ಪಬ್ಜಿ ಆಡುತ್ತಾ ಪ್ರೀತಿಯಲ್ಲಿ ಬಿದ್ದು ಪ್ರೀತಿಸಿದ ಹುಡುಗನಿಗಾಗಿ ಭಾರತಕ್ಕೆ ಬಂದ ಪಾಕ್ ಮಹಿಳೆ ಸೀಮಾ ಹೈದರ್ ಇದೀಗ ಸಕ್ಕತ್ ಸುದ್ದಿಯಲ್ಲಿದ್ದಾಳೆ. ಏಕಾಏಕಿ ಸೀಮಾಳಿಗೆ ಭಾರತದ ಮೇಲೆ ಪ್ರೀತಿ ಉಕ್ಕಿ ಹರಿದಿದ್ದು, ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ನಿನ್ನೆಯಷ್ಟೇ ತನ್ನ ಮನೆ ಮೇಲೆ ಭಾರತೀಯ ಧ್ವಜ ಹಾರಿಸಿ ‘ಪಾಕಿಸ್ತಾನ್ ಮುರ್ದಾಬಾದ್, ಹಿಂದೂ ಸ್ಥಾನ್ ಜಿಂದಾಬಾದ್’ ಎಂದಿರುವ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದು ಹಲವು ಆರೋಪಗಳನ್ನು ಹೊತ್ತಿದ್ದರೂ ಕೂಡ ಸೀಮಾ ಹೈದರ್ ಗೆ ಭಾರತದ ಮೇಲೆ ಅಭಿಮಾನ ಬಂದಂತಿದೆ. ನಿನ್ನೆಯಷ್ಟೇ ‘ಹರ್ ಘರ್ ತಿರಂಗ್’ ಅಭಿಯಾನಕ್ಕೆ ಕೈ ಜೋಡಿಸಿ ನೋಯ್ಡಾದಲ್ಲಿರುವ ತನ್ನ ಪತಿ ಸಚಿನ್ ಮನೆ ಮೇಲೆ ಧ್ವಜಹಾರಿಸಿ, ತ್ರಿವರ್ಣ ಸೀರೆ ಉಟ್ಟು ಸಂಭ್ರಮಿಸಿದ್ದಾಳೆ.
ಮನೆಯ ಛಾವಣಿಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಸಂಧರ್ಭದಲ್ಲಿ ಸುತ್ತಮುತ್ತಲಿನ ಸಾಕಷ್ಟು ಜನ ಇವರೊಂದಿಗೆ ಸೇರಿಕೊಂಡಿದ್ದಾರೆ. ಈ ವೇಳೆ ಜನರೊಂದಿಗೆ ಸೇರಿ ಸೀಮಾ ಹೈದರ್ ‘ಪಾಕಿಸ್ತಾನ್ ಮುರ್ದಾಬಾದ್, ಹಿಂದು ಸ್ಥಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ. ಸದ್ಯ, ಈ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದ್ದು ನೆಟ್ಟಿಗರು ಸೀಮಾಳ ಭಾರತದ ಮೇಲಿನ ಅಭಿಮಾನಕ್ಕೆ ಫೀದಾ ಆಗಿದ್ದಾರೆ.