

ಸಿಂಧೂರ ಪದದ ಅರ್ಥ ಏನು..?
ಸಿಂಧೂರ ಎಂಬ ಪದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಾನ್ಯತೆ ಇದೆ.. ಈ ಪದಕ್ಕೆ ಶಕ್ತಿ, ರಕ್ಷಣೆ, ಸೌಭಾಗ್ಯ, ದುರ್ಗಾ ಶಕ್ತಿ ಹೀಗೆ ನಾನಾ ಹೆಸರುಗಳಿವೆ.. ಭಾರತೀಯ ಹಿಂದೂ ಮುತ್ತೈದೆಯರು ಹಣೆಗೆ ಸಿಂಧೂರವನ್ನಿಡುತ್ತಾರೆ.. ಹೀಗಾಗಿಯೇ ಭಾರತೀಯ ಸೇನೆಯ ಧೈರ್ಯ, ತ್ಯಾಗ, ಶೌರ್ಯ ಮತ್ತು ದೇಶವನ್ನು ರಕ್ಷಿಸುವ ಸಂಕಲ್ಪವನ್ನು ಸೂಚ್ಯವಾಗಿ ತಿಳಿಸುವುದಕ್ಕೆ ಈ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಗಿದೆ.. ಸಿಂಧೂರ ಅನ್ನೋದು ಕೇವಲ ಒಂದು ವಸ್ತು ಅಲ್ಲವೇ ಅಲ್ಲ, ಅದೊಂದು ಭಾವನಾತ್ಮಕ ಸಂಕೇತ.. ಆಧ್ಯಾತ್ಮಿಕತೆಯ ರೂಪ, ಸಾಮಾಜಿಕ ಮೌಲ್ಯವನ್ನು ಪ್ರತಿಪಾದಿಸುವ ಒಂದು ವಿಶೇಷ ವಸ್ತು..
ಆಪರೇಷನ್ ಸಿಂಧೂರ ಹೆಸರಿಟ್ಟಿದ್ದು ಪ್ರಧಾನಿ ಮೋದಿ..!
ಪಾಕಿಸ್ತಾನದ ಮೇಲಿನ ಈ ದಾಳಿ ಆಪರೇಷನ್ ಸಿಂಧೂರ ಎಂದು ಹೆಸರಿಟ್ಟಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ತಿಳಿದುಬಂದಿದೆ.. ಪ್ರಧಾನಿ ಮುಂದೆ ಹಲವು ಹೆಸರುಗಳನ್ನಿಡಲಾಗಿತ್ತು.. ಅದರಲ್ಲಿ ಪ್ರಧಾನಿ ಮೋದಿಯವರು ಆಪರೇಷನ್ ಸಿಂಧೂರ ಎಂಬ ಹೆಸರನ್ನೇ ಆಯ್ಕೆ ಮಾಡಿದ್ದಾರೆ.. ಅದೇ ಹೆಸರಲ್ಲಿ ಪಾಕಿಸ್ತಾನದ ಉಗ್ರರ ಮೇಲೆ ದಾಳಿ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ.. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ..
ಮಂಗಳವಾರ ಮಧ್ಯರಾತ್ರಿ 1.44ಕ್ಕೆ ಸರಿಯಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದೆ.. ಕೇವಲ 23 ನಿಮಿಷಗಳಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಉಡೀಸ್ ಮಾಡಲಾಗಿದೆ.. ಈ ಮೂಲಕ ಭಾರತ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ.. ಈ ದಾಳಿಯ ನಂತರ ಬೆಳಗಿನ ಜಾವ 3.20ಕ್ಕೆ ಲಾಹೋರ್, ಸಿಯಾಲ್ ಕೋಟ್ ಏರ್ ಪೋರ್ಟ್ ಗಳನ್ನು ಮುಚ್ಚಲಾಗಿದೆ.. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಪಾಕಿಸ್ತಾನದ ಉಗ್ರರ ಹತರಾಗಿದ್ದಾರೆ ಎಂದು ಗೊತ್ತಾಗಿದೆ.



