ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಕೆಲವೊಮ್ಮೆ ಒಂದು ಧಾರಾವಾಹಿಯಲ್ಲಿ ನಟಿಸುವ ಕಲಾವಿದರು, ಅರ್ಧಕ್ಕೆ ಬಿಟ್ಟು ಹೋಗುವುದು, ಬೇರೆ ಧಾರಾವಾಹಿಯಲ್ಲಿ ನಟಿಸುವುದು ಇದೆಲ್ಲವೂ ಕಾಮನ್ ಆಗಿದೆ. ಆದರೆ ಧಾರಾವಾಹಿ ನೋಡುವ ವೀಕ್ಷಕರಿಗೆ ಇದು ಸ್ವಲ್ಪ ಇರಿಸು ಮುರಿಸು ತರುತ್ತದೆ. ಒಂದು ಪಾತ್ರವನ್ನು ಶುರುವಿನಿಂದ ನಟಿಸಿರುವ ಕಲಾವಿದರಿಗೆ ಜನರು ಕನೆಕ್ಟ್ ಆಗಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಮಧ್ಯದಲ್ಲಿ ಪಾತ್ರ ಬದಲಾಗಿ ಇನ್ನೊಬ್ಬ ಕಲಾವಿದರು ಬಂದರೆ, ಜನರಿಗೆ ಆ ಕಲಾವಿದರಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಕೆಲವು ಸಾರಿ ಇದು ಚೆನ್ನಾಗಿ ಕ್ಲಿಕ್ ಆಗುತ್ತದೆ, ಆದರೆ ಇನ್ನಷ್ಟು ಸಾರಿ ಜನರು ಒಪ್ಪಿಕೊಳ್ಳುವುದೇ ಇಲ್ಲ. ಅದು ಧಾರಾವಾಹಿಯ ಜನಪ್ರಿಯತೆ ಮೇಲೆ ಪರಿಣಾಮ ಬೀರುತ್ತದೆ.

ಕೆಲವೊಮ್ಮೆ ಅದು ಸಣ್ಣ ಪಾತ್ರವೇ ಆಗಿದ್ದರು ಸಹ, ಜನರಿಗೆ ಆ ಬದಲಾವಣೆಯನ್ನು ಆಕ್ಸೆಪ್ಟ್ ಮಾಡಿಕೊಳ್ಳುವುದಕ್ಕೆ ಬಹಳ ಕಷ್ಟ ಅಂತೂ ಆಗುತ್ತದೆ. ಇದೀಗ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ವೀಕ್ಷಕರಿಗೆ ಅದೇ ರೀತಿ ಆಗಿದೆ. ಈ ಧಾರಾವಾಹಿಯಲ್ಲಿ ನಾಯಕ ಸುಬ್ಬು ಅಕ್ಕನ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಹರ್ಷಿತಾ ಅವರು ಇದೀಗ ಧಾರಾವಾಹಿ ಇಂದ ಕೆಲ ತಿಂಗಳುಗಳ ಹಿಂದೆ ಹೊರಬಂದರು. ನ್ಯಾಚುರಲ್ ಆಗಿ ಕಾಮಿಡಿ ಮಾಡುವ ಹರ್ಷಿತಾ ಅವರಿಗೆ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಸಹ ಇದೆ. ಶ್ರಾವಣಿ ಸುಬ್ರಹ್ಮಣ್ಯದಲ್ಲಿ ಸುಬ್ಬು ಅಕ್ಕನ ಪಾತ್ರದಿಂದ ಹೊರಬಂದಿದ್ದು ಮಾತ್ರವಲ್ಲ, ರಾಧಿಕಾ ಧಾರಾವಾಹಿ ಇಂದ ಕೂಡ ಹೊರಬಂದಿದ್ದಾರೆ ಹರ್ಷಿತಾ. ಹರ್ಷಿತಾ ಅವರ ಪಾತ್ರಕ್ಕೆ ಬೇರೆ ನಟಿಯರು ಈಗಾಗಲೇ ಬಂದಿದ್ದು ಆಗಿದೆ.
ಇದನ್ನು ನೋಡಿ ಹರ್ಷಿತಾ ಅವರ ಫ್ಯಾನ್ಸ್ ಗೆ ಬೇಜಾರಾಗಿದೆ.
ಅಷ್ಟಕ್ಕೂ ಆಗಿರುವುದೇನು ಎಂದು ನೋಡುವುದಾದರೆ, ಈ ಹಿಂದೆ ಕೂಡ ಇಂಥ ಘಟನೆ ನಡೆದಿದೆ ಎನ್ನುವುದು ಗೊತ್ತಾಗುತ್ತದೆ. ನಟಿ ಹರ್ಷಿತಾ ಅವರು ಫೇಮಸ್ ಆಗಿದ್ದು ಕಲರ್ಸ್ ಕನ್ನಡ ವಾಹಿನಿಯ ಮಜಾ ಭಾರತ ಕಾರ್ಯಕ್ರಮದಿಂದ. ನಂತರ ಅದೇ ವಾಹಿನಿಯಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗಂಗಕ್ಕ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಪಾತ್ರ ಜನರಿಗೆ ಸಖತ್ ಇಷ್ಟವಾಗಿತ್ತು, ಗಂಗಾ ಪಾತ್ರಕ್ಕೆ ಇವರನ್ನು ಬಿಟ್ಟು ಇನ್ಯಾರು ಸರಿ ಹೋಗುವುದಿಲ್ಲ ಎನ್ನುವಷ್ಟು ಇಷ್ಟವಾಗಿತ್ತು. ಆದರೆ, ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ನಟಿಸುವಾಗಲೇ ಇವರು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಕೂಡ ನಟಿಸುತ್ತಿದ್ದರು, ಇದರಿಂದ ಕ್ಲಾಶ್ ಆಗಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಇಂದ ಹೊರಗಡೆ ಬರಬೇಕಾಯಿತು. ಜಗಳ ಮಾಡಿಕೊಂಡು ಹೊರಗಡೆ ಬಂದಿದ್ದಾರೆ ಎನ್ನಲಾಗಿತ್ತು.

ಆದರೆ ನಡೆದಿರುವುದು ಆ ರೀತಿ ಅಲ್ಲ ಎಂದು ಖುದ್ದಾಗಿ ಹರ್ಷಿತಾ ಅವರೇ ಇನ್ಸ್ಟಾಗ್ರಾಮ್ ಲೈವ್ ಮೂಲಕ ತಿಳಿಸಿದರು. ಲಕ್ಷ್ಮೀ ಬಾರಮ್ಮ ಇಂದ ಹೊರಬಂದು ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಹಾಗೂ ರಾಧಿಕಾ ಧಾರವಾಹಿಯಲ್ಲಿ ಸಹ ನಟಿಸುತ್ತಿದ್ದರು. ಎರಡು ಧಾರಾವಾಹಿ ಕೂಡ ಚೆನ್ನಾಗಿ ಹೋಗುತ್ತಿತ್ತು, ಆದರೆ ಇದೀಗ ಇವರು ಇದ್ದಕ್ಕಿದ್ದಂತೆ ಶ್ರಾವಣಿ ಸುಬ್ರಹ್ಮಣ್ಯ ಧಾರವಾಹಿ ಇಂದ ಹೊರಬಂದರು, ಕೆಲ ಸಮಯದ ಬಳಿಕ ರಾಧಿಕಾ ಧಾರಾವಾಹಿ ಇಂದ ಕೂಡ ಹೊರಗಡೆ ಬಂದರು. ದಿಢೀರ್ ಎಂದು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎನ್ನುವ ಕುತೂಹಲ ಅವರ ಫ್ಯಾನ್ಸ್ ಗಳಲ್ಲಿ ಮತ್ತು ನೆಟ್ಟಿಗರಲ್ಲಿ ಇದೆ. ಏಕೆಂದರೆ ಒಂದು ಪಾತ್ರಕ್ಕೆ ಒಬ್ಬ ಕಲಾವಿದರು ಒಗ್ಗಿಕೊಂಡ ಬಳಿಕ ಇನ್ನೊಬ್ಬರು ಬಂದರೆ ಕಿರಿಕಿರಿ ಅನ್ನಿಸೋದು ಸಹಜ. ಹರ್ಷಿತಾ ಅವರ ಕೇಸ್ ನಲ್ಲೂ ಅದೇ ರೀತಿ ಆಗಿದೆ.
ಆದರೆ ಇವರ ವಿಷಯದಲ್ಲಿ ಈ ಬಾರಿ ಯಾವುದೇ ತೊಂದರೆ ಅಥವಾ ಜಗಳದ ಕಾರಣಕ್ಕೆ ಹರ್ಷಿತಾ ಅವರು ಧಾರಾವಾಹಿ ಬಿಟ್ಟು ಹೊರಗಡೆ ಬಂದಿಲ್ಲ. ಹರ್ಷಿತಾ ಅವರ ಕಡೆಯಿಂದ ಒಂದು ಗುಡ್ ನ್ಯೂಸ್ ಇದೆ. ಅದೇ ಕಾರಣಕ್ಕೆ ಅವರು ಧಾರಾವಾಹಿಗಳಿಂದ ಹೊರಬಂದಿದ್ದಾರೆ. ಆ ಗುಡ್ ನ್ಯೂಸ್ ಏನು ಎಂದರೆ, ಹರ್ಷಿತಾ ಅವರು ಈಗ ತುಂಬು ಗರ್ಭಿಣಿ. ಈಗ ಅವರಿಗೆ 6 ತಿಂಗಳು. ಈ ವೇಳೆ ಹೆಚ್ಚು ಸಮಯ ಆರೈಕೆಯಲ್ಲಿ ಕಳೆಯಬೇಕು, ಹುಷಾರಾಗಿ ಇರಬೇಕು ಎನ್ನುವ ಕಾರಣಕ್ಕೆ ಹರ್ಷಿತಾ ಅವರು ಎಲ್ಲಾ ಧಾರಾವಾಹಿಗಳಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಹರ್ಷಿತಾ ಅವರು ಈಗ ಮಗುವಿನ ಬಗ್ಗೆ ಮತ್ತು ತಮ್ಮ ಬಗ್ಗೆ ಮಾತ್ರ ಗಮನ ಕೊಡುತ್ತಿದ್ದಾರೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಇಂದ ಹೊರಬಂದಾಗ ಇವರು 3 ತಿಂಗಳ ಗರ್ಭಿಣಿ ಆಗಿದ್ದರು.

ಈಗ ಹರ್ಷಿತಾ ಅವರಿಗೆ 6 ತಿಂಗಳು. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ತಂಡ ಹರ್ಷಿತಾ ಅವರನ್ನು ಬಹಳ ಪ್ರೀತಿಯಿಂದ ಬೀಳ್ಕೊಟ್ಟಿದೆಯಂತೆ. ಇನ್ನು ಕೆಲವೆ ಸಮಯದಲ್ಲಿ ಮೊದಲ ಮಗುವಿಗೆ ಜನ್ಮ ಕೊಡಲಿದ್ದಾರೆ ಹರ್ಷಿತಾ. ಇನ್ನು ಇವರ ಗಂಡ ಯಾರು ಎನ್ನುವ ಕುತೂಹಲ ಬಹಳಷ್ಟು ಜನರಲ್ಲಿ ಇದೆ. ಹರ್ಷಿತಾ ಮಜಾ ಭಾರತ ಕಾರ್ಯಕ್ರಮದಿಂದ ಜನಪ್ರಿಯತೆ ಪಡೆದಿದ್ದು, ಇದೇ ಕಾರ್ಯಕ್ರಮ, ಗಿಚ್ಚಿ ಗಿಲಿ ಗಿಲಿ ಈ ಕಾಮಿಡಿ ಶೋಗಳಲ್ಲಿ ಸ್ಕ್ರಿಪ್ಟ್ ವರ್ಕ್ ನಲ್ಲಿ ತೊಡಗಿಸಿಕೊಂಡಿರುವ ಸಂದೀಪ್ ಅವರು ಹರ್ಷಿತಾ ಅವರ ಗಂಡ. ಸಂದೀಪ್ ಅವರು ಉತ್ತಮ ಬರಹಗಾರ ಆಗಿದ್ದಾರೆ. ಶೋ ಚಿತ್ರೀಕರಣ ಆಗುತ್ತಿದ್ದ ವೇಳೆ ಇವರಿಬ್ಬರಿಗೂ ಪರಿಚಯ ಆಗಿದ್ದು ಎನ್ನಲಾಗಿದ್ದು, ಇವರಿಬ್ಬರದ್ದು ಅಪ್ಪಟ ಲವ್ ಮ್ಯಾರೇಜ್ ಆಗಿದೆ. ಬಹಳ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದಾರೆ..
ಹೀಗೆ ಪ್ರೀತಿಯಿಂದ ಇಬ್ಬರು ಕೂಡ ಜೀವನ ಮಾಡುತ್ತಿದ್ದಾರೆ. ಸಂದೀಪ್ ಅವರು ಬರಹಗಾರರಾಗಿ ಶೋಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಹರ್ಷಿತಾ ಅವರು ಈ ಮೊದಲು ಉದಯ ಟಿವಿಯ ಸುಂದರಿ ಧಾರವಾಹಿಯಲ್ಲಿ ಕೂಡ ನಟಿಸಿದ್ದರು, ಒಂದೆರಡು ಸಿನಿಮಾಗಳಲ್ಲಿ ಕೂಡ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗ ಗರ್ಭಿಣಿ ಆಗಿರುವ ಕಾರಣ ನಟನೆ ಇಂದ ಬ್ರೇಕ್ ಪಡೆದು, ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಇವರ ಬದುಕಿನ ಹೊಸ ತಿರುವಿನಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂದು ನಾವು ಕೂಡ ಹಾರೈಸೋಣ..



