ನಟಿ ಆಶಿತಾ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಚಿತ್ರರಂಗದಲ್ಲಿ ಇವರು ಇದ್ದಿದ್ದು ಕೆಲವೇ ಕೆಲವು ವರ್ಷಗಳೇ ಆದರೂ, ಒಳ್ಳೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ವೀಕ್ಷಕರ ಮನಸ್ಸಿನಲ್ಲಿ ಇವತ್ತಿಗೂ ನೆನಪಿದ್ದಾರೆ. ಹಾರ್ಟ್ ಬೀಟ್ಸ್ ಸಿನಿಮಾವನ್ನು ಮರೆಯೋದಕ್ಕೆ ಆಗುತ್ತಾ? ಆ ಸಿನಿಮಾದಲ್ಲಿ ಇವರ ಪಾತ್ರವನ್ನ ಇವತ್ತಿಗೂ ಎಲ್ಲರೂ ನೆನಪಿಟ್ಟುಕೊಂಡಿದ್ದಾರೆ. ಆಶಿತಾ ಅವರು ಹೆಚ್ಚು ವರ್ಷಗಳ ಕಾಲ ಚಿತ್ರರಂಗದಲ್ಲಿ ಇರಲಿಲ್ಲ, ಬಹಳ ಬೇಗ ಇವರು ಸಿನಿಮಾ ಇಂದ ಹೊರಗಡೆ ಉಳಿದು ಬಿಟ್ಟರು. ಇವರು ಎಲ್ಲಿದ್ದಾರೆ ಎಂದು ಕೂಡ ಗೊತ್ತಿರಲಿಲ್ಲ. ಆದರೆ ಇತ್ತೀಚೆಗೆ ಇವರ ಒಂದು ಸಂದರ್ಶನ ವೈರಲ್ ಆಯಿತು. ಇವರು ಚಿತ್ರರಂಗ ಬಿಟ್ಟು ಹೋಗಿದ್ದು ಯಾಕೆ ಎನ್ನುವುದನ್ನು ಇದರಲ್ಲಿ ತಿಳಿಸಿದರು. ಹಾಗೆಯೇ ಅನೇಕ ವಿಚಾರಗಳನ್ನು ಸಹ ಹೇಳಿಕೊಂಡರು. ಅವುಗಳ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

ಈ ಚಿತ್ರರಂಗ ಎಲ್ಲರಿಗೂ ಒಂದೇ ರೀತಿ ಇಲ್ಲ. ಹಲವು ವಿಚಾರಗಳು ಹಲವರ ಪಾಲಿಗೆ ನಾವಂದುಕೊಂಡ ಹಾಗೆ ಇರುವುದಿಲ್ಲ. ಅದರಲ್ಲೂ ಸಿನಿಮಾ ಹೀರೋಯಿನ್ ಗಳು ಅಥವಾ ಸಿನಿಮಾ ರಂಗದಲ್ಲಿ ಹೆಣ್ಣುಮಕ್ಕಳು ಕೆಲಸ ಮಾಡುವುದು ಎಂದರೆ, ಅವರನ್ನು ಬೇರೆ ರೀತಿಯಲ್ಲಿ ನೋಡುವವರೇ ಹೆಚ್ಚು. ಇಂಥ ಸಾಕಷ್ಟು ಕೇಸ್ ಗಳನ್ನು ನಾವು ನೋಡಿದ್ದೇವೆ. ನಟಿಯರು ತಮಗೆ ಆಗಿರುವ ತೊಂದರೆಗಳ ಬಗ್ಗೆ ಹಲವು ಸಾರಿ ಹೇಳಿಕೊಂಡಿದ್ದಾರೆ. ನಿರ್ದೇಶಕರು, ನಿರ್ಮಾಪಕರು ಅಥವಾ ಇನ್ನಿತರ ವ್ಯಕ್ತಿಗಳಿಂದ ತಮಗೆ ಆಗಿರುವ ತೊಂದರೆಯ ಬಗ್ಗೆ ಹೇಳಿರೋದು ಸಾಕಷ್ಟು ಇದೆ. ಆಶಿತಾ ಅವರು ಕೂಡ ಅಂಥ ಸಮಸ್ಯೆಗಳನ್ನು ಎದುರಿಸಿದ್ದಾರೆ, ಅದೆಲ್ಲವೂ ಬೇಡ ಎಂದೇ ಅವರು ಚಿತ್ರರಂಗದಿಂದ ದೂರವೇ ಉಳಿದರು. ತಮಗಾದ ಅನುಭವಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ನಟಿ ಆಶಿತಾ ಅವರು ಹಾರ್ಟ್ ಬೀಟ್ಸ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಹಾರ್ಟ್ ಬೀಟ್ಸ್, ಮಸಾಲ ಹಾಗೂ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಒಳ್ಳೆಯ ಪಾತ್ರಗಳ ಆಯ್ಕೆ ಮಾಡಿಕೊಂಡು ಒಳ್ಳೆಯ ಹಂತವನ್ನು ತಲುಪಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಆಕಾಶ್ ಸಿನಿಮಾದಲ್ಲಿ ಅವರ ತಂಗಿಯ ಪಾತ್ರದಲ್ಲಿ ನಟಿಸಿದರು, ಶಿವಣ್ಣ ಅವರ ತಂಗಿ ಪಾತ್ರದಲ್ಲಿ ಕೂಡ ನಟಿಸಿದ್ದಾರೆ. ಇದೆಲ್ಲವೂ ನಮಗೆ ಗೊತ್ತೇ ಇದೆ. ಈ ಎಲ್ಲಾ ಸಿನಿಮಾಗಳು ಆಶಿತಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಆದರೆ ಆಶಿತಾ ಅವರು ಹೆಚ್ಚು ವರ್ಷಗಳ ಕಾಲ ಚಿತ್ರರಂಗದಲ್ಲಿ ಉಳಿಯಲಿಲ್ಲ. ಸಕ್ಸಸ್ ಸಿಕ್ಕರೂ ಸಹ ಮುಂದೆ ಹೆಚ್ಚು ಸಿನಿಮಾಗಳಲ್ಲಿ ನಟಿಸದೇ ಹೊರಗಡೆ ಬಂದರು. ಅದಕ್ಕೆ ಕಾರಣ ಸಾಕಷ್ಟಿದೆ. ಅವುಗಳ ಬಗ್ಗೆ ಇವರು ಮಾತನಾಡಿದ್ದಾರೆ.

ಆಶಿತಾ ಅವರಿಗೆ ಚಿತ್ರರಂಗದ ಹಾದಿ ಸುಲಭವಾಗಿ ಇರಲಿಲ್ಲ. ಶುರುವಿನಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದರೂ ಕೂಡ, ಮುಂದಿನ ವರ್ಷಗಳಲ್ಲಿ ತೊಂದರೆಗಳು ಬರುವುದಕ್ಕೆ ಶುರುವಾದವು. ಆಶಿತಾ ಆ ಅವರು ಸಹ ಒಳ್ಳೇ ಪಾತ್ರಗಳಲ್ಲಿ ನಟಿಸಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಅಂದುಕೊಂಡಂತೆ ಯಾವುದು ನಡೆಯಲಿಲ್ಲ. ಅವರು ಹೇಳಿದ ಮಾತಿನ ಅನುಸಾರ, ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು, ಒಳ್ಳೆಯ ಪಾತ್ರಗಳು ಸಿಗುತ್ತಿದ್ದವು, ಒಳ್ಳೆಯ ನಿರ್ದೇಶಕರು ಇರುತ್ತಿದ್ದರು. ಆದರೆ ಉದ್ಯಮಿಗಳು, ರಾಜಕಾರಣಿಗಳು ಎಲ್ಲರು ಚಿತ್ರರಂಗಕ್ಕೆ ಬರುವುದು ಶುರುವಾದ ಮೇಲೆ ಎಲ್ಲವೂ ಬದಲಾಗಿ ಹೋಯ್ತು ಎಂದು ಹೇಳಿದ್ದಾರೆ. ಇವರೆಲ್ಲರೂ ನಟಿಯರನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು ಎಂದು ಹೇಳಿದ್ದಾರೆ ಆಶಿತಾ.
ಅವಕಾಶ ಕೊಡುತ್ತೇವೆ ಎಂದು, ಮಂಚ ಹತ್ತುವುದಕ್ಕೆ ಹೇಳುತ್ತಿದ್ದರಂತೆ, ಅದಕ್ಕೆಲ್ಲಾ ಒಪ್ಪಿಲ್ಲ ಎಂದರೆ ಅವಕಾಶ ಸಿಗುವದಿಲ್ಲ ಎಂದು ಹೇಳುತ್ತಿದ್ದರಂತೆ. ಆಶಿತಾ ಅವರಿಗೆ ಅದ್ಯಾವುದು ಕೂಡ ಬೇಕಾಗಿರಲಿಲ್ಲ, ಅವಕಾಶಕ್ಕಾಗಿ ಮಂಚ ಹತ್ತುವ ಮಟ್ಟಕ್ಕೆ ಹೋಗುವುದಿಲ್ಲ ಎಂದು ಇವರು ಚಿತ್ರರಂಗದಿಂದಲೇ ದೂರ ಉಳಿದು ಬಿಟ್ಟರು, ಅಂದು ಅವರೆಲ್ಲ ಹೇಳಿದ ಹಾಗೆ ಕೇಳಿದ್ದರೆ, ಇಂದು ಕನ್ನಡದ ನಂಬರ್ 1 ಸ್ಟಾರ್ ನಟಿ ಆಗಿರುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ ಆಶಿತಾ. ನಟಿಯರನ್ನು ನಾವು ಹೊರಗಡೆ ಇಂದ ನೋಡಿ, ಸುಲಭವಾಗಿ ಅವರು ಹಾಗೆ, ಇವರು ಹೀಗೆ ಅಂತ ಹೇಳಿಬಿಡುತ್ತೀವಿ, ಆದರೆ ಅವರುಗಳು ಅನುಭವಿಸುವ ಕಷ್ಟಗಳು ಅವರಿಗೆ ಮಾತ್ರ ಗೊತ್ತಿರುತ್ತದೆ, ನಮಗೆಲ್ಲ ಅರ್ಥ ಆಗುವುದಿಲ್ಲ ಅನ್ನೋದು ಇವರ ಮಾತಿನಿಂದ ಅರ್ಥವಾಗುತ್ತದೆ..

ಇದೆಲ್ಲವು ಚಿತ್ರರಂಗದ ಇನ್ನೊಂದು ಮುಖ. ಆಶಿತಾ ಅವರು ಚಿತ್ರರಂಗದಿಂದ ಹೊರಗಡೆ ಬಂದು, ಬೇರೆ ಕೆಲಸ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಿಕೊಂಡು ಹೋಗುತ್ತಾ ಇದ್ದಾರೆ. ಜೊತೆಗೆ ಇವರು ಮತ್ತೊಂದು ವಿಚಾರವನ್ನ ಸಹ ಶುರು ಮಾಡಿದ್ದಾರೆ. ಆಶಿತಾ ಅವರು ತಮ್ಮ ಅಭಿಮಾನಿಗಳು ತಮ್ಮನ್ನು ಮಿಸ್ ಮಾಡಿಕೊಳ್ಳುತ್ತಾರೆ ಎಂದು ಗೊತ್ತಿರುವ ಕಾರಣ, ತಮ್ಮದೇ ಆದ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಶುರು ಮಾಡಿದ್ದಾರೆ. ತಮ್ಮ ದಿನನಿತ್ಯ ಜೀವನದ ಬಗ್ಗೆ ಅನೇಕ ವಿಚಾರಗಳನ್ನು ಈ ಒಂದು ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅಭಿಮಾನಿಗಳು ಕೂಡ ಇವರನ್ನು ಸಿನಿಮಾ ಅಥವಾ ಧಾರಾವಾಹಿ ಮೂಲಕ ಮತ್ತೆ ಕಂಬ್ಯಾಕ್ ಮಾಡಿ ಎಂದು ಕಾಮೆಂಟ್ಸ್ ಗಳಲ್ಲಿ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದಾರೆ..
ಆಶಿತಾ ಅವರು ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಶೇರ್ ಮಾಡಿದ್ದ ಒಂದು ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅವರು ಒಂಟಿಯಾಗಿ ಎಲ್ಲಾ ಕಷ್ಟಗಳನ್ನು ನೋವುಗಪನ್ನ ಅನುಭವಿಸುತ್ತಿದ್ದು, ತಮಗಾಗಿ ಜೀವನದಲ್ಲಿ ಯಾರು ಇಲ್ಲ, ಒಬ್ಬಂಟಿಯಾಗಿ ಇದ್ದೇನೆ, ಆದರೆ ಅಭಿಮಾನಿಗಳಾದ ನೀವೆಲ್ಲರೂ ನನ್ನ ಜೊತೆಗೆ ಇದ್ದೀರಿ ಎಂದು ಕಣ್ಣೀರು ಹಾಕಿದ್ದರು. ಅಭಿಮಾನಿಗಳು ಕೂಡ ಇವರಿಗೆ ಸಾಥ್ ನೀಡಿದ್ದರು. ಈ ರೀತಿ ಕನ್ನಡದ ಸೂಪರ್ ನಟಿ ಒಬ್ಬರು, ಈ ರೀತಿ ತಮ್ಮ ನೋವುಗಳನ್ನು ಶೇರ್ ಮಾಡಿಕೊಂಡದ್ದಾರೆ..



