ಸದ್ಯ ದೇಶದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಭಾರತ ಪಾಕಿಸ್ತಾನದ ನಡುವೆ ಈಗಾಗಲೇ ಯುದ್ಧ ಆರಂಭ ಆಗಿದೆ. ನಿನ್ನೆ ರಾತ್ರಿಯವರೆಗೂ ಕೂಡ ದಾಳಿ ಮುಂದುವರೆದಿತ್ತು. ಗಳಿಗೆಗೊಮ್ಮೆ ಅಪ್ರಚೋದಿತ ಗುಂಡಿನ ದಾಳಿಗೆ ಮುಂದಾಗುತ್ತಿರೋ ಪಾಕಿಸ್ತಾನಕ್ಕೆ ಸೈನಿಕರು ಪ್ರತ್ಯುತ್ತರ ಕೊಡುತ್ತಲೇ ಇದ್ದಾರೆ. ಭಾರತೀಯ ನಾಗರಿಕರ ಮತ್ತು ಸೇನಾ ನೆಲೆಯನ್ನು ಟಾರ್ಗೆಟ್ ಮಾಡುತ್ತಿದ್ದ ಪಾಕಿ ಪಾಕಿಸ್ತಾನಿ, ತನ್ನ ಕೃತ್ಯ ಮುಂದುವರೆಸಿದೆ. ಇದರ ಮಧ್ಯೆ ಈ ಪಾಕಿಸ್ತಾನ ಯುದ್ಧ ವಿಮಾನ, ಕ್ಷಿಪಣಿ, ಡ್ರೋನ್ ಗಳನ್ನ ಹೊಡೆದುರುಳಿಸಲಾಗಿದೆ.

ಹೌದು, ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮುಂದುವರೆಸಲಾಗಿದೆ. 26 ಅಮಾಯಕ ಪ್ರವಾಸಿಗರ ಪ್ರಾಣ ತೆಗೆಯೋ ಮೂಲಕ ಭಾರತೀಯರನ್ನ ಕೆಣಕಿದ್ದ ಈ ಪಾಕಿಸ್ತಾನಕ್ಕೆ ಉತ್ತರ ಕೊಟ್ಟಿದ್ದರೂ, ಈ ಕಾರ್ಯಾಚರಣೆಯ ಪ್ರತಿಯಾಗಿ ಪಾಕಿಸ್ತಾನ ಭಾರತದ ನಾಗರಿಕರನ್ನು ಗರಿಯಾಗಿಸಿಕೊಂಡು ದಾಳಿ ನಡೆಸುತ್ತಲೇ ಇದೆ. ಇದಕ್ಕೆ ಉತ್ತರವನ್ನ ಆಗಿಂದಾಗಲೇ ಭಾರತ ಕೂಡ ಕೊಡುತ್ತಿದೆ. ಇದೆಲ್ಲದರ ನಡುವೆ ಸೈನಿಕರಿಗೆ ಶಕ್ತಿ, ಧೈರ್ಯ ಕೊಡಲಿ ಅಂತ ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ಮುಂದುವರೆದಿವೆ.
ಅಷ್ಟೆ ಅಲ್ಲ ಮಸೀದಿಗಳಲ್ಲೂ ಕೂಡ ವಿಶೇಷ ಪ್ರಾರ್ಥನೆಗೆ ಸಚಿವ ಜಮೀರ್ ಅಹ್ಮದ್ ಸೂಚನೆ ಕೊಟ್ಟಿದ್ದಾರೆ. ಇದರ ಮಧ್ಯೆ ಮತ್ತೊಂದು ಆಕ್ರೋಶಕ್ಕೆ ಜಮೀರ್ ಗುರಿಯಾಗಿದ್ದಾರೆ. ನಾನು ಆತ್ಮಾಹುತಿ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ದಕ್ಕೆ ಹೋಗುತ್ತೇನೆ. ದೇಶಕ್ಕಾಗಿ ನಾನು ಹುತಾತ್ಮನಾಗಲು ಸಿದ್ಧ ಎಂದು ಹೇಳಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ತಿರಂಗ ಯಾತ್ರೆಗೆ ಗೈರಾಗಿದ್ದಾರೆ.

ಇಂದು ಕಾಂಗ್ರೆಸ್ ತಿರಂಗ ಯಾತ್ರೆ ನಡೆಸಿತು. ಭಯೋತ್ಪಾದನೆ ವಿರುದ್ಧ ಭಾರತೀಯ ಸೇನೆ ನಡೆಸಿದ ಸಿಂಧೂರ್ ಕಾರ್ಯಾಚರಣೆಯನ್ನ ಬೆಂಬಲಿಸಿ ತಿರಂಗ ಯಾತ್ರೆ ನಡೆಯಿತು ಕಾಂಗ್ರೆಸ್. ಕೆ.ಆರ್.ಸರ್ಕಲ್ನಿಂದ ಚಿನ್ನಸ್ವಾಮಿ ಸ್ಟೇಡಿಯಂ ಕ್ರೀಡಾಂಗಣದ ವೃತ್ತದವರೆಗೂ ನಡೆದ ತಿರಂಗ ಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಸಿಎಂ, ಡಿಸಿಎಂ, ಸಚಿವರು ಸೇರಿದಂತೆ ಇಡೀ ಕಾಂಗ್ರೆಸ್ ಅಲ್ಲಿ ನೆರೆದಿದ್ದರೆ, ಜಮೀರ್ ಅಹ್ಮದ್ ಮಾತ್ರ ಗೈರಾಗಿದ್ದರು.
ತಾವು ಬಾಂಬ್ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗ್ತೀನಿ ಅಂತ ಎರಡೆರಡು ಬಾರಿ ಹೇಳಿಕೆ ನೀಡಿದ್ದ ಈ ಸಚಿವ ಇಂದು ಈ ತಿರಂಗ ಯಾತ್ರೆಗೆ ಗೈರಾಗಿದ್ದ ಅನೇಕರ ಟೀಕೆಗೆ ಗುರಿಯಾದಂತಾಗಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರ ಪಾಕಿಸ್ತಾನದ ವಿರುದ್ಧ ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲ ಇದೆ. ಇದಕ್ಕಾಗಿ ನಾವು ಪ್ರಾಣ ಕೊಡೋದಕ್ಕೂ ಸಿದ್ದ ಎಂದು ಹೇಳುತ್ತಿದ್ದ ಸಚಿವ ಅವರ ಪಕ್ಷ ನಡೆಸಿದ್ದ ಕಾರ್ಯಕ್ರಮಕ್ಕೆ ಗೈರಾಗೋ ಮೂಲಕ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.

ಸೂಸೈಡ್ ಬಾಂಬರ್ ಆಗ್ತೀನಿ, ಗಡಿಗೆ ಹೋಗ್ತೀನಿ, ಯುದ್ಧದಲ್ಲಿ ಭಾಗಿಯಾಗ್ತೀನಿ ಎಂದು ಹೇಳುತ್ತಿದ್ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಈಗ ಟೀಕೆಗಳು ಹೆಚ್ಚಾಗ್ತಾ ಇವೆ. ಜಮೀರ್ ಅವರ ಗೈರು ಕೇವಲ ಸಾರ್ವಜನಿಕವಾಗಿ ಅಷ್ಟೆ ಅಲ್ಲ ಸ್ವತಃ ಕಾಂಗ್ರೆಸ್ನಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಪಷ್ಟನೆ ಕೊಟ್ಟಿರೋ ಜಮೀರ್ ಅಹ್ಮದ್, ಮತ್ತೆ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗೋದಾಗಿ ಪುನರ್ ಉಚ್ಚಾರ ಮಾಡಿದ್ದಾರೆ. ಅಷ್ಟೆ ಅಲ್ಲ ತಿರಂಗ ಯಾತ್ರೆ ಗೈರಿನ ಕುರಿತು ಮಾತನಾಡಿರೋ ಅವರು, ಸಿಎಂ ಕೂಡ ಕರೆ ಮಾಡಿ ಹೇಳಿದ್ದರು. ಆದರೆ ಬೇರೆ ಕಾರ್ಯಕ್ರಮಗಳಿಂದ ಹೋಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಗೈರಿನ ಕುರಿತು ಬಿಜೆಪಿ ಆರೋಪಕ್ಕೆ ಮಾತನಾಡಿರೋ ಅವರು, ಬಿಜೆಪಿಗರಿಗೆ ಇನ್ನೇನು ಕೆಲಸ. ಹಾಗಾಗಿ ಟೀಕೆ ಮಾಡುತ್ತಾರೆ ಎಂದಿದ್ದಾರೆ.



