ಪ್ರಸ್ತುತ ಖ್ಯಾತ ಬಾಲಿವುಡ್ ಗಾಯಕ ಉದಿತ್ ನಾರಾಯಣ್ ಅವರು ಕಾರ್ಯಕ್ರಮವೊಂದರಲ್ಲಿ ಮಹಿಳಾ ಅಭಿಮಾನಿಯೊಬ್ಬರಿಗೆ ಲಿಪ್ ಕಿಸ್ ಮಾಡುತ್ತಿರುವ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಕಳೆದ ಕೆಲವು ದಿನಗಳಿಂದ ವೇದಿಕೆಯಲ್ಲಿ ಗಾಯಕರು ಪ್ರದರ್ಶನ ನೀಡುವ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡಿವೆ.
ಇದೀಗ ಉದಿತ್ ನಾರಾಯಣ್ ಅವರ ವಿಡಿಯೋವೊಂದು ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಜನರಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಂದಹಾಗೆ ವಿಡಿಯೋ ಕ್ಲಿಪ್ನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ, ಅವರು ಮಹಿಳಾ ಅಭಿಮಾನಿಯ ತುಟಿಗಳಿಗೆ ಬಲವಂತವಾಗಿ ಚುಂಬಿಸುತ್ತಿದ್ದಾರೆ. ದಿನಾಂಕ ನಿಗದಿ ಮಾಡದ ಈ ವಿಡಿಯೋದಲ್ಲಿ, ಉದಿತ್ ನಾರಾಯಣ್ ಅವರು ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ನಟನೆಯ ಪ್ರಸಿದ್ಧ ಗೀತೆ “ಟಿಪ್ ಟಿಪ್ ಬರ್ಸಾ ಪಾನಿ” ಹಾಡುತ್ತಿದ್ದಾರೆ. ಆಗ ಸೆಲ್ಫಿ ತೆಗೆದುಕೊಳ್ಳಲು ಬಂದ ಮಹಿಳಾ ಅಭಿಮಾನಿಯೊಬ್ಬರು ಮೊದಲು ತಿರುಗಿ ಕೆನ್ನೆಗೆ ಮುತ್ತಿಟ್ಟರು. ಆದರೆ ಗಾಯಕ ಅವಳ ತುಟಿಗಳಿಗೆ ಮುತ್ತಿಟ್ಟರು. ವಿಡಿಯೋದಲ್ಲಿ ನೋಡುವ ಹಾಗೆ ಉದಿತ್ ನಾರಾಯಣ್ ಸ್ವತಃ ಭದ್ರತಾ ಸಿಬ್ಬಂದಿಗೆ ಸೆಲ್ಫಿಗಾಗಿ ಮಹಿಳೆಯನ್ನು ತನ್ನ ಬಳಿಗೆ ಬರುವಂತೆ ಸೂಚಿಸುವುದನ್ನು ಕಾಣಬಹುದು. ಆ ಗಾರ್ಡ್ ಕೂಡ ಮುಗುಳ್ನಗುತ್ತಾ ಗಾಯಕನ ಸಂಕೇತಕ್ಕಾಗಿ ಕಾಯುತ್ತಾರೆ. ಇದಾದ ನಂತರ ಅಲ್ಲಿದ್ದ ಪ್ರೇಕ್ಷಕರು ಕೂಗಾಡಲು ಪ್ರಾರಂಭಿಸುತ್ತಾರೆ. ಈ ಬಗ್ಗೆ ಸದ್ಯ ಗಾಯಕ ಆದಿತ್ಯ ನಾರಾಯಣ್ ಅವರ ತಂದೆ ಉದಿತ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋವನ್ನು ಈ ವಾರ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದೆ, ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ವಿಡಿಯೋದ ಅಸ್ಪಷ್ಟ ಗುಣಮಟ್ಟವು ವ್ಯಕ್ತಿಯು ನಿಜವಾಗಿ ಉದಿತ್ ನಾರಾಯಣರೇ ಅಥವಾ ಅಲ್ಲವೇ ಎಂಬುದನ್ನು ಅಸ್ಪಷ್ಟಗೊಳಿಸುತ್ತದೆ. ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿಲ್ಲ.
WTF! what is Udit Narayan doing 😱 pic.twitter.com/Rw0azu72uY
— Abhishek (@vicharabhio) January 31, 2025
ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಉದಿತ್ ನಾರಾಯಣ್, ಅಭಿಮಾನಿಯೊಬ್ಬರ ತುಟಿಗಳಿಗೆ ಚುಂಬಿಸಿದ ಘಟನೆಯನ್ನು ಉಲ್ಲೇಖಿಸಿ, ಅದು ಇದ್ದಕ್ಕಿದ್ದಂತೆ ಸಂಭವಿಸಿತು ಎಂದು ಹೇಳಿದರು. “ನಾನು 46 ವರ್ಷಗಳಿಂದ ಬಾಲಿವುಡ್ನಲ್ಲಿದ್ದೇನೆ, ಅಭಿಮಾನಿಗಳನ್ನು ಬಲವಂತವಾಗಿ ಚುಂಬಿಸುವಷ್ಟು ನನ್ನ ಇಮೇಜ್ ಇಲ್ಲ. ವಾಸ್ತವವಾಗಿ, ನನ್ನ ಅಭಿಮಾನಿಗಳು ನನ್ನ ಮೇಲೆ ತೋರುತ್ತಿರುವ ಪ್ರೀತಿಯನ್ನು ನೋಡಿದಾಗ, ನಾನು ನನ್ನ ಕೈಗಳನ್ನು ಮಡಚಿ, ವೇದಿಕೆಯ ಮೇಲೆ ನಮಸ್ಕರಿಸುತ್ತೇನೆ ಮತ್ತು ಈ ಸಮಯ ಮತ್ತೆ ಬರಬಹುದೇ ಎಂದು ಆಶ್ಚರ್ಯ ಪಡುತ್ತೇನೆ.
ಅಭಿಮಾನಿಗಳು ತುಂಬಾ ಕ್ರೇಜಿಗಳು… ನಾವು ಹಾಗಲ್ಲ, ಸುಸಂಸ್ಕೃತರು . ಕೆಲವರು ಈ ವಿಷಯವನ್ನು ಪ್ರಚಾರ ಮಾಡುತ್ತಾರೆ ಮತ್ತು ಈ ರೀತಿ ಪ್ರೀತಿ ವ್ಯಕ್ತಪಡಿಸುತ್ತಾರೆ. ಅಭಿಮಾನಿಗಳು ಭೇಟಿಯಾಗಲು ಅವಕಾಶ ಸಿಕ್ಕಿದೆ ಎಂದು ಭಾವಿಸುತ್ತಾರೆ, ಆದ್ದರಿಂದ ಯಾರಾದರೂ ಹಸ್ತಲಾಘವ ಮಾಡಲು ಮುಂದೆ ಬರುತ್ತಾರೆ, ಯಾರೋ ಕೈಗೆ ಮುತ್ತಿಡುತ್ತಾರೆ. ಈ ಎಲ್ಲ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಬಾರದು”.
ಉದಿತ್ ನಾರಾಯಣ್ ಅವರು ವಿಡಿಯೋ ವಿವಾದದ ಹಿಂದೆ ಯಾವುದೋ ಗುಪ್ತ ಉದ್ದೇಶವಿರಬಹುದು ಎಂದು ಸುಳಿವು ನೀಡಿದ್ದಾರೆ. ಆದಿತ್ಯ (ಮಗ ಮತ್ತು ಗಾಯಕ) ಮೌನವಾಗಿರುತ್ತಾನೆ ಮತ್ತು ವಿವಾದಕ್ಕೆ ಪ್ರವೇಶಿಸುವುದಿಲ್ಲ. ನಾನು ವೇದಿಕೆಯಲ್ಲಿ ಹಾಡುವಾಗ ಅಭಿಮಾನಿಗಳು ನನ್ನನ್ನು ಪ್ರೀತಿಸುತ್ತಾರೆ, ಅವರು ಸಂತೋಷವಾಗಿರಲಿ ಎಂದು ನಾನು ಭಾವಿಸುತ್ತೇನೆ. ನಾವು ಅಂತಹ ಜನರಲ್ಲ. ನಾವೂ ಅವರನ್ನು ಸಂತೋಷಪಡಿಸಬೇಕು” ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ ಉದಿತ್.

ಉದಿತ್ ನಾರಾಯಣ್ ಅವರ ಧ್ವನಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ‘ಪೆಹ್ಲಾ ನಶಾ’, ‘ಜಾದು ತೇರಿ ನಜರ್’ ಮುಂತಾದ ಹಾಡುಗಳಿಂದ ಫೇಮಸ್ ಆಗಿರುವ ಉದಿತ್ ನಾರಾಯಣ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಗಾಯಕನ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ವಿಡಿಯೋ ನೋಡಿದ ಗಾಯಕನ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ಉದಿತ್ ನಾರಾಯಣ್ ಅವರ ಅಭಿಮಾನಿಗಳು ನಿರೀಕ್ಷಿಸಿರದಂತಹದನ್ನು ನೋಡಲಾಗುತ್ತಿದೆ. ವಿಡಿಯೋ ವೈರಲ್ ಆದ ಕೂಡಲೇ ನೆಟಿಜನ್ಗಳು ಅವರನ್ನು ನಿಂದಿಸಲು ಆರಂಭಿಸಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶುರುವಾದ ಟ್ರೋಲಿಂಗ್ ಗೆ ಗಾಯಕ ಕೂಡ ಪ್ರತಿಕ್ರಿಯಿಸಿದ್ದಾರೆ.
ಬಳಕೆದಾರರು ಹೇಳಿದ್ದೇನು?
ಓರ್ವ ಬಳಕೆದಾರ “AI ಅಪಾಯಕಾರಿಯಾಗುತ್ತಿದೆ” ಎಂದರೆ, ಮತ್ತೆ ಕೆಲವರು ಇದು “ನಾಚಿಕೆಗೇಡಿನ ಮತ್ತು ಅಸಹ್ಯಕರ ಸಂಗತಿ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, “ಅದ್ಭುತ ಗಾಯಕನಾಗಿ ಸಾರ್ವಜನಿಕವಾಗಿ ತನ್ನ ಕೆಲಸದ ಬಗ್ಗೆ ಬಹಳ ಜಾಗೃತರಾಗಿರಬೇಕು” ಎಂದೂ ಸೂಚಿಸಿದ್ದಾರೆ.
69 ವರ್ಷ ವಯಸ್ಸಿನ ಈ ಗಾಯಕ ಕನ್ನಡ, ಹಿಂದಿ, ತೆಲುಗು, ತಮಿಳು, ಬಂಗಾಳಿ, ಸಿಂಧಿ, ಒಡಿಯಾ, ಭೋಜ್ಪುರಿ, ನೇಪಾಳಿ, ಮಲಯಾಳಂ, ಅಸ್ಸಾಮಿ, ಬಘೇಲಿ ಮತ್ತು ಮೈಥಿಲಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ ಎಂಬುದು ಗಮನಾರ್ಹ. ಅಷ್ಟೇ ಅಲ್ಲ, ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತ ಸರ್ಕಾರವು 2009 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 1980 ರಲ್ಲಿ, ಅವರು ಹಿರಿಯ ಗಾಯಕ ಮೊಹಮ್ಮದ್ ರಫಿ ಅವರೊಂದಿಗೆ ಹಿಂದಿ ಹಿನ್ನೆಲೆ ಗಾಯನದಲ್ಲಿ ಹಾಡಲು ಅವಕಾಶವನ್ನು ಪಡೆದರು. ಕಿಶೋರ್ ಕುಮಾರ್ ಅವರೊಂದಿಗೂ ಕೆಲಸ ಮಾಡಿದ್ದಾರೆ. 1988 ರ ಚಲನಚಿತ್ರ ಖಯಾಮತ್ ಸೆ ಖಯಾಮತ್ ತಕ್ನಲ್ಲಿ ಬಾಲಿವುಡ್ ತಾರೆ ಅಮೀರ್ ಖಾನ್ ನಟನೆಯ “ಪಾಪಾ ಕೆಹ್ತೆ ಹೈ” ಹಾಡಿನ ಮೂಲಕ ಉದಿತ್ ನಾರಾಯಣ್ ತಮ್ಮ ಛಾಪು ಮೂಡಿಸಿದರು.
ಸಂಗೀತಕ್ಕೆ ಇವರ ಕೊಡುಗೆಯನ್ನು ಗುರುತಿಸಿ, ನೇಪಾಳದ ರಾಜ ಬೀರೇಂದ್ರ ಬಿರ್ ಬಿಕ್ರಮ್ ಶಾ ದೇವ್ ಅವರು 1988 ರಲ್ಲಿ ಆರ್ಡರ್ ಆಫ್ ಗೂರ್ಖಾ ದಕ್ಷಿಣ ಬಾಹು ನೀಡಿ ಗೌರವಿಸಿದರು. ಹಾಗೆಯೇ ಭಾರತೀಯ ಸಿನಿಮಾ ಮತ್ತು ಸಂಗೀತಕ್ಕೆ ನೀಡಿದ ಕೊಡುಗೆಗಾಗಿ 2001 ರಲ್ಲಿ ಚಿತ್ರಗುಪ್ತ ಸಿನೇಯಾತ್ರಾ ಪ್ರಶಸ್ತಿ ಮತ್ತು ಭೋಜ್ಪುರಿ ಸಿನಿಮಾಗೆ ಅವರ ಕೊಡುಗೆಗಾಗಿ 2015 ರಲ್ಲಿ ಚಿತ್ರಗುಪ್ತ ಸಿನೇಯಾತ್ರಾ ಪ್ರಶಸ್ತಿಯನ್ನು ನೀಡಲಾಯಿತು.