ಜೀಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ಶೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಶೋನಲ್ಲಿ ವಿವಿಧ ಸ್ಪರ್ಧಿಗಳು ತಮ್ಮ ಜೋಡಿಗಳ ಜೊತೆಗೆ ಚೆನ್ನಾಗಿ ಪರ್ಫಾರ್ಮ್ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ. ಶೋನಲ್ಲಿ ಜಡ್ಜ್ ಗಳಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಇದ್ದಾರೆ. ಶೋ ಶುರುವಾಗಿ ಕೆಲವೇ ವಾರಗಳಲ್ಲಿ ಒಳ್ಳೆಯ ಕ್ರೇಜ್ ಸೃಷ್ಟಿಸಿದೆ. ಭರ್ಜರಿ ಬ್ಯಾಚುಲರ್ಸ್ ಹೊಸ ಸೀಸನ್ ನ ಹೈಲೈಟ್ ಡ್ರೋನ್ ಪ್ರತಾಪ್ ಎಂದರು ತಪ್ಪಲ್ಲ. ಬಿಗ್ ಬಾಸ್ ನಂತರ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಡ್ರೋನ್ ಪ್ರತಾಪ್ ಕಾಣಿಸಿಕೊಂಡರು ಸಹ ಆ ಶೋನಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಸಿಗಲಿಲ್ಲ. ಆದರೆ ಭರ್ಜರಿ ಬ್ಯಾಚುಲರ್ಸ್ ಶೋ ಇಂದ ಡ್ರೋನ್ ಪ್ರತಾಪ್ ಅವರಿಗೆ ಮತ್ತೆ ಕ್ರೇಜ್ ಶುರುವಾಗಿದೆ. ಈ ವಾರ ಕೂಡ ಜಡ್ಜ್ ಗಳ ಮೆಚ್ಚುಗೆ ಗಳಿಸಿಕೊಂಡಿದ್ದಾರೆ ಪ್ರತಾಪ್ ಮತ್ತು ಅವರ ಮೆಂಟರ್ ಗಗನಾ.

ಡ್ರೋನ್ ಪ್ರತಾಪ್ ಅವರು ಇದೀಗ ಎಲ್ಲರ ಫೇವರೆಟ್ ಆಗಿದ್ದಾರೆ. ಒಂದು ಕಾಲದಲ್ಲಿ ಇಡೀ ರಾಜ್ಯದ ಜನತೆ ಈತನನ್ನ ಅವಮಾನಿಸಿತ್ತು. ರಾಜ್ಯದ ಜನತೆಗೆ ಮೋಸ ಮಾಡಿಬಿಟ್ಟ ಎಂದು ಪ್ರತಿಯೊಬ್ಬರು ಸಹ ಡ್ರೋನ್ ಪ್ರತಾಪ್ ಗೆ ಚೆನ್ನಾಗಿ ಬೈದಿದ್ದರು. ಆದರೆ ಬಿಗ್ ಬಾಸ್ ಶೋ ಇಂದ ಇವರ ಬಗ್ಗೆ ಇದ್ದ ಅಭಿಪ್ರಾಯ ಬದಲಾಗಿ ಹೋಯಿತು. ನಿಜಕ್ಕೂ ಡ್ರೋನ್ ಪ್ರತಾಪ್ ವ್ಯಕ್ತಿತ್ವ ಹೇಗೆ ಎಂದು ಗೊತ್ತಾಗಿದ್ದು ಬಿಗ್ ಬಾಸ್ ಶೋ ಇಂದ. ಈ ಹುಡುಗ ಎಷ್ಟು ಸಾಧು ಸ್ವಭಾವದ ಹುಡುಗ, ಯಾರ ಮೇಲೂ ಕೋಪ ಮಾಡಿಕೊಳ್ಳೋದಿಲ್ಲ ಎನ್ನುವುದು ಅರ್ಥವಾಗಿತ್ತು. ಬಿಗ್ ಬಾಸ್ ಮನೆಯ ಒಳಗೆ ಕೂಡ ಒಳಗಿದ್ದ ಸ್ಪರ್ಧಿಗಳು ಅವಮಾನ ಮಾಡಿದರು ಸಹ, ಡ್ರೋನ್ ಪ್ರತಾಪ್ ದೃತಿಗೆಡಲಿಲ್ಲ. ತಮ್ಮ ಆಟವನ್ನು ತಾವು ಆಡುತ್ತಾ ಹೋದರು. ಇದರಿಂದ ಅವರಿಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿತು.
ಜನರ ಸಪೋರ್ಟ್ ಕೂಡ ಹೆಚ್ಚಾಗಿಯೇ ಸಿಕ್ಕಿತು. ಒಳಗೆ ಡ್ರೋನ್ ಪ್ರತಾಪ್ ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಾ ಹೋದರೆ, ಹೊರಗಿನ ಜನರು ಪ್ರತಾಪ್ ಗೆ ಸಪೋರ್ಟ್ ಮಾಡುತ್ತಾ ಹೋದರು. ಒಳ್ಳೆತನದ ಜೊತೆಗೆ ಬುದ್ಧಿವಂತಿಕೆಯನ್ನು ಸಹ ಉಪಯೋಗಿಸಿ ಎಲ್ಲಾ ಟಾಸ್ಕ್ ಗಳನ್ನು ಆಡುತ್ತಿದ್ದರು ಪ್ರತಾಪ್. ಇದರಿಂದಲೇ ಜನರಿಗೆ ಇವರು ತುಂಬಾ ಇಷ್ಟವಾಗಿತ್ತು. ತಮ್ಮ ಪರಿಶ್ರಮದಿಂದ ಡ್ರೋನ್ ಪ್ರತಾಪ್ ಬಿಗ್ ಬಾಸ್ ಶೋನ ರನ್ನರ್ ಅಪ್ ಆದರು. ಇದರಿಂದ ಜನರಿಗೆ ಸಹ ಬಹಳ ಇಷ್ಟವಾಗಿತ್ತು. ಹೊರಗಡೆ ಬಂದ ನಂತರ ಕೂಡ ಡ್ರೋನ್ ಪ್ರತಾಪ್ ಹಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇದ್ದಾರೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ್ದಾರೆ. ಇದರಿಂದ ಜನರು ಡ್ರೋನ್ ಪ್ರತಾಪ್ ರಿಗೆ ಮೆಚ್ಚುಗೆ ಸೂಚಿಸಿದ್ದರು. ಅಂಧ ಗಾಯಕಿ ಮಂಜಮ್ಮ ಕುಟುಂಬಕ್ಕೆ ಸಹ ಸಹಾಯ ಮಾಡಿದ್ದರು..

ಗಿಚ್ಚಿ ಗಿಲಿ ಗಿಲಿ ಶೋ ನಲ್ಲಿ ಕಾಮಿಡಿ ಮಾಡುವ ಪ್ರಯತ್ನ ಅಂದುಕೊಂಡ ಹಾಗೆ ಆಗಲಿಲ್ಲ. ಆದರೆ ಇದೀಗ ಡ್ರೋನ್ ಪ್ರತಾಪ್ ಗೆ ಬಿಗ್ ಬಾಸ್ ನಂತರ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಒಳ್ಳೆಯ ಹೆಸರು ಮತ್ತು ಜನಪ್ರಿಯತೆ ಎಲ್ಲವೂ ಸಿಕ್ಕಿದೆ. ಈ ಶೋನಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಮೆಂಟರ್ ಆಗಿ ಸಿಕ್ಕಿರುವುದು ಮಹಾನಟಿ ಶೋ ಖ್ಯಾತಿಯ ಗಗನಾ. ಇವರಿಬ್ಬರ ಜೋಡಿ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದೆ. ಪ್ರತಿ ವಾರ ಬರುವ ವಿಶೇಷ ಟಾಸ್ಕ್ ಗಳಲ್ಲಿ ಈ ಜೋಡಿ ಪರ್ಫಾರ್ಮ್ ಮಾಡುವ ರೀತಿ ಎಲ್ಲರಿಗೂ ಬಹಳ ಇಷ್ಟವಾಗುತ್ತಿದೆ. ಈ ವಾರ ಬ್ಯಾಚುಲರ್ಸ್ ಗಳಿಗೆ ಮತ್ತೊಂದು ಹೊಸ ಟಾಸ್ಕ್ ನೀಡಲಾಗಿದ್ದು, ಇದು ಡ್ರೀಮ್ ಗರ್ಲ್ ಟಾಸ್ಕ್. ಸ್ಪರ್ಧಿಗಳು ತಮ್ಮ ಮೆಂಟರ್ ಅನ್ನು ತಮ್ಮ ಕನಸಿನ ಹುಡುಗಿ ಹೇಗಿರಬೇಕು ಎಂದು ಆಸೆ ಇರುತ್ತದೆಯೋ ಅದೇ ರೀತಿ ರೆಡಿ ಮಾಡಬೇಕು. ಇದು ಈ ವಾರದ ಟಾಸ್ಕ್.

ಎಲ್ಲಾ ಬ್ಯಾಚುಲರ್ ಗಳು ಕೂಡ ತಮ್ಮ ತಮ್ಮ ಮೆಂಟರ್ ಗಳನ್ನು ವಿಶೇಷವಾಗಿ ರೆಡಿ ಮಾಡಿಸಿದ್ದಾರೆ. ಆದರೆ ಡ್ರೋನ್ ಪ್ರತಾಪ್ ಇದರಲ್ಲೂ ವಿಶೇಷತೆ ತೋರಿಸಿದ್ದಾರೆ. ನನ್ನ ಡ್ರೀಮ್ ಗರ್ಲ್ ಟ್ರೆಡಿಶನಲ್ ಆಗಿ ಇರಬೇಕು ಎಂದು ಗಗನಾಗೆ ಹೂ ಮುಡಿಸಿ ವಿಶೇಷವಾಗಿ ಈ ಟಾಸ್ಕ್ ಅನ್ನು ಹ್ಯಾಂಡಲ್ ಮಾಡಿದ್ದಾರೆ. ಹೀಗೆ ಗಗನಾಗೆ ವಿಶೇಷವಾದ ರೀತಿಯಲ್ಲಿ ಅಲಂಕರಿಸಿ ಸ್ಟೇಜ್ ಮೇಲೆ ಬಂದಿದ್ದಾರೆ. ಈ ಜೋಡಿಯ ಕ್ಯೂಟ್ ಆದ ವಿಡಿಯೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನರು ಗಗನಾ ಮತ್ತು ಡ್ರೋನ್ ಪ್ರತಾಪ್ ಜೋಡಿಯನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇನ್ನು ಜಡ್ಜ್ ಗಳು ಸಹ ಇವರಿಬ್ಬರನ್ನು ನೋಡಿ ನೀವಿಬ್ಬರೂ ಸ್ಟೇಜ್ ಮೇಲೆ ಬಂದರೆ ಮ್ಯಾಜಿಕಲ್ ಅನ್ನಿಸುತ್ತದೆ ಎಂದು ಹೇಳಿದ್ದಾರೆ ಜಡ್ಜ್ ಆಗಿರುವ ನಟಿ ರಚಿತಾ ರಾಮ್.
ಹೀಗೆ ಗಗನಾ ಮತ್ತು ಡ್ರೋನ್ ಪ್ರತಾಪ್ ಜೋಡಿ ಮೋಡಿ ಮಾಡುತ್ತಿದೆ, ಇವರಿಬ್ಬರಿಗೆ ಫ್ಯಾನ್ ಬೇಸ್ ಕೂಡ ಜಾಸ್ತಿ ಇದೆ. ಇದೊಂದೇ ಅಲ್ಲದೆ ಈ ಹಿಂದಿನ ಟಾಸ್ಕ್ ಗಳಲ್ಲಿ ಕೂಡ ಈ ಜೋಡಿ ಜನರು ಮತ್ತು ಜಡ್ಜ್ ಗಳು ಇಂಪ್ರೆಸ್ ಆಗುವ ಹಾಗೆ ಮಾಡಿದ್ದರು. ಮೆಂಟರ್ ಗೆ ಸರ್ಪ್ರೈಸ್ ಕೊಡಬೇಕಿದ್ದ ಟಾಸ್ಕ್ ನಲ್ಲಿ, ಹೆಲಿಕಾಪ್ಟರ್ ನಲ್ಲಿ ಗಗನಾ ಅವರನ್ನು ಕರೆದುಕೊಂಡು ಹೋಗಿ, ಆ ಸರ್ಪ್ರೈಸ್ ಗೆ ಗಗನಾ ಫಿದಾ ಆಗಿದ್ದರು..ಇನ್ನು ಜಡ್ಜ್ ಗಳು ಕೂಡ ಈ ಜೋಡಿ ಟಾಸ್ಕ್ ಗಳನ್ನು ತೆಗೆದುಕೊಳ್ಳುವ ರೀತಿಗೆ ಜನರು ಫಿದಾ ಆಗಿದ್ದರು. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಾಮಾಚಾರಿ ಸಿನಿಮಾದ ದೃಶ್ಯವನ್ನು ರೀಕ್ರಿಯೇಟ್ ಮಾಡಿ, ರವಿಚಂದ್ರನ್ ಅವರಿಂದ ಕೂಡ ಮೆಚ್ಚುಗೆ ಪಡೆದುಕೊಂಡಿದ್ದರು. ಡ್ರೋನ್ ಪ್ರತಾಪ್ ಅಭಿನಯ ತುಂಬಾ ಚೆನ್ನಾಗಿದೆ ಎಂದು ಹೊಗಳಿದ್ದರು ಕ್ರೇಜಿಸ್ಟಾರ್. ಇದೆಲ್ಲವೂ ಶೋಗೆ ಸಂಬಂಧಿಸಿದ ವಿಚಾರ ಆಗಿದೆ.



