ಬಿಗ್ ಬಾಸ್ ಕನ್ನಡ ಸೀಸನ್ 11 ದಿನೇ ದಿನೇ ರಂಗೇರುತ್ತಿದೆ. ಈ ವಾರ ಕಿಚ್ಚ ಸುದೀಪ್ ಅವರು ಸಿಕ್ಕಾಪಟ್ಟೆ ಕೋಪಾವೇಶದಲ್ಲಿ ಶನಿವಾರದ ಸಂಚಿಕೆ ನಡೆಸಿಕೊಟ್ಟರು. ಚೈತ್ರಾ ಅವರಿಗೆ ಸಖತ್ತಾಗೆ ಕ್ಲಾಸ್ ನಡೆಯಿತು. ಆದರೆ ಭಾನುವಾರದ ಸಂಚಿಕೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಿತು. ಒಟ್ಟಿನಲ್ಲಿ ಪ್ರತಿ ವಾರವು ವೀಕೆಂಡ್ ಪಂಚಾಯಿತಿ ಒಂದು ರೀತಿ ಥ್ರಿಲ್ಲರ್ ಎಪಿಸೋಡ್ ರೀತಿ ಇದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಈ ವಾರ ಭಾನುವಾರದ ಸಂಚಿಕೆ ಮುಗಿದ ವೇಳೆ ಸುದೀಪ್ ಅವರು ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿದ್ದಾರೆ. ಅವರಿಬ್ಬರು ಹೋದ ದಿನವೇ ಸಿಕ್ಕಾಪಟ್ಟೆ ಸದ್ದು ಮಾಡೋಕೆ ಶುರು ಮಾಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಜೀಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದಿದ್ದ ಹನುಮಂತ ಹೋಗಿದ್ದಾಗಿದೆ, ನೋಡಲು ಬಹಳ ಮುಗ್ಧನಂತೆ ಕಂಡರೂ ಸಹ, ಹನುಮಂತ ಬಹಳ ಜಾಣ್ಮೆ ಇಂದಲೇ ಮನೆಯೊಳಗೆ ಆಟ ಆಡುತ್ತಿದ್ದಾನೆ. ಇವನ ಜೊತೆಗೆ ಇದೀಗ ಇನ್ನಿಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯಾಗಿ ಬಂದಿದ್ದಾರೆ. ಅವರು ಮತ್ಯಾರು ಅಲ್ಲ, ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ ಶೋಭಾ ಶೆಟ್ಟಿ, ಹಾಗೆಯೇ ಕನ್ನಡ ರಿಯಾಲಿಟಿ ಶೋಗಳ ಮೂಲಕ ಹೆಸರು ಪಡೆದಿದ್ದ ಅಕ್ಷತಾ ಅವರ ಪತಿ ರಜತ್.
ಹೌದು, ರಜತ್ ಹಾಗು ಶೋಭಾ ಇವರಿಬ್ಬರು ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರ ಜೊತೆಗೆ ಮಾತನಾಡಿ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಶೋಭಾ ಶೆಟ್ಟಿ ಅವರು ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ತನು ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು. ಬಳಿಕ ತೆಲುಗು ಧಾರಾವಾಹಿಗಳ ಕಡೆಗೆ ಮುಖ ಮಾಡಿದ್ದರು, ಕಳೆದ ವರ್ಷ ಬಿಗ್ ಬಾಸ್ ತೆಲುಗು ಶೋಗೆ ಸ್ಪರ್ಧಿಯಾಗಿ ಹೋಗಿದ್ದರು, ತೆಲುಗಿನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ರು ಶೋಭಾ. ಅವರೇ ವಿನ್ ಆಗ್ಬೇಕು ಎಂದು ಹಲವರು ಬಯಸಿದ್ದರು. ಆದರೆ ಒಂದಷ್ಟು ವಾರಗಳ ಬಿಗ್ ಬಾಸ್ ಪಯಣದ ನಂತರ ಎಲಿಮಿನೇಟ್ ಆಗಿದ್ದರು.
ಇದೀಗ ಶೋಭಾ ಅವರು ಗೆಲ್ಲುವ ಛಲದಿಂದ ಕನ್ನಡ ಬಿಗ್ ಬಾಸ್ ಗೆ ಬಂದಿದ್ದಾರೆ. ಇನ್ನು ಅಕ್ಷತಾ ಅವರ ಪತಿ ರಜತ್ ಹಲವು ಕಾರ್ಯಕ್ರಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಗುರುತಿಸಿಕೊಂಡಿದ್ದಾರೆ. ಶೋಭಾ ಅವರು ನನಗೆ ಇಲ್ಯಾರು ಕಾಂಪಿಟೇಟರ್ ಅಲ್ಲ ಎಂದು ಹೇಳೋ ಮೂಲಕ ಮನೆಯೊಳಗೆ ಹೋದರೆ, ರಜತ್ ಇಲ್ಲಿರೋರಲ್ಲಿ ಅರ್ಧ ಪುಕ್ಲು ಇನ್ನರ್ಧ ತಿಕ್ಲು ಇವರ್ಯಾರು ಉದ್ಧಾರ ಆಗಲ್ಲ ಎಂದು ಹೇಳಿ ಮನೆಯೊಳಗೆ ಹೋಗಿದ್ದಾರೆ..ಇವರಿಬ್ಬರ ವೈಲ್ಡ್ ಕಾರ್ಡ್ ಎಂಟ್ರಿ ನೋಡಿದ ಮನೆಮಂದಿ ಶಾಕ್ ಆಗಿದ್ದು, ಮೊದಲ ದಿನವೇ ಇಬ್ಬರು ತೆಂಗಿನಕಾಯಿ ಒಡೆದು, ಎಲ್ಲರಿಗೂ ವಾರ್ನಿಂಗ್ ಕೊಟ್ಟಿದ್ದಾರೆ ಎಂದರೆ ತಪ್ಪಲ್ಲ.

ತ್ರಿವಿಕ್ರಂ ಇಷ್ಟು ದಿನ ಮಾಡಿರೋದನ್ನ ಒಂದೇ ವಾರದಲ್ಲಿ ಮಾಡ್ತೀನಿ ಅಂತ ರಜತ್ ಹೇಳಿದರೆ, ಗೌತಮಿ ಮುಖವಾಡ ಹಾಕಿಕೊಂಡೆ ಇದ್ದಾರೆ ಅದನ್ನ ಹೊರಗಡೆ ತರ್ತೀನಿ ಎಂದಿದ್ದಾರೆ ಶೋಭಾ. ಒಟ್ಟಿನಲ್ಲಿ ಮನೆಯೊಳಗೆ ಕಾಲಿಟ್ಟ ಮೊದಲ ದಿನವೇ ಇಬ್ಬರೂ ಧೂಳೆಬ್ಬಿಸಿದ್ದು, ಮನೆಯೊಳಗೆ ಇರೋರಿಗೆ ಟೆನ್ಷನ್ ಶುರುವಾಗಿದೆ. ಇನ್ನು ಹೊರಗಿನಿಂದ ನೋಡೋ ಜನರಿಗೆ ಒಳ್ಳೆಯ ಮನರಂಜನೆ ಅಂತೂ ಸಿಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಹೊಸ ರಂಗು ಶುರುವಾಗಿದೆ. ಮುಂದಿನ ದಿನಗಳಲ್ಲಿ ಈ ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಗಳು ಯಾವ ರೀತಿ ಮುಂದುವರೆಯುತ್ತಾರೆ ಎಂದು ಕಾದು ನೋಡಬೇಕಿದೆ..