ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ಹೀರೋಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸಹ ಒಬ್ಬರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿಹೆಚ್ಚು ಅಭಿಮಾನಿ ಬಳಗ ಹೊಂದಿರುವ ಸ್ಟಾರ್ ಇವರು, 72ರ ಹರೆಯದಲ್ಲೂ ರಜನಿಕಾಂತ್ ಅವರಿಗೆ ಇರುವ ಎನರ್ಜಿ, ಅವರಿಗೆ ಇರುವ ಬೇಡಿಕೆ ಮಾತ್ರ ಸ್ವಲ್ಪ ಕೂಡ ಕಡಿಮೆ ಆಗಿಲ್ಲ. ವರ್ಷಗಳು ಕಳೆದಷ್ಟು ಅವರಿಗೆ ಇರುವ ಕ್ರೇಜ್ ಜಾಸ್ತಿ ಆಗುತ್ತಲೇ ಇದೆ ಹೊರತು ಕಡಿಮೆ ಅಂತೂ ಆಗಿಲ್ಲ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಈಗ ಕೂಲಿ ಹಾಗೂ ಜೈಲರ್ 2 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಕೂಲಿ ಸಿನಿಮಾ ಶೂಟಿಂಗ್ ಮುಕ್ತಾಯದ ಹಂತದಲ್ಲಿದ್ದು ಇದೇ ವರ್ಷ ಆಗಸ್ಟ್ 15ರಂದು ಕೂಲಿ ಸಿನಿಮಾ ತೆರೆಕಾಣಲಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸಹ ಜಾಸ್ತಿಯೇ ಇದೆ. ಇನ್ನು ರಜನಿಕಾಂತ್ ಅವರು ಪಡೆದುಕೊಂಡಿರುವ ಸಂಭಾವನೆಯ ಮೊತ್ತ ಕೂಡ ಚರ್ಚೆಗೆ ಕಾರಣವಾಗಿದೆ.

ರಜನಿಕಾಂತ್ ಅವರು ಹಿಂದಿನಿಂದಲೂ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿರುವವರು. ಇವರ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲ ಹೊರದೇಶದಲ್ಲಿ ಸಹ ಒಳ್ಳೆಯ ಕಲೆಕ್ಷನ್ ಮಾಡುತ್ತದೆ. ರಜನಿಕಾಂತ್ ಅವರ ಸಿನಿಮಾ ಮೇಲೆ ಹಣ ಸುರಿದರೆ ನಿರ್ಮಾಪಕರ ಜೇಬು ಭರ್ತಿ ಆಗಿ, ಲಾಭದ ಸುರಿಮಳೆಯೇ ಆಗುವುದು ಗ್ಯಾರೆಂಟಿ. ಅದೇ ಕಾರಣಕ್ಕೆ ಅವರ ಸಿನಿಮಾ ಎಂದರೆ ಹಿಂದೂ ಮುಂದು ಯೋಚನೆ ಮಾಡದೇ ನಿರ್ಮಾಪಕರು ಹಣ ಹಾಕುತ್ತಾರೆ. ರಜನಿಕಾಂತ್ ಅವರ ವೇಟೈಯನ್ ಹಾಗೂ ಜೈಲರ್ ಸಿನಿಮಾಗಳ ಸಕ್ಸಸ್ ಹೇಗಿತ್ತು ಎಂದು ನಿಮಗೇ ಗೊತ್ತಲ್ಲ. ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದವು. ಇದೀಗ ರಜನಿಕಾಂತ್ ಅವರು ಕೂಲಿ ಸಿನಿಮಾ ಮೂಲಕ ಮತ್ತೊಮ್ಮೆ ಬೆಳ್ಳಿ ತೆರೆಮೇಲೆ ಬರುವುದಕ್ಕೆ ಸಜ್ಜಾಗಿದ್ದಾರೆ..
ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಲೋಕೇಶ್ ಕನಕರಾಜ್ ಅವರು. ತಮಿಳಿನ ಸ್ಟಾರ್ ಡೈರೆಕ್ಟರ್ ಗಳಲ್ಲಿ ಇವರು ಸಹ ಒಬ್ಬರು. ಸ್ಟಾರ್ ಹೀರೋಗಳಿಗೆ ಪಕ್ಕಾ ಮಾಸ್ ಸಿನಿಮಾಗಳನ್ನು ನೀಡುವ ಮೂಲಕ, ಬಹುಬೇಡಿಕೆಯ ನಿರ್ದೇಶಕ ಆಗಿದ್ದಾರೆ ಲೋಕೇಶ್. ಕಾರ್ತಿ, ವಿಜಯ್, ಸೂರ್ಯ, ಕಮಲ್ ಹಾಸನ್, ವಿಜಯ್ ಸೇತುಪತಿ ಇವರೆಲ್ಲರ ಜೊತೆಗೆ ಸಿನಿಮಾ ಮಾಡಿ ಗೆದ್ದಿರುವ ಇವರು ಇದೀಗ ರಜನಿಕಾಂತ್ ಅವರಿಗಾಗಿ ಕೂಲಿ ಸಿನಿಮಾ ಮಾಡಿದ್ದಾರೆ. ವಿಜಯ್ ಅವರಿಗಾಗಿ ಮಾಡಿದ ಮಾಸ್ಟರ್ ಮತ್ತು ಲಿಯೋ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಕಮಲ್ ಹಾಸನ್ ಅವರೊಡನೆ ಮಾಡಿದ ವಿಕ್ರಂ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಇದೆ ಸಿನಿಮಾದಲ್ಲಿ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಮತ್ತು ಸೂರ್ಯ ಸಹ ನಟಿಸಿದ್ದಾರೆ. ವಿಕ್ರಂ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು..

ಇದೀಗ ಇವರು ರಜನಿಕಾಂತ್ ಅವರೊಡನೆ ಕೂಲಿ ಸಿನಿಮಾ ಮಾಡಿದ್ದು, ಈ ಸಿನಿಮಾ ಮೇಲೆ ಕೂಡ ಅದೇ ರೀತಿ ನಿರೀಕ್ಷೆ ಇದೆ. ಸೂಪರ್ ಸ್ಟಾರ್ ಫ್ಯಾನ್ಸ್ ಗೆ ಲೋಕೇಶ್ ಅವರು ನಿರಾಸೆ ಮಾಡುವುದಿಲ್ಲ ಎನ್ನುವ ನಂಬಿಕೆ ಇದೆ. ಇನ್ನು ಈ ಸಿನಿಮಾವನ್ನು ನಿರ್ಮಾಣ ಮಾಡಿರುವುದು ಕಲಾನಿಧಿ ಮಾರನ್ ಅವರು, ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾ ನಿರ್ಮಾಣ ಮಾಡಿ ಒಳ್ಳೆಯ ಲಾಭ ಗಳಿಸಿದ್ದರು. ಇದೀಗ ಮತ್ತೆ ಅದೇ ನಿರೀಕ್ಷೆಯಲ್ಲಿ ಕೂಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೂಲಿ ಬಿಗ್ ಬಜೆಟ್ ಸಿನಿಮಾ ಆಗಿದ್ದು, ದೊಡ್ಡ ತಾರಾಗಣವನ್ನೇ ಹೊಂದಿದೆ. ರಜನಿಕಾಂತ್ ಅವರ ಜೊತೆಗೆ ನಮ್ಮ ಹೆಮ್ಮೆಯ ಕನ್ನಡಿಗ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸುತ್ತಿರುವುದು ಮತ್ತೊಂದು ವಿಶೇಷ. ಉಪೇಂದ್ರ ಅವರ ಸಿನಿಮಾದ ಹೈಲೈಟ್ ಆಗಲಿದ್ದಾರೆ.
ಇನ್ನು ಕನ್ನಡತಿಯೇ ಆಗಿರುವ ಪೂಜಾ ಹೆಗ್ಡೆ ಈ ಸಿನಿಮಾದ ಸ್ಪೆಷಲ್ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಎಲ್ಲರಿಗೂ ದುಬಾರಿ ಸಂಭಾವನೆಯನ್ನೇ ನೀಡಲಾಗಿದೆ..ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ ಕೂಲಿ ಸಿನಿಮಾದ ಒಟ್ಟು ಬಜೆಟ್ ಸುಮಾರು 460 ಕೋಟಿ ರೂಪಾಯಿ ಆಗಿದ್ದು, ಇದರಲ್ಲಿ ರಜನಿಕಾಂತ್ ಅವರಿಗೆ ನೀಡಿರುವ ಸಂಭಾವನೆ ಬರೋಬ್ಬರಿ 260 ಕೋಟಿ ರೂಪಾಯಿ ಆಗಿದೆ..ಹೌದು, ಇದು ಭಾರತದ ಒಬ್ಬ ನಾಯಕ ಪಡೆದಿರುವ ಅತ್ಯಂತ ದುಬಾರಿ ಸಂಭಾವನೆ ಎಂದು ಹೇಳಲಾಗುತ್ತಿದೆ. ಏಷ್ಯಾದಲ್ಲಿ ಅತಿಹೆಚ್ಚು ಸಂಭಾವನೆ ನಾಯಕ ರಜನಿಕಾಂತ್ ಆಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದ್ದು, 72ರ ಹರೆಯದಲ್ಲೂ ಈ ರೀತಿಯ ಕ್ರೇಜ್ ಹಾಗೂ ಬೇಡಿಕೆ ಉಳಿಸಿಕೊಂಡಿರುವುದು ಬಹಳ ವಿಶೇಷ, ಈ ವಯಸ್ಸಿನಲ್ಲಿ ಇಷ್ಟು ಸಂಭಾವನೆ ಪಡೆದಿರುವುದು ಕೂಡ ಅಷ್ಟೇ ವಿಶೇಷ ಆಗಿದೆ.

ಇನ್ನು ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ಸುಮಾರು 60 ಕೋಟಿ ರೂಪಾಯಿ ಸಂಭಾವನೆ ಕೊಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಹಾಗೆಯೇ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡಿರುವ ಪೂಜಾ ಹೆಗ್ಡೆ ಅವರಿಗೆ ಸಹ 2 ಕೋಟಿ ರೂಪಾಯಿ ಸಂಭಾವನೆ ಕೊಡಲಾಗಿದೆಯಂತೆ. ಒಟ್ಟಿನಲ್ಲಿ ನಿರ್ಮಾಪಕರು ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟು 460 ಕೋಟಿ ರೂಪಾಯಿಗಳನ್ನ ಖರ್ಚು ಮಾಡಿದ್ದಾರೆ, ಅರ್ಧಕ್ಕಿಂತ ಹೆಚ್ಚು ಹಣ ಸಂಭಾವನೆಯ ರೂಪದಲ್ಲಿ ಖರ್ಚಾಗಿದೆ. ಇನ್ನೇನು ಒಂದೆರಡು ತಿಂಗಳುಗಳಲ್ಲಿ ಕೂಲಿ ಸಿನಿಮಾ ತೆರೆಕಾಣಲಿದ್ದು, ಸಿನಿಮಾ ಯಾವ ರೀತಿ ಯಶಸ್ವಿ ಆಗುತ್ತದೆ, ರಜನಿಕಾಂತ್ ಅವರ ಅಭಿಮಾನಿಗಳಿಗೆ ಸಂತೋಷ ನೀಡುತ್ತಾ ಎಂದು ಕಾದು ನೋಡಬೇಕಿದೆ.. ಸೂಪರ್ ಸ್ಟಾರ್ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಕಿಕ್ ಕೊಡೋದ್ರಲ್ಲಿ ಯಾವುದೇ ಸಂಶಯವಿಲ್ಲ.
ಇನ್ನು ರಜನಿಕಾಂತ್ ಅವರ ಮುಂದಿನ ಸಿನಿಮಾ ಜೈಲರ್ 2. ಈಗಷ್ಟೇ ಈ ಸಿನಿಮಾದ ಶೂಟಿಂಗ್ ಶುರುವಾಗಿದೆ. ರಮ್ಯಾ ಕೃಷ್ಣನ್ ಅವರು ಶೂಟಿಂಗ್ ಮೊದಲ ದಿನದ ಫೋಟೋ ಸಹ ಶೇರ್ ಮಾಡಿದ್ದರು.. ಜೈಲರ್ ಸಿನಿಮಾ ಬ್ಲಾಕ್ ಬಸ್ಟರ್ ಆದ ಬೆನ್ನಲ್ಲಿ ಜೈಲರ್ 2 ಸೆಟ್ಟೇರಿದ್ದು, ಮೊದಲ ಭಾಗದಲ್ಲಿ ಶಿವಣ್ಣ ಅವರ ಪಾತ್ರ ಜನರಿಗೆ ಬಹಳ ಇಷ್ಟವಾಗಿ, ಅವರ ಒಂದು ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಎರಡನೇ ಭಾಗ ಸಹ ಬರುತ್ತಿದ್ದು, ಎಲ್ಲಾ ಫ್ಯಾನ್ಸ್ ಶಿವಣ್ಣ ಮತ್ತು ರಜನಿಕಾಂತ್ ಅವರನ್ನು ಮತ್ತೊಮ್ಮೆ ಜೊತೆಯಾಗಿ ನೋಡೋದಕ್ಕೆ ಕಾಯುತ್ತಿದ್ದಾರೆ.



