ಕಿರುತೆರೆ ಹಾಗೂ ಹಿರಿತೆರೆ ಎರಡು ಕಡೆ ಗುರುತಿಸಿಕೊಂಡ ಕಲಾವಿದರು ನಟ ಕಾರ್ತಿಕ್ ಮಹೇಶ್ ಮತ್ತು ನಟಿ ನಮ್ರತಾ ಗೌಡ. ಇವರಿಬ್ಬರು ಕೂಡ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಇಬ್ಬರ ನಡುವೆ ಯಾವುದೇ ಸ್ನೇಹ ಇರಲಿಲ್ಲ. ಆದರೆ ಕೊನೆಯ ವೇಳೆಗೆ ಸಂಗೀತ ಅವರಿಂದ ದೂರವಾಗಿದ್ದ ಕಾರ್ತಿಕ್ ಅವರು ಕ್ಲೋಸ್ ಆಗಿದ್ದು, ನಮ್ರತಾ ಅವರ ಜೊತೆಗೆ. ಇಬ್ಬರು ಬಹಳ ಸಲುಗೆ ಇಂದ ಇರುತ್ತಿದ್ದರು. ಇವರಿಬ್ಬರ ಫೋಟೋಸ್ ಗಳನ್ನು ಟ್ರೋಲ್ ಪೇಜ್ ಗಳಲ್ಲಿ ಹಾಕಿ ಟ್ರೋಲ್ ಮಾಡಲಾಗಿತ್ತು. ಈ ಜೋಡಿ ಬಿಗ್ ಬಾಸ್ ಇಂದ ಹೊರಗಡೆ ಬಂದಮೇಲೆ ಕೂಡ ಸಾಕಷ್ಟು ಕಾರಣಕ್ಕೆ ಸಖತ್ ಸುದ್ದಿಯಾಗಿದ್ದಾರೆ. ಇದೀಗ ಇವರಿಬ್ಬರ ಡೇಟಿಂಗ್ ವದಂತಿಗಳು ಮತ್ತಷ್ಟು ಜೋರಾಗಿದೆ.
ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಕಾರ್ತಿಕ್ ಮತ್ತು ನಮ್ರತಾ ಇಬ್ಬರು ಲವ್ವಿ ಡವ್ವಿ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು, ಟ್ರೋಲ್ ಸಹ ಆಗಿದ್ದರು. ಕಾರ್ತಿಕ್ ಹುಡುಗಿಯರ ಹಿಂದೆ ಬಿದ್ದಿದ್ದಾರೆ ಎಂದು ಕೂಡ ಹೇಳಲಾಗುತ್ತಿತ್ತು. ಇನ್ನು ನಮ್ರತಾ ಅವರು ಸಹ ಟ್ರೋಲ್ ಆಗಿದ್ದರು. ಹೊರಗಡೆ ಬಂದ ಮೇಲೆ ಇವರಿಬ್ಬರ ಸ್ನೇಹ ಅದೇ ರೀತಿ ಮುಂದುವರೆದಿತ್ತು. ಕಾರ್ತಿಕ್ ಮತ್ತು ನಮ್ರತಾ ಇಬ್ಬರು ಸಹ ಬಿಗ್ ಬಾಸ್ ಬೇರೆ ಸ್ಪರ್ಧಿಗಳ ಜೊತೆಗೆ ಹೊರಗಡೆ ಸಹ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರು ಜೊತೆಯಾಗಿ ಒಂದು ಜಾಹೀರಾತಿನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಹ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹಾಗೆಯೇ ಇವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ಪೋಸ್ಟ್ ನೋಡಿ ಅಭಿಮಾನಿಗಳು ಬೇರೆಯದೇ ಮಾತು ಆಡುತ್ತಿದ್ದಾರೆ.
ಕಾರ್ತಿಕ್ ಹಾಗೂ ನಮ್ರತಾ ಇಬ್ಬರು ಈಗ ಮುಂಬೈನಲ್ಲಿ ಕ್ಲಿಕ್ ಮಾಡಿರುವ ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿದ್ದಾರೆ. ಇಬ್ಬರೂ ಒಂದೇ ಜಾಗಕ್ಕೆ ಹೋಗಿ, ಒಂದೇ ಕಡೆ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಸಿಂಗಲ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದು, ಸೆಪರೇಟ್ ಆಗಿಯೇ ಅವುಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಇವರಿಬ್ಬರ ಫ್ಯಾನ್ಸ್ ಇಬ್ಬರೂ ಒಂದೇ ಕಡೆ ಇರುವುದನ್ನು ಕಂಡು ಹಿಡಿದಿದ್ದು, ಇಬ್ಬರ ನಡುವೆ ವಿಶೇಷವಾಗಿ ಏನೋ ನಡೀತಿರಬಹುದು ಎಂದು ಪೋಸ್ಟ್ಸ್ ಶೇರ್ ಮಾಡುತ್ತಿದ್ದಾರೆ. ಇವರಿಬ್ಬರು ಈ ರೀತಿ ಫೋಟೋಸ್ ಶೇರ್ ಮಾಡುತ್ತಿರುವುದು, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ನೆನಪು ಮಾಡುತ್ತಿದೆ. ಅವರು ಕೂಡ ಇದೇ ರೀತಿ ಪೋಸ್ಟ್ ಶೇರ್ ಮಡುತ್ತಾರೆ.
ಹಾಗೆಯೇ ಕಾರ್ತಿಕ್ ಮತ್ತು ನಮ್ರತಾ ಮಧ್ಯೆ ಲವ್ ಏನಾದರು ನಡೆಯುತ್ತಿದೆಯಾ? ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ. ಆದರೆ ಈ ಬಗ್ಗೆ ನಮ್ರತಾ ಅವರಾಗಲಿ, ಕಾರ್ತಿಕ್ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರು ತಮ್ಮ ಪಾಡಿಗೆ ಲೈಫ್ ಎಂಜಾಯ್ ಮಾಡುತ್ತಾ ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ನಮ್ರತಾ ಅವರೊಡನೆ ಹೆಚ್ಚಾಗಿ ಸಮಯ ಕಳೆಯುತ್ತಾ, ಫ್ಲರ್ಟ್ ಮಾಡುವುದಕ್ಕೂ ಪ್ರಯತ್ನ ಪಡುತ್ತಿದ್ದರು ಕಾರ್ಥಿಕ್. ಇಬ್ಬರು ಆ ರೀತಿ ಮಾತನಾಡುವುದನ್ನ ವೀಕ್ಷಕರು ಸಹ ನೋಡಿದ್ದರು. ಇಬ್ಬರ ಫೋಟೋಸ್ ಹಾಕಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದು ಕೂಡ ತುಂಬಾ ಇದೆ. ಹಾಗಾಗಿ ಈ ಫೋಟೋಸ್ ನೋಡಿದ ನೆಟ್ಟಿಗರು ಮತ್ತೆ ಅದೇ ಥರ ಗಾಸಿಪ್ ಶುರು ಮಾಡುತ್ತಿದ್ದಾರೆ. ಇದರಲ್ಲಿ ಎಷ್ಟು ನಿಜವಿದೆಯೋ, ಎಷ್ಟು ಸುಳ್ಳಿದೆಯೋ ಗೊತ್ತಿಲ್ಲ..
ಜೊತೆಗೆ ಕಾರ್ತಿಕ್ ಮತ್ತು ನಮ್ರತಾ ಇಬ್ಬರು ಸಹ ತಮ್ಮ ಸ್ನೇಹದ ಬಗ್ಗೆ ಅಥವಾ ಇನ್ಯಾವುದೇ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದು ಇಲ್ಲ. ಇನ್ನು ಕಲಾವಿದರು ಎಂದಮೇಲೆ ಅವರ ಬಗ್ಗೆ ಈ ಥರ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತದೆ. ಹಾಗಾಗಿ ಅವರುಗಳೇ ತಮ್ಮ ನಡುವೆ ಏನಿದೆ ಎಂದು ಬಹಿರಂಗವಾಗಿ, ಎಲ್ಲರ ಜೊತೆಗೆ ಹಂಚಿಕೊಳ್ಳುವ ವರೆಗು ಕೂಡ ಅಭಿಮಾನಿಗಳು ಮತ್ತು ನೆಟ್ಟಿಗರು ಎಲ್ಲರೂ ಕೂಡ ಕಾಯಬೇಕಿದೆ. ಆದರೆ ಇವರಿಬ್ಬರ ಪೋಸ್ಟ್ ಗಳು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರನ್ನು ತುಂಬಾ ನೆನಪಿಸುತ್ತಿದೆ. ಅವರಿಬ್ಬರು ಕೂಡ ಡೇಟ್ ಮಾಡುತ್ತಿದ್ದಾರೆ ಎಂದು ಗೊತ್ತೇ ಇದೆ. ಅವರಿಬ್ಬರು ಕೂಡ ಹೀಗೆ ಒಂದೇ ಜಾಗಕ್ಕೆ ಹೋಗುತ್ತಾರೆ. ಫೋಟೋಸ್ ಪೋಸ್ಟ್ ಮಾಡುತ್ತಾರೆ.
ಜೊತೆಯಾಗಿ ರಜೆಗೆ ವಿದೇಶಕ್ಕೆ ಹೋಗುತ್ತಾರೆ, ಹಬ್ಬಗಳನ್ನು ಜೊತೆಯಾಗಿ ಆಚರಣೆ ಮಾಡುತ್ತಾರೆ, ಬರ್ತ್ ಡೇ ಸಮಯದಲ್ಲಿ ಜೊತೆಯಾಗಿ ಸೆಲೆಬ್ರೇಟ್ ಮಾಡುತ್ತಾರೆ..ಆದರೆ ಇಬ್ಬರು ಜೊತೆಯಾಗಿರುವ ಫೋಟೋಸ್ ಗಳನ್ನು ಯಾವತ್ತಿಗೂ ಶೇರ್ ಮಾಡುವುದಿಲ್ಲ. ಆದರೆ ಜಾಗ ಒಂದೇ ಅವರ ಪೋಸ್ಟ್ ಗಳನ್ನು ಗಮನಿಸಿ ನೋಡಿದರೆ ಗೊತ್ತಾಗುತ್ತದೆ. ಇವರು ರಿಲೇಶನ್ಷಿಪ್ ನಲ್ಲಿ ಇರುವ ವಿಚಾರವನ್ನು ಸಹ ಬಹಿರಂಗವಾಗಿ ಹೇಳಿಕೊಂಡಿಲ್ಲ. ಕಾರ್ತಿಕ್ ಮತ್ತು ನಮ್ರತಾ ಕೂಡ ಅದೇ ರೀತಿ ಆಗಿದ್ದು, ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರನ್ನು ಫಾಲೋ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲಾ ಉತ್ತರ ಸಿಗುತ್ತಾ ಎಂದು ಕಾದು ನೋಡಬೇಕಿದೆ.



