ಇಂದು 8 ಮೇ 2025 ಗುರುವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ. ಇಂದು ಬೆಳಗ್ಗೆ 01:54 ರಿಂದ 03:29 ವರೆಗೆ ರಾಹುಕಾಲವಿರುತ್ತದೆ. ಈ ದಿನ ಏಕಾದಶಿ ಇರುವುದರಿಂದ ಯಾರೆಲ್ಲಾ ಉಪವಾಸವಿದ್ದು ವಿಷ್ಣುವಿನ ಆರಾಧನೆ ಮಾಡುವರೋ ಅವರಿಗೆ ಶುಭಫಲ ದೊರೆಯುತ್ತದೆ.
ಮೇಷ ರಾಶಿ
ವ್ಯಾಪಾರ, ವ್ಯವಹಾರದಲ್ಲಿ ಲಾಭ, ಯಶಸ್ಸನ್ನು ಅಪೇಕ್ಷಿಸಬಹುದು, ಮನೆಯಲ್ಲಿ ಮನಸ್ತಾಪಗಳು ಉಂಟಾಗಬಹುದು ಜಾಗ್ರತೆಯಿಂದ ಇರಿ. ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ವರ್ಗಾವಣೆ ಅಥವಾ ಬಡ್ತಿ ಅಪೇಕ್ಷಿಸುತ್ತಿರುವ ಸರ್ಕಾರಿ ಉದ್ಯೋಗಿಗಳು ಶುಭ ಸುದ್ದಿ ಕೇಳಲಿದ್ದೀರಿ.
ವೃಷಭ ರಾಶಿ
ಮಾಡುವ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತದೆ. ಸರ್ಕಾರದಿಂದ ಸವಲತ್ತುಗಳನ್ನು ಅಪೇಕ್ಷೆ ಮಾಡುತ್ತಿರುವವರಿಗೆ ಲಾಭದಾಯಕ ದಿನವಾಗಿದೆ. ವ್ಯಾಪಾರದ ಸ್ಥಳಗಳಲ್ಲಿ ಹಿತಶತ್ರುಗಳಿಂದ ಕಿರಿಕಿರಿ ಅನುಭವಿಸಲಿದ್ದೀರಿ, ದಿನಸಿ ವ್ಯಾಪಾರಿಗಳಿಗೆ ಇಂದು ಲಾಭದಾಯಕ ದಿನವಾಗಿದೆ.
ಮಿಥುನ ರಾಶಿ
ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಬಹುದು, ಭೂಮಿ ಖರೀದಿಸುವ ಯೋಗವಿದೆ, ಹೊಸ ಕೆಲಸ ಕಾರ್ಯಗಳಲ್ಲಿ ನಿಮ್ಮ ಕುಟುಂಬದವರು ಬೆಂಬಲ ನೀಡಲಿದ್ದಾರೆ. ಮನಸ್ಸಿನಲ್ಲಿ ಗೊಂದಲ ಇರುತ್ತದೆ. ಆದರೆ ಏನೇ ಪರಿಸ್ಥಿತಿ ಇದ್ದರೂ ತಾಳ್ಮೆಯಿಂದ ನಿಭಾಯಿಸಿ.
ಕಟಕ ರಾಶಿ:
ಇಂದು ನಿಮಗೆ ಶುಭ ದಿನ, ಹೊಸ ವಸ್ತ್ರ, ಆಭರಣ ಕೊಳ್ಳಲಿದ್ದೀರಿ. ಮನಸ್ಸಿಗೆ ಖುಷಿ ಎನಿಸುವಂಥ ಘಟನೆಗಳು ನಡೆಯಲಿದೆ, ನೀವು ಮಾಡುವ ವ್ಯಾಪಾರದಲ್ಲಿ ಲಾಭ ಗಳಿಸಲಿದ್ದೀರಿ, ಕೃಷಿಕರಿಗೆ ಅದರಲ್ಲೂ ತರಕಾರಿ ಬೆಳೆಗಾರರಿಗೆ ಇಂದು ಸಾಕಷ್ಟು ಲಾಭ ದೊರೆಯುತ್ತದೆ.
ಸಿಂಹ ರಾಶಿ
ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತದೆ. ದೇವರ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ. ಹಣಕಾಸಿನ ವಿಚಾರಗಳಲ್ಲಿ ಜಾಗ್ರತೆಯಿಂದ ಇರಿ. ಭೂ ವ್ಯವಹಾರದಲ್ಲಿ ವ್ಯಾಜ್ಯ ಉಂಟಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿ
ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ಸೇರಲಿದೆ, ಇದರಿಂದ ನಿಮ್ಮ ಮನಸ್ಸಿಗೆ ಖುಷಿಯಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಹೋಟೆಲ್ ಅಥವಾ ಆಹಾರಕ್ಕೆ ಸಂಬಂಧಿಸಿದ ಬಿಸ್ನೆಸ್ನಲ್ಲಿ ಲಾಭ ದೊರೆಯಲಿದೆ.
ತುಲಾ ರಾಶಿ
ಅಧಿಕವಾದ ಖರ್ಚು ಇರಲಿದೆ, ಜಾಗ್ರತೆಯಿಂದಿರಿ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಸ್ನೇಹಿತರೊಂದಿಗೆ ಮನಸ್ತಾಪ ಉಂಟಾಗಲಿದೆ. ಚಾಲಕರಿಗೆ ಒತ್ತಡದ ದಿನವಾಗಿದೆ, ಆದ್ದರಿಂದ ಜಾಗ್ರತೆಯಿಂದ ವಾಹನ ಚಲಾಯಿಸಿ.
ವೃಶ್ಚಿಕ ರಾಶಿ
ಮನಸ್ಸಿನ ಇಷ್ಟಾರ್ಥಗಳು ಇಂದು ಈಡೇರುತ್ತದೆ. ಯಾವುದೇ ಕೆಲಸಗಳು ಯಶಸ್ವಿಯಾಗುತ್ತದೆ. ಚಿನ್ನ, ಬೆಳ್ಳಿ ವ್ಯಾಪಾರಸ್ಥರಿಗೆ ಬಹಳ ಲಾಭವಿದೆ. ಮನಸ್ಸಿನಲ್ಲಿ ಯಾವುದೇ ವಿಚಾರವಾಗಿ ಗೊಂದಲ ಇರುತ್ತದೆ. ಜನರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಆದ್ದರಿಂದ ತಾಳ್ಮೆಯಿಂದ ವ್ಯವಹರಿಸಿ.
ಧನು ರಾಶಿ
ಮಾಡುವ ಕೆಲಸ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುತ್ತದೆ. ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ಮೊಣಕಾಲಿಗೆ ಪೆಟ್ಟಾಗುವ ಸಾಧ್ಯತೆ ಇದೆ, ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರಿ. ನಿಮ್ಮ ಮನಸ್ಸಿಗೆ ಖುಷಿ ಕೊಡುವ ಇಷ್ಟಮಿತ್ರರೊಂದಿಗೆ ಭೂರಿ ಭೋಜನ ಮಾಡಲಿದ್ದೀರಿ. ಹೊಸ ಕೆಲಸ ಆರಂಭಿಸಲು ಇಂದು ಉತ್ತಮ ದಿನ.
ಮಕರ ರಾಶಿ
ಎಲ್ಲಾ ಕೆಲಸ ಕಾರ್ಯಗಳಲ್ಲೂ ಅಡೆತಡೆ ಉಂಟಾಗಲಿದೆ. ಜಾಗ್ರತೆಯಿಂದ ವ್ಯವಹರಿಸದಿದ್ದರೆ ಸಾಲದ ಸುಳಿಯಲ್ಲಿ ಸಿಲುಕಲಿದ್ದೀರಿ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಆನ್ಲೈನ್ ಬಿಸ್ನೆಸ್, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿರುವವರು ಜಾಗ್ರತೆಯಿಂದ ಇರಿ. ಇಲ್ಲದಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಇಷ್ಟಮಿತ್ರರ ಸಹಾಯದಿಂದ ಹಿಂದೆ ಮಾಡಿದ ಸಾಲದ ಸುಳಿಯಿಂದ ಹೊರ ಬರಲಿದ್ದೀರಿ.
ಕುಂಭ ರಾಶಿ
ಸಾಲದ ಸುಳಿಯಲ್ಲಿ ಸಿಲುಕಲಿದ್ದೀರಿ, ವ್ಯಾಪಾರದಲ್ಲಿ ನಷ್ಟವಾಗಲಿದೆ. ಬಡವರಿಗೆ, ಪ್ರಾಣಿಗಳಿಗೆ ಅನ್ನ, ಆಹಾರ ನೀಡುವುದು ಸೇರಿದಂತೆ ಇಂದು ನೀವು ಮಾಡುವ ಪುಣ್ಯದ ಕೆಲಸದಿಂದ ಮುಂದಿನ ದಿನಗಳಲ್ಲಿ ಒಳಿತಾಗಲಿದೆ. ನೀರಿನಿಂದ ಅಪಾಯವಿದೆ ಆದ್ದರಿಂದ ಎಚ್ಚರಿಕೆಯಿಂದ ಇರಿ.
ಮೀನ ರಾಶಿ
ಕೆಲಸಗಳಲ್ಲಿ ಅಭಿವೃದ್ಧಿ ಇರಲಿದೆ, ಅತಿಯಾದ ಚಿಂತೆ ಕಾಡಲಿದೆ. ಕಬ್ಬಿಣ ಸೇರಿದಂತೆ ಕಟ್ಟಡ ಕೆಲಸ ಮಾಡುವವರಿಗೆ ಒಳ್ಳೆ ಲಾಭದಾಯಕ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಇಷ್ಟಮಿತ್ರರ ಭೇಟಿಯಿಂದ ಮುಂದಿನ ದಿನಗಳಿಗೆ ಒಳಿತಾಗಲಿದೆ.
ಬಹಳಷ್ಟು ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದೆ ಇರುತ್ತಾರೆ. ಕೆಲವು ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆ, ಆಸಕ್ತಿ ಇರುವುದಿಲ್ಲ. ಕೆಲವರಿಗೆ ಆಸಕ್ತಿ ಇದ್ದರೂ ಓದಿದ್ದು ಮರೆತುಹೋಗುತ್ತದೆ. ಈ ಸಮಸ್ಯೆಗೆ ಪರಿಹಾರ ಇಲ್ಲಿದೆ. ಹಿಂದಿನ ರಾತ್ರಿ ಒಂದಿಷ್ಟು ಕಡಲೆಕಾಳನ್ನು ನೆನೆಸಿ ಪ್ರತಿ ಗುರುವಾರ ಮಕ್ಕಳ ಕೈಯಲ್ಲಿ ಹಸುವಿಗೆ ತಿನ್ನಿಸಬೇಕು. ಈ ರೀತಿ ಮಾಡಿದರೆ ಮಕ್ಕಳಿಗೆ ಸರಸ್ವತಿ ಒಲಿಯುತ್ತಾಳೆ. ಅಷ್ಟೇ ಅಲ್ಲ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಓದುವ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗಿರುತ್ತದೆ. ಸಾಧ್ಯವಾದರೆ ಓದಲು ಕುಳಿತಾಗ ಹಳದಿ ಬಣ್ಣದ ಬಟ್ಟೆ ಧರಿಸಿದರೆ ವಿದ್ಯಾರ್ಥಿಗಳು ಉತ್ತಮ ಜ್ಞಾನ ಸಂಪಾದಿಸಲಿದ್ದಾರೆ.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ



