ಸಿಹಿ ಕಹಿ ಚಂದ್ರು ಅವರು ಎಲ್ಲಾ ಜೆನೆರೇಷನ್ ನವರಿಗೂ ಪರಿಚಿತರು ಎಂದು ಹೇಳಿದರೆ ತಪ್ಪಲ್ಲ. ಅಡುಗೆ ಕಾರ್ಯಕ್ರಮವನ್ನು ಇವರು ನಿರೂಪಣೆ, ರುಚಿಯಾಗಿ ಅಡುಗೆ ಮಾಡುವ ಕಾರಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇವರ ಪರಿಚಯ ಇದೆ. ಈಗ ಇವರು ಅಡುಗೆ ಕಾರ್ಯಕ್ರಮ ಮಾತ್ರವಲ್ಲ, ಕಿರುತೆರೆಯ ಧಾರಾವಾಹಿಯಲ್ಲಿ ಸಹ ನಟಿಸುತ್ತಾ ಜನರಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ. ಪ್ರಸ್ತುತ ಜೀಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಮೂಲಕ ಸಿಹಿಕಹಿ ಚಂದ್ರು ಅವರು ಮನೆಮಾತಾಗಿದ್ದಾರೆ. ಇವರ ನಿಜ ಜೀವನದ ಬದುಕು ಎಲ್ಲರಿಗೂ ಸ್ಪೂರ್ತಿ ಆಗುವಂಥದ್ದು. ಬಹಳ ಕಷ್ಟಪಟ್ಟು ಈ ಹಂತಕ್ಕೆ ಬಂದಿರುವ ಚಂದ್ರು ಅವರಿಗೆ ಒಂದು ಕಾಲದಲ್ಲಿ ಜೀವ ಮತ್ತು ಜೀವನ ಎರಡನ್ನು ನೀಡಿದವರು ವಿಷ್ಣುವರ್ಧನ್ ಅವರು. ಅಷ್ಟಕ್ಕೂ ಆತ ಏನಾಗಿತ್ತು ಗೊತ್ತಾ?

ಸಿಹಿ ಕಹಿ ಚಂದ್ರು ಅವರು ಮೂರ್ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವವರು. ಹಾಸ್ಯ ಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ, ಕೆಲವು ಸಿನಿಮಾಗಳಲ್ಲಿ ವಿಲ್ಲನ್ ಪಾತ್ರಗಳಲ್ಲಿ ಸಹ ಸಿಹಿ ಕಹಿ ಚಂದ್ರು ಅವರು ನಟಿಸಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ಅಭಿನಯಿಸಿದ್ದಾರೆ. ಈಗ ಬಹಳ ಚೆನ್ನಾಗಿದ್ದಾರೆ, ಕುಟುಂಬದ ಜೊತೆಗೆ ಸಂತೋಷದಿಂದ ಇದ್ದಾರೆ. ಆದರೆ ಒಂದು ಸಮಯದಲ್ಲಿ ಚಂದ್ರು ಅವರು ಬಹಳ ಕಷ್ಟಪಡುವಂಥ ಪರಿಸ್ಥಿತಿ ಎದುರಾಗಿತ್ತು. ಅವರ ಅರೋಗ್ಯದಲ್ಲಿ ತೊಂದರೆ ಉಂಟಾಗಿ, ಅವರು ಬದುಕುವುದು ಕಷ್ಟ ಎನ್ನುವ ಹಂತಕ್ಕೆ ಸಮಸ್ಯೆ ಆಗಿತ್ತಂತೆ. ಆ ವೇಳೆ ಅವರಿಗೆ ಸಹಾಯ ಮಾಡಿದ್ದು ಉಮಾಶ್ರೀ ಅವರು ಹಾಗೂ ವಿಷ್ಣು ದಾದ ಅವರು ಎಂದು ಹೇಳಿದ್ದಾರೆ. ಇತ್ತೀಚೆಗೆ ಮಯೂರ ರಾಘವೇಂದ್ರ ಅವರ ಪಾಡ್ ಕಾಸ್ಟ್ ನಲ್ಲಿ ಹೇಳಿದ್ದಾರೆ.

ತಮ್ಮ ಜೀವನದಲ್ಲಿ ನಡೆದ ಅನೇಕ ಘಟನೆಗಳ ಬಗ್ಗೆ ಸಿಹಿ ಕಹಿ ಚಂದ್ರು ಅವರು ಈ ಪಾಡ್ ಕಾಸ್ಟ್ ನಲ್ಲಿ ಹೇಳಿಕೊಂಡಿದ್ದು, ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದ ಆ ಸಮಯವನ್ನು ನೆನೆದು, ವಿಷ್ಣುದಾದ ಅವರು ತಮಗೆ ಮಾಡಿದ ಉಪಕಾರವನ್ನು ಸ್ಮರಿಸಿದ್ದಾರೆ. ಸಿಹಿ ಕಹಿ ಚಂದ್ರು ಅವರಿಗೆ ಬಹಳ ವರ್ಷಗಳ ಹಿಂದೆ ಒಂದು ಖಾಯಿಲೆ ಬಂದಿದೆ ಎಂದು ವೈದ್ಯರು ಹೇಳಿದ್ದರಂತೆ. ನಿಜಕ್ಕೂ ಅವರಿಗೆ ಖಾಯಿಲೆ ಇರಲಿಲ್ಲ, ಆದರೆ ರಿಪೋರ್ಟ್ ನಲ್ಲಿ ಸಮಸ್ಯೆ ಆಗಿ, ಅವರಿಗೆ ಖಾಯಿಲೆ ಇದೆ ಎಂದು ಹೇಳಿ, ಅದಕ್ಕಾಗಿ ಅಮೆರಿಕಾ ಇಂದ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳಿದ್ದರಂತೆ. ಎರಡು ವಾರಕ್ಕೊಮ್ಮೆ ತೆಗೆದುಕೊಳ್ಳುವ ಈ ಟ್ರೀಟ್ಮೆಂಟ್ ಗೆ ಬರೋಬ್ಬರಿ ಒಂದೂವರೆ ಲಕ್ಷ ಖರ್ಚಾಗುತ್ತಿತ್ತೆಂತೆ. ಆ ವೇಳೆ ಚಂದ್ರು ಅವರಿಗೆ ಬದುಕುತ್ತೇನೆ ಎನ್ನುವ ಭರವಸೆ ಕೂಡ ಇರಲಿಲ್ಲವಂತೆ.

ಅಷ್ಟು ಹಣ ಕೊಟ್ಟು ಟ್ರೀಟ್ಮೆಂಟ್ ಪಡೆಯುವುದು ಕಷ್ಟ, ಹಾಗೆಯೇ ಅವರ ಬಳಿ ಅಷ್ಟು ಹಣ ಇರಲಿಲ್ಲವಂತೆ. ತಾವು ಬದುಕುವುದಿಲ್ಲ ಎಂದು ಅನ್ನಿಸಿ, ತಾವಿಲ್ಲದೆ ಹೇಗೆ ಜೀವನ ನಡೆಸಬೇಕು ಎಂದು ಪತ್ನಿ ಸಿಹಿ ಕಹಿ ಗೀತಾ ಅವರಿಗೆ ಕೂಡ ಹೇಳಿಕೊಡುತ್ತಿದ್ದರಂತೆ. ಆ ವೇಳೆ ಉಮಾಶ್ರೀ ಅವರು ಕರೆಮಾಡಿ ಏನಾಗಿದ್ಯೋ ನಿನಗೆ ಎಂದು ಕೇಳಿದರಂತೆ. ಚಂದ್ರು ಅವರು ತಮಗೆ ಆಗಿರುವ ಸಮಸ್ಯೆ ಬಗ್ಗೆ ಹೇಳಿದಾಗ, ಮನೆಗೆ ಬಾ ಎಂದು ಕರೆದರಂತೆ. ಉಮಾಶ್ರೀ ಅವರ ಮನೆಗೆ ಹೋಗೋಕೆ ಗಾಡಿ ಕೂಡ ಇಲ್ಲದಂಥ ಪರಿಸ್ಥಿತಿಯಲ್ಲಿ ಇದ್ದರಂತೆ ಚಂದ್ರು ಅವರು. ಆ ವೇಳೆ ಅವರ ಫ್ರೆಂಡ್ ಒಬ್ಬರು ಮನೆಗೆ ಬಂದು, ಉಮಾಶ್ರೀ ಅವರ ಮನೆಗೆ ಕರೆದುಕೊಂಡು ಹೋಗಿದ್ದರಂತೆ. ಹೋದ ತಕ್ಷಣ ಆರೋಗ್ಯದ ಬಗ್ಗೆ ವಿಚಾರಿಸಿದ ಉಮಾಶ್ರೀ ಅವರು ಚಂದ್ರು ಅವರಿಗೆ 25 ಸಾವಿರ ಕೊಟ್ಟರಂತೆ.

ಆಗಿನ ಕಾಲಕ್ಕೆ ಅದು ಸಣ್ಣ ಮೊತ್ತ ಅಂತೂ ಆಗಿರಲಿಲ್ಲ. ಸಿಹಿ ಕಹಿ ಚಂದ್ರು ಅವರನ್ನು ಮನೆಗೆ ಕರೆದು, ಆರೋಗ್ಯ ವಿಚಾರಿಸಿ ಮೊದಲು ಹಣ ಕೊಟ್ಟಿದ್ದು ಉಮಾಶ್ರೀ ಅವರೇ ಅಂತೆ. 25 ಸಾವಿರ ಕೊಡುವುದರ ಜೊತೆಗೆ ಇನ್ನು ಹಣ ಬೇಕಾದರೆ ಕೇಳು ಹೊಂದಿಸಿ ಕೊಡುತ್ತೀನಿ, ಆರೋಗ್ಯ ಚೆನ್ನಾಗಿ ನೋಡಿಕೋ ಎಂದು ಹೇಳಿದ್ದರಂತೆ ಉಮಾಶ್ರೀ ಅವರು. ನಂತರ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿದರಂತೆ ಚಂದ್ರು ಅವರು. ತಮ್ಮ ಆರೋಗ್ಯಕ್ಕೆ ಟ್ರೀಟ್ಮೆಂಟ್ ಪಡೆಯಲು, ಮುಖ್ಯಮಂತ್ರಿಗಳ ನಿಧಿಯಿಂದ ಸಹಾಯ ಬೇಕು, ವಿಷ್ಣುವರ್ಧನ್ ಅವರಿಂದ ಆ ಸಹಾಯ ಪಡೆಯಬಹುದು ಎಂದು ಚಂದ್ರು ಅವರು ಹೋದರಂತೆ. ಆ ವೇಳೆ ವಿಷ್ಣುವರ್ಧನ್ ಅವರು ರವಿವರ್ಮ ಎನ್ನುವ ಸಿನಿಮಾ ಮಾಡುತ್ತಿದ್ದರು, ಆ ಸಿನಿಮಾ ನಿರ್ಮಾಪಕರು ಸಚಿವರಾಗಿದ್ದರಂತೆ..

ಹಾಗಾಗಿ ಅವರ ಜೊತೆ ಮಾತನಾಡಿ, ನಿಧಿಯಿಂದ ಸಹಾಯ ಪಡೆಯುವ ಬಗ್ಗೆ ಮತನಾಡಬೇಕು ಎಂದು ಚಂದ್ರು ಅವರು ಹೋದಾಗ ಅವರನ್ನು ನೋಡಿದ ವಿಷ್ಣುವರ್ಧನ್ ಅವರು ಯಾಕೋ ಹೀಗಾಗಿದ್ದೀಯ ಏನಾಯ್ತು ಎಂದು ಕೇಳಿದರಂತೆ. ಆಗ ಚಂದ್ರು ಅವರು ತಮ್ಮ ಖಾಯಿಲೆ ಬಗ್ಗೆ ಹೇಳಿದರಂತೆ. ಕೂಡಲೇ ವಿಷ್ಣುವರ್ಧನ್ ಅವರು ಒಬ್ಬರು ಡಾಕ್ಟರ್ ಇದ್ದಾರೆ ಅವರನ್ನ ಭೇಟಿ ಮಾಡು ಎಂದರಂತೆ. ಚಂದ್ರು ಅವರು ಹೋದಾಗ ಆ ವೈದ್ಯರು ಮತ್ತೊಮ್ಮೆ ಎಲ್ಲಾ ಟೆಸ್ಟ್ ಗಳನ್ನು ಮಾಡಿ ಚಂದ್ರು ಅವರಿಗೆ ಅವರಿಗೆ ಇರುವುದು ಖಾಯಿಲೆ ಅಲ್ಲ, ಒಂದು ಆರೋಗ್ಯ ಸಮಸ್ಯೆ ಅಷ್ಟೇ ಎಂದು ಹೇಳಿದರಂತೆ. 1 ವರ್ಷ ಮಾತ್ರೆ ತೆಗೆದುಕೊಂಡರೆ ಸರಿ ಹೋಗುತ್ತದೆ ಎಂದು ಹೇಳಿದರಂತೆ. ಫೀಸ್ ಕೊಡಲು ಹೋದರೆ, ಫೀಸ್ ಕೊಟ್ಟು ಆಗಿದೆ ಎಂದು ಹೇಳಿದರಂತೆ.

ವಿಷ್ಣುವರ್ಧನ್ ಅವರು ಅದಾಗಲೇ ಫೀಸ್ ಕೊಟ್ಟುಬಿಟ್ಟಿದ್ದರು. ಸಿಹಿ ಕಹಿ ಚಂದ್ರು ಅವರಿಗೆ ಅಂದು ವಿಷ್ಣುವರ್ಧನ್ ಅವರು ಜೀವ ಮತ್ತು ಜೀವನ ಎರಡನ್ನು ಸಹ ಕೊಟ್ಟರು ಎಂದು ಸಿಹಿ ಕಹಿ ಚಂದ್ರು ಅವರು ಹೇಳಿದ್ದಾರೆ. ಇಂಥ ವಿಚಾರಗಳನ್ನ ಕೇಳಿದರೆ, ವಿಷ್ಣುವರ್ಧನ್ ಅವರು ಎಂಥಾ ಅದ್ಭುತವಾದ ವ್ಯಕ್ತಿತ್ವದವರು ಎಂದು ಗೊತ್ತಾಗುತ್ತದೆ. ಇಂಥ ಮಹಾನುಭಾವರು ಪ್ರಪಂಚದಿಂದ ಬೇಗ ಹೊರಟು ಹೋಗುತ್ತಾರೆ ಎನ್ನುವುದೇ ಬೇಸರ. ಇನ್ನು ಉಮಶ್ರೀ ಅವರು ಮಾಡಿದ ಸಹಾಯ, ಮುಖ್ಯಮಂತ್ರಿ ಚಂದ್ರು ಅವರು ಮಾಡಿದ ಸಹಾಯ ಯಾವುದನ್ನು ಕೂಡ ಮರೆಯುವ ಹಾಗಿಲ್ಲ. ಆಗೆಲ್ಲಾ ಸ್ಯಾಂಡಲ್ ವುಡ್ ಕಲಾವಿದರಲ್ಲಿ ಒಗ್ಗಟ್ಟು ಇತ್ತು, ಒಬ್ಬರನ್ನೊಬ್ಬರು ಬಿಟ್ಟಿಕೊಡುತ್ತಿರಲಿಲ್ಲ, ಎಲ್ಲರಿಗೂ ಎಲ್ಲರೂ ಗೌರವ ಕೊಡುತ್ತಿದ್ದರು.



