ಕನ್ನಡ ಚಿತ್ರರಂಗದ ಖ್ಯಾತ ಹಿರಿಯನಟ ಸುಧೀರ್ ಅವರ ಮಗ ತರುಣ್ ಸುಧೀರ್ ಅವರು ಮೊದಲಿಗೆ ಚಿತ್ರರಂಗಕ್ಕೆ ಪರಿಚಯ ಆಗಿದ್ದು ನಟನಾಗಿ. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಹಾಗೂ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು. ಆದರೆ ನಟನೆಯಲ್ಲಿ ಇವರಿಗೆ ಅಂದುಕೊಂಡ ಹಾಗೆ ಅದೃಷ್ಟ ಒಲಿದು ಬರಲಿಲ್ಲ. ಹಾಗಾಗಿ ತರುಣ್ ಅವರು ನಿರ್ದೇಶನ ಶುರು ಮಾಡಿದರು, ಇವರು ನಿರ್ದೇಶಿಸಿದ ಮೊದಲ ಸಿನಿಮಾ ಚೌಕ ಎಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಯಿತು ಎಂದು ನಮಗೆಲ್ಲಾ ಗೊತ್ತೇ ಇದೆ. ನಂತರ ತರುಣ್ ಅವರು ರಾಬರ್ಟ್ ಹಾಗೂ ಕಾಟೇರ ಸಿನಿಮಾ ನಿರ್ದೇಶನ ಮಾಡಿದರು. ಈ ಸಿನಿಮಾಗಳು ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿತು. ದರ್ಶನ್ ಅವರ ಕೆರಿಯರ್ ಗೆ ಎರಡು ಬ್ಲಾಕ್ ಬಸ್ಟರ್ ಗಳನ್ನು ನೀಡಿತು.

ತರುಣ್ ಸುಧೀರ್ ಅವರು ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಥಾನ ಗಳಿಸುವುದಕ್ಕೆ ಸಾಧ್ಯ ಆಯಿತು ಎಂದರೆ ತಪ್ಪಲ್ಲ. ಕಾಟೇರ ಸಿನಿಮಾದ ಯಶಸ್ಸು ಇವರಿಗೆ ದೊಡ್ಡ ಹೆಸರನ್ನೇ ತಂದುಕೊಟ್ಟಿತು. ಇನ್ನು ರಾಬರ್ಟ್ ಸಿನಿಮಾದಲ್ಲಿ ಅಭಿನಯಿಸಿದ್ದ ಸೋನಲ್ ಅವರನ್ನು ಪ್ರೀತಿಸಿ ಕಳೆದ ವರ್ಷ ಮದುವೆಯಾದರು ತರುಣ್ ಇವರಿಬ್ಬರು ಬಹಳ ಕ್ಯೂಟ್ ಆದ ಜೋಡಿ. ಇಬ್ಬರದ್ದು ಲವ್ ಮ್ಯಾರೇಜ್ ಎನ್ನುವುದು ಮತ್ತೊಂದು ಸಂತೋಷದ ವಿಷಯ ಆಗಿದೆ. ತರುಣ್ ಸುಧೀರ್ ಅವರು ಸೋನಲ್ ಅವರನ್ನು ಕೆಲ ವರ್ಷಗಳ ಕಾಲ ಪ್ರೀತಿಸಿ, ಕಳೆದ ವರ್ಷ ಆಗಸ್ಟ್ 11ರಂದು ಮದುವೆಯಾದರು. ಈ ಜೋಡಿ ಅನ್ಯೋನ್ಯವಾಗಿ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ.

ತರುಣ್ ಸುಧೀರ್ ಅವರು ಪತ್ನಿಯನ್ನು ತುಂಬಾ ಪ್ರೀತಿಸುತ್ತಾರೆ, ಸೋನಲ್ ಅವರು ಸಹ ಅದೇ ರೀತಿ ಎಂದು ನಮಗೆಲ್ಲ ಗೊತ್ತೇ ಇದೆ. ಸೋನಲ್ ಅವರು ಸಹ ಗಂಡನನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಈ ಜೋಡಿ ಲವ್ಲಿ ಜೋಡಿ, ಇವರಿಬ್ಬರು ಸಂತೋಷವಾಗಿ ಇದ್ದಾರೆ, ಆದರೆ ಇಬ್ಬರು ಗುಡ್ ನ್ಯೂಸ್ ಕೊಡೋದು ಯಾವಾಗ ಅನ್ನೋ ಕುತೂಹಲ ಜನರಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ಇದೆ. ತರುಣ್ ಅವರಿಗೆ ಹಾಗೂ ಸೋನಲ್ ಅವರಿಗೆ ಈ ಬಗ್ಗೆ ಕೆಲವು ಸ್ಟೇಜ್ ಗಳಲ್ಲಿ ಕೇಳಿದಾಗ, ಇಬ್ಬರೂ ನಕ್ಕಿದ್ದಾರೆ ಆದರೆ ಹೆಚ್ಚಾಗಿ ಏನನ್ನು ಹೇಳಲಿಲ್ಲ. ಇನ್ನು ಸೋನಲ್ ಅವರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಇವರು ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಂಚತಂತ್ರ, ರಾಬರ್ಟ್ ಹೀಗೆ ಸಾಲು ಸಾಲು ಸಿನಿಮಾಗಳು. ಈಗ ಮಾದೇವ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ.

ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಇದೆ. ಸೋನಲ್ ಅವರು ಕನ್ನಡ ಸಿನಿಮಾಗಿಂತ ಮೊದಲು ತುಳು ಸಿನಿಮಾದಲ್ಲಿ ನಟಿಸಿದ್ದು, ಇವರು ಮೂಲತಃ ಮಂಗಳೂರಿನವರು. ತುಳು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕೆರಿಯರ್ ಶುರು ಮಾಡಿ, ಬಳಿಕ ಇವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸೋನಲ್ ಅವರು ಸಿನಿಮಾದಲ್ಲಿ ಈಗ ಯಶಸ್ವಿ ಆಗಿದ್ದಾರೆ, ಬ್ಯಾಕ್ ಟು ಬ್ಯಾಕ್ ಒಳ್ಳೆಯ ಅವಕಾಶಗಳನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಆದರೆ ಸೋನಲ್ ಅವರ ಬಗ್ಗೆ ನಮಗೆ ಗೊತ್ತಿರದ ಅನೇಕ ವಿಚಾರಗಳು ಇದೆ. ಅದರಲ್ಲಿ ಒಂದು ಸೋನಲ್ ಅವರ ಬ್ಯುಸಿನೆಸ್ ಬಗ್ಗೆ. ಹೌದು, ಸೋನಲ್ ಅವರು ಸಿನಿಮಾಗೆ ಬರುವುದಕ್ಕಿಂತ ಮೊದಲು ಬ್ಯುಸಿನೆಸ್ ಮಾಡುತ್ತಿದ್ದರಂತೆ. ಅದರಲ್ಲಿ ಯಶಸ್ವಿ ಕೂಡ ಆಗಿದ್ದರು, ಆದರೆ ಕೋವಿಡ್ ವೇಳೆ ಸ್ಟಾಪ್ ಆದ ಇವರ ಬ್ಯುಸಿನೆಸ್ ಮತ್ತೆ ಮುಂದುವರೆಯಲಿಲ್ಲ.
ಸೋನಲ್ ಅವರು ನಟನೆಗಿಂತ ಮೊದಲು ಒಂದು ಫ್ಯಾಷನ್ ಕಂಪನಿ ಶುರು ಮಾಡಿದ್ದರು, ತಮ್ಮ ಕಂಪನಿಯ ಮೂಲಕ ಹಲವು ಬ್ಯೂಟಿ ಪೇಜೆಂಟ್ ಗಳನ್ನು ಆರ್ಗನೈಸ್ ಮಾಡಿದ್ದರಂತೆ. ಮಾಡೆಲ್ ಗಳನ್ನು ಟ್ರೇನ್ ಮಾಡುತ್ತಿದ್ದರಂತೆ ಸೋನಲ್. ಸ್ಯಾಂಡಲ್ ವುಡ್ ನ ಸಾಕಷ್ಟು ನಟಿಯರು ಇವರ ಕಂಪನಿಯ ಮೂಲಕ ಬಂದವರು ಎಂದು ಸೋನಲ್ ಹೇಳಿದ್ದಾರೆ. ಹೆಸರು ಹೇಳುವುದಿಲ್ಲ ಆದರೆ ಬಹಳಷ್ಟು ನಟಿಯರು ಬಂದಿದ್ದು ತಮ್ಮ ಕಂಪನಿ ಇಂದಲೇ ಎಂದು ಸೋನಲ್ ಅವರು ಹೇಳಿದ್ದಾರೆ. ಇವರ ಕಂಪನಿಯ ಮೂಲಕ ವರ್ಲ್ಡ್ ಸೂಪರ್ ಮಾಡೆಲ್, ಮಿಸ್ ಕರ್ನಾಟಕ, ಶೋಗಳನ್ನು ಆಯೋಜಿಸಿದ್ದರು. ಒಂದು ಬಾರಿ ಮಿಸ್ ಇಂಡಿಯಾ ಶೋ ಅನ್ನು ಕೂಡ ಅಯೋಜಿಸಿದ್ದಾಗಿ ಸೋನಲ್ ಅವರು ಹೇಳಿಕೊಂಡಿದ್ದಾರೆ. ಇಂಥ ಇಂಟರ್ನ್ಯಾಶನಲ್ ಈವೆಂಟ್ಸ್ ಗಳನ್ನು ತಮ್ಮ ಫ್ಯಾಶನ್ ಕಂಪನಿಯ ಮೂಲಕ ಆರ್ಗನೈಸ್ ಮಾಡಿದ್ದಾರೆ ಸೋನಲ್.

ಭಾರತದಲ್ಲಿ ಮಾತ್ರವಲ್ಲ ಥಾಯ್ಲೆಂಡ್ ನಲ್ಲಿ ಸಹ ಇವರು ಈವೆಂಟ್ ಗಳನ್ನು ಮಾಡಿದ್ದಾರಂತೆ. ಕೋವಿಡ್ ನಂತರ ಇವರ ಕಂಪನಿ ನಿಂತಿದ್ದು ಮತ್ತೆ ಶುರುವಾಗಲಿಲ್ಲ ಎಂದು ಹೇಳಿದ್ದಾರೆ. ಸೋನಲ್ ಅವರಿಗೆ ಸ್ವಂತವಾಗಿ ಬ್ಯುಸಿನೆಸ್ ಮಾಡಬೇಕು ಎಂದು ಆಸೆ ಇದ್ದು, ಸಮಯ ಕೂಡಿಬಂದರೆ ಖಂಡಿತವಾಗಿ ಮತ್ತೆ ಮುಂದುವರೆಸುವುದಾಗಿ ಹೇಳಿದ್ದಾರೆ ಸೋನಲ್ ಅವರು. ಪ್ರಸ್ತುತ ತರುಣ್ ಸುಧೀರ್ ಅವರು ಎರಡು ಪ್ರೊಡಕ್ಷನ್ ಗಳನ್ನು ಮಾಡುತ್ತಿದ್ದು, ಸೋನಲ್ ಅವರು ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ತಾವು ಕೂಡ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಳ್ಳುವುದಾಗಿ ಸೋನಲ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಸೋನಲ್ ಅವರು ಬ್ಯುಸಿನೆಸ್ ಹೊಂದಿದ್ದರು ಎನ್ನುವುದು ಹಲವರಿಗೆ ಗೊತ್ತೇ ಇರದ ವಿಷಯ. ಇದು ನಿಜಕ್ಕೂ ಮೆಚ್ಚುವಂಥ ವಿಷಯ ಕೂಡ ಹೌದು.
ಇಂಡಿಪೆಂಡೆಂಟ್ ಆಗಿರುವ ಹುಡುಗಿಯರು ನಿಜಕ್ಕೂ ಧೈರ್ಯವಂತರು. ಇನ್ನು ಸೋನಲ್ ಅವರು ಎಷ್ಟು ಒಳ್ಳೆಯವರು ಎಂದರೆ ಕೆಲವು ಸಾರಿ ಪೇಮೆಂಟ್ ಗಳನ್ನು ಕೂಡ ಬಿಟ್ಟು ಬಂದಿದ್ದಾರಂತೆ. ಇನ್ನು ಸೋನಲ್ ಅವರಿಗೆ ತಮ್ಮ ಬದುಕಿನ ಬಗ್ಗೆ ಬಹಳ ಖುಷಿ ಇದೆ, ದೇವರು ತಮಗೆ ಯಾವುದಕ್ಕೂ ಕಡಿಮೆ ಮಾಡಿಲ್ಲ. ಹೆಚ್ಚಿನ ಐಷಾರಾಮಿ ಬದುಕನ್ನೇ ನೀಡಿದ್ದಾನೆ, ಜೀವನದಲ್ಲಿ ತೃಪ್ತಿ ಇದೆ ಎಂದು ಹೇಳಿದ್ದಾರೆ. ಇನ್ನು ಸೋನಲ್ ಅವರು ತಮಗೆ ತಾವು ಖರ್ಚು ಮಾಡಿಕೊಳ್ಳೋದು ಕಡಿಮೆ ಅಂತೆ, ತರುಣ್ ಅವರು ಚೆನ್ನಾಗಿ ಸೇವಿಂಗ್ಸ್ ಮಾಡುತ್ತಾರೆ ಎಂದು ಗಂಡನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿಕೊಂಡಿದ್ದಾರೆ ಸೋನಲ್ ಅವರು.



