ಇತ್ತೀಚಿನ ದಿನಗಳಲ್ಲಂತೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಏನಾದರೂ ಸುದ್ದಿ ಅಥವಾ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವೊಮ್ಮೆ ಜನರು ರೀಲ್ಸ್ಗಾಗಿ ವಿಚಿತ್ರವಾದ ಕೆಲಸಗಳನ್ನು ಮಾಡುವ ವಿಡಿಯೋಗಳು ವೈರಲ್ ಆಗುತ್ತವೆ. ಹೆಚ್ಚಾಗಿ ಯುವತಿಯರ ವಿಡಿಯೋಗಳು ನೆಟ್ಟಿಗರ ಗಮನಸೆಳೆಯುತ್ತವೆ. ಇವರಲ್ಲಿ ಕೆಲವರ ನೃತ್ಯಗಳು, ನಟನೆ, ವ್ಲಾಗ್ಗಳು ಪಡ್ಡೆ ಹೈಕಳ ಹೃದಯ ಗೆದ್ದಿವೆ. ಇದಲ್ಲದೇ ಜುಗಾಡ್ನ ಹಲವು ವಿಡಿಯೋಗಳು ಪ್ರತಿದಿನ ವೈರಲ್ ಆಗುತ್ತವೆ. ಇನ್ನು ಸ್ಟಂಟ್ಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಆದರೆ ಈಗ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿದರೆ ನಿಮಗೆ ನಗಬೇಕೋ…ಅಯ್ಯೋ ಎನ್ನಬೇಕೋ…ಒಟ್ಟಿನಲ್ಲಿ ನೀವು ಕನ್ಫ್ಯೂಸ್ ಆಗುವುದು ಗ್ಯಾರಂಟಿ. ಸದ್ಯ ವಿಡಿಯೋ ನೋಡಿ ಹಲವರು ಹಲವರು ರೀತಿಯಲ್ಲಿ ಕಮೆಂಟ್ ಕೂಡ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಕಂಡದ್ದೇನು?
ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜೋಡಿಗಳಿಬ್ಬರು ದೋಣಿಯೊಳಗಡೆ ನಿಂತಿರುವುದು ಕಂಡು ಬರುತ್ತದೆ. ಯುವತಿ ನಿಂತಿರುವ ಸ್ಥಳದಲ್ಲಿಯೇ ಯುವಕ ಅವಳ ಹಿಂದೆ ನಿಂತಿದ್ದಾನೆ ಅಷ್ಟೇ. ವಿಡಿಯೋ ಮಾಡಲಾಗುತ್ತಿದೆ. ಆಗ ಯುವಕನು ಯುವತಿಯನ್ನು ತನ್ನ ಕಡೆಗೆ ತಿರುಗಿಸುತ್ತಾನೆ. ಆದರೆ ಈ ಸಮಯದಲ್ಲಿ ಯುವತಿಗೆ ಬ್ಯಾಲೆನ್ಸ್ ತಪ್ಪುತ್ತದೆ. ಅದು ಎಷ್ಟರ ಮಟ್ಟಿಗೆ ಅಂದರೆ ಅವನನ್ನೂ ಹಿಡಿದುಕೊಂಡರೂ ಸಮತೋಲನವನ್ನು ಕಾಪಾಡಿಕೊಳ್ಳಲಾಗಿಲ್ಲ. ಆಗ ಇಬ್ಬರೂ ನದಿಗೆ ಬೀಳುತ್ತಾರೆ. ಇದಾದ ನಂತರ ಕ್ಯಾಮರಾ ಮ್ಯಾನ್ ರೆಕಾರ್ಡಿಂಗ್ ನಿಲ್ಲಿಸುತ್ತಾನೆ. ಈ ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ತೆಗೆದಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲವಾದರೂ ಇದೀಗ ವೈರಲ್ ಆಗುತ್ತಿದೆ.
ನೆಟ್ಟಿಗರು ಹೇಳಿದ್ದೇನು?
ನೀವು ಇದೀಗ ವೀಕ್ಷಿಸುವ ವಿಡಿಯೋವನ್ನು X ಪ್ಲಾಟ್ಫಾರ್ಮ್ನಲ್ಲಿ @prof_desi ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ವಿಡಿಯೋವನ್ನು ಪೋಸ್ಟ್ ಮಾಡುವಾಗ, ‘ಪ್ರೀ ವೆಡ್ಡಿಂಗ್ ವಿಡಿಯೋಗ್ರಫಿ ಮಾಡಲಾಗಿದೆ’ ಎಂಬ ಶೀರ್ಷಿಕೆ ಕೊಡಲಾಗಿದೆ. ವಿಡಿಯೋ ನೋಡಿ ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಕೂಡ ಮಾಡಿದ್ದಾರೆ. ಓರ್ವ ಬಳಕೆದಾರ “ಹೌದು, ಅವರ ಫೋಟೋ ಶೂಟ್ ಮಾಡಲಾಗಿದೆ, ಅದು ಕೂಡ ವಿಭಿನ್ನ ಶೈಲಿಯಲ್ಲಿ” ಎಂದರೆ ಇನ್ನೋರ್ವ “ಆಕೆ ಅಧಿಕ ತೂಕ ಹೊಂದಿದ್ದಾರೆ, ಅದಕ್ಕಾಗಿಯೇ ಹಾಗಾಯಿತು” ಎಂದಿದ್ದಾರೆ. ಮತ್ತೆ ಕೆಲವರು “ಆಗಿದ್ದಾಯಿತು, ಶೂಟಿಂಗ್ ಮುಂದುವರೆಸಿ” ಎಂದು ಕಮೆಂಟ್ ಮಾಡಿರುವುದನ್ನು ನೀವಿಲ್ಲಿ ನೋಡಬಹುದು.



