ಕಿಚ್ಚ ಸುದೀಪ್ ಅವರು ಸಧ್ಯಕ್ಕೆ ಮ್ಯಾಕ್ಸ್ ಸಿನಿಮಾ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಈ ಬುಧವಾರ ಮ್ಯಾಕ್ಸ್ ಸಿನಿಮಾ, ಕ್ರಿಸ್ಮಸ್ ಹಬ್ಬದ ದಿವಸ ತೆರೆಕಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಈ ವರ್ಷ ತೆರೆಕಂಡ ಎಲ್ಲಾ ಸಿನಿಮಾಗಳ ಪೈಕಿ, ಮೊದಲ ದಿನ ಅತಿಹೆಚ್ಚು ಹಣಗಳಿಕೆ ಮಾಡಿದ ಸಿನಿಮಾ ಮ್ಯಾಕ್ಸ್. ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಅವರನ್ನು ಪಕ್ಕಾ ಮಾಸ್ ಲುಕ್ ನಲ್ಲಿ ನೋಡಿರುವ ಅಭಿಮಾನಿಗಳು ಫಿದಾ ಆಗಿದ್ದಾರೆ. 2 ವರ್ಷಗಳ ನಂತರ ಸುದೀಪ್ ಅವರ ಸಿನಿಮಾ ತೆರೆಕಂಡಿದ್ದು, ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಸಿನಿಮಾ ಬೇಕಿಲ್ಲ ಎನ್ನುವಂತಾಗಿದೆ. ಸುದೀಪ್ ಅವರ ಅಭಿನಯ ಅದ್ಭುತವಾಗಿ ಮೂಡಿಬಂದಿದೆ ಅಂತಿದ್ದಾರೆ ಫ್ಯಾನ್ಸ್.

ಮ್ಯಾಕ್ಸ್ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಅರ್ಜುನ್ ಮಹಾಕ್ಷಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸುದೀಪ್. ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ ಆಗಿದ್ದು, ಸುದೀಪ್ ಅವರ ಪಾತ್ರ, ಅವರ ಆಟಿಟ್ಯೂಡ್, ಮ್ಯಾನರಿಸಮ್, ಮಾಸ್ ಡೈಲಾಗ್ ಗಳು, ಆಕ್ಷನ್ ಸೀಕ್ವೆನ್ಸ್ ಗಳು, ಎಲಿವೇಶನ್ ಇರೋ ಸೀನ್ಸ್ ಗಳು ಇದೆಲ್ಲವನ್ನು ಪ್ರೇಕ್ಷಕ ಮಹಾಪ್ರಭು ಎಂಜಾಯ್ ಮಾಡಿಕೊಂಡು ನೋಡುತ್ತಿದ್ದಾನೆ. ರಾಜ್ಯದ ಎಲ್ಲೆಡೆ ಮ್ಯಾಕ್ಸ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೇ ತಮಿಳು ಭಾಷೆಯಲ್ಲಿ ಸಹ ಮ್ಯಾಕ್ಸ್ ಸಿನಿಮಾ ತೆರೆಕಂಡು, ಅಲ್ಲಿ ಕೂಡ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಿಚ್ಚನ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಕಿಚ್ಚ ಸುದೀಪ್ ಅವರು ಎರಡು ವರ್ಷಗಳ ನಂತರ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಕಾರಣ ಸುದೀಪ್ ಅವರು ಮ್ಯಾಕ್ಸ್ ಸಿನಿಮಾ ಪ್ರೊಮೋಶನ್ ಗಳಲ್ಲಿ ಹೆಚ್ಚಾಗಿ ಪಾಲ್ಗೊಂಡರು. ಹಲವು ಕಾರ್ಯಕ್ರಮಗಳಲ್ಲಿ, ಪ್ರೆಸ್ ಮೀಟ್ ಗಳಲ್ಲಿ ಎಲ್ಲಾ ಕಡೆ ಸುದೀಪ್ ಅವರು ಕಾಣಿಸಿಕೊಂಡಿದ್ದಾರೆ. ಇವುಗಳಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮ್ಯಾಕ್ಸ್ ಪ್ರೆಸ್ ಮೀಟ್ ನಲ್ಲಿ ಬೇರೆ ವಿಚಾರಗಳ ಜೊತೆಗೆ ಹುಚ್ಚ ವೆಂಕಟ್ ಅವರ ಬಗ್ಗೆ ಪ್ರಶ್ನೆ ಕೇಳಲಾಯಿತು, ಇವರು ಸಹ ಬಿಗ್ ಬಾಸ್ ಗೆ ಬಂದಿದ್ದ ಮಾಜಿ ಸ್ಪರ್ಧಿ. ಹುಚ್ಚ ವೆಂಕಟ್ ಅವರ ಬಗ್ಗೆ ಸುದೀಪ್ ಅವರು ಹೇಳಿದ ಮಾತುಗಳನ್ನ ಕೇಳಿದರೆ, ಅವರ ಬಗ್ಗೆ ಇರೋ ಗೌರವ ಹೆಚ್ಚಾಗುತ್ತದೆ.

ಹುಚ್ಚ ವೆಂಕಟ್ ಅವರ ಬಗ್ಗೆ ಮಾತನಾಡಿದ ಸುದೀಪ್ ಅವರು. “ಅಯ್ಯೋ ಪಾಪ ಅವರಿಗೆ ಸ್ವಲ್ಪ ಪ್ರಾಬ್ಲಮ್ ಇತ್ತು ಬಿಡಿ. ಒಮ್ಮೆ ಯಾರೋ ಒಬ್ಬರ ಕಾರ್ ಗೆ ಹುಚ್ಚ ವೆಂಕಟ್ ಅವರು ಕಲ್ಲು ಹೊಡೆದಾಗ ಎಲ್ಲರೂ ಅವರಿಗೆ ಹಾಗ್ ಮಾಡಿ, ಹೀಗ್ ಮಾಡಿ ಅಂದಿದ್ರು. ಆಗ ನಾನ್ ಹೇಳಿದ್ದೇನು..ಆತ ನನ್ನನ್ನೇ ಸುದೀಪ್ ಅಂತ ಕರೆದಿದ್ದಾರೆ ಜೈ*ಲಿಗೆ ಕಳಿಸಿಬಿಡಿ ಅಂತ ಹೇಳಬಹುದಿತ್ತು. ಆದರೆ ಆ ಸಮಯದಲ್ಲಿ ಅವರಿಗೆ ಬೇಕಿದ್ದಿದ್ದು ಸಹಾಯ, ನಮ್ಮ ಕುಟುಂಬದಲ್ಲೇ ಯಾರಿಗಾದರೂ ಆ ಥರ ಆದಾಗ ನಾವು ಹೇಳೋದೇನು, ಅವನು ಒಳ್ಳೆಯವನೆ ಆದರೆ ಸ್ವಲ್ಪ ಒರಟ ಅಂತ ಹೇಳ್ತೀವಿ. ಅವರ ಬಗ್ಗೆ ಸತ್ಯ ಹೇಳ್ಬೇಕು ಅಂದ್ರೆ ಹುಚ್ಚ ವೆಂಕಟ್ ತುಂಬಾ ಒಳ್ಳೇ ವ್ಯಕ್ತಿ..
ಆದರೆ ಅವರಿಗೆ ಸ್ವಲ್ಪ ಸಹಾಯ ಬೇಕಿತ್ತು ಅಷ್ಟೇ..” ಎಂದು ಕಿಚ್ಚ ಸುದೀಪ್ ಅವರು ಹುಚ್ಚ ವೆಂಕಟ್ ಅವರ ಬಗ್ಗೆ ಹೇಳಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 3ರಲ್ಲಿ ಸ್ಪರ್ಧಿಯಾಗಿ ಹೋಗಿದ್ದ ವೆಂಕಟ್ ಅವರು, 3 ವಾರಕ್ಕೆ ಮತ್ತೊಬ್ಬ ಸ್ಪರ್ಧಿಗೆ ಹ*ಲ್ಲೇ ಮಾಡಿ ಎಲಿಮಿನೇಟ್ ಆಗಿದ್ದರು. ಮತ್ತೆ ಇವರು 4ನೇ ಸೀಸನ್ ನಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟರು, ಆಗಲು ಸಹ ಇದೇ ರೀತಿ ಸಮಸ್ಯೆ ಮಾಡಿಕೊಂಡು ಎಲಿಮಿನೇಟ್ ಆಗಿದ್ದರು. ಹೊರಗಡೆ ಬಂದ ನಂತರ ಸಹ ಹುಚ್ಚ ವೆಂಕಟ್ ಅನೇಕ ವಿಚಾರಗಳಿಂದ ಸುದ್ದಿಯಾಗಿದ್ದಾರೆ. ಅವರಿಗೆ ಮಾನಸಿಕವಾಗಿ ಸಹಾಯ ಬೇಕಿರೋದಂತೂ ಸತ್ಯವಾಗಿದೆ.