ಸೌತ್ ಸಿನಿ ದುನಿಯಾದ ಬೋಲ್ಡ್ ಬೆಡಗಿ ಸಮಂತಾ ಸದ್ಯ, ‘ಖುಷಿ’ ಸಿನಿಮಾದ ನಂತರ ಪರ್ಸನಲ್ ಲೈಪ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಮಯೋಸೈಟಿಸ್ ಖಾಯಿಲೆಯಿಂದ ಬಳಲುತ್ತಿರುವ ಇವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಸಮಂತಾ ನ್ಯೂಯಾರ್ಕ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಕಪ್ಪು ಬಣ್ಣದ ಸಾರಿ ತೊಟ್ಟು ಮಿರಮಿರ ಮಿಂಚಿದ್ದಾರೆ. ಈ ಬೋಲ್ಡ್ ಲುಕ್ ಕಂಡು ನೆಟ್ಟಿಗರು ಫೀದಾ ಆಗಿದ್ದಾರೆ.

ಕಪ್ಪು ಬಣ್ಣದ ಸಾರಿ ತೊಟ್ಟಿರುವ ಬೋಲ್ಡ್ ಫೋಟೋಗಳನ್ನು ಸ್ಯಾಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಕ್ಕತ್ ವೈರಲ್ ಆಗಿದೆ. ಕಪ್ಪು ಸಾರಿಯಲ್ಲಿ ಖಡಕ್ ಆಗಿ ಕ್ಯಾಮರಾಗೆ ಸಮಂತಾ ಪೋಸ್ ಕೊಟ್ಟಿದ್ದು, ನೆಟ್ಟಿಗರು ನಟಿಯ ಹೊಸ ಅವತಾರ ಕಂಡು ಭಿನ್ನವಿಭಿನ್ನ ಕಮೆಂಟ್ ಗಳನ್ನು ಹಾಕಿದ್ದಾರೆ.
ಸ್ಯಾಮ್ ಬೋಲ್ಡ್ ಲುಕ್ ಕಂಡಿರುವ ನೆಟ್ಟಿಗರಲ್ಲಿ ಕೆಲವೊಬ್ಬರು, ‘ಕಪ್ಪಿ ಸಾರಿಯಲ್ಲಿ ನೀವು ಸಕ್ಕತ್ ಆಗಿ ಕಾಣುತ್ತೀರಿ. ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲಿ ಅನುಸರಿಸಿದ್ದಕ್ಕೆ ಥ್ಯಾಂಕ್ಸ್’ ಎಂದಿದ್ದಾರೆ. ಇನ್ನು ಸಮಂತಾ ಹಾಗೂ ವಿಜಯ್ ದೇವರಕೊಂಡ ನಟನೆಯ ‘ಖುಷಿ’ ಚಿತ್ರ ಸೆಪ್ಟೆಂಬರ್ 1ರಂದು ತೆರೆಗೆ ಬರಲಿದ್ದು, ಇದರ ಪ್ರಚಾರಕ್ಕಾಗಿ ಸಮಂತಾ ನ್ಯೂಯಾರ್ಕ್ ತೆರಳಿದ್ದಾರೆ ಎನ್ನಲಾಗಿದೆ.